2020ನೇ ಸಾಲಿನ ದಕ್ಷಿಣ ಭಾರತದ ಅತ್ಯುತ್ತಮ ಸಿನಿಮಾಗಳು
Team Udayavani, Dec 25, 2020, 1:00 PM IST
ನವದೆಹಲಿ: 2020 ಸಿನಿಮಾ ರಂಗದಲ್ಲಿ ಒಂದು ವಿಧವಾದ ಬಿರುಗಾಳಿ ಅಬ್ಬರ. ಕೋವಿಡ್ ಮಹಾ ಮಾರಿಯ ಹೊಡೆತಕ್ಕೆ ಸಿಕ್ಕು ಒದ್ದಾಡಿದ ವರ್ಷ. ಅದೆಷ್ಟೊ ಸಿನಿ ರಸಿರಸಿಕರ ಮನಸ್ಸಿನಲ್ಲಿ ತಳಮಳ ಸೃಷ್ಟಿಸಿದ ಕಾಲ ಇದು. ಆದರೂ ಈ ನಡುವೆಯೂ ಸಿನಿ ಪ್ರೇಮಿಗಳು ಮಾತ್ರ ತಮ್ಮ ತಮ್ಮ ಮನೆಯಲ್ಲೇ ಕೂತು ಒಂದಷ್ಟು ಸಿನಿಮಾಗಳ ಸ್ವಾದವನ್ನು ಸವಿದಿರುವುದನ್ನೂಮರೆಯುವಂತಿಲ್ಲ. ಇದಕ್ಕೆ ಕಾರಣ ಈ ವರ್ಷ ತೆರೆಕಂಡ ಕೆಲ ಸಿನಿಮಾಗಳ ಅದ್ಭುತಕತೆ. 2020ರ ಕೋವಿಡ್ ವರ್ಷದಲ್ಲೂ ಸಿನಿರಸಿಕರಿಗೆ ರಸದೌತಣ ನೀಡಿದ ದಕ್ಷಿಣ ಭಾರತದ ಅದ್ಭುತ ಆಯ್ದ ಹತ್ತು ಸಿನಿಮಾಗಳ ಕುರಿತಾದ ಮಾಹಿತಿ ಇಲ್ಲಿದೆ.
1.ಸುರಾರೈ ಪೊಟ್ರು
ಕೋವಿಡ್ ಕಾಲದಲ್ಲಿಯೂ ಸಿನಿಮಾಭಿಮಾನಿಗಳ ಮನತಣಿಸಿದ ಸಿನಿಮಾಗಳ ಪೈಕಿ ಮೇರು ಸ್ಥಾನದಲ್ಲಿ ನಿಲ್ಲುವ ಸಿನಿಮಾ ಇದಾಗಿದೆ. ತಮಿಳಿನಲ್ಲಿ ತೆರೆಕಂಡ ಸುರಾರೈ ಪೊಟ್ರು ಸಿನಿಮಾ . ನಟ ಸೂರ್ಯ ಹಾಗೂ ನಟಿ ಅಪರ್ಣ ಬಾಲಮುರಳಿ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದು, ಸಿನಿಮಾ ಚಿತ್ರಮಂದಿರವನ್ನು ಹೊರತುಪಡಿಸಿ ಬಿಡುಗಡೆಯಾದ ಮೊದಲ ಮೆನ್ ಸ್ಟ್ರೀಂ ಸಿನಿಮಾ ಎಂದು ಕರೆಸಿಕೊಂಡಿದೆ.
ನಿರ್ದೇಶಕಿ ಸುಧಾ ಕೊಂಗರ ಅವರ ಆ್ಯಕ್ಷನ್ ಕಟ್ ನಲ್ಲಿ ಮೂಡಿಬಂದ ಈ ಸಿನಿಮಾ, ಏರ್ ಡೆಕ್ಕರ್ ಸಂಸ್ಥಾಪಕ ಜಿ.ಆರ್ ಗೋಪಿನಾಥ್ ಅವರ ಜೀವನಾಧಾರಿತ ಕತೆಯನ್ನು ಮನೋರಂಜನಾತ್ಮಕ ನೆಲೆಗಟ್ಟಿನಲ್ಲಿ ಸಿನಿ ಪ್ರೇಮಿಗಳೆದುರು ತೆರೆದಿಟ್ಟಿದ್ದಾರೆ. ವಿಭಿನ್ನ ಪ್ರೇಮಕಥೆಯೊಂದಿಗೆ ಸಾಧನೆಯ ಬನ್ನೆರಿ ಸಾಗುವ ಕಥೆ ಇದಾಗಿದ್ದು, ಸಿನಿಮಾವನ್ನು ಸಿನಿಮಾದ ರೂಪದಲ್ಲಿಯೇ ನೋಡುವವರಿಗೆ ಹೊಸ ಜಗತ್ತನ್ನು ಅನಾವೃನಗೊಳಿಸುತ್ತದೆ. ಸಿನಿಮಾದಲ್ಲಿ ನಟನ ಪಾತ್ರದಷ್ಟೆ ಸಮಾನವಾದ ಪಾತ್ರವನ್ನು ನಟಿಗೂ ನೀಡಲಾಗಿದ್ದು ನಟ ಸೂರ್ಯ ಅವರ ಅಭಿನಯಕ್ಕೆ ತಕ್ಕಂತೆ ನಟಿ ಅಪರ್ಣ ಕೂಡಾ ನಟಿಸಿದ್ದಾರೆ.
2. ಕಾ ಪೆ ರಣಸಿಂಗಂ
2020ರಲ್ಲಿ ತೆರೆಕಂಡ ಅತ್ಯದ್ಭುತ ಪೊಲಿಟಿಕಲ್ ಡ್ರಾಮಾ ಇದಾಗಿದ್ದು. ನಟ ವಿಜಯ್ ಸೇತುಪತಿ ನಾಯಕನ ಪಾತ್ರಕ್ಕೆ ಜೀವತುಂಬಿದ್ದಾರೆ. ಸಮಾಜದ ಸೂಕ್ಷ್ಮಾತಿ ಸೂಕ್ಷ್ಮವಾದ ರೈತ ಹಾಗೂ ಕಾರ್ಪೋರೇಟ್ ಕಂಪನಿ ಆಧಾರಿತ ಕಥಾ ಹಂದರವನ್ನು ಒಳಗೊಂಡಿರುವ ಕಥೆ ಇದಾಗಿದೆ. ನಟಿ ಐಶ್ವರ್ಯ ರಾಜೇಶ್ ನಾಯಕಿಯಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ವಿರುಮಂಡಿ ಅವರು ನಿರ್ವಹಿಸಿದ್ದು, ಇದು ರೈತರ ಜೀವನದ ನೋವು ಮತ್ತು ಸಮಸ್ಯೆಗಳನ್ನು ತೆರೆದಿಡುತ್ತದೆ.
3. ಬಾರಮ್
ಅಂತರಾಷ್ಟ್ರೀಯ ಫಿಲ್ಮ್ ಪೆಸ್ಟಿವಲ್ ನಲ್ಲಿ ಮಿಂಚಿದ ಬಳಿಕ ನಿರ್ದೇಶಕಿ ಪ್ರಿಯಾ ಕೃಷ್ಣಸ್ವಾಮಿ ಅವರ ‘ಬಾರಮ್’ ಸಿನಿಮಾ ಇತ್ತೀಚಿಗಷ್ಟೆ ಚಿತ್ರಮಂದಿಗಳಲ್ಲಿ ಭಾರಿ ಸದ್ದು ಮಾಡಿದೆ. ಮರ್ಯಾದಾ ಹತ್ಯೆ ಮತ್ತು ಸೆಕ್ಯೂರಿಟಿ ಗಾರ್ಡ್ ನ ಕೊಲೆಯ ಸುತ್ತ ಈ ಸಿನಿಮಾ ಸಾಗುತ್ತದೆ. ಬಾರಮ್ ಸಿನಿಮಾ ಪ್ರತಿಯೊಬ್ಬ ಸಿನಿ ರಸಿಕನಿಗೂ ಆಪ್ತವಾಗಬಲ್ಲ ಸಿನಿಮಾ ಆಗಿದ್ದು. ಸಿನಿಮಾ ನೋಡಿದ ನಂತರ ಪ್ರೇಕ್ಷಕರಿಂದ ಧನಾತ್ಮಕ ಅಭಿಪ್ರಾಯವನ್ನು ಗಿಟ್ಟಿಸಿಕೊಂಡಿದೆ.
4.ಅಲ ವೈಕುಂಠಪುರಂ ಲೋ
ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದಲ್ಲಿ ಮೂಡಿಬಂದ ಈ ಸಿನಿಮಾ 2020ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ತೆಲುಗು ಮಾತ್ರವಲ್ಲದೆ ವಿವಿಧ ಭಾಷೆಗಳ ಸಿನಿಮಾ ಆಭಿಮಾನಿಗಳ ಮನಗೆಲ್ಲುವಲ್ಲಿ ಯಶಕಂಡಿದೆ. ಈ ಚಿತ್ರದ ಯಶಸ್ಸಿನ ಹಿಂದೆ ನಟಿ ತಮನ್ನ ಅವರ ಪರಿಶ್ರಮವಿದ್ದು, ಜೊತೆಗೆ ನಟ ಅಲ್ಲು ಅರ್ಜುನ್ ಮತ್ತು ಮುರುಳಿ ಶರ್ಮ ಅವರು ಪಾತ್ರಗಳಿಗೆ ಜೀವತುಂಬಿದ್ದಾರೆ.
5.ಹಿಟ್: ದ ಫಸ್ಟ್ ಕೇಸ್
2020ರಲ್ಲಿ ತರೆಕಂಡ ತೆಲುಗು ಭಾಷೆಯ ಸಿನಿಮಾ ಇದಾಗಿದ್ದು, ಇದೊಂದು ಮಿಸ್ಟರಿ ಥ್ರಿಲ್ಲರ್ ಸಿನಿಮಾ ಆಗಿದೆ. ಸೈಲೇಶ್ ಕೊಲಾನು ನಿರ್ದೇಶನದಲ್ಲಿ ಹಾಗೂ ನಾನಿ ಮತ್ತು ಪ್ರಶಾಂತಿ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ. ವಿಶ್ವಾಕ್ ಸೇನ್ ಮತ್ತು ರುಹಾನಿ ಶರ್ಮ ಕಾಂಬಿನೇಶನ್ ನ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ವಿಶ್ವಾಕ್ ಸೇನ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
6.ಭಾನುಮತಿ ಮತ್ತು ರಾಮಕೃಷ್ಣ
2020ರ ಸಾಲಿನಲ್ಲಿ ತೆಲುಗು ಭಾಷೆಯಲ್ಲಿ ತೆರೆಕಂಡ ರೊಮ್ಯಾಂಟಿಕ್ ಡ್ರಾಮ ಇದಾಗಿದ್ದು ಭಾನುಮತಿ ಮತ್ತು ರಾಮಕೃಷ್ಣ ಅವರ ಪ್ರೇಮ ಕಥೆಯಲ್ಲಿ ಸಿನಿಮಾ ಸಾಗುತ್ತದೆ. ಸಾಂಪ್ರದಾಯಿಕ ಮನೋಭಾವನೆಯ ರಾಮಕೃಷ್ಣ ಹಾಗೂ ಮಾರ್ಡನ್ ಮನಸ್ಥಿತಿಯ ಭಾನುಮತಿ ಇವರಿಬ್ಬರ ಸುತ್ತ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ನಟ ನವೀನ್ ಚಂದ್ರ ರಾಮಕೃಷ್ಣನ ಪಾತ್ರದಲ್ಲಿ ಹಾಗೂ ಸಲೋನಿ ಲುತ್ರಾ ಅವರು ಭಾನುಮತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
7.ಅಯ್ಯಪ್ಪನುಂ ಕೋಶಿಯುಂ
ಪೃಥ್ವಿರಾಜ್ ಸುಕುಮಾರನ್ ಹಾಗೂ ಬಿಜು ಮೆನನ್ ಅಭಿಯಯದ ಈ ಸಿನಿಮಾ 2020ರ ಸಾಲಿನಲ್ಲಿ ತೆರೆಕಂಡ ಅತ್ಯುತ್ತಮ ಸಿನಿಮಾ ಆಗಿದೆ. ನಿರ್ದೇಶಕ ಸಚ್ಚಿದಾನಂದ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಎರಡು ಜನ ಅಹಂಕಾರಿ ವ್ಯಕ್ತಿತ್ವಗಳ ಸುತ್ತ ಹೇಣೆದ ಕಥೆಯಾಗಿದೆ.
8.ವಾರಣೆ ಅವಶ್ಯಮುಂದ್
ಸಿನಿ ಜಗತ್ತಿನ ಹಲವಾರು ಸಿನಿಮಾಗಳಲ್ಲಿ ಕೆಲವೆ ಕೆಲವು ಸಿನಿಮಾಗಳು ಮಾತ್ರ ಜನರ ಮುಖದಲ್ಲಿ ನಗು ಮೂಡಿಸುತ್ತದೆ. ಮನಸ್ಸಿಗೆ ಸಮಾಧಾನ ನೀಡುತ್ತದೆ. ಅಂಥಹಾ ಸಿನಿಮಾಗಳ ಸಾಳಿನಲ್ಲಿ ಈ ಸಿನಿಮಾ ಸೇರಿಕೊಳ್ಳುತ್ತದೆ. ನಟ ದುಲ್ಕುರ್ ಸಲ್ಮಾನ್ ಹಾಗೂ ಕಲ್ಯಾಣಿ ಪ್ರಿಯದರ್ಶನ್ ಅವರ ಕಾಂಬಿನೇಷನ್ ನಲ್ಲಿ ಈ ಸಿಸಿಮಾ ಮೂಡಿಬಂದಿದ್ದು ವಿಭಿನ್ನ ಪ್ರೇಮಕಥೆಯೊಂದನ್ನು ಈ ಸಿನಿಮಾದಲ್ಲಿ ಹೆಣೆಯಲಾಗಿದೆ.
ಇದನ್ನೂ ಓದಿ:ಸಾಮಾನ್ಯರಂತೆ ರಕಾಬ್ ಗಂಜ್ ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
9.ಸಿ ಯು ಸೂನ್
2020 ರಲ್ಲಿ ತೆರೆಕಂಡ ಮಲಯಾಳಂ ಸಿನಿಮಾ ಇದಾಗಿದ್ದು, ನಿರ್ದೇಶಕ ಮಹೇಶ್ ನಾರಾಯನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೇಶ್ಯಾವಾಟಿಕೆ ಹಾಗೂ ಮಾನವ ಸಾಗಾಣಿಕೆಯ ಕಥಾ ಹಂದರವನ್ನು ಒಳಗೊಂಡಿದ್ದು, ಸಂಪೂರ್ಣ ಸಿನಿಮಾವನ್ನು ಐ ಪೋನ್ ಮೂಲಕವೇ ಚಿತ್ರಿಸಿರುವುದು ಈ ಸಿನಿಮಾದ ವಿಶೇಷ.
10.ದಿಯಾ
ಫೈಟ್, ಡ್ಯಾನ್ ಮುಂತಾದ ಅಬ್ಬರ ಆಡಂಬರಗಳನ್ನು ಮೂಲೆಗೆ ತಳ್ಳಿ ರೂಪಿಸಲಾದ ವಿಭಿನ್ನ ಕಥೆ ಇದಾಗಿದೆ. ಸುಂದರ ಪ್ರೀತಿಯ ಕಥಾ ಹಂದರವನ್ನು ಒಳಗೊಂಡಿರುವ ಈ ಸಿನಿಮಾ ಕಲ್ಪನಾ ಜಗತ್ತನ್ನೂ ಮೀರಿ ವಾಸ್ತವಿಕ ಪರಿಸ್ಥಿತಿಗಳ ನಡುವೆ ಸಿನಿಮಾ ಸಾಗುತ್ತದೆ. ಸಿನಿಮಾದ ಹಲವಾರಿ ದೃಷ್ಯಗಳನ್ನು ಭಾವನಾಯತ್ಮಕವಾಗಿ ಹೆಣೆಯಲಾಗಿದ್ದು. ಮನಸ್ಸಿನಾಳದ ಭಾವನೆಗನ್ನು ನೆನಪಿಸುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.