CM Siddaramaiahಗೆ 14 ಮುಡಾ ಸೈಟ್‌: ಆರ್‌. ಅಶೋಕ್‌ “ದಾಖಲೆ’

ಮಾಲಕತ್ವವೇ ಇಲ್ಲದವನಿಂದ ಸಿಎಂ ಪತ್ನಿ ಅಣ್ಣನಿಗೆ 3.16 ಎಕರೆ ಭೂ ಮಾರಾಟ, ಬಳಿಕ ಸಿಎಂ ಪತ್ನಿಗೆ ದಾನವಾಗಿ ಹಸ್ತಾಂತರ: ವಿಪಕ್ಷ ನಾಯಕ

Team Udayavani, Aug 8, 2024, 7:30 AM IST

Ashok

ಮಂಡ್ಯ: ಮೈಸೂರಿನ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್‌. ಅಶೋಕ್‌ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸತ್ಯವನ್ನು ಮುಚ್ಚಿಡಲು ಹಾಗೂ ಮರೆಮಾಚಲು ಸಾಧ್ಯವಿಲ್ಲ. ಈ ಜಮೀನನ್ನು ದಲಿತ ಸಮುದಾಯದ ನಿಂಗ ಎಂಬವರು 1936ರಲ್ಲಿ 1 ರೂಪಾಯಿಗೆ ತೆಗೆದು ಕೊಂಡಿದ್ದರು. ಇವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಎಂಬ ಮೂವರು ಮಕ್ಕಳಿದ್ದಾರೆ.

ಇದಾದ ಅನಂತರ ನಿಂಗ ಸಾವ ನ್ನಪ್ಪಿದ್ದರು. ನಿಂಗ ಅವರ ಹೆಂಡತಿ ನಿಂಗಮ್ಮ 1990ರಲ್ಲಿ ನಿಧನರಾದರು. ಆಗ ಮಲ್ಲಯ್ಯ ಹಾಗೂ ದೇವರಾಜು ಮೈಲಾರಯ್ಯನಿಗೆ ಕೆಸರೆ ಗ್ರಾಮದ ಸರ್ವೇ ನಂ. 462ರಲ್ಲಿ 4.37 ಎಕರೆ ಹಾಗೂ 464ರಲ್ಲಿ 3.16 ಎಕರೆ ಜಮೀನನ್ನು ರಿಜಿಸ್ಟರ್‌ ಡಾಕ್ಯುಮೆಂಟ್‌ ಮೂಲಕ 300 ರೂ.ಗೆ ವರ್ಗಾಯಿಸಿದ್ದಾರೆ. ಇದರಿಂದ ದೇವರಾಜನಿಗೆ ಮಾಲಕತ್ವ ಇರುವುದೇ ಇಲ್ಲ. ನಿಂಗ ಕುಟುಂಬಸ್ಥರ ವಂಶ ವೃಕ್ಷದಲ್ಲಿ 27 ಜನರು ಇದ್ದಾರೆ.

ಮೈಲಾರಯ್ಯನಿಗೆ ಹಕ್ಕು ಬದ ಲಾವಣೆ ಆಗಿರುತ್ತದೆ. ಆದರೆ ಕಂದಾಯ ಇಲಾಖೆಯ ಆರ್‌ಟಿಸಿ ಯಲ್ಲಿ ಇವರ ಹೆಸರನ್ನು ಸೇರಿಸದೇ ಅ ಧಿಕಾರಿಗಳು ನಿರ್ಲಕ್ಷ್ಯ ಹಾಗೂ ಲೋಪ ಎಸಗಿದ್ದಾರೆ. ಇದರಿಂದ ನಿಂಗ ಬಿನ್‌ ಜವರ ಅವರ ಹೆಸರಿನಲ್ಲಿಯೇ ಮುಂದುವರಿಯುತ್ತದೆ. ಮೈಲಾ ರಯ್ಯ ಸಾವನ್ನಪ್ಪಿದ ಬಳಿಕ ಆತನ ಮಗ ಮಂಜುನಾಥಸ್ವಾಮಿಗೆ ಬರ ಬೇಕು. ಆದರೆ ಬಂದಿಲ್ಲ. ಇದರ ನಡುವೆ ದೇವರಾಜನಿಗೆ ತನ್ನ ತಂದೆ ನಿಂಗ ಹೆಸರಿನಲ್ಲಿಯೇ ಮುಂದುವರಿದಿರುವುದು ಗೊತ್ತಾಗಿತ್ತು.

ಆಗ ಆತ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಸಹೋದರನಿಗೆ ವಂಚಿಸಿ ಪೌತಿ ಖಾತೆ ಮಾಡಿಸಿ ಆರ್‌ಟಿಸಿಯಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದ. ಇದಾವುದನ್ನೂ ಪರಿಶೀಲಿಸದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಅಣ್ಣ ಮಲ್ಲಿಕಾರ್ಜುನಸ್ವಾಮಿ ದೇವರಾಜು ಎಂಬವನಿಂದ ಮಾತ್ರ ಸಹಿ ಹಾಕಿಸಿ ಕೊಂಡಿದ್ದಾರೆ. ದೇವರಾಜು ಸರಕಾರಿ ಸೇವೆಯಲ್ಲಿದ್ದರೂ ರೈತ ಎಂದು ಹೇಳಿಕೊಂಡಿದ್ದ ಎಂದು ದೂರಿದರು.

2001ರಲ್ಲಿ ಮುಡಾವು ಎಲ್‌ ಆ್ಯಂಡ್‌ ಟಿ ಅವರಿಗೆ 11,58,6632 ರೂ.ಗೆ ಬಡಾವಣೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿ, ಅಭಿವೃದ್ಧಿಪಡಿಸಲಾಗಿತ್ತು. 2004ರಲ್ಲಿ 3.15 ಗುಂಟೆಯನ್ನು ಸಿದ್ದ ರಾಮಯ್ಯ ಅವರ ಪತ್ನಿಯ ಅಣ್ಣ ಮಲ್ಲಿಕಾರ್ಜುನಸ್ವಾಮಿ ಅಕ್ರಮವಾಗಿ ಕ್ರಯ ಮಾಡಿಕೊಂಡಿದ್ದರು. 27 ಮಂದಿ ಹಕ್ಕುದಾರರಿದ್ದರೂ ಅಕ್ರಮವಾಗಿ ಮಾಡಿಕೊಂಡಿದ್ದಾರೆ.

1998ರಲ್ಲಿ ಸ್ವಾಧೀನವಾದ ಜಮೀನನ್ನು 2004ರಲ್ಲಿ ಕ್ರಯಕ್ಕೆ ಹೇಗೆ ಮಾಡಿಕೊಂಡರು ಎಂದು ಪ್ರಶ್ನಿಸಿದ ಅವರು, ಮತ್ತೆ 2005ರಲ್ಲಿ ವ್ಯವಸಾಯ ಭೂಮಿಯಿಂದ ನಿವೇಶನದ ಭೂಮಿಯಾಗಿ ಪರಿವರ್ತನೆ ಮಾಡಿದ್ದಾರೆ. 2001ರಲ್ಲೇ ಬಡಾವಣೆ ಕೆಲಸ ನಡೆಯುತ್ತಿತ್ತು. ಆದರೆ 2005ರಲ್ಲಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಡಿಸಿ, ತಹಶೀಲ್ದಾರ್‌ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ವರದಿ ನೀಡಿದ್ದಾರೆ.

2005ರಲ್ಲಿ ಮುಡಾ ಆಯುಕ್ತರು ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಆಗಿನ ಜಿಲ್ಲಾ ಧಿಕಾರಿ ಇದ್ಯಾವುದೂ ನೋಡದೆ ಕುರುಡರಂತೆ ಭೂ ಪರಿವರ್ತನೆ ಮಾಡಿಕೊಟ್ಟಿದ್ದಾರೆ. ಅಲ್ಲದೆ 2005ರಲ್ಲಿ ಸಿದ್ದರಾಮಯ್ಯ ಪತ್ನಿಯ ಅಣ್ಣ ಕ್ರಯಕ್ಕೆ ತೆಗೆದುಕೊಳ್ಳುವ ಮುನ್ನವೇ ಮುಡಾ 12 ಸೈಟ್‌ಗಳನ್ನು ಅಲಾಟ್‌ ಮಾಡಲಾಗಿತ್ತು. 12 ಸೈಟುಗಳನ್ನು ಅಲಾಟ್‌ ಮಾಡಿದ್ದ ಜಮೀನನ್ನು ಹೇಗೆ ಕ್ರಯ ಮಾಡಿಸಿಕೊಳ್ಳಲು ಸಾಧ್ಯ? ಎಂದವರು ಪ್ರಶ್ನಿಸಿದರು.

2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಶಿನ ಕುಂಕುಮಕ್ಕೆ 3.16 ಎಕರೆ ಜಮೀನು ನೀಡಿದ್ದರು. 2014ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದು ನನಗೆ ಬಂದ ಜಮೀನಿನಲ್ಲಿ ಬಡಾವಣೆ ಮಾಡಿದ್ದೀರಾ. ಬದಲಿ ಜಾಗವನ್ನು ನೀಡಿ ಎಂದಿದ್ದರು. ಆಗ ಮುಡಾ ಅ ಧಿಕಾರಿ ಪತ್ರ ಪರಿಶೀಲಿಸಿ ಇದರ ಬಗ್ಗೆ ಚರ್ಚಿಸಿ ಪರಿಗಣಿಸಲಾಗುವುದು ಎಂದು ಮರು ಉತ್ತರ ನೀಡಿದ್ದಾರೆ. 2023ರಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಾನೂನು ಬಾಹಿರವಾಗಿ ನಿವೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಈ ಎಲ್ಲ ಪ್ರಕ್ರಿಯೆಗಳನ್ನು ಗಮನಿ ಸಿದರೆ ಇದರಲ್ಲಿ ನಿಮ್ಮ ಕೈವಾಡ ಇರುವುದು ಗೊತ್ತಾಗುತ್ತದೆ. ಕೂಡಲೇ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನೀವು ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಡಿಸಿಎಂ ಆಗಿದ್ದಾಗ 3.27 ಲಕ್ಷ ಪರಿಹಾರ ವಿತರಣೆ
ಒಬ್ಬರಿಂದ ಮಾತ್ರ ಸಹಿ ಹಾಕಿಸಿಕೊಂಡು ರಿಜಿಸ್ಟರ್‌ ಮಾಡಿರುವುದು ನಿಯಮ ಬಾಹಿರ. 1998ರಲ್ಲಿ ಮುಡಾ 3.16 ಎಕರೆ ಜತೆಗೆ ಅಂದು ದೇವನೂರು 3ನೇ ಹಂತದ ಬಡಾವಣೆಗೆ 462 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ಆಗ ದೇವರಾಜು ಎಂಬಾತ ತನ್ನ ಕುಟುಂಬಸ್ಥರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ. ಆಗಿನ ದರದಂತೆ 3.27 ಲಕ್ಷ ರೂ. ಪರಿಹಾರವನ್ನು ದೇವರಾಜು ಪಡೆದಿದ್ದ. ಆಗ ಇದೇ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು ಎಂದು ಅಶೋಕ್‌ ದೂರಿದರು.

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.