ಸಿಎಂ ಪರಿಹಾರ ನಿಧಿಗೆ 10 ಕೋಟಿ ದೇಣಿಗೆ; ಇನ್ಫೋಸಿಸ್ ಸುಧಾಮೂರ್ತಿಗೆ ಮೆಚ್ಚುಗೆಯ ಸುರಿಮಳೆ
Team Udayavani, Aug 9, 2019, 10:37 AM IST
ಬೆಂಗಳೂರು:ರಾಜ್ಯದಲ್ಲಿ ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ 10 ಕೋಟಿ ರೂಪಾಯಿ ನೀಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಧಾಮೂರ್ತಿಯವರ ಜನಪರ ಕಾಳಜಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಲು ಸದ್ಯಕ್ಕೆ ಅಂದಾಜು 5 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಸುಮಾರು 30ಸಾವಿರ ಮನೆಗಳನ್ನು ನಿರ್ಮಿಸಬೇಕಿದೆ. ಇದಕ್ಕೆ ದಾನಿಗಳು ನೆರವು ನೀಡಿ ಸಹಾಯ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ ಮನವಿ ಮಾಡಿಕೊಂಡಿದ್ದರು.
ಅಲ್ಲದೇ ಸುದ್ದಿಗೋಷ್ಠಿಯಲ್ಲಿ ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಲು 10 ಕೋಟಿ ನೆರವು ನೀಡಿರುವ ಇನ್ಫೋಸಿಸ್ ನ ಸುಧಾಮೂರ್ತಿಯವರಿಗೆ ಧನ್ಯವಾದ ಅರ್ಪಿಸುವುದಾಗಿ ಯಡಿಯೂರಪ್ಪ ಹೇಳಿದ್ದರು.
ಇದೀಗ ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಪಿಸಲು ಸುಧಾಮೂರ್ತಿ ಸಿಎಂ ಪರಿಹಾರ ನಿಧಿಗೆ 10 ಕೋಟಿ ರೂಪಾಯಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮತ್ತೊಂದೆಡೆ ಕನ್ನಡ ಚಿತ್ರರಂಗದ ಸ್ಟಾರ ನಟರು ಕೂಡಾ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಜತೆಗೆ ತಾವೂ ಕೂಡಾ ಕೈಜೋಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Naxal Activity: ರಾಜ್ಯದಲ್ಲಿ ನಕ್ಸಲ್ ಚಳವಳಿ ಅಂತ್ಯಗೊಂಡೀತೇ?
Debt Reduction: ನಬಾರ್ಡ್ ಸಾಲ ಕಡಿತ: ಪ್ರಧಾನಿ ಮೋದಿ, ಶಾ ಭೇಟಿಗೆ ರಾಜ್ಯ ಸರಕಾರದ ನಿರ್ಧಾರ
Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್ ಶಾಸಕರ ಪಟ್ಟು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
MUST WATCH
ಹೊಸ ಸೇರ್ಪಡೆ
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ
Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅಣ್ವಸ್ತ್ರ ದಾಳಿ ಎಚ್ಚರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.