ಸರ್ವಧರ್ಮ ಪೂಜಿತ “ಸುಮುಖ”

ಬೌದ್ಧ, ಜೈನರಲ್ಲೂ ವಿನಾಯಕನ ಆರಾಧನೆ.ಜಪಾನ್‌, ಇಂಡೋನೇಷ್ಯಾದಲ್ಲೂ ಗಣೇಶ ಸ್ತುತಿ

Team Udayavani, Aug 31, 2019, 7:03 PM IST

spcl

ಚೌತಿ ಎಂದರೆ ಸಂಭ್ರಮ, ಚೌತಿ ಎಂದರೆ ವಿವಿಧ ಭಕ್ಷ್ಯ, ಚೌತಿ ಎಂದರೆ ಮನೆಯವರೆಲ್ಲರೂ ಬೆರೆಯುವ ದಿನ, ಚೌತಿ ಎಂದರೆ ಸರ್ವಧರ್ಮೀಯರೂ ಒಟ್ಟಾಗುವ ಹೊತ್ತು, ಚೌತಿ ಎಂದರೆ ಆರಾಧನೆ. ಇಂತಹ ಚೌತಿ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಆಚರಿಸಲಾಗುತ್ತದೆ. ವಿವಿಧ ಧರ್ಮೀಯರೂ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ. ಅದರಲ್ಲೂ ಭಾರತ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಗಣೇಶನ ಆರಾಧನೆ ಹೆಚ್ಚು. ಪ್ರಥಮವಂದ್ಯ ವಿನಾಯಕನ ಮಹತ್ವವೇ ಅಂಥಾದ್ದು. ಮಕ್ಕಳ ಪಾಲಿಗೆ “ಡುಮ್ಮ’, ದೊಡ್ಡವರ ಪಾಲಿಗೆ “ಡೊಳ್ಳು ಹೊಟ್ಟೆ ಗಣಪ್ಪ’, ಅದಕ್ಕೂ ಹಿರಿಯರ ಪಾಲಿಗೆ “ಅಪ್ಪಾ ಗಣೇಶ..!’ ಆದ ವಿನಾಯಕನ್ನು ಯಾವ ಧರ್ಮೀಯರೆಲ್ಲ ಪೂಜಿಸುತ್ತಾರೆ, ಪ್ರಾರ್ಥಿಸುತ್ತಾರೆ ಎಂಬ ವಿವರಗಳು ಇಲ್ಲಿವೆ. ಇದು ಚೌತಿ ಸ್ಪೆಷಲ್‌!

ದಕ್ಷಿಣ ಏಷ್ಯಾ ದೇಶಗಳಲ್ಲಿ ಗಣೇಶನದ್ದೇ ಕಾರುಬಾರು!: ದಕ್ಷಿಣ ಏಷ್ಯಾ ದೇಶಗಳಾದ ಜಾವಾ, ಬಾಲಿ, ಇಂಡೋನೇಷ್ಯಾ, ಸುಮಾತ್ರಾಗಳಲ್ಲೂ ಗಣೇಶನ ಆರಾಧನೆ ಇದೆ. ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದಲ್ಲಿ ಇಂದಿಗೂ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸುತ್ತಾರೆ ಥಾಯ್ಲೆಂಡ್‌ನ‌ಲ್ಲಿ ಗಣೇಶನನ್ನು ಫ‌ರ ಫಿಕನೆತ್‌ ಎನ್ನುತ್ತಾರೆ. ಯಶಸ್ಸಿನ ಆರಾಧನೆಗೆ ಅವರು ಗಣೇಶನ್ನು ಪೂಜಿಸುತ್ತಾರೆ. ಥಾಯ್ಲೆಂಡ್‌ ಕಲಾ ಇಲಾಖೆಯ ಚಿಹ್ನೆಯಾಗಿ ಗಣೇಶನ ಚಿತ್ರವಿದೆ. ಹಿಂದೆ ಚೋಳರ ಆಡಳಿತ ದಕ್ಷಿಣ ಏಷ್ಯಾದತ್ತ ವ್ಯಾಪಿಸಿತ್ತು ಎಂಬ ವಾದಕ್ಕೆ ಇದು ವಿಶೇಷ ಮಹತ್ವ ನೀಡುತ್ತದೆ.

ಜೈನರಲ್ಲಿ ಗಣೇಶ ಆರಾಧನೆ:  ಜೈನರಲ್ಲಿ ಗಣೇಶ ಆರಾಧಾನೆ ತುಂಬ ಪ್ರಾಚೀನ ಕಾಲದ್ದು. ಜೈನರ ಮನೆಗಳಲ್ಲಿ ಗಣಪತಿಆರಾಧನೆ ಸಾಮಾನ್ಯವಾಗಿಯೇ ಇದೆ. ಅದರಲ್ಲೂ ವರ್ತಕರು ಗಣೇಶನನ್ನು ಪೂಜಿಸುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.ಸಂಪತ್ತಿನ ಮುಖ್ಯಸ್ಥ ಕುಬೇರನ ಗುಣಗಳು ಗಣೇಶನಲ್ಲಿಯೂ ಇರುವುದನ್ನು ಮನಗಂಡು ಜೈನರು ಗಣೇಶನನ್ನು ಆರಾಧಿಸಲುತೊಡಗಿದ್ದರು. ಜೈನರಲ್ಲಿ ಗಣಪನ ಆರಾಧನ ಬಗ್ಗೆ 12ನೇ ಶತಮಾನದಲ್ಲಿ ಹೇಮಚಂದ್ರನ “ಅಭಿದಾನಚಿಂತಾಮಣಿ’ ಗ್ರಂಥದಲ್ಲಿ ಗಣೇಶನನ್ನು ಹೇರಂಭ, ಗಣ ವಿಘ್ನೇಶ, ವಿನಾಯಕ ಎಂದು ಹೇಳಲಾಗುತ್ತದೆ. ಆನೆ ಮುಖದವನು ಎಂದೇ ಚಿತ್ರಿಸಲಾಗಿದೆ. ಶ್ವೇತಾಂಬರರ ವರ್ಧಮಾನ ಸೂರಿ (1412) ಬರೆದ “ಆಚಾರದಿನಕರ’ ಗ್ರಂಥದಲ್ಲಿ ಆದಿ ಪೂಜಿತ ಎಂದು ಕರೆದಿದ್ದಾನೆ. ಶ್ವೇತಾಂಬರರಲ್ಲಿ ಇಂದಿಗೂ ಗಣೇಶನ ಪೂಜೆ ಇದೆ. ಇದಕ್ಕೆ ಸಾಕ್ಷಿಯಾಗಿ ಮಥುರಾದ ಉದಯಗಿರಿ, ರಾಜಸ್ಥಾನ, ಗುಜರಾತ್‌ನ ಪ್ರಾಚೀನ ಜೈನ ದೇಗುಲಗಳಲ್ಲಿ ಗಣೇಶನ ಆಕೃತಿಗಳನ್ನು ನೋಡಬಹುದು.

ಬೌದ್ಧರಲ್ಲಿ ಬುದ್ಧಿ ಪ್ರದ: ಬೌದ್ಧರಲ್ಲೂ ಗಣೇಶನ ಆರಾಧನೆ ವ್ಯಾಪಕವಾಗಿದೆ. ಈ ಬಗ್ಗೆ ಸಾಕಷ್ಟು ಐತಿಹ್ಯದ ಸಂಗತಿಗಳಿವೆ. ಗುಪ್ತರ ಕಾಲದಲ್ಲಿ ರಚಿಸಲ್ಪಟ್ಟ ಗಣಪತಿಯ ಕೆತ್ತನೆಗಳು ಇದಕ್ಕೆ ಸಾಕ್ಷ್ಯ ನೀಡುತ್ತವೆ. ಬೌದ್ಧರಲ್ಲೂ ವಿನಾಯಕ ಎಂಬ ಪದ ಬಳಕೆಯಲ್ಲಿದೆ. ಅಲ್ಲದೇ ನೇಪಾಳ ಮತ್ತು ಟಿಬೆಟ್‌ಗಳಲ್ಲಿ ನೃತ್ಯ ಗಣಪತಿಯ ಚಿತ್ರಗಳು ಬೌದ್ಧರಲ್ಲಿ ಕಾಣಬರುತ್ತವೆ. ಟಿಬೆಟ್‌ನ ಬುದ್ಧರು ಗಣೇಶನ್ನು ಶಿವನ ಕಾಲಡಿಯಲ್ಲಿರುವಂತೆ ಚಿತ್ರಿಸಿದ್ದಾರೆ. ಮಹಾರಕ್ತ ಎಂದು ಗಣಪತಿಯನ್ನು ಕರೆಯಲಾಗುತ್ತಿದ್ದು, “ತಂತ್ರ ಶಕ್ತಿ’ಯ ಪ್ರತೀಕವಾಗಿಯೂ ಕಾಣುತ್ತಾರೆ. ಇದರೊಂದಿಗೆ ಬೌದಟಛಿ ಧರ್ಮದ ವಿವಿಧ ಕವಲುಗಳಾದ ಶಿಂಗಾನ್‌ ಬೌದಟಛಿರು, ಜಪಾನ್‌ನ ಕಾಂಗಿ ಬೌದಟಛಿರಲ್ಲಿ ಗಣೇಶನ ಆರಾಧನೆ ಇದೆ. ಜಪಾನ್‌ನ ಕೆಲ ಬೌದಟಛಿ ದೇಗುಲಗಳಲ್ಲಿ ಇಂಡೋನೇಷ್ಯಾದ ನೋಟು ಗಣೇಶನ ಮೂರ್ತಿಗಳೂ ಇವೆ.

ಟಾಪ್ ನ್ಯೂಸ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

web exclusive news ojijofkbh

ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

thumb gauri

ಗೌರಿಯ ಪ್ರಥಮ ಪೂಜೆ…ತವರಲ್ಲಿ ಮಾಡಿದ ಮೊದಲ ಹಬ್ಬ

CHAUTI GANESHA uv web exclusive thumb copy CHAUTI

ಗಣೇಶ ಚತುರ್ಥಿ: ಗಣೇಶನಿಂದ ನಾವು ಕಲಿಯೋದೇನು ? ಹೇಗಿರಬೇಕು ಸಾಂಪ್ರದಾಯಿಕ ಆಚರಣೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.