500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು
Team Udayavani, Sep 24, 2020, 6:13 PM IST
ಒಡಿಶಾ : ತನ್ನ ಮನೆಯಿಂದ 500 ರೂಪಾಯಿ ಕದ್ದಿದ್ದಾನೆ ಎಂದು ಸ್ನೇಹಿತನ ತಾಯಿ ಹದಿನಾಲ್ಕು ವರ್ಷದ ಬಾಲಕನಿಗೆ ಕೋಲಿನಿಂದ ಗಂಭೀರವಾಗಿ ಹೊಡೆದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಒಡಿಶಾದ ಮಾಯರ್ ಬಂಜ್ ಜಿಲ್ಲೆಯ ಖೈಪನಪೋಷಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಘಟನೆ ಕುರಿತಂತೆ ಪೊಲೀಸರು 36ವರ್ಷದ ಸಸ್ಮಿತಾ ಬೆಹೆರಾ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ ವೇಳೆ ಬಾಲಕನಿಗೆ ಹೊಡೆದಿರುವ ವಿಚಾರ ಹೊರಗೆ ಬಂದಿದೆ.
ಘಟನೆ ವಿವರ :
ರಾಜನ್ ಬೆಹೆರಾ ಎನ್ನುವ ಹದಿನಾಲ್ಕು ವರ್ಷದ ಯುವಕ ತನ್ನ ಸ್ನೇಹಿತನ ಮನೆಗೆ ತೆರಳಿದ್ದು ಸ್ವಲ್ಪ ಸಮಯದ ಬಳಿಕ ಮನೆಗೆ ವಾಪಸ್ಸಾಗಿದ್ದಾನೆ ಈ ವೇಳೆ ಸ್ನೇಹಿತನ ತಾಯಿ ಮನೆಯಲ್ಲಿ ಇರಲಿಲ್ಲ ಆ ನಂತರ ಮನೆಗೆ ಬಂದ ತಾಯಿಗೆ ಮನೆಯಲ್ಲಿ ಇಟ್ಟಿದ್ದ 500 ರೂಪಾಯಿ ಕಾಣುತಿಲ್ಲ ಎಂದು ತನ್ನ ಮಗನಲ್ಲಿ ವಿಚಾರಿಸಿದ್ದಾರೆ ಆಗ ಆತ ತನಗೇನು ಗೊತ್ತಿಲ್ಲ ಎಂದಿದ್ದಾನೆ ಅಸ್ಟೊತ್ತಿಗೆ ತನ್ನ ಗೆಳೆಯ ಮನೆಗೆ ಬಂದಿದ್ದ ವಿಚಾರ ಅಮ್ಮನಲ್ಲಿ ತಿಳಿಸಿದ್ದಾನೆ ಹುಡುಗ, ಇದನ್ನು ಕೇಳಿದ ಹುಡುಗನ ತಾಯಿ ಗೆಳೆಯನಿಗೆ ಕರೆ ಮಾಡಿ ಮನೆಗೆ ಬರಲು ಹೇಳಿದ್ದಾಳೆ. ಮನೆಗೆ ಹೋದ ಬಾಲಕನಲ್ಲಿ ಕಳ್ಳತನವಾದ 500 ರೂಪಾಯಿಯ ವಿಚಾರ ಕೇಳಿದ್ದಾಳೆ ಆದರೆ ಆತ ತನಗೇನೂ ಗೊತ್ತಿಲ್ಲ ಎಂದಿದ್ದಾನೆ ಈ ವೇಳೆ ತಾಯಿ ಕೋಲಿನಿಂದ ಮನಬಂದಂತೆ ಬಾಲಕನಿಗೆ ಹೊಡೆದಿದ್ದಾಳೆ ಗಂಭೀರ ಗಾಯಗೊಂಡಿದ್ದ ಬಾಲಕ ಮನೆಗೆ ಬಂದಿದ್ದು ಈ ಸಂದರ್ಭ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ :ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ
ಬಾಲಕ ಸಾವನ್ನಪಿದ ವಿಚಾರವನ್ನು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿದ್ದು ಪೊಲೀಸರು ಸ್ಥಳಕ್ಕೆ ಬಂದು ಬಾಲಕನ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯಿತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಮಹಿಳೆ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಬಾಲಕ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿದ್ದು ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 302 ರ ಅನ್ವಯ ಕೊಲೆ ಆರೋಪದ ಕೇಸ್ ದಾಖಲು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.