New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
ವೀಸಾ ಪ್ರಕ್ರಿಯೆ ಮೇಲೆ ಹೇಗೆ ಪರಿಣಾಮ ಬೀರಬಹುದು
Team Udayavani, Apr 19, 2024, 5:16 PM IST
ವಾಷಿಂಗ್ಟನ್: ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿದ್ಯಾರ್ಥಿನಿಯರಿಬ್ಬರು ನ್ಯೂಜೆರ್ಸಿಯ ಹೆಚ್ ಒನೊಕೆನ್ ನಲ್ಲಿ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಹೈದರಾಬಾದ್ ನ ಭವ್ಯ ಲಿಂಗನಗುಂಟಾ(20ವರ್ಷ)ಹಾಗೂ ಗುಂಟುರಿನ ಯಾಮಿನಿ ವಾಲ್ಕಲ್ ಪುಡಿ (22ವರ್ಷ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
ಹೊಬೊಕನ್ ನ ಶಾಪ್ ರಿಟ್ ನಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ. ಇಬ್ಬರು ವಿದ್ಯಾರ್ಥಿನಿಯರು ಎರಡು ವಸ್ತುಗಳನ್ನು ಖರೀದಿಸಿ ಹಣ ಪಾವತಿಸಿದ್ದರು, ಆದರೆ ಹೆಚ್ಚುವರಿಯಾಗಿ ಖರೀದಿಸಿದ್ದ 27 ವಸ್ತುಗಳ (155.61 ಡಾಲರ್) ಹಣ ಪಾವತಿಸದೇ ತೆರಳಲು ಯತ್ನಿಸಿದ್ದರು.
ಪ್ರಕರಣದ ಬಗ್ಗೆ ಸ್ಟೋರ್ ಮ್ಯಾನೇಜರ್ ಹೊಬೋಕನ್ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇಬ್ಬರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
Two Telugu girls arrested for ‘shoplifting’ in US
They offered double payment and pleaded against repeating the offence.
Two indian students one from Hyderabad and one from Guntur pursuing their studies in New Jersey USA were arrested by the police in an alleged shoplifting… pic.twitter.com/OkrDM6CvSa
— Sudhakar Udumula (@sudhakarudumula) April 18, 2024
ವಿದ್ಯಾರ್ಥಿನಿಯೊಬ್ಬಳು ವಿಚಾರಣೆ ವೇಳೆ, ತನ್ನ ಖಾತೆಯಲ್ಲಿ ಲಿಮಿಟೆಡ್ ಬ್ಯಾಲೆನ್ಸ್ ಇದ್ದಿರುವುದಾಗಿ ತಿಳಿಸಿದ್ದು, ಮತ್ತೊಬ್ಬಳು ವಿದ್ಯಾರ್ಥಿನಿ ಕೆಲವು ವಸ್ತುಗಳ ಹಣ ಪಾವತಿಸಲು ಮರೆತುಬಿಟ್ಟಿರುವುದಾಗಿ ಹೇಳಿದ್ದಳು. ಬಳಿಕ ಇಬ್ಬರೂ ವಿದ್ಯಾರ್ಥಿನಿಯರು ದುಪ್ಪಟ್ಟು ಹಣ ನೀಡುವುದಾಗಿ ತಿಳಿಸಿ, ಇನ್ಮುಂದೆ ಇಂತಹ ಅಪರಾಧ ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬಂಧನಕ್ಕೊಳಗಾದರೆ ತಮ್ಮ ಭವಿಷ್ಯದಲ್ಲಿನ ಉದ್ಯೋಗ ಮತ್ತು ವೀಸಾ ಪ್ರಕ್ರಿಯೆ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ಇಬ್ಬರು ಕಳವಳ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿದೆ.
ವಸ್ತುಗಳ ಕಳ್ಳತನ ಅಪರಾಧವಾಗಿದೆ. ಇನ್ಮುಂದೆ ಭವಿಷ್ಯದಲ್ಲಿ ಈ ಸ್ಟೋರ್ ಗೆ ಭೇಟಿ ನೀಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.