ರಾಜ್ಯದಲ್ಲಿ 10ಸಾವಿರ ಡೆಂಗ್ಯೂ ಪ್ರಕರಣ ಪತ್ತೆ; ಬೆಂಗಳೂರು ನಂ. ವನ್
Team Udayavani, Sep 13, 2019, 5:00 PM IST
ಮಣಿಪಾಲ : ಮಳೆಗಾಲ ಬಂತೆಂದೆರೆ ಕಾಯಿಲೆಗಳ ಮಹಾಪರ್ವ ಆರಂಭವಾಗುತ್ತದೆ. ವಾತಾವರಣದಲ್ಲಿ ಏರುಪೇರಿನ ಲಕ್ಷಣಗಳು ಸಾಮಾನ್ಯವಾದರೂ ಅದರ ಪ್ರಭಾವ ಮನುಷ್ಯನ ಆರೋಗ್ಯ ಮೇಲೆ ಭೀಕರವಾದದ್ದು. ಕೆಮ್ಮು- ನೆಗಡಿ, ಶೀತ ದಂತಹ ಸಣ್ಣ ಪುಟ್ಟ ಕಾಯಿಲೆಗಳು ರೋಗಿಗಳನ್ನು ಹೈರಾಣ ಮಾಡಿದ್ದರೆ, ಡೆಂಗ್ಯೂನಂತಹ ಮಹಾಮಾರಿ ಪ್ರಾಣಕ್ಕೆ ಕುತ್ತು ತರುತ್ತದೆ. ಈ ವರ್ಷ ಡೆಂಗ್ಯೂಗೆ ತುತ್ತಾದವರ ಸಂಖ್ಯೆ ಅಧಿಕವಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ.
ಈ ನಿಟ್ಟಿನಲ್ಲಿ ಕರ್ನಾಟದಲ್ಲಿ ಎಷ್ಟು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ? ಯಾವ ಜಿಲ್ಲೆಯಲ್ಲಿ ಹೆಚ್ಚಿದೆ? ಹರಡುವಿಕೆಗೆ ಕಾರಣಗಳೇನು ? ಈ ಎಲ್ಲಾ ಅಂಕಿ-ಅಂಶಗಳು ಇಲ್ಲಿವೆ…
ಹತ್ತು ಸಾವಿರ ಪ್ರಕರಣಗಳು ಪತ್ತೆ:
ಹೌದು ಕಳೆದ ಬಾರಿಗೆ ಹೋಲಿಸಿದರೆ ಡೆಂಗ್ಯೂ ರೋಗ ಕಾಣಿಸಿಕೊಂಡವರ ಸಂಖ್ಯೆಯಲ್ಲಿ ಶೇ. 138 ರಷ್ಟು ಏರಿಕೆಯಾಗಿದ್ದು, ಎಂಟು ತಿಂಗಳಲ್ಲಿ ಕರ್ನಾಟಕದೆಲ್ಲೆಡೆ ಸುಮಾರು 10.5 ಸಾವಿರ ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದಾರೆ.
ಶೇ. 61 ರಷ್ಟು ಏರಿಕೆ:
ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಿದ್ದು. ಕಳೆದ ಬಾರಿಗಿಂತ ಶೇ. 61 ರಷ್ಟು ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿ—ಅಂಶ ವಿವರಿಸಿದೆ.
6,515 ಪ್ರಕರಣಗಳು:
ಕೇವಲ ಬೆಂಗಳೂರು ನಗರದಲ್ಲಿಯೇ ಸುಮಾರು 6,515ರಷ್ಟು ಜನರು ಈ ಮಹಾಮಾರಿ ಕಾಯಿಲೆಗೆ ತುತ್ತಾಗಿದ್ದಾರೆ.
ಸೆಪ್ಟೆಂಬರ್ 9ರವರೆಗೆ ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ಬಲಿಯಾದವರ ಸಂಖ್ಯೆ ಆರು ಮಂದಿ .
2018 ನೇ ಸಾಲಿನಲ್ಲಿ ಒಟ್ಟು ರಾಜಧಾನಿಯಲ್ಲಿ 4(4.4) ಸಾವಿರ ಪ್ರಕರಣಗಳು ದಾಖಲಾಗಿದ್ದವು.
ದಕ್ಷಿಣ ಕರ್ನಾಟಕದಲ್ಲಿ ಎಷ್ಟು ?
ಬೆಂಗಳೂರಿನ ನಂತರ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಕರಾವಳಿಯಲ್ಲಿ, ಈವರೆಗೆ 948 ಪ್ರಕರಣಗಳು ದಾಖಲಾಗಿದೆ.
ಹರಡುವ ರೀತಿ ಹೇಗೆ ?
ಸೊಳ್ಳೆಯಿಂದ ಈ ಕಾಯಿಲೆ ಹರಡುತ್ತಿದ್ದು, ಸೋಂಕಿನ ರೂಪ ಪಡೆದುಕೊಳ್ಳುತ್ತದೆ. ಸೊಳ್ಳೆ ಕಚ್ಚಿದ 5-7 ದಿವಸಗಳ ನಂತರ ಈ ರೋಗದ ಪ್ರಾಥಮಿಕ ಲಕ್ಷಣಗಳು ಕಂಡುಬರುತ್ತದೆ.
ತಡೆಗಟ್ಟುವಿಕೆ ಕ್ರಮಗಳು
ಮನೆಯೊಳಗೆ ಅಥವಾ ಮೇಲ್ಛಾವಣಿಯ ನೀರಿನ ತೊಟ್ಟಿಗಳಲ್ಲಿ ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ ಪುನಃ ಭರ್ತಿ ಮಾಡಿ ಭದ್ರವಾದ ಮುಚ್ಚಳಿಕೆಯಿಂದ ಮುಚ್ಚಬೇಕು. ಮನೆಯ ಒಳಗೆ ಹಾಗೂ ಹೊರಗೆ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರವಹಿಸುವುದು. ಒಡೆದ ಬಾಟಲಿ, ಟಿನ್, ಟಯರು ಇತ್ಯಾದಿಗಳಲ್ಲಿ ನೀರು ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ವಾತಾವರಣ ಸ್ವಚ್ಛವಾಗಿರಬೇಕು ಆಗ ಇಂತಹ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದು.
ಹೆಚ್ಚು ಪ್ರಕರಣ ದಾಖಲಾದ ರಾಜ್ಯಗಳು
ಕರ್ನಾಟಕ
ತಮಿಳು ನಾಡು
ತೆಲಂಗಾಣ
ಕೇರಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.