![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 9, 2020, 9:04 PM IST
ಯಾದಗಿರಿ: ಜಿಲ್ಲೆಯಲ್ಲಿ ಸೋಂಕು ಮೂರನೇ ಹಂತಕ್ಕೆ ತಲುಪಿದ್ದು, ಇಂದು ಮತ್ತೆ 16 ಜರನಲ್ಲಿ ಹರಡಿದ್ದು ಇದೀಗ ಸೋಂಕಿತರ ಸಂಖ್ಯೆ 1043ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸುರಪುರ ತಾಲೂಕಿನಲ್ಲಿಯೇ ವ್ಯಾಪಕವಾಗಿ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು ಜುಲೈ 1ರಂದು ಕೋವಿಡ್‌ಗೆ ತುತ್ತಾಗಿರುವ ಸುರಪುರ ತಾಲೂಕಿನ ಚಿಂಚೋಡಿಯ 34 ವರ್ಷದ ಪುರುಷ ಪಿ 15476ರ ಸಂಪರ್ಕದಿಂದ ಬುಧವಾರವಷ್ಟೇ ಮೂರು ಜನರಿಗೆ ತಗುಲಿದ್ದ ಸೋಂಕು, ಗುರುವಾರವೂ ಮತ್ತೆ ಏಳು ಜನರಿಗೆ ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇವರ ಸಂಪರ್ಕದಿಂದ ಸುರಪುರಿನ ದಿವಳಗುಡ್ಡದ 24 ವರ್ಷದ ಪುರುಷ ಪಿ 29032, 46 ವರ್ಷದ ಪುರುಷ ಪಿ 29033, 16 ವರ್ಷದ ಬಾಲಕಿ ಪಿ 29034 , 18 ವರ್ಷದ ಬಾಲಕ ಪಿ 29035, 22 ವರ್ಷದ ಮಹಿಳೆ ಪಿ 29036, 80 ವರ್ಷದ ಮಹಿಳೆ ಪಿ 39037, 14 ವರ್ಷದ ಬಾಲಕಿ ಪಿ 29038 ಗೆ ಸೋಂಕು ತಗುಲಿದೆ.
ಇನ್ನು ಸುರಪುರ ತಾಲೂಕಿನ ಸುಗೂರ ಗ್ರಾಮದ 66 ವರ್ಷದ ಪುರುಷ ಪಿ 13411 ರ ಸಂಪರ್ಕದಿಂದಲೂ 4 ವರ್ಷದ ಬಾಲಕಿ ಪಿ 29043 ಸೇರಿದಂತೆ ಒಟ್ಟು 4 ಜನ 65 ವರ್ಷದ ಮಹಿಳೆ ಪಿ 20040 , 40 ವರ್ಷದ ಮಹಿಳೆ ಪಿ 29041, 45 ವರ್ಷದ ಮಹಿಳೆ ಪಿ 29046 ಗೆ ಸೋಂಕು ಒಕ್ಕರಿಸಿದೆ.
ಯಾವುದೇ ಸಂಪರ್ಕ ಪತ್ತೆಯಾಗದ ನಾಲ್ಕು ಜನ ಸುರಪುರ ಪೊಲೀಸ್ ಪೇದೆ ಎನ್ನಲಾದ 26 ವರ್ಷದ ಪಿ 29039,
ಸತ್ಯಂಪೇಟ್‌ನ 48 ವರ್ಷದ ಪುರುಷ ಪಿ 29044 , ಸುರಪುರ ಘಟಕದ 28 ವರ್ಷದ ಪುರುಷ ಪಿ 29045 ಹಾಗೂ ವಡಗೇರಾ ತಾಲೂಕಿನ ಹಯ್ಯಾಳ (ಬಿ)ಯ 40 ವರ್ಷದ ಮಹಿಳೆ ಪಿ 29047 ಗೆ ಸೋಂಕು ಪತ್ತೆಯಾಗಿದೆ.
ಅಲ್ಲದೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಸುರಪುರ ತಾಲೂಕಿನ ಸುತಾರ ಹುಣಸಗಿ 20ವರ್ಷದ ಮಹಿಳೆ ಪಿ 29042 ಗೆ ಸೋಂಕು ಕಾಣಿಸಿದೆ.
28933 ಜನರ ಕೋವಿಡ್ ಪರೀಕ್ಷೆ: ಜಿಲ್ಲೆಯಲ್ಲಿ ಗುರುವಾರ 433 ಹೊಸ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು, ಈವರೆಗೆ 28933 ಜನರ ಕೋವಿಡ್ ಪರೀಕ್ಷೆಯಾಗಿದ್ದು ಇವರಲ್ಲಿ 26613 ಜನರ ವರದಿ ನೆಗೆಟಿವ್ ಬಂದಿದ್ದು ಇನ್ನು 1277 ಜನರ ವರದಿ ಬರಬೇಕಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕದ 135 ಜನ ಪತ್ತೆಯಾಗಿದ್ದು ಒಟ್ಟು 2276 ಮತ್ತು ದ್ವಿತೀಯ ಸಂಪರ್ಕದ 168 ಜನ ಸೇರಿ ಈವರೆಗೆ 3606 ಜನರನ್ನು ಪತ್ತೆ ಹಚ್ಚಲಾಗಿದೆ. ಇಂದು 9 ಕಂಟೇನ್ಮೇಟ್ ಝೋನ್ ರಚಿಸಲಾಗಿದ್ದು ಒಟ್ಟು 105ಕ್ಕೆ ಏರಿಕೆಯಾಗಿದೆ. 1043 ಸೋಂಕಿತರಲ್ಲಿ ಈವರೆಗೆ 876 ಜನ ಗುಣಮುಖವಾಗಿದ್ದು, 166 ಪ್ರಕರಣ ಸಕ್ರಿಯವಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.