ಹಬ್ಬದ ಮೂಡ್‌ನಲ್ಲಿ ಸ್ಯಾಂಡಲ್‌ವುಡ್ ತಾರೆಯರು
Team Udayavani, Aug 31, 2022, 4:27 PM IST
ಇಂದು ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ವಿಘ್ನವಿನಾಶಕನನ್ನು ಮನೆಗೆ, ಏರಿಯಾಕ್ಕೆ ಬರ ಮಾಡಿಕೊಳ್ಳಲು ವಾರದಿಂದಲೇ ಜನ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡು-ಮೂರು ವರ್ಷಗಳಿಂದ ಕೋವಿಡ್ ಭಯ, ಲಾಕ್‌ಡೌನ್ ಆತಂಕದಿಂದ ಬ್ರೇಕ್ ತೆಗೆದುಕೊಂಡಿದ್ದ ಗಣೇಶ ಹಬ್ಬದ ಅದ್ಧೂರಿ ಸೆಲೆಬ್ರೇಶನ್ ಈ ವರ್ಷ ಮತ್ತೆ ಜೋರಾಗಿದ್ದು, ಚಂದನವನ ಬಹುತೇಕ ತಾರೆಯರು ಕೂಡ ವಾರದಿಂದಲೇ ಗಣೇಶ ಹಬ್ಬಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಈ ಬಗ್ಗೆ ಅವರೇ “ಉದಯವಾಣಿ’ ಜೊತೆ ಹಂಚಿಕೊಂಡಿದ್ದಾರೆ.
ಗೌರಿ-ಗಣೇಶ ಹಬ್ಬ ನಮಗೆ ಪಾಲಿಗೆ ತುಂಬಾ ಸ್ಪೆಷಲ್ ಅನ್ನಬಹುದು. ನಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುವುದಿಲ್ಲ. ಆದರೆ, ಗಣೇಶನಿಗೆ ಇಷ್ಟವಾದ ತರತರಹದ ತಿಂಡಿತಿನಿಸುಗಳನ್ನು, ಹಣ್ಣು- ಕಾಯಿ ಎಲ್ಲವನ್ನೂ ಇಟ್ಟು, ನೈವೇದ್ಯ ಮಾಡಿ ಮನೆಮಂದಿ ಒಟ್ಟಾಗಿ ಸೇರಿ ಊಟ ಮಾಡುತ್ತೇವೆ. ಇನ್ನು ಗಣೇಶನಿಗೆ ಪ್ರಿಯವಾದ ಎಕ್ಕದ ಹೂವನ್ನು ತಂದು ಮಾಲೆ ಮಾಡಿ ಹಾಕಿ ಪೂಜಿಸುತ್ತೇವೆ. ನಮ್ಮ ಲೇಔಟ್‌ನಲ್ಲಿ ಗೌರಿ-ಗಣೇಶ ಹಬ್ಬ ಜೋರಾಗಿ ಯೇ ಇರುತ್ತೆ. ಗಣೇಶನನ್ನು ಕೂರಿಸುವುದನ್ನು ನೋಡುವುದೇ ಒಂದು ಸಂಭ್ರಮ.-ರಚನಾ ಇಂದರ್
ಎಲ್ಲ ಹಬ್ಬಗಳಿಗಿಂತ ನನಗೆ ಗಣೇಶ ಹಬ್ಬ ಅಂದ್ರೆ ತುಂಬ ಸ್ಪೆಷಲ್. ಅದಕ್ಕೆ ಕಾರಣ ಗಣೇಶ ಹುಟ್ಟಿದ ದಿನದಂದೇ ನನ್ನ ಗಂಡ ಕೂಡ ಹುಟ್ಟಿದ್ದು. ಹಾಗಾಗಿ ಮನೆಯಲ್ಲಿ ಒಂಥರಾ ಡಬಲ್ ಸೆಲೆಬ್ರೆಶನ್. ನನ್ನ ಮಗಳುಹುಟ್ಟಿದ ಎರಡು ವರ್ಷ ಅವಳು ತುಂಬ ಚಿಕ್ಕವಳಿದ್ದ ಕಾರಣ ಗಣೇಶ ಹಬ್ಬ ಅದ್ಧೂರಿಯಾಗಿ ಮಾಡಲಾಗಿರಲಿಲ್ಲ. ಆನಂತರ ಕೋವಿಡ್ ಭಯದಿಂದ ಹಬ್ಬ ಮಂಕಾಯ್ತು.ಆದ್ರೆ ಈ ವರ್ಷ ಮನೆಯಲ್ಲಿ ಎಲ್ಲರ ಜೊತೆ ಸೇರಿ, ಸಾಂಪ್ರದಾಯಿಕವಾಗಿ ಹಬ್ಬವನ್ನುಆಚರಿಸಲು ತಯಾರಿ ಮಾಡಿಕೊಂಡಿದ್ದೇನೆ. ಆದಷ್ಟು ಪರಿಸರ ಸ್ನೇಹಿಯಾಗಿ, ಹಬ್ಬದ ಮಹತ್ವನ್ನು ತಿಳಿದುಕೊಂಡು ಆಚರಿಸಿದರೆ, ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ.-ಶ್ವೇತಾ ಶ್ರೀವಾತ್ಸವ್
ವಿಶೇಷವಾಗಿ ಮಾಡುತ್ತೇವೆ. ಗೌರಿ ಹಬ್ಬದಂದು ಮಣ್ಣಿನ ಗೌರಿ ಮೂರ್ತಿಯನ್ನು ತಂದುಮನೆಯಲ್ಲಿ ಪ್ರತಿಷ್ಟಾಪಿಸಿ ಬೆಳಗ್ಗೆಯಿಂದಉಪವಾಸವಿದ್ದು, ಗೌರಿ ವ್ರತ ಮಾಡುತ್ತೇವೆ. ಸಂಜೆ ಮುತ್ತೈದೆಯರಿಗೆ ಬಾಗಿ ಕೊಡುತ್ತೇವೆ. ಇನ್ನು ಗಣೇಶ ಹಬ್ಬದಂದು ಮನೆಯಲ್ಲಿರುವಗಣೇಶನ ಮೂರ್ತಿಯನ್ನುಅಲಂಕರಿಸುತ್ತೇವೆ. ಗಣೇಶನಿಗೆಇಷ್ಟವಾದ ತಿಂಡಿಗಳನ್ನು ಮಾಡಿ ನೈವೇದ್ಯ ಸಮರ್ಪಿಸುತ್ತೇವೆ. -ಸೋನು ಗೌಡ
ಗೌರಿ-ಗಣೇಶ ಹಬ್ಬವನ್ನು ಗ್ರ್ಯಾಂಡ್ ಆಗಿ ಮಾಡುತ್ತೇವೆ. ಗೌರಿ ಹಬ್ಬದಂದು ಗೌರಿ ಪೂಜೆ ವ್ರತ ಮಾಡುತ್ತೇವೆ. ಅಕ್ಕಪಕ್ಕದ ಮನೆಯವರನ್ನು ಕರೆದುಬಾಗಿನ ಕೊಡುತ್ತೇವೆ. ಇನ್ನು ಗಣೇಶ ಹಬ್ಬದಂದುಗಣೇಶನನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ, ಅವನಿಗೆ ಇಷ್ಟವಾದ ಕರಿಗಡುಬು, ಮೋದಕ, ಚಕ್ಕುಲಿ, ಪಾಯಸ ಹೀಗೆ ವಿವಿಧಖಾದ್ಯಗಳನ್ನು ಮಾಡಿ ನೈವೇದ್ಯಮಾಡುತ್ತೇವೆ. ಸಂಜೆ ವೇಳೆ ಕಡಲೆ ಹುಸಲಿ ಪ್ರಸಾದ ಮಾಡಿ ಎಲ್ಲರಿಗೂಹಂಚುತ್ತೇವೆ. ಗಣೇಶ ಹಬ್ಬವನ್ನುಸಾಂಪ್ರದಾಯಿಕವಾಗಿ ಆಚರಿಸುವುದರಲ್ಲಿ ತುಂಬ ಖುಷಿಯಿದೆ. -ರೂಪಿಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.