ಚೌತಿ ಸ್ಪೆಷಲ್ 2020: ವೆರೈಟಿ ಮೋದಕಗಳು
Team Udayavani, Aug 23, 2017, 10:51 AM IST
ಗಣಪತಿ ಮೋದಕ ಪ್ರಿಯ. ಹಾಗಂತ ಪ್ರತಿ ಚತುರ್ಥಿಗೂ ಒಂದೇ ಬಗೆಯ ಮೋದಕ ನೈವೇದ್ಯ ಮಾಡಿ ಬಡಿಸಿದರೆ ಅವನಿಗೂ ಬೇಜಾರಾಗುವುದಿಲ್ಲವೇ? ಮೋದಕದಲ್ಲಿ ಎಷ್ಟೊಂದು ಬಗೆಗಳಿವೆ. ಅವನ್ನೂ ಟ್ರೈ ಮಾಡಿ. ಈ ಬಾರಿ ಗಣಪನ ಹೆಸರಲ್ಲಿ ವೆರೈಟಿ ಮೋದಕ ಸವಿಯಿರಿ.
1.ಕಾಜೂ ಮೋದಕ
ಬೇಕಾಗುವ ಸಾಮಗ್ರಿ: ಗೋಡಂಬಿ ಪುಡಿ (ಕಾಜೂ)-1/2 ಕಪ್, ಸಕ್ಕರೆ-1 ಕಪ್, ಹಾಲಿನಪುಡಿ-1/2 ಕಪ್, ಏಲಕ್ಕಿ ಪುಡಿ-1/2 ಚಮಚ, ತುಪ್ಪ-2 ಚಮಚ, ಹಾಲು-2 ಚಮಚ, ಮೈದಾ-1 ಚಮಚ.
ಮಾಡುವ ವಿಧಾನ: ಅಂದಾಜು 500 ಗ್ರಾಂ ಗೋಡಂಬಿಯಿಂದ 1/2 ಕಪ್‌ನಷ್ಟು ಕಾಜೂ ಪುಡಿ ತಯಾರಿಸಬಹುದು. ಮೊದಲು ಒಂದು ಅಗಲವಾದ ಪಾತ್ರೆಯಲ್ಲಿ ನೀರು ಕುದಿಸಿಕೊಳ್ಳಿ. ಕಾಜೂ ಪೌಡರ್, ಸಕ್ಕರೆ ಪುಡಿ, ಏಲಕ್ಕಿ ಪುಡಿಗಳನ್ನೆಲ್ಲ ಒಟ್ಟಿಗೆ ಸೇರಿಸಿ ಫ್ರೆ„ ಮಾಡಿ. ಅದನ್ನು ತುಪ್ಪ ಹಾಗೂ ಹಾಲಿನ ಪುಡಿಯೊಂದಿಗೆ ಮಿಶ್ರಣ ಮಾಡಿ ನೀರಿಗೆ ಹಾಕಿ. ನಂತರ ಮೈದಾ, ಹಾಲು ಸೇರಿಸಿ ಕಲಸಿ, ಕೈಗೆ ತುಪ್ಪ ಸವರಿಕೊಂಡು ಮೋದಕದ ಆಕಾರದಲ್ಲಿ ಕಟ್ಟಿ. ಈಗ ರುಚಿ ರುಚಿಯಾದ ಕಾಜೂ ಮೋದಕ ಸವಿಯಲು ಸಿದ್ಧ.
2. ಡ್ರೈ ಫ್ರೂಟ್ಸ್ ಮೋದಕ
ಬೇಕಾಗುವ ಸಾಮಗ್ರಿ: ಖರ್ಜೂರ-1/2 ಕಪ್, ಬಾದಾಮಿ-1/4 ಕಪ್, ಗೋಡಂಬಿ-1/4 ಕಪ್, ಕೊಬ್ಬರಿ ತುರಿ-1/4 ಕಪ್, ಉತ್ತುತ್ತೆ-1/4 ಕಪ್, ತುಪ್ಪ- 2 ಚಮಚ.
ಮಾಡುವ ವಿಧಾನ:- ಬಾದಾಮಿ, ಖರ್ಜೂರ, ಗೋಡಂಬಿ, ಉತ್ತುತ್ತೆಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ತುಪ್ಪದಲ್ಲಿ ಹುರಿದು, ತರಿ ತರಿಯಾಗಿ ಗ್ರೆಡ್ ಮಾಡಿಕೊಳ್ಳಬೇಕು. ಮೋದಕ ಮಾಡುವ ಮೌಲ್ಡ್‌ಗೆ ತುಪ್ಪ ಸವರಿಕೊಂಡು, ಈ ಮಿಶ್ರಣವನ್ನು ಹಾಕಿ ತೆಗೆಯಿರಿ. ಕೈಯಿಂದಲೂ ಮೋದಕದ ಆಕಾರದಲ್ಲಿ ಇದನ್ನು ಸುಲಭವಾಗಿ ತಯಾರಿಸಬಹುದು. ಖರ್ಜೂರ ಜಾಸ್ತಿಯಿರುವುದರಿಂದ ತಯಾರಿಸಲು ಕಷ್ಟವಲ್ಲ.
3. ಅಮೃತ್ ಮೋದಕ:
ಬೇಕಾಗುವ ಸಾಮಗ್ರಿ: ಖೋವಾ- 1 ಕಪ್, ಸಕ್ಕರೆ ಪುಡಿ-1/4 ಕಪ್, ಏಲಕ್ಕಿಪುಡಿ-1/4 ಚಮಚ, ಕೇಸರಿ-ಸ್ವಲ್ಪ, ತುಪ್ಪ-2 ರಿಂದ 3 ಚಮಚ, ಪಿಸ್ತಾ ಪುಡಿ-1/4 ಕಪ್.
ಮಾಡುವ ವಿಧಾನ: ಮೊದಲು ಖೋವಾ ಮತ್ತು ಸಕ್ಕರೆಪುಡಿಯನ್ನು ಬಿಸಿ ಮಾಡಿಕೊಳ್ಳಬೇಕು. ಇದಕ್ಕೆ ಏಲಕ್ಕಿಪುಡಿ ಹಾಗೂ ಕೇಸರಿ ಸೇರಿಸಬೇಕು. ನಂತರ ಇದನ್ನು ಉಂಡೆಯಾಕಾರದಲ್ಲಿ ಮಾಡಿಕೊಂಡು ತುಪ್ಪ ಸವರಿ ಅನಂತರ ಪಿಸ್ತಾ ಪುಡಿಯಲ್ಲಿ ಹೊರಳಿಸಿ ಮೋದಕದ ಆಕಾರದಲ್ಲಿ ತಯಾರಿಸಿದರೆ ಅಮೃತ್ ಮೋದಕ ಸಿದ್ಧ.
4. ಪನ್ನೀರ್ ಮೋದಕ:
ಬೇಕಾಗುವ ಸಾಮಗ್ರಿ: ಪನ್ನೀರ್-1/2 ಕಪ್, ಕಂಡೆನ್ಸ್‌ಡ್ ಮಿಲ್ಕ್-1/2 ಕಪ್, ಸಕ್ಕರೆ-1/4 ಕಪ್, ಏಲಕ್ಕಿಪುಡಿ-1/2 ಚಮಚ, ತುಪ್ಪ-2 ರಿಂದ 3 ಚಮಚ.
ಮಾಡುವ ವಿಧಾನ: ಮೊದಲು ಪನ್ನೀರ್ ತುರಿದುಕೊಂಡು ಅದಕ್ಕೆ ಕಂಡೆನ್ಸ್‌ಡ್ ಮಿಲ್ಕ್ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ 5 ರಿಂದ 6 ನಿಮಿಷ ಬಿಸಿ ಮಾಡಿ. ತಣ್ಣಗಾದ ಮೇಲೆ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ತುಪ್ಪ ಸವರಿದ ಮೋದಕದ ಮೌಲ್ಡ್‌ಗೆ ಈ ಮಿಶ್ರಣ ಹಾಕಿ ಮೋದಕ ತಯಾರಿಸಿ.
5. ತಿಲ್ ಮೋದಕ:
ಬೇಕಾಗುವ ಸಾಮಗ್ರಿ: ಎಳ್ಳು-1/2 ಕಪ್, ಬೆಲ್ಲ-1/2 ಕಪ್, ಕೊಬ್ಬರಿ ತುರಿ-1/4 ಕಪ್, ಮೈದಾ-1 ಕಪ್, ಎಣ್ಣೆ- ಕರಿಯಲು.
ಮಾಡುವ ವಿಧಾನ: ಮೊದಲು ಮೈದಾ ಹಿಟ್ಟಿನ ಕಣಕ ತಯಾರಿಸಿ. ಒಂದು ಪ್ಯಾನ್‌ನಲ್ಲಿ ಎಳ್ಳನ್ನು ಹುರಿದಿಟ್ಟುಕೊಳ್ಳಿ. ಬೆಲ್ಲದ ಪಾಕ ಮಾಡಿಕೊಂಡು ಹುರಿದ ಎಳ್ಳು ಮತ್ತು ಕೊಬ್ಬರಿ ತುರಿ ಸೇರಿಸಿ ಆರಲು ಬಿಡಿ. ಅನಂತರ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಮೊದಲೇ ಕಲೆಸಿಟ್ಟ ಮೈದಾ ಕಣಕದಲ್ಲಿ ಹಾಳೆ ಮಾಡಿ ಎಳ್ಳಿನ ಮಿಶ್ರಣ ತುಂಬಿ ಮೋದಕದಂತೆ ತಯಾರಿಸಿ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ರುಚಿ ರುಚಿಯಾದ ತಿಲ್ ಮೋದಕ ಸವಿಯಲು ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.