ಪರಿಸರ ಗಣಪ ತಿಲಕರ ಬೇಡಿಕೆಯಿಂದ ಬಹುಮುಖೀ ಬೇಡಿಕೆ ವರೆಗೆ…
Team Udayavani, Sep 2, 2019, 5:00 AM IST
ಉಡುಪಿ: ಬಾಲಗಂಗಾಧರ ತಿಲಕರು 1893ರಲ್ಲಿ ಪುಣೆಯ ಮೂರು ಕಡೆ ಮತ್ತು ಮುಂಬಯಿಗಿರ್ ಗಾಂವ್‌ನ ಕೇಶವ್‌ಜಿ ನಾಯಕ್ ಚೌಕ್‌ನಲ್ಲಿ ಗಣೇಶೋತ್ಸವ ಆರಂಭಿಸಿದರು. ಮಹಾರಾಷ್ಟ್ರದಲ್ಲಿ ಜನಪ್ರಿಯಗೊಂಡು ಆಗ ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ತಳ ವೂರಿ ಮಂಗಳೂರಿನ ಮೂಲಕ ಕರ್ನಾಟಕ ಕರಾ ವಳಿ ನಾಡಿಗೆ ಬಂದದ್ದು 1948ರಲ್ಲಿ.
ಮಹಾತ್ಮಾ ಗಾಂಧೀಜಿಯವರೂ ಗುರುವೆಂದು ಒಪ್ಪಿಕೊಂಡ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿ ಹಬ್ಬವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು. ಎಲ್ಲೆಲ್ಲ ಗಣೇಶನ ಆರಾಧನೆಗಳಿವೆಯೋ ಅಲ್ಲೆಲ್ಲ ಈಗ ಪೂಜೆಯು ಸಾರ್ವಜನಿಕ ಸ್ವರೂಪ ತಾಳಿದೆ. ಆಗ ತಿಲಕರು ಉತ್ಸ ವದ ಕೊನೆಯಲ್ಲಿ “ಭಾರತ್ ಮಾತಾ ಕಿ ಜೈ’ ಎಂಬ ಮೂಲಕ ನೆರೆದ ಜನರಲ್ಲಿ ಸ್ವಾತಂತ್ರ್ಯದ ಕಿಡಿ ಹಚ್ಚಲು ಪ್ರಯತ್ನಿಸಿದ್ದರು. ಆಗ ತಿಲಕರಿಗೆ ಸ್ವಾತಂತ್ರ್ಯ ಹೋರಾಟದ ಗುರಿ ಇತ್ತು, ಅಗತ್ಯವೂ ಆಗಿತ್ತು. ಕರ್ನಾಟಕದ ಕರಾವಳಿಗೆ ಬರು ವಾಗ ಸ್ವತಂತ್ರ ಭಾರತ ಒಂದು ವರ್ಷದ ಹಸುಗೂಸು, ಈಗ 73 ವರ್ಷಗಳ ಹಿರಿಯ ಸ್ವತಂತ್ರ ಭಾರತ. ಆಗಿನ ಬೇಡಿಕೆ ಈಗಿಲ್ಲ. ಕಾಲಕಾಲಕ್ಕೆ ಸಮಾಜದ ಅಗತ್ಯ ಬದಲಾಗುತ್ತ ಹೋಗುತ್ತವೆ.
ಈಗ ಭ್ರಷ್ಟಾಚಾರ, ಮಾಲಿನ್ಯ, ಅಪ್ರಾಮಾಣಿಕತೆ, ನಿರುದ್ಯೋಗ, ಉಳ್ಳ ವರು-ಇಲ್ಲದವರ ನಡುವಿನ ಕಂದಕ, ಮೋಸ, ಕಪಟ, ಕೃಷಿ-ಗುಡಿಕೈಗಾರಿಕೆಗಳ ಅವನತಿ, ಬೃಹತ್ ಕೈಗಾರಿಕೆಗಳ ಉನ್ನತಿ, ಆಹಾರ-ಗಾಳಿ- ನೀರಿನಿಂದ ಹಿಡಿದು ಕೋಳಿ, ಹಂದಿ, ದನದಂತಹ ಪ್ರಾಣಿಗಳವರೆಗೆ ಎಲ್ಲವೂ ಅನೈಸರ್ಗಿಕ ಬೆಳವಣಿ ಗೆಯ ಬೇಗುದಿ ಇತ್ಯಾದಿ ಸಮಸ್ಯೆ ಬೃಹದಾ ಕಾರವಾಗಿ ಬೆಳೆದುನಿಂತಿದ್ದು ಇವುಗಳ ನಿಯಂತ್ರಣ ಇಂದಿನ ಬೇಡಿಕೆಯಾಗಿದೆ. ಇವೆಲ್ಲವೂ ವ್ಯಕ್ತಿಗಳನ್ನು ಸ್ವತಂತ್ರವಾಗಿರಿಸುವ ಬದಲು ಪರೋಕ್ಷವಾಗಿ ಪರತಂತ್ರ, ಪರಾವಲಂಬಿಯನ್ನಾಗಿಸಿದೆ.
ಪ್ರತಿಯೊಂದು ಊರಿನಲ್ಲಿರುವ ಜನರಿಗೆ ಮೇಲಿನ ಎಲ್ಲ ಬಗೆಯ ಸಮಸ್ಯೆ ಒಂದಲ್ಲ ಒಂದು ಬಗೆಯಲ್ಲಿ ತಟ್ಟದೆ ಇಲ್ಲ. ಈಗ ಸ್ವಾತಂತ್ರ್ಯದ ಅಗತ್ಯವಿಲ್ಲವೆಂದು ತಿಲಕರನ್ನು ಮರೆಯುವಂತಿಲ್ಲ. ಪ್ರತಿ ಗಣೇಶೋತ್ಸವಗಳು ತಿಲಕರ ಭಾವಚಿತ್ರಇರಿಸುವ ಮೂಲಕ ಈಗಿನ ಸಮಸ್ಯೆ ಹೋಗಲಾಡಿಸಲು ಪಣ ತೊಟ್ಟು ಕೊನೆಯಲ್ಲಿ “ಭಾರತ್ ಮಾತಾ ಕೀ ಜೈ’ ಎಂದೋ, “ಜೈ ಹಿಂದ್’, “ಜೈ ಕರ್ನಾಟಕ’ ಎಂದೋ ನೆರೆದ ಜನರಲ್ಲಿ ಜಾಗೃತಿ ರೂಪಿಸಬೇಕಿದೆ.
ಗಣೇಶೋತ್ಸವ ಸಮಿತಿ ಹಲವು ಬಗೆಯ ಸಾರ್ವಜನಿಕ ಉಪಯೋಗಿ ಕೆಲಸ ಮಾಡುತ್ತಿರು ವುದು ಸ್ವಾಗತಾರ್ಹ. ಉದಾಹರಣೆಗೆ ಮಲ್ಪೆ ಸಮಿತಿಯವರು ಏಳೆಂಟು ವರ್ಷ
ಬೇಸಗೆಯಲ್ಲಿ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಕಡಿಯಾಳಿ ಗಣೇಶೋತ್ಸವದವರು ತಂದೆ ತಾಯಿ ಇಲ್ಲದ 25 ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಇಂದ್ರಾಣಿ ಮಂಜುಶ್ರೀನಗರದ ಸುಮತಿ ಎಂಬ ಕೊರಗ ಸಮುದಾಯದ ಮಹಿಳೆಯ ಮನೆ ಮಳೆಗೆ ಬಿದ್ದು ಹೋದಾಗ ಸಮಿತಿ ಕಾರ್ಯಕರ್ತರು ಕರಸೇವೆಯಿಂದ ಪುನರ್ನಿಮಿಸಿ ಕೊಡುತ್ತಿದ್ದಾರೆ.
ನಮಗೀಗ ಯೋಜನೆ ಎಂದಾಕ್ಷಣ ಕಟ್ಟಡಗಳದ್ದೇ ನೆನಪು ಬರುತ್ತದೆ. ಈಗ ಸಮುದಾಯ ಭವನಗಳ ಕೊರತೆ ಇದ್ದಂತಿಲ್ಲ, ಜತೆಗೆ ಇದ್ದ ಕಟ್ಟಡಗಳೇ ಹೆಚ್ಚಿಗೆ ಇವೆ.
ಸಾರ್ವಜನಿಕರಿಂದ ಸಂಗ್ರಹಿಸಿ ಕಟ್ಟುವ ಕಟ್ಟಡಗಳನ್ನು ಬಡವರಿಗೆ ಉಚಿತವಾಗಿ ಕೊಡೋಣವೆಂದರೆ ಸಮಿತಿಯಲ್ಲಿ ಆಕ್ಷೇಪ ಬರುವ ಸಾಧ್ಯತೆ ಇದೆ, ನಿರ್ವಹಣೆಯೂ ಕಷ್ಟಸಾಧ್ಯವಾದ ಕಾರಣ ಅನಿವಾರ್ಯ ಎನ್ನಬಹುದು. ಅಗತ್ಯವಿರುವ ವ್ಯಕ್ತಿಗಳಿಗೆ
ಸಹಕಾರ ನೀಡಿ ಅವರನ್ನು ಜೀವನ ದಲ್ಲಿ ಮೇಲೆತ್ತುವುದು ಕಟ್ಟಡ ಮೇಲೆತ್ತುವು ದಕ್ಕಿಂತ ಅಗತ್ಯವಾಗಿದೆ. ಸಮುದಾಯದಲ್ಲಿ ಅಗತ್ಯವಿರುವ ವ್ಯಕ್ತಿಗಳನ್ನು ಸಬಲೀಕರಣ ಗೊಳಿಸಿದರೆ ಮೊದಲು ವ್ಯಕ್ತಿ, ಅನಂತರ ಮನೆ, ಅದುವೇ ಊರಾಗಿ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಅಂತಿಮವಾಗಿ ಜಗತ್ತಿನ ಕಲ್ಯಾಣದಲ್ಲಿ ಪರ್ಯವಸಾನಗೊಳ್ಳದಿರಲು ಸಾಧ್ಯವೆ? ಇದು ಸಾಧುವಲ್ಲವೆ?
–ಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.