2020 ವರ್ಷದ ಹಿನ್ನೋಟ: ಕೋವಿಡ್ ಆಕ್ರಮಿಸಿದ ಜಗತ್ತಿನಲ್ಲಿ ಕ್ರೀಡಾ ಚಟುವಟಿಕೆ ಹೇಗಿತ್ತು?
Team Udayavani, Dec 27, 2020, 12:21 PM IST
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2020 ಕ್ರೀಡಾ ಲೋಕದ ಪಾಲಿಗೆ ಮಹತ್ವದ ವರ್ಷವಾಗಬೇಕಿತ್ತು. ಒಲಿಂಪಿಕ್ಸ್, ಟಿ 20 ವಿಶ್ವಕಪ್ ಸೇರಿದಂತೆ ಇನ್ನೂ ಹಲವಾರು ಕ್ರೀಡಾಕೂಟಗಳು ನಿಗದಿಯಾಗಿದ್ದವು. ಆದರೆ ಕೋವಿಡ್ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಕ್ರೀಡಾ ಜಗತ್ತಿಗೆ 2020ರ ವರ್ಷ ಹೇಗಿತ್ತು, ಇಲ್ಲಿದೆ ಒಂದು ಹಿನ್ನೋಟ!
1 ಕೋವಿಡ್ ಕಾಟ- ಒಲಿಂಪಿಕ್ ಮುಂದೂಡಿಕೆ
ಕೋವಿಡ್ 19 ಸೋಂಕು ಕ್ರೀಡಾಕ್ಷೇತ್ರವನ್ನು ಇನ್ನಿಲ್ಲದಂತೆ ಕಾಡಿತ್ತು. ಪರಿಣಾಮವಾಗಿ ಒಲಿಂಪಿಕ್ಸ್, ಟಿ20 ಕ್ರಿಕೆಟ್ ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಕ್ರೀಡಾಕೂಟಗಳು ಮುಂದೂಡಿಕೆಯಾದವು. ವಿಂಬಲ್ಡನ್ ಸೇರಿದಂತೆ ಹಲವು ಕೂಟಗಳು ರದ್ದಾದವು.
2 ಧೋನಿ- ರೈನಾ ನಿವೃತ್ತಿ
ಭಾರತದ ಅಗ್ರಮಾನ್ಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಆ.15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದರು. ಕೆಲವೇ ಕ್ಷಣದಲ್ಲಿ ಸುರೇಶ್ ರೈನಾ ಕೂಡಾ ವಿದಾಯ ಹೇಳಿದರು.
3 ಯುಎಇನಲ್ಲಿ ಐಪಿಎಲ್
ಭಾರತದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಕೂಟ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಆದರೆ ಭಾರತದಲ್ಲಿ ಕೂಟ ನಡೆಸಲು ಸಾಧ್ಯವಿಲ್ಲದ ಕಾರಣ ಸಪ್ಟೆಂಬರ್ ನಲ್ಲಿ ಯುಎಇನಲ್ಲಿ ಐಪಿಎಲ್ ನಡೆಸಲಾಯಿತು. ಆದರೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿರಲಿಲ್ಲ. ಮುಂಬೈ ಇಂಡಿಯನ್ಸ್ ಮತ್ತೆ ಚಾಂಪಿಯನ್ ಪಟ್ಟಕ್ಕೇರಿತು.
4 ದಿಗ್ಗಜರ ಸಾವು
ಕ್ರೀಡಾ ಜಗತ್ತಿನ ಹಲವು ದಿಗ್ಗಜರು ಈ ವರ್ಷ ಅಗಲಿದರು. ಕೋಬ್ ಬ್ರಯಾಂಟ್, ಡಿಗೋ ಮರಡೊನಾ, ಚೇತನ್ ಚೌಹಾಣ್, ಡೀನ್ ಜೋನ್ಸ್ ಮುಂತಾದವರು 2020ರಲ್ಲಿ ನಿಧನರಾದರು.
5 ಕೋವಿಡ್ ಬಳಿಕದ ಕ್ರಿಕೆಟ್
ಕೋವಿಡ್ ಕಾರಣದಿಂದ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣ ಸ್ಥಬ್ದವಾಗಿದ್ದವು. ಸುಮಾರು ಮೂರು ತಿಂಗಳ ಬ್ರೇಕ್ ನಂತರ ಇಂಗ್ಲೆಂಡ್ ನಲ್ಲಿ ಮೊದಲ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ನಡೆಯಿತು. ಕ್ವಾರಂಟೈನ್, ಚೆಂಡಿಗೆ ಎಂಜಲು ಸವರಬಾರದು ಮುಂತಾದ ನಿಯಮಗಳು ಹೊಸದಾಗಿ ಸೇರ್ಪಡೆಯಾದವು.
6 ಬ್ಲ್ಯಾಕ್ ಲಿವ್ಸ್ ಮ್ಯಾಟರ್ಸ್
ಕಪ್ಪು ವರ್ಣೀಯರ ನಿಂದನೆ ವಿರುದ್ಧ ಆರಂಭವಾದ ಚಳವಳಿ ಕ್ರಿಕೆಟ್ ಗೂ ಕಾಲಿಟ್ಟಿತ್ತು. ತನಗೆ ಆಗ ಕಹಿ ಅನುಭವಗಳನ್ನು ವೆಸ್ಟ್ ಇಂಡೀಸ್ ನ ಡ್ಯಾರೆನ್ ಸಮ್ಮಿ ಹೇಳಿಕೊಂಡಿದ್ದರು. ಐಪಿಎಲ್ ನಲ್ಲೂ ತನಗೂ, ವೆಸ್ಟ್ ಇಂಡೀಸ್ ಆಟಗಾರರಿಗೆ ಇಂತಹ ಅನುಭವಗಳಾಗಿದೆ ಎಂದು ಸಮ್ಮಿ ಹೇಳಿಕೊಂಡಿದ್ದರು. ಇದು ಸಂಚಲನ ಮೂಡಿಸಿತ್ತು.
7 ಆಸೀಸ್ ವಿರುದ್ಧ 36 ಆಲ್ ಔಟ್
ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕೇವಲ 36 ರನ್ ಗೆ ಇನ್ನಿಂಗ್ಸ್ ಮುಗಿಸಿ ಅವಮಾನಕ್ಕೆ ತುತ್ತಾಯಿತು. ತಂಡದ ಯಾವೊಬ್ಬ ಆಟಗಾರನು ಎರಡಂಕಿ ಮೊತ್ತ ದಾಖಲಿಸಿರಲಿಲ್ಲ. ಮಯಾಂಕ್ ಅಗರ್ವಾಲ್ ಒಂಬತ್ತು ರನ್ ಗಳಿಸಿದ್ದೇ ಅತೀ ಹೆಚ್ಚಿನ ಮೊತ್ತ!.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.