2020ರಲ್ಲಿ ನಮ್ಮನ್ನಗಲಿದ ಪ್ರಮುಖ ಕ್ರೀಡಾಪಟುಗಳು
Team Udayavani, Dec 26, 2020, 11:58 AM IST
ಕೋವಿಡ್ ಕಾಲದಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಬ್ದವಾಗಿದ್ದವು. ಒಲಿಂಪಿಕ್ಸ್ ಮುಂತಾದ ಬೃಹತ್ ಕೂಟಗಳೇ ಮುಂದೂಡಿಕೆಯಾಗಿವೆ. ಇವೆಲ್ಲ ನಿರಾಸೆಗಳ ನಡುವೆ ಹಲವು ಕ್ರೀಡಾ ತಾರೆಗಳು 2020ರಲ್ಲಿ ನಮ್ಮನ್ನಗಲಿದ್ದಾರೆ. ಈ ವರ್ಷದ ನಿಧನ ಹೊಂದಿದ ವಿಶ್ವದ ಪ್ರಮುಖ ಕ್ರೀಡಾಪಟುಗಳ ಬಗ್ಗೆ ಒಂದು ನೋಟ.
1 ಮರಡೋನಾ
ಅರ್ಜೆಂಟೀನಾದ ಫುಟ್ ಬಾಲ್ ದಂತಕಥೆ ಡಿಯಾಗೋ ಮರಡೋನಾ ಈ ವರ್ಷ ನಿಧನ ಹೊಂದಿದರು. ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ನ.25 ರಂದು ಹೃದಯಾಘಾತದಿಂದ ಮೃತಪಟ್ಟರು. ಮರಡೋನಾ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 1986ರಲ್ಲಿ ಆರ್ಜೆಂಟೀನಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1986ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಅವರು ಬಾರಿಸಿದ ಒಂದು ಗೋಲು ಪ್ರಶಸ್ತಿಯನ್ನು ಎತ್ತಿ ಹಿಡಿಯುವಂತೆ ಮಾಡಿತ್ತು. ಇವರನ್ನು “ಹ್ಯಾಂಡ್ ಆಫ್ ಗಾಡ್” ಎಂದೇ ಟೀಂನಲ್ಲಿ ಕರೆಯಲಾಗುತ್ತಿತ್ತು.
2 ಕೋಬೆ ಬ್ರಯಾಂಟ್
ಅಮೆರಿಕದ ಬಾಸ್ಕೆಟ್ ಬಾಲ್ ದಂತಕಥೆ ಆಟಗಾರ ಕೋಬೆ ಬ್ರಯಾಂಟ್ ಹಾಗೂ ಅವರ 13 ವರ್ಷದ ಪುತ್ರಿ ಗಿಯಾನ್ನಾ 2020ರ ಜನವರಿ 26ರಂದು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು. 41 ವರ್ಷದ ಕೋಬೆ ಬ್ರಯಾಂಟ್ ಬಾಸ್ಕೆಟ್ ಬಾಲ್ ಕೂಟದಲ್ಲಿ ಐದು ಬಾರಿ ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಚಾಂಪಿಯನ್ ಶಿಪ್ ಪಡೆದ ಕೀರ್ತಿಗೆ ಭಾಜನರಾಗಿದ್ದರು. 2018ರಲ್ಲಿ ಬ್ರಯಾಂಟ್ ನಿವೃತ್ತಿ ಘೋಷಿಸಿದ್ದರು.
3 ಚೇತನ್ ಚೌಹಾಣ್
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮಾಜಿ ಸಂಸದ ಚೇತನ್ ಚೌಹಾಣ್ ಅವರು 2020ರ ಆಗಸ್ಟ್ 16ರಂದು ನಿಧನರಾದರು. 1969-1978ರ ಅವಧಿಯಲ್ಲಿ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಚೇತನ್ ಚೌಹಾಣ್ ದಾಖಲೆಗಳ ವೀರ ಸುನೀಲ್ ಗಾವಸ್ಕರ್ ಅವರ ಸುದೀರ್ಘಾವಧಿಯ ಜತೆಗಾರನಾಗಿದ್ದರು. ಕೋವಿಡ್ ಸೋಂಕಿಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನರಾದರು.
4 ಡೀನ್ ಜೋನ್ಸ್
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಪ್ರಸಿದ್ದ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ಅವರು ಸೆ.24ರಂದು ಮುಂಬೈನಲ್ಲಿ ನಿಧನ ಹೊಂದಿದರು. ಐಪಿಎಲ್ ನ ಕಾಮೆಂಟರಿಗಾಗಿ ಮುಂಬೈಗೆ ಆಗಮಿಸಿದ್ದ ಅವರು ಹೃದಯಾಘಾತದಿಂದ ನಿಧನರಾಗಿದ್ದಾರು. 59 ವರ್ಷದ ಡೀನ್ ಜೋನ್ಸ್ ಅವರು ಆಸೀಸ್ ಪರ 52 ಟೆಸ್ಟ್ ಪಂದ್ಯ ಮತ್ತು 164 ಏಕದಿನ ಪಂದ್ಯಗಳನ್ನು ಆಡಿದ್ದರು. 1986ರ ಭಾರತ ವಿರುದ್ದದ ಐತಿಹಾಸಿಕ ‘ಟೈ’ ಟೆಸ್ಟ್ ಪಂದ್ಯದಲ್ಲಿ ಡೀನ್ ಜೋನ್ಸ್ ದ್ವಿಶತಕ ಬಾರಿಸಿದ್ದರು.
5 ಜಯಮೋಹನ್ ತಂಪಿ
ಕೇರಳದ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದ ಜಯಮೋಹನ್ ತಂಪಿ ಅವರು ಜೂನ್ ಆರರಂದು ನಿಧನರಾದರು. ಬಲಗೈ ಬ್ಯಾಟ್ಸಮನ್ ಆಗಿದ್ದ ತಂಪಿ 1979ರಿಂದ 1982ರವರೆಗೆ ಕೇರಳ ಪರ ಆಡಿದ್ದರು. 64 ವರ್ಷದ ಜಯಮೋಹನ್ ಅವರು ಮಗನಿಂದಲೇ ಕೊಲೆಯಾಗಿದ್ದರು. ಮಗ ಅಶ್ವಿನ್ ತಂದೆಯ ಎಟಿಎಂ ನ್ನು ಬಳಸಿ ತನ್ನ ಸ್ವಂತಕ್ಕಾಗಿ ಹಣ ಬಳಸಿಕೊಳ್ಳುತ್ತಿದ್ದ. ಇದನ್ನು ಪ್ರಶ್ನಿಸಿದ ತಂದೆಯನ್ನು ಮಗ ಕೊಲೆಮಾಡಿದ್ದ.
6 ವಸಂತ್ ರಾಯ್ ಜಿ
ಪ್ರಥಮ ದರ್ಜೆ ಕ್ರಿಕೆಟಿಗ, ಕ್ರಿಕೆಟ್ ಇತಿಹಾಸಗಾರ, ಲೇಖಕ ವಸಂತ್ ರಾಯ್ ಜಿ ಅವರು ಜೂನ್ 13ರಂದು ನಿಧನರಾದರು. ಶತಾಯುಷಿಯಾಗಿದ್ದ ವಸಂತ್ ತಾಯ್ ಜಿ 1939ರಿಂದ 1950ರವರೆಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ನಂತರ ಕ್ರಿಕೆಟ್ ಕುರಿತ ಪುಸ್ತಕಗಳನ್ನು ಬರೆಯುವತ್ತ ಆಸಕ್ತಿ ತೋರಿದ್ದ ಅವರು, ರೊಮ್ಯಾನ್ಸ್ ಆಫ್ ರಣಜಿ ಟ್ರೋಫಿ, ಸಿ.ಕೆ ನಾಯ್ಡು- ದಿ ಶೆಹನ್ ಶಾ ಆಫ್ ಇಂಡಿಯನ್ ಕ್ರಿಕೆಟ್ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
7 ಬಲ್ಬೀರ್ ಸಿಂಗ್ ಸೀ.
ಭಾರತೀಯ ಹಾಕಿ ದಂತಕಥೆ, ಮೂರು ಬಾರಿಯ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ಸೀನಿಯರ್ ಅವರು ಮೇ 20ರಂದು ನಿಧನರಾದರು. ಒಲಿಂಪಿಕ್ ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ಬಲ್ಬೀರ್ ಅವರ ದಾಖಲೆ ಇನ್ನೂ ಯಾರೂ ಮುರಿಯಲಾಗಿಲ್ಲ. ಭಾರತದ ಶ್ರೇಷ್ಠ ಕ್ರೀಡಾಳುಗಳಲ್ಲಿ ಒಬ್ಬರಾಗಿರುವ ಬಲ್ಬೀರ್ ಸಿಂಗ್, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಆಧುನಿಕ ಒಲಿಂಪಿಕ್ ಇತಿಹಾಸದ ವಿಶ್ವದ 16 ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಗೌರವ ಪಡೆದಿರುವ ಏಕೈಕ ಭಾರತೀಯ ಬಲ್ಬೀರ್ ಸಿಂಗ್ ಸೀನಿಯರ್.
8 ಡೆನ್ನಿಸ್ ರಾಲ್ ಸ್ಟನ್
ಐದು ಬಾರಿಯ ಗ್ರ್ಯಾ ನ್ ಸ್ಲಾಮ್ ಡಬಲ್ಸ್ ವಿಜೇತ, ಹಾಲ್ ಆಫ್ ಫೇಮ್ ಪುರಸ್ಕೃತ ಅಮೆರಿಕನ್ ಟೆನ್ನಿಸಿಗ ರಾಲ್ ಸ್ಟನ್ ಡಿ.6ರಂದು ನಿಧನರಾದರು. ಮೂಲತಃ ಸಿಂಗಲ್ಸ್ ಆಟಗಾರನಾಗಿದ್ದ ರಾಲ್ ಸ್ಟನ್ 576-251 ಸೋಲು -ಗೆಲುವು ದಾಖಲೆಗಳನ್ನು ಹೊಂದಿದ್ದಾರೆ. 1963ರಲ್ಲಿ ಅಮೆರಿಕದ ಡೇವಿಸ್ ಕಪ್ ಗೆಲುವಿನಲ್ಲಿ ರಾಲ್ ಸ್ಟನ್ ಪಾತ್ರ ಮಹತ್ವದ್ದಾಗಿತ್ತು. 1978ರಲ್ಲಿ ಅವರು ಇಂಟರ್ ನ್ಯಾಶನಲ್ ಟೆನಿಸ್ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗಿದ್ದರು.
9 ಪೌಲೊ ರೋಸಿ
1982ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಟಲಿಯನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಪೌಲೊ ರೋಸಿ ಡಿ.9ರಂದು ಅನಾರೋಗ್ಯದಿಂದ ನಿಧನರಾದರು. ಸ್ಪೇನ್‌ನಲ್ಲಿ ನಡೆದ 1982ರ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಸಿ ಇಟಲಿ ತಂಡವನ್ನು ಮುನ್ನಡೆಸಿದ್ದರು. ಬ್ರಝಿಲ್ ವಿರುದ್ಧ ಹ್ಯಾಟ್ರಿಕ್ ಹೀರೋ ಆಗಿಯೂ ಮೆರೆದಿದ್ದ ರೋಸಿ ಈ ಕೂಟದಲ್ಲಿ 6 ಗೋಲು ಸಿಡಿಸಿದ್ದರು. ಪಶ್ಚಿಮ ಜರ್ಮನಿ ಎದುರಿನ ಫೈನಲ್‌ನಲ್ಲಿ ಆರಂಭಿಕ ಗೋಲು ಹೊಡೆದ ಹೆಗ್ಗಳಿಕೆ ರೋಸಿ ಅವರದಾಗಿತ್ತು. ಈ ಪಂದ್ಯವನ್ನು 3-1ರಿಂದ ಗೆದ್ದ ಇಟಲಿ 3ನೇ ಸಲ ಹಾಗೂ 1938ರ ಬಳಿಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಮೆರೆದಿತ್ತು. ಚಿನ್ನದ ಬೂಟ್, ಚಿನ್ನದ ಚೆಂಡು ಪ್ರಶಸ್ತಿಗಳೆಲ್ಲ ರೋಸಿ ಪಾಲಾಗಿದ್ದವು. 1982ರಲ್ಲಿ ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಪೌಲೊ ರೋಸಿ ಪಾತ್ರರಾಗಿದ್ದರು.
10 ಅಲೆಕ್ಸಾಂಡ್ರೊ ಸಬೆಲ್ಲಾ
ಅರ್ಜೆಂಟೀನಾವನ್ನು 2014ರ ವಿಶ್ವಕಪ್ ಫುಟ್ ಬಾಲ್ ಫೈನಲ್ ಗೆ ಕೊಂಡೊಯ್ದ ಕೋಚ್, ಫುಟ್ ಬಾಲ್ ಲೆಜೆಂಡ್ ಮರಡೋನಾ ಅವರೊಂದಿಗೆ 1980 ರಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಅಲೆಕ್ಸಾಂಡ್ರೊ ಸಬೆಲ್ಲಾ ಅವರು ಮರಡೋನಾ ನಿಧನ ಹೊಂದಿದ ಎರಡೇ ವಾರದ ಬಳಿಕ ಮೃತಪಟ್ಟರು. 2014ರ ವಿಶ್ವಕಪ್ ಫೈನಲ್ ನಲ್ಲಿ ಜರ್ಮನಿ ಎದುರು ಅರ್ಜೆಂಟಿನಾ ಪರಾಭವಗೊಂಡ ನಂತರ ಸಬೆಲ್ಲಾ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.