ಕುರ್ಕುಮಿನ್‌ನಿಂದ ಕೋವಿಡ್ 19 ವೈರಸ್‌ಗಳ ನಾಶ: ಅಧ್ಯಯನ
Team Udayavani, Aug 24, 2020, 8:49 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತೀಯ ಆಹಾರ ಪದ್ಧತಿಯಲ್ಲಿ CURCUMIN ಹೊಂದಿರುವ ವೈದ್ಯಕೀಯ ಗುಣಗಳು ಈಗಾಗಲೇ ಸರ್ವರಿಗೂ ತಿಳಿದಿರುವ ವಿಚಾರ.
ಇದೀಗ ಅರಶಿಣದಲ್ಲಿ ಕೆಲವು ವೈರಾಣುಗಳನ್ನು ನಾಶಪಡಿಸುವಲ್ಲಿ ಉಪಯುಕ್ತವಾಗಿದೆ ಎಂಬುದನ್ನು ಸಂಶೋಧನಕಾರರು ಕೂಡಾ ಕಂಡು ಕೊಂಡಿದ್ದಾರೆ.
ಬೀಜಿಂಗ್‌ನಲ್ಲಿ ಈ ಕುರಿತು ಈಗಾಗಲೇ ಸಂಶೋಧನೆಗಳು ನಡೆದಿವೆ. ಅರಶಿಣದಲ್ಲಿರುವ ಕುರ್ಕುಮಿನ್ ಅಂಶ ಮಾರಕ ಗ್ಯಾಸ್ಟ್ರೋ ಎಂಟ್ರಿರಿಟಿಸ್ ವೈರಸ್ (TGEV) ಹರಡುವುದನ್ನು ತಡೆಯುತ್ತದೆ ಎಂದು ಜರ್ನಲ್ ಆಫ್ ವೈರಾಲೋಲಾಜಿಯಲ್ಲಿ ಪ್ರಕಟಿಸಿದ ಲೇಖನ ಹೇಳಿದೆ.
ಕರ್ಕ್ಯುಮಿನ್ ಟಿಜಿಇವಿ ವೈರಾಣುಗಳು ಜೀವಕೋಶದೊಳಗೆ ಪ್ರವೇಶಿಸುವ ಮೊದಲೇ ಅವುಗಳನ್ನು ನಾಶಪಡಿಸುತ್ತದೆ. ಕರ್ಕ್ಯುಮಿನ್ ಟಿಜಿಇವಿ ಸೋಂಕು ತಡೆಯಲ್ಲಿ ಮಹತ್ವದ ಶಕ್ತಿಯಾಗಿದೆ ಎಂದು ಚೀನಾದ ಹ್ಯೂವಾನ್ ಇನ್‌ಸ್ಟಿಟ್ಯೂಟ್ ಆಫ್ ಬಯೋಎಂಜಿನಿಯರಿಂಗ್‌ನ ಸಂಶೋಧಕ ಲಿಲಾನ್ ಜೀ ಹೇಳಿದ್ದಾರೆ.
ಇದಲ್ಲದೆ ಡೆಂಗ್ಯೂ, ಹೆಪಟೈಟಿಸ್ ಬಿ., ವೈರಾಣು ಹಾಗೂ ಝಿಕಾ ವೈರಾಣುಗಳ ಪರಿಣಾಮಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಇದಲ್ಲದೆ ಆ್ಯಂಟಿ ಟ್ಯೂಮರ್, ಆ್ಯಂಟಿ ಬ್ಯಾಕ್ಟೀರಿಯಾ ನಿರೋಧಕದಲ್ಲೂ ಪರಿಣಾಮಕಾರಿ ಶಕ್ತಿಯಾಗಿರುವುದು ಕಂಡುಬಂದಿದೆ.
ಕೋವಿಡ್-19 ಚಿಕಿತ್ಸೆಗೆ ಕುರ್ಕುಮಿನ್ ನೆರವಾಗಬಲ್ಲದು: ಸಂಶೋಧಕರು
ಕೋವಿಡ್ ಚಿಕಿತ್ಸೆಯಲ್ಲಿ ಕುರ್ಕುಮಿನ್ ಉಪಯುಕ್ತ ಪಾತ್ರವನ್ನು ನಿರ್ವಹಿಸಬಲ್ಲದು ಎಂದು ತಜ್ಞರು ಇತ್ತೀಚೆಗೆ ಪ್ರಕಟಿಸಿರುವ ಸಂಶೋಧನಾ ಲೇಖನದಲ್ಲಿ ಸವಿವರವಾಗಿ ತಿಳಿಸಿದ್ದಾರೆ. ವಿಜ್ಞಾನಿಗಳ ತಂಡ ಇತ್ತೀಚೆಗೆ ಪ್ರಕಟಿಸಿದ ವೈಜ್ಞಾನಿಕ ಲೇಖನದಲ್ಲಿ ಕೋವಿಡ್-19 ಚಿಕಿತ್ಸೆಯಲ್ಲಿ ಕುರ್ಕುಮಿನ್ ವಹಿಸಬಹುದಾದ ಪಾತ್ರವನ್ನು ಸಾಕ್ಷ್ಯಾಧಾರಗಳೊಂದಿಗೆ ವಿಶ್ಲೇಷಿಸಿದ್ದಾರೆ.
ಕೋವಿಡ್ 19ಗೆ ಯಾವುದೇ ಔಷಧ ಅಥವಾ ಲಸಿಕೆಗಳು ಲಭ್ಯವಾಗದಿರುವ ಪ್ರಸ್ತುತ ಕಾಲಘಟ್ಟದಲ್ಲಿ ಔಷಧೀಯ ಸಸ್ಯಗಳತ್ತ ಗಮನ ಹರಿಸಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡ ನಡೆಸಿದ ವಿಶೇಷ ಅಧ್ಯಯನದಲ್ಲಿ ಆನೇಕ ರೀತಿಯ ವೈರಸ್‌ಗಳಿಂದ ಮಾನವ ದೇಹಕ್ಕೆ ರಕ್ಷಣೆ ಒದಗಿಸುವಲ್ಲಿ ಕುರ್ಕುಮಿನ್ ವಹಿಸಬಹುದಾದ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಕುರ್ಕುಮಿನ್ ಒಂದು ಪ್ರಬಲ ರೋಗ ನಿರೋಧಕ ವೃದ್ಧಿ ಶಕ್ತಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಆಧಾರಸಹಿತವಾಗಿ ವಿವರಿಸಿರುವ ಅವರು ತಮ್ಮ ಸಂಶೋಧನೆಗಳ ಜತೆಗೆ ಕುರ್ಕುಮಿನ್ ಬಗ್ಗೆ ಆನೇಕ ಸಾಹಿತ್ಯಗಳಲ್ಲಿ, ಸಂಶೋಧನಾ ಲೇಖನಗಳಲ್ಲಿ ಹೇಳಿರುವ ಸಾಕ್ಷ್ಯಗಳನ್ನು ಕೂಡಾ ಅಧಾರವಾಗಿ ಉಲ್ಲೇಖೀಸಿದ್ದಾರೆ.
‘ಜಾಗತಿಕ ಸೋಂಕು ಆಗಿರುವ ಕೋವಿಡ್ 19ಗೆ ಶಾಶ್ವತ ಪರಿಹಾರಕ್ಕಾಗಿ ಜಗತ್ತು ಕಾತರಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಕುರ್ಕುಮಿನ್ ಸಹಿತ ಔಷಧೀಯ ಸಸ್ಯಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಯಾವ ರೀತಿ ಸುರಕ್ಷಿತ ಅಂಶಗಳಾಗಿರುತ್ತವೆ ಎಂಬ ಬಗ್ಗೆ ಅರಿವು ಹೊಂದುವುದು ಅತ್ಯಂತ ಉಪಯುಕ್ತವಾಗುತ್ತದೆ.”
ಅರಶಿಣ: ಸೋಂಕು ನಿವಾರಕ ಶಕ್ತಿಗಳ ಕಣಜ
ಅರಿಶಿಣ (ಕರ್ಕುಮಾ ಲಾಂಗ್ಗಾ) ಭಾರತದ ಸಾಂಪ್ರದಾಯಿಕ ಔಷಧವಾಗಿದ್ದು, ಹಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ವೈಜ್ಞಾನಿಕವಾಗಿಯೂ, ವೈದ್ಯಕೀಯ ವಾಗಿಯೂ ಮಹತ್ವ ಪಡೆದಿದೆ. ಅರಿಶಿಣ ಸೂಕ್ಷ್ಮ ಜೀವ ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು ಸೋಂಕು ನಿವಾರಕ ಶಕ್ತಿಗಳ ಕಣಜವಾಗಿದೆ. ಹಲವಾರು ಸಂಶೋಧನೆಗಳು, ವೈಜ್ಞಾನಿಕ ಸಾಕ್ಷ್ಯಗಳು ಇದನ್ನು ಸಾಬೀತು ಪಡಿಸಿದೆ. ಅರಿಶಿಣದ ಕೊಂಬುಗಳನ್ನು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಕಫ, ಶೀತ ಕೆಮ್ಮು, ಮಧುಮೇಹ, ವಿವಿಧ ರೀತಿಯ ಕ್ಯಾನ್ಸರ್, ಉಸಿರಾಟದ ತೊಂದರೆ, ಆಲ್‌ಜೈಮರ್ ಕಾಯಿಲೆ, ಲಿವರ್ ಸಂಬಂಧಿ ರೋಗಗಳು ಸೇರಿದಂತೆ ಹಲವಾರು ರೋಗಗಳ ಉಪ ಶಮನಕ್ಕೆ ಸಹಕಾರಿಯಾಗಿದೆ.
ಸೋಂಕು ವೈರಾಣು ಪ್ರತಿರೋಧದಲ್ಲಿ ಅರಶಿಣ
01 ಇರಿಟೆಬಲ್ ಬೌಲ್ ಸಿಂಡ್ರಮ್ (ಕೆರಳಿಸುವ ಕರಳು-ಐಬಿಎಸ್) ಜಠರ-ಕರುಳಿನ ಕಾರ್ಯಚಟುವಟಿಕೆಯಲ್ಲಿ ಪದೆ ಪದೇ ಆಗುವ ದೀರ್ಘಕಾಲದ ಬದಲಾವಣೆಯಿಂದ ಐಬಿಎಸ್ ಸಮಸ್ಯೆ ಸೃಷ್ಠಿಯಾಗುತ್ತದೆ.ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಐಬಿಎಸ್ ಶಮನದಲ್ಲಿ ಕುರ್ಕುಮಿನ್ ಮಹತ್ತರ ಪಾತ್ರ ವಹಿಸುತ್ತದೆ.
02 ಎಚ್‌ಐವಿ: ಅರಿಶಿಣ ಎಚ್‌ಐವಿ ನಿರೋಧಕ ಶಕ್ತಿಯಾಗಿ ಕಾರ್ಯವೆಸಗುತ್ತದೆ. ಎಚ್‌ಐವಿ ವೈರಾಣುಗಳ ಸೋಂಕು ತಡೆಯುತ್ತದೆ,. ಆ ಮೂಲಕ ಸೋಕಿನಿಂದ ರಕ್ಷಣೆ ನೀಡುತ್ತದೆ.
03 ಹೆಪಟೈಟಿಸ್ ವೈರಾಣು: ಅಪಾಯಕಾರಿ ಹೆಪಟೈಟಿಸ್ ಬಿ ಹಾಗೂ ಸಿ ವೈರಾಣುಗಳು ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ವೈರಾಣುಗಳು ದೇಹದಲ್ಲಿ ಆಶ್ರಯ ಪಡೆಯದಂತೆ ರಕ್ಷಿಸುತ್ತದೆ.
ಇನ್‌ಫ್ಲ್ಯೂಯೆಜ್ಞ ವೈರಸ್:
ತೀವ್ರ ನೆಗಡಿಯಿಂದ ಕೂಡಿದ ಸಾಂಕ್ರಾಮಿಕ ಜ್ವರದ ವಿರುದ್ದ ಪ್ರಬಲ ನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ಅರಶಿಣ ಮತ್ತು ಎಬೋಲಾ ವೈರಾಣು ಸೋಂಕು: ಅರಶಿಣ ಎಬೋಲಾ ಸೋಂಕುಪೀಡಿತರ ಚಿಕಿತ್ಸೆಯಲ್ಲೂ ನೆರವಾಗುತ್ತದೆ. ಸೋಂಕು ಉಲ್ಬಣಗೊಳಿಸುವ ಕೆಲವು ಅಂಶಗಳನ್ನು ತಡೆಹಿಡಿಯುತ್ತದೆ.
ಅರಶಿಣದ ಉಪಯೋಗಗಳು
– ರೋಗ ನಿರೋಧಕ ಶಕ್ತಿ ವೃದ್ಧಿ
– ಸೂಕ್ಷ್ಮಜೀವ ಪ್ರತಿರೋಧಕ
– ಶೀತ, ಕಫ, ಕೆಮ್ಮು ಶಮನ
– ಸಂಧಿ ಆರೋಗ್ಯ ರಕ್ಷಣೆ
– ಚರ್ಮ ಆರೋಗ್ಯ ಸಂರಕ್ಷಣೆ
– ಪಿತ್ತಕೋಶ ಆರೋಗ್ಯ ವೃದ್ಧಿ
– ಜೀರ್ಣ ಶಕ್ತಿಗೆ ಉಪಯುಕ್ತ
– ಉಸಿರಾಟದ ತೊಂದರೆ ನಿವಾರಣೆ
– ನೋವು ಹಾಗೂ ನಂಜು ನಿವಾರಕ
– ಸಾಂಕ್ರಾಮಿಕ ರೋಗ ನಿರೋಧಕ ಶಕ್ತಿ
ಪ್ರಸ್ತುತಿ: ಮೆಡಿಟೆಕ್ ಇಂಡಿಯಾ, ಮಂಗಳೂರು ‘ಕುರ್ಕುಮೆಡ್’ ತಯಾರಕರು
ಮಾಹಿತಿಗಾಗಿ: www.curcumin.co.in | www.medorganicsindia.com
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.