15 ಯುವಕರ ಬಲಿ ಪಡೆದ ಪಟಾಕಿ ದಾಸ್ತಾನು
Team Udayavani, Feb 9, 2020, 6:00 AM IST
ಚಂಡೀಗಢ: ಧಾರ್ಮಿಕ ಉತ್ಸವವೊಂದರಲ್ಲಿ ಸಿಡಿಸಲು ತರಲಾಗಿದ್ದ ಪಟಾಕಿ ದಾಸ್ತಾನಿಗೆ ಬೆಂಕಿ ಬಿದ್ದು ಅವು ಸ್ಫೋಟಗೊಂಡ ಪರಿಣಾಮ ಆ ಉತ್ಸವದಲ್ಲಿ ಭಾಗವಹಿಸಿದ್ದ ಹಲವಾರು ಯುವಕರು ಸಾವಿಗೀಡಾಗಿರುವ ಘಟನೆ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಪಹು ಎಂಬ ಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಏನಿಲ್ಲವೆಂದರೂ 14-15 ಯುವಕರು ಸಾವಿಗೀಡಾಗಿದ್ದು, ಅವರೆಲ್ಲರೂ 18-19 ವಯಸ್ಸಿನವರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿರುವುದಾಗಿ ತರ್ನ್ ತರನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ ದಾಹಿಯಾ ತಿಳಿಸಿದ್ದಾರೆ. “ನಗರ್ ಕೀರ್ತನ್’ ಎಂಬ ಧಾರ್ಮಿಕ ಉತ್ಸವದಲ್ಲಿ ಬಳಸಲು ಅಪಾರ ಪ್ರಮಾಣದ ಪಟಾಕಿಗಳನ್ನು ಟ್ರಕ್ಕೊಂದರಲ್ಲಿ ತುಂಬಿಸಿಕೊಂಡು ತರಲಾಗಿತ್ತು. ಉತ್ಸವದ ವೇಳೆ ಪಟಾಕಿ ಸಿಡಿಸುತ್ತಿರುವಾಗಲೇ ಅದರ ಕಿಡಿಗಳು ಟ್ರಕ್‌ನಲ್ಲಿದ್ದ ಪಟಾಕಿ ದಾಸ್ತಾನಿಗೆ ಹಾರಿ, ಅವು ಏಕಾಏಕಿ ಸ್ಫೋಟಗೊಂಡವು. ಆಗ ಟ್ರಕ್ ಕೂಡ ಸ್ಫೋಟಿಸಿತು. ಇದರಿಂದ ಟ್ರಕ್ ಅಕ್ಕಪಕ್ಕದಲ್ಲಿ ನಿಂತಿದ್ದ ಯುವಕರು ಸಾವಿಗೀಡಾದರು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.