ಉಕ್ರೇನ್-ರಷ್ಯಾ ಸಂಘರ್ಷ 10ನೇ ದಿನ; ನಗರಗಳ ವ್ಯಥೆ
Team Udayavani, Mar 6, 2022, 8:05 AM IST
ಖೆರ್ಸಾನ್
ಗುರುವಾರವೇ ಈ ನಗರ ರಷ್ಯಾ ಸುಪರ್ದಿಗೆ ಬಂದಿದೆ. ರಷ್ಯಾದ ಆಕ್ರಮಣವನ್ನು ಖಂಡಿಸಿ ಶನಿವಾರ ಉಕ್ರೇನ್ ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದು, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅವರನ್ನು ಚದುರಿಸಲಾಗಿದೆ. ಇದು ಕಪ್ಪು ಸಮುದ್ರದಲ್ಲಿರುವ ಬಂದರು ನಗರಿಯಾಗಿದ್ದು, ಈಗ ರಷ್ಯಾ ಹಿಡಿತಕ್ಕೆ ಬಂದಿರುವುದು ಉಕ್ರೇನ್‌ಗಾದ ದೊಡ್ಡ ಹಿನ್ನಡೆ.
ಕೀವ್
10ನೇ ದಿನ ಕೀವ್‌ನಲ್ಲಿ ಕಾಳಗ ಮುಂದುವರಿದಿದೆ. ಶುಕ್ರವಾರ ರಾತ್ರಿಪೂರ್ತಿ ಶೆಲ್‌ಗಳು ಅಪ್ಪಳಿಸಿವೆ. ಉತ್ತರ ಭಾಗದಿಂದ 64 ಕಿ.ಮೀ.ನುದ್ದಕ್ಕೂ ದಂಡೆತ್ತಿ ಬರುತ್ತಿರುವ ರಷ್ಯಾ ಪಡೆ ಕೀವ್ ಸಮೀಪಿಸುತ್ತಿದ್ದು, ರಾಜಧಾನಿಯೂ ರಷ್ಯಾ ವಶವಾಗಲಿದೆ. ಕೀವ್‌ನ ಗ್ರಾಮಕ್ಕೆ ನಡೆದ ವೈಮಾನಿಕ ದಾಳಿಯಲ್ಲಿ 6 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ.
ಮರಿಯುಪೋಲ್
ಈ ನಗರದಲ್ಲಿ ಶನಿವಾರ ರಷ್ಯಾ 5 ಗಂಟೆಗಳ ಕದನ ವಿರಾಮ ಘೋಷಿಸಿತ್ತು. ಈ ಅವಧಿಯಲ್ಲಿ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದರು. ಅಷ್ಟರಲ್ಲಿ, ಪುತಿನ್ ಸೈನಿಕರು ಕದನ ವಿರಾಮ ಉಲ್ಲಂ ಸಿ ಗುಂಡಿನ ದಾಳಿ ಆರಂಭಿಸಿದ್ದು, ನಾಗರಿಕರನ್ನು ಗೊಂದಲಕ್ಕೀಡುಮಾಡಿದೆ.
ಸುಮಿ
ಶನಿವಾರ ಬೆಳಗ್ಗೆ ಸುಮಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಸೈನಿಕರ ನಡುವೆ ದೊಡ್ಡ ಮಟ್ಟದ ಸಂಘರ್ಷ ಏರ್ಪಟ್ಟಿದೆ. ನಿರಂತರ ಶೆಲ್, ರಾಕೆಟ್ ದಾಳಿಗಳು ನಡೆದಿವೆ. ಇದೇ ನಗರದ ಬಂಕರ್‌ಗಳಲ್ಲಿ ನೂರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.
ಖಾರ್ಕಿವ್
ಉಕ್ರೇನ್‌ನ 2ನೇ ದೊಡ್ಡ ನಗರ ಖಾರ್ಕಿವ್ ಮೇಲೆ ಕಣ್ಣಿಟ್ಟಿರುವ ರಷ್ಯಾ, ಸತತವಾಗಿ ನಗರವನ್ನು ವಶಕ್ಕೆ ಪಡೆಯಲು ಯತ್ನಿಸಿ ವಿಫಲವಾಗುತ್ತಿದೆ. ಶುಕ್ರವಾರ ರಾತ್ರಿ ಬಾಂಬುಗಳ ಮಳೆಯೇ ಸುರಿದಿದ್ದು, 34 ನಾಗರಿಕರು ಮೃತಪಟ್ಟಿದ್ದಾರೆ. ರಷ್ಯಾ ದಾಳಿಯಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿಯೂ ನಷ್ಟವಾಗಿದೆ.
ಒಡೆಸ್ಸಾ
ಖೆರ್ಸಾನ್ ಅನ್ನು ವಶಕ್ಕೆ ಪಡೆದ ಬಳಿಕ ರಷ್ಯಾದ ಯುದ್ಧನೌಕೆಗಳು ಈಗ ಮೂರನೇ ಅತಿದೊಡ್ಡ ನಗರವಾದ ಒಡೆಸ್ಸಾದತ್ತ ಮುನ್ನುಗ್ಗಿ ಬರುತ್ತಿವೆ. ಒಡೆಸ್ಸಾದಲ್ಲಿ ಭಾರೀ ದಾಳಿ ನಡೆಯುವುದು ಖಚಿತ ಎಂದು ಅಮೆರಿಕವೂ ಎಚ್ಚರಿಸಿದೆ.
ಚೆರ್ನಿಹಿವ್
ಶನಿವಾರ ಇಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆದಿದ್ದು, ಬೃಹತ್ ಸ್ಫೋಟಕ್ಕೆ ನಾಗರಿಕರು ಬೆಚ್ಚಿಬಿದ್ದಿದ್ದಾರೆ. ಇಡೀ ನಗರವೇ ಸ್ಮಶಾನವಾಗಿದ್ದು, ಶನಿವಾರ ಬಹುತೇಕ ಮಂದಿ ಗುಳೇ ಹೋಗಿದ್ದಾರೆ. ಈ ನಗರದ ಮೇಲೆ ವೈಮಾನಿಕ ದಾಳಿಯ ಅಲರ್ಟ್ ಅನ್ನೂ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.