TungaBhadra Dam ರಕ್ಷಣೆಗೆ ಶತಪ್ರಯತ್ನ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್
ಆಂಧ್ರ, ತೆಲಂಗಾಣದಿಂದ ಪರಿಣತರು ಎಲ್ಲ 32 ಗೇಟ್‌ಗಳ ದುರಸ್ತಿ
Team Udayavani, Aug 12, 2024, 7:20 AM IST
ಹೊಸಪೇಟೆ: ತುಂಗಭದ್ರಾ ಜಲಾಶಯದ ರಕ್ಷಣೆಗೆ ಶತಪ್ರಯತ್ನ ನಡೆಸಲಾಗುತ್ತಿದೆ. ನಾಲ್ಕೈದು ದಿನದೊಳಗೆ ಜಲಾಶಯದಲ್ಲಿ 53 ಟಿಎಂಸಿ ನೀರು ಉಳಿಸಲು ಕ್ರಮ ವಹಿಸಲಾಗುವುದು. ರೈತರಿಗೆ ನೀರು ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪರಿಣತರ ತಂಡ ಜಲಾಶಯದ ಗೇಟ್ ದುರಸ್ತಿಗೆ ಕ್ರಮ ಕೈಗೊಂಡಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.
ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿ ಗೃಹದಲ್ಲಿ ರವಿವಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿ, ಶನಿವಾರ ರಾತ್ರಿ 10.50ಕ್ಕೆ 19ನೇ ಗೇಟ್ ಮುರಿದು ಬಿದ್ದಿದೆ. ತತ್‌ಕ್ಷಣ ತುಂಗಭದ್ರಾ ಮಂಡಳಿ ಅ ಧಿಕಾರಿಗಳು ಈ ಭಾಗದ ಜಿಲ್ಲಾಡಳಿತಗಳಿಗೆ ಮಾಹಿತಿ ರವಾನಿಸಿದ್ದಾರೆ. ಈಗ ನಾವು ರೈತರನ್ನು ಬದುಕಿಸಬೇಕಿದೆ. ಜಲಾಶಯದಿಂದ ನೀರಾವರಿ ಮಾಡಲು ಎರಡೂ ಬೆಳೆಗಳಿಗೂ 115 ಟಿಎಂಸಿ ನೀರು ದೊರೆಯಬೇಕಿದೆ. ಈಗ ನಾವು 53 ಟಿಎಂಸಿ ನೀರು ಉಳಿಸಬೇಕಿದೆ. 19ನೇ ಗೇಟ್ ಜತೆಗೆ ಇನ್ನೂ 10 ಗೇಟ್ ದುರಸ್ತಿ ಕೆಲಸವೂ ನಡೆಯಲಿದೆ ಎಂದರು.
ಜಲಾಶಯದ 19ನೇ ಗೇಟ್ ಸೇರಿ ಜಲಾಶಯದ ಎಲ್ಲ ಗೇಟ್‌ಗಳ ದುರಸ್ತಿಗಾಗಿ ನಾರಾಯಣ ಎಂಜಿನಿಯರ್ಸ್, ಜೆಎಸ್‌ಡಬ್ಲ್ಯು ಸೇರಿದಂತೆ ಪರಿಣತರನ್ನು ಸಂಪರ್ಕಿಸಲಾಗಿದೆ. ಈಗಾಗಲೇ ಜಲಾಶಯದ ಹಳೇ ಮಾದರಿ ಕೂಡ ಪರಿಣತರಿಗೆ ನೀಡಲಾಗಿದೆ. ಹಳೇ ಮಾದರಿ ರೂಪಿಸಿದವರು ಕೂಡ ಆಗಮಿಸಲಿದ್ದಾರೆ. ನೀರಾವರಿ ಇಲಾಖೆಯ ಪರಿಣತರ ತಂಡ ಕೂಡ ಆಗಮಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ ಎಂದರು.
ಜಲಾಶಯದ 2 ಕಿಮೀ ಸುತ್ತಮುತ್ತ ಭದ್ರತೆ
ಎಲ್ಲ 32 ಗೇಟ್‌ಗಳಿಂದ ಒಟ್ಟು 98 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. 19ನೇ ಗೇಟ್‌ನಿಂದಲೇ 38 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಟೆಕ್ನಿಕಲ್ ಟೀಂ ಕೆಲಸ ಮಾಡುತ್ತಿದೆ. ಮುಖ್ಯ ಎಂಜಿನಿಯರ್ಸ್‌ಗಳೂ ಇದ್ದಾರೆ. ಬೇರೆ ದುರಸ್ತಿ ಮಾದರಿಗಳನ್ನು ಪರಿಶೀಲಿಸಲಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ನುರಿತ ತಜ್ಞರೂ ಇದ್ದಾರೆ. ದುರಸ್ತಿ ಕೆಲಸ ಪ್ರಾರಂಭವಾಗಿದೆ. ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜಲಾಶಯದ 2 ಕಿಮೀ ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗುವುದು. ಟೆಕ್ನಿಕಲ್ ತಂಡ ಹೊರತುಪಡಿಸಿ ರಾಜಕಾರಣಿಗಳನ್ನು ಕೂಡ ಒಳ ಬಿಡಲಾಗುವುದಿಲ್ಲ. ಜಲಾಶಯದ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.