![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 12, 2021, 12:34 PM IST
ನವದೆಹಲಿ: ಭಾರತದ ಗಡಿಯೊಳಗೆ ನುಸುಳಲು ಐಎಸ್ ಐನಿಂದ ತರಬೇತಿ ಪಡೆದಿರುವ 200ಕ್ಕೂ ಹೆಚ್ಚು ಉಗ್ರರು ಗಡಿಯಾಚೆ ಕಾಯುತ್ತಿದ್ದಾರೆ ಎಂದು ಬಂಧಿತ ಪಾಕಿಸ್ತಾನದ ಉಗ್ರನೊಬ್ಬ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ:ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟ: ರೋಹಿತ್, ವಿರಾಟ್, ಪಂತ್, ಬುಮ್ರಾಗಿಲ್ಲ ಜಾಗ
ಸೆ.26ರಂದು ಉರಿ ವಲಯದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಅಲಿ ಬಾಬರ್ ಎಂಬ ಉಗ್ರರನ್ನು ಬಂಧಿಸಿತ್ತು. ಎನ್ ಐಎ ಈತನ ವಿಚಾರಣೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಆತ ಉಗ್ರರಿಗೆ ಐಎಸ್‌ಐ ಹೇಗೆ ಸಹಕಾರ ನೀಡುತ್ತಿದೆ ಎಂಬ ಬಗ್ಗೆ ಆಘಾತಕಾರಿ ಮಾಹಿತಿ ಹೊರಹಾಕಿದ್ದಾನೆ.
ಐಎಸ್ ಐನಿಂದ ತರಬೇತಿ ಪಡೆದಿರುವ 200 ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ವಿವಿಧ ಲಾಂಚ್ ಪ್ಯಾಡ್ ಗಳಲ್ಲಿ ಕಾಯುತ್ತಿದ್ದಾರೆ. ಡಿಸೆಂಬರ್ ನಲ್ಲಿ ಭಾರೀ ಪ್ರಮಾಣದ ಹಿಮ ಸುರಿಯಲಿದ್ದು ಇದಕ್ಕೂ ಮುನ್ನವೇ ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದು ಆತ ಹೇಳಿದ್ದಾನೆ. ಈ ಮಧ್ಯೆ ಬಾಬರ್ ನಿಂದ ಮತ್ತಷ್ಟು ಮಾಹಿತಿ ಕಲೆ ಹಾಕಲು ಎನ್ ಐಎ ವಿಚಾರಣೆ ನಡೆಸುತ್ತಿದೆ.
ಕೊನೆಗೂ ರಾಜಸ್ಥಾನ ಸಂಪುಟವಿಸ್ತರಣೆಗೆ ಕೈ ವರಿಷ್ಠ ಸಮ್ಮತಿ?
ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ರಾಜಸ್ಥಾನದಲ್ಲಿ ಉದ್ಭವವಾಗದಂತೆ ಮಾಡಲು ನವದೆಹಲಿಯಲ್ಲಿ ಬಿರುಸಿನ ಸಮಾಲೋಚನೆಗಳು ನಡೆದಿವೆ. ಸಿಎಂ ಅಶೋಕ್ ಗೆಹ್ಲಾಟ್ ಸಂಪುಟದಲ್ಲಿ ಶಾಸಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ. ಸಚಿನ್ ಪೈಲೆಟ್ ಅವರು ಪ್ರತ್ಯೇಕವಾಗಿ ಸೋನಿಯಾಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದರು. ನಂತರ ಮಾತನಾಡಿದ ಸಿಎಂ ಗೆಹ್ಲಾಟ್ ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.