ಪತ್ನಿ ಕೂರಿಸಿಕೊಂಡು 1,100ಕಿ.ಮೀ. ಸೈಕಲ್ ತುಳಿದ!
Team Udayavani, Apr 25, 2020, 5:40 AM IST
ಪತ್ನಿಯನ್ನು ಕುಳ್ಳಿರಿಸಿಕೊಂಡು ಸತತ 7 ದಿನ, 1,100 ಕಿ.ಮೀ. ಸೈಕಲ್ ತುಳಿದು ಊರು ಸೇರಿದ ವಲಸೆ ಕಾರ್ಮಿಕನ ಕರುಣಾಜನಕ ಕಥೆಯಿದು.
ದಿಗ್ಬಂಧನದ ನಡುವೆ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕನ ನೋವಿನ ಕಥೆ ಕೇಳಿದರೆ ಎಂತಹ ಕಲ್ಲು ಹೃದಯವೂ ಕರಗದೆ ಇರದು. ಅಶೋಕ್ ಬೆಹೆರಾ (36 ವರ್ಷ) ಹಾಗೂ ನಮಿತಾ ಹೊಟ್ಟೆಪಾಡಿಗಾಗಿ ಒಡಿಶಾದ ಗಂಜಾಮ್ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಚೆನ್ನೈಗೆ ಬಂದಿದ್ದರು, ಕೋವಿಡ್-19 ಹಿನ್ನೆಲೆಯಲ್ಲಿ ದೇಶದಲ್ಲಿ ಇದಕ್ಕಿದ್ದಂತೆ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಸಿಕ್ಕಿದ್ದ ಕೆಲಸವೂ ಕೈ ತಪ್ಪಿತು. ಇತ್ತ ಚೆನ್ನೈನಲ್ಲಿ ಉಳಿಯಲು ಆಗದೆ ಅತ್ತ ಊರಿಗೆ ತೆರಳಲೂ ಸಾಧ್ಯವಾಗದೆ ಕಣ್ಣೀರಿಟ್ಟರು, ಹೆತ್ತವರ ಬರುವಿಕೆಗಾಗಿ ಊರಲ್ಲಿ ಮತ್ತಿಬ್ಬರು ಪುಟ್ಟ ಕಂದಮ್ಮಗಳು ಕಾಯುತ್ತಿದ್ದವು. ಹೆತ್ತೂಡಲು ಸುಮ್ಮನಿರುವುದೇ? ಖಂಡಿಲ್ಲ ಇಲ್ಲ, ಹೇಗಾದರೂ ಮಾಡಿ ಊರು ಸೇರುವುದು ನಿಶ್ಚಿತ ಎಂದು ದಂಪತಿಗಳು ದೃಢ ಸಂಕಲ್ಪ ಮಾಡಿದರು. ಇದಕ್ಕೆ ಈ ದಂಪತಿಗಳು ಆಯ್ದುಕೊಂಡದ್ದೇ ಸೈಕಲ್ ಸವಾರಿ. ಸತತ 7 ದಿನ, 1,100 ಕಿ.ಮೀ. ಸೈಕಲ್ ಹಿಂದೆ ಪತ್ನಿ ಕುಳ್ಳಿರಿಸಿ ಹಲವಾರು ಸವಾಲುಗಳನ್ನು ಎದುರಿಸಿ ಊರಿಗೆ ತಲುಪಿದ ಸಾಹಸಿಯ ಕಥೆ ರೋಮಾಂಚನಗೊಳಿಸುತ್ತದೆ. ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಆತನ ಸಾಹಸದ ಕಥೆ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.