ಹೂವು-ಹಣ್ಣು-ಕಬ್ಬು ಮಾರುಕಟ್ಟೆಗೆ ಲಗ್ಗೆ; ಶೃಂಗಾರಗೊಂಡಿವೆ ಮಂಟಪಗಳು
ಉಭಯ ತಾಲೂಕುಗಳಲ್ಲಿ ಶ್ರೀ ಗಣೇಶ ಚತುರ್ಥಿಯ ಸಂಭ್ರಮ
Team Udayavani, Sep 2, 2019, 5:40 AM IST
ಗುರುನಾರಾಯಣ ಸ್ವಾಮಿ ಸಂಕೀರ್ಣದಲ್ಲಿ ರವಿವಾರ ಪ್ರತಿಷ್ಠಾಪನೆಗೊಂಡ ಶ್ರೀ ಗೌರಿ, ಗಣೇಶ ವಿಗ್ರಹ.
ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಗ್ರಹ ಪ್ರತಿಷ್ಠಾಪನೆ ಸಮಿತಿಗಳು ಸಕಲ ಸಿದ್ಧತೆ ನಡೆಸಿವೆ.
ಹಣ್ಣುಹಂಪಲು ಮಾರಾಟಗಾರರು ವ್ಯಾಪಾರ ದಲ್ಲಿ ನಿರತರಾಗಿದ್ದು, ಹಾಸನ, ಅರಕಲಗೂಡು ಸಹಿತ ವಿವಿಧೆಡೆಗಳಿಂದ ಕಬ್ಬು, ವಿವಿಧ ಬಗೆಗಳ ಹೂವುಗಳ ಮಾರಾಟಗಾರರು ತಾಲೂಕಿಗೆ ಆಗಮಿಸಿದ್ದಾರೆ.
ಜಗಮಗಿಸುವ ಅಲಂಕಾರ
ವಿಘ್ನ ನಿವಾರಕನ ಆರಾಧನೆಗೆ ವಿಗ್ರಹ ತಯಾರಿ ಪೂರ್ಣಗೊಂಡಿದ್ದು, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಗಣೇಶನ ಹಿರಿಮೆ-ಗರಿಮೆ ಸಾರುವ ರೂಪಕಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ವಿದ್ಯುತ್ ದೀಪಾಲಂಕಾರದ, ವರ್ಣ ಚಿತ್ತಾರಗಳ ತಯಾರಿ ಜತೆಗೆ ಬಗೆ ಬಗೆಯ ಹೂವಿನ ಅಲಂಕಾರ ಸಿದ್ಧತೆಗಳು ಜೋರಾಗಿವೆ.
ಹೂಗಳ ರಾಶಿ
ತಾ|ಗೆ ಪ್ರತಿ ವರ್ಷ ಹೊರ ಜಿಲ್ಲೆಗಳಿಂದ ಹೂಗಳು ಮಾರಾಟಕ್ಕಾಗಿ ಬರುತ್ತವೆ. ಈ ವರ್ಷವೂ ಹಾಸನ, ಅರಕಲಗೂಡಿನಿಂದ ಕುಟುಂಬವೊಂದು 500 ಮಾರು ಹೂಗಳ ರಾಶಿ ತಂದಿದೆೆ. ಲಾಭ-ನಷ್ಟ ನೋಡದೆ ವ್ಯಾಪಾರ ಮಾಡುತ್ತಿದ್ದು, ಮಳೆಯಿಂದಾಗಿ ಹೂ ಸಂರಕ್ಷಿಸುವುದು ಸವಾಲಾಗಿದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಹಣ್ಣು, ತರಕಾರಿಗಳ ವ್ಯಾಪಾರ ಜೋರಾಗಿದ್ದು, ದರ ಪ್ರತಿ ಬಾರಿಯಂತೆ ಕೊಂಚ ಏರಿಕೆಯಾಗಿದೆ.
ಹೂವು / ಹಣ್ಣು ದರ
ಮಲ್ಲಿಗೆ -250 ರೂ. (ಚೆಂಡು)
ಗೊಂಡೆ ಹೂ-80 ರೂ. (ಮಾರು)
ಸೇವಂತಿಗೆ-50 ರೂ.
ಗುಲಾಬಿ ಮಾಲೆ-60 ರೂ.
ಮಾರಿ ಗೋಲ್ಡ್-80 ರೂ.
ಕಾಕಡ-60 ರೂ.
ಕೆಂಪು ಸೇವಂತಿಗೆ-60 ರೂ.
ಸೇಬು 100/150 ರೂ. (ಕೆ.ಜಿ.)
ಮುಸುಂಬಿ-80 ರೂ.
ದಾಳಿಂಬೆ-100 ರೂ.
ದ್ರಾಕ್ಷಿ -100 ರೂ.
ಬಾಳೆ ಹಣ್ಣು- 80/100 ರೂ.
ಕಬ್ಬು (ಒಂದು ದಂಡು)-40 ರೂ.
ಬಂಟ್ವಾಳ: ಗಣೇಶ ಚತುರ್ಥಿ ಅಂಗವಾಗಿ ಅಪಾರ ಪ್ರಮಾಣದಲ್ಲಿ ಹೂವು, ಹಣ್ಣು, ತರಕಾರಿ, ಕಬ್ಬು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ, ಮನೆ ಮನೆಯಲ್ಲಿ ನಡೆಯುವ ಗಣೇಶ ಪೂಜೆಗೆ ಕಬ್ಬು, ಹಣ್ಣು ಹಂಪಲು, ಅಲಂಕಾರಕ್ಕೆ ಹೂ, ವಿವಿಧ ಭಕ್ಷಗಳಿಗೆ ಅಗತ್ಯ ಸಾಮಗ್ರಿಗಳ ಮಾರಾಟದ ಭರಾಟೆ ಜೋರಾಗಿದೆ. ತರಕಾರಿ, ಹೂವು, ಹಣ್ಣು, ಕಬ್ಬು ದುಬಾರಿಯಾಗಿವೆ. ಮಲ್ಲಿಗೆ ಹೂವು ಖರೀದಿಗೆ ಮುಂಗಡ ಬುಕ್ಕಿಂಗ್ ಮಾಡಬೇಕಾಗಿದೆ. ನಗರ ಮತ್ತು ಗ್ರಾಮಾಂತರದ ಎಲ್ಲ ತರಕಾರಿ ಅಂಗಡಿ, ಜೀನಸು ಅಂಗಡಿ, ಹೊಟೇಲ್‌ಗಳ ಮುಂಭಾಗ ದಲ್ಲಿ ಮಾರಾಟಕ್ಕೆ ಕಬ್ಬಿನ ರಾಶಿಯೇ ಇದೆ.
ಹಬ್ಬದ ದಿನ ವ್ಯಾಪಾರ
ಹಾಸನ, ಹೊನ್ನಾಳಿ, ಹೊಸಳ್ಳಿ, ಮಂಡ್ಯದ ಖ್ಯಾತನ ಹಳ್ಳಿಗಳಿಂದ ಹೂವು, ಹಣ್ಣು, ತರಕಾರಿಯನ್ನು ಲಾರಿಯಲ್ಲಿ ತರುತ್ತೇವೆ. ಲೋಡ್-ಅನ್‌ಲೋಡ್, ಡ್ಯಾಮೇಜ್ ಇತ್ಯಾದಿ ಭರಿಸಬೇಕಾಗಿದೆ. ಹಬ್ಬದ ದಿನ ಇಲ್ಲಿ ವ್ಯಾಪಾರ ಮಾಡುತ್ತೇವೆ.
- ರಂಗಪ್ಪ, ಹೊನ್ನಾಳಿಯ ವ್ಯಾಪಾರಿ
ಹೂವು / ಹಣ್ಣು ದರ
ಮಲ್ಲಿಗೆ – 600 ರೂ. (ಅಟ್ಟಿ)
ಇತರ ಹೂವುಗಳು-
30-60 ರೂ. (ಮೊಳ)
ಕಬ್ಬು (ಒಂದು ದಂಡು)-50 ರೂ.
ಎರಡಕ್ಕಿಂತ ಹೆಚ್ಚು-40 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.