ಎಪಿಎಂಸಿ ಆವರಣದಲ್ಲಿ ಆಧುನಿಕ ಕೃಷಿ ಅನಾವರಣ
Team Udayavani, Feb 26, 2020, 11:17 PM IST
ಬೆಳ್ತಂಗಡಿ: ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಬುಧವಾರ ಬೆಳ್ತಂಗಡಿ ಹಳೇ ಕೋಟೆ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಆಧುನಿಕ ಕೃಷಿ ಪದ್ಧತಿಗಳ ಬೃಹತ್ ಮಾಹಿತಿ ಪ್ರಾತ್ಯಕ್ಷಿಕೆಗೆ ವೇದಿಕೆಯಾಯಿತು. ಸಾಂಪ್ರದಾಯಿಕ ಭತ್ತ ಬೇಸಾಯದಿಂದ ಗ್ರಾಮೀಣ ಭಾಗ ಸಂಪೂರ್ಣ ವಿಮುಖವಾ ಗುತ್ತಿದೆ. ಇದೆಲ್ಲವನ್ನು ಮನಗಂಡು ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯು ರಾಜ್ಯಾದ್ಯಂತ ಯಂತ್ರ ಕೃಷಿಗೆ ಉತ್ತೇಜನ ನೀಡಿದೆ.
ನೇಜಿ ನಾಟಿಯಿಂದ ಬೈಹುಲ್ಲು ಮೂಟೆವರೆಗೆ ಯಂತ್ರ
ಭತ್ತ ಬೇಸಾಯವನ್ನು ಉತ್ತೇಜಿಸುವ ದೃಷ್ಟಿಯಿಂದ ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಯಡಿ ತಾಲೂಕಿನಲ್ಲಿ 1,000 ಹೆಕ್ಟೇರ್ ಭತ್ತ ಬೇಸಾಯ ಗುರಿ ಹೊಂದಿದೆ. ಇದಕ್ಕಾಗಿ ಟ್ರ್ಯಾಕ್ಟರ್, ಟಿಲ್ಲರ್, ಸಹಿತ ನೇಜಿ ನಾಟಿಯಿದ ಆರಂಭಿಸಿ, ಭತ್ತ ಕಟಾವು, ಔಷಧ ಸಿಂಪಡಣೆ, ಬೈಹುಲ್ಲು ಮೂಟೆ ಮಾಡುವ ವರೆಗಿನ ಯಂತ್ರಗಳು ಲಭ್ಯವಿವೆ. ಇವೆಲ್ಲವೂ ಬುಧವಾರ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನದಲ್ಲಿರಿಸಲಾಗಿತ್ತು.
ರೈತ ಸಮಾವೇಶ/ಕೃಷಿ ಮೇಳ
ರೈತರನ್ನು ಉತ್ತೇಜಿಸುವ ದೃಷ್ಟಿಯಿಂದ ತೋಟಗಾರಿಕ ಇಲಾಖೆ ಮತ್ತು ರೇಷ್ಮೆ ಇಲಾಖೆ, ಕೃಷಿ, ಪಶುಸಂಗೋಪನ, ಅರಣ್ಯ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸೈಂಟ್ ಥೋಮಸ್ ಪದವಿ ಕಾಲೇಜು ವತಿಯಿಂದ ರೈತ ಸಮಾವೇಶ, ವರ್ತಕರ ಸಮಾವೇಶ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಕುರಿತು ಕೃಷಿ ಮೇಳ ನಡೆಯಿತು.
ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ವಿನೊದ್ ಅವರು ಯಾಂತ್ರೀಕೃತ ಭತ್ತ ಬೇಸಾಯ ಅಭಿಯಾನ ಯಂತ್ರಶ್ರೀ ಕುರಿತು ಮಾಹಿತಿ ನೀಡಿದರು. ಈವೇಳೆ ಶ್ರೀಕ್ಷೇತ್ರ ಧ.ಗ್ರಾ.ಯೋ. ಉಡುಪಿ ಪ್ರಾದೇಶಿಕ ನಿರ್ದೇಶಕ ವಂಸತ ಸಾಲ್ಯಾನ್, ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಮತ್ತಿತರರು ಭಾಗವಹಿಸಿದರು. ಇದೇ ವೇಳೆ ಯಂತ್ರ ನಾಟಿ ಪ್ರಾತ್ಯಕ್ಷಿಕೆ ಸಹಿತ ಭತ್ತ ಕೃಷಿ ಕುರಿತು ವಿವಿಧ ಮಾಹಿತಿ, ಮಾರ್ಗದರ್ಶನ ನೀಡಲಾಯಿತು. ತಾಲೂಕಿನ ಪ್ರಗತಿಪರ ಕೃಷಿಕರು ಭಾಗವಹಿಸುವರು.
ವಿವಿಧ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ
ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವಾರ್ಷಿಕ ಕ್ರಿಯಾ ಯೋಜನೆ ಹಾಗೂ ನಬಾರ್ಡ್ ಡಬ್ಲ್ಯುಐಎಫ್ ಯೋಜನೆ ಯಡಿ ಒಟ್ಟು 3 ಕೋಟಿ 18 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ 250 ಎಂ.ಟಿ. ಸಾಮರ್ಥ್ಯದ ಗೋದಾಮು, ಮುಚ್ಚು ಹರಾಜುಕಟ್ಟೆ ಉದ್ಘಾಟನೆ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಹರೀಶ್ ಪೂಂಜ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೇಶವ ಗೌಡ ಪಿ. ನೆರವೇರಿಸಿದರು.
ಕೃಷಿಕರಿಗೆ ಸಮ್ಮಾನ
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ತಾಲೂಕಿನ ಬಿ.ಕೆ. ದೇವರಾವ್ ಮಿತ್ತಬಾಗಿಲು, ಪ್ರಭಾಕರ ಮಯ್ಯ, ಸುಲೈಮಾನ್ ಬೆಳಾಲು, ಚಂದ್ರಹಾಸ ಗೌಡ, ನಡ, ಮೆಕ್ಸಿ ಕ್ರಾಸ್ತಾ, ನಾಲ್ಕೂರು ಅವರನ್ನು ಸಮ್ಮಾನಿಸಲಾಯಿತು. ಇವರೊಂದಿಗೆ ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಪಿಡಬ್ಲ್ಯುಡಿ ಗುತ್ತಿಗೆದಾರ ಜಯಕುಮಾರ್ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.