2020: ಹೇಗಿದೆ ನಿಮ್ಮ ವರ್ಷ ಭವಿಷ್ಯ? ಈ ವರ್ಷ ಈ ರಾಶಿಯವರಿಗೆ ಕಾದಿದೆ ಅಚ್ಚರಿ!
Team Udayavani, Jan 1, 2020, 8:55 AM IST
ಮೇಷ: ವರ್ಷದ ಆರಂಭದಿಂದ ಉತ್ತಮ ದೈವಬಲ ಹೊಂದಿದ ನಿಮಗೆ ಭಾಗ್ಯಸ್ಥಾನದ ಗುರುವಿನಿಂದ ಉದ್ಯೋಗರಂಗದಲ್ಲಿ ಉತ್ತಮ ಅಭಿವೃದ್ಧಿಯನ್ನು ಹೊಂದಲಿರುವಿರಿ. ಸಾಂಸಾರಿಕವಾಗಿ ಸ್ತ್ರೀ, ಪುತ್ರ ಲಾಭಾದಿಗಳು ಮತ್ತು ಶುಭ ಕಲಾಪಗಳಿಂದ ಸುಖಶಾಂತಿಗಳ ಅನುಭವವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತಮ್ಮ ಪ್ರಯತ್ನಬಲಕ್ಕೆ ಸರಿಯಾದ ಪ್ರಗತಿ ಕಂಡು ಬರುತ್ತದೆ. ಹಿರಿಯರಿಗೆ ಯಾತ್ರಾದಿ ಪುಣ್ಯ ಕ್ಷೇತ್ರ, ತೀರ್ಥ ಕ್ಷೇತ್ರಗಳ ದರುಶನದಿಂದ ಮಾನಸಿಕವಾಗಿ ಶಾಂತಿ ಸಮಾಧಾನ ಲಭಿಸಲಿದೆ. ಯೋಗ್ಯ ವಯಸ್ಕರು ತಮ್ಮ ಪ್ರಯತ್ನಬಲದಲ್ಲಿ ನಿಶ್ಚಿತ ರೂಪದಲ್ಲಿ ಕಂಕಣಬಲವನ್ನು ಹೊಂದಲಿದ್ದಾರೆ. ಯುವಕ, ಯುವತಿಯರ ಪ್ರೇಮ ಪ್ರಕರಣಗಳು ಕಂಕಣಬಲಕ್ಕೆ ಪೂರಕವಾಗಲಿವೆ. ಲಾಭಸ್ಥಾನದ ರಾಹು ನಿಮ್ಮ ಎಲ್ಲಾ ಕಾರ್ಯಗಳಿಗೆ ಅನಿರೀಕ್ಷಿತ ರೂಪದಲ್ಲಿ ಹಾಗೂ ಸ್ಥಗಿತಗೊಂಡ ಕೆಲಸ ಕಾರ್ಯಗಳು ಪುನಃ ಆರಂಭಗೊಳ್ಳಲಿವೆ. ನಿವೇಶನ ಸ್ಥಿರಾಸ್ತಿ ಸೊತ್ತುಗಳ ಖರೀದಿ ಇರುತ್ತದೆ. ಪಾಲು ಬಂಡವಾಳದಿಂದ ಆದಾಯ, ಸಹಕಾರಿ ರಂಗದಲ್ಲಿವೆ. ಸ್ಥಾನಮಾನ ಪ್ರಾಪ್ತಿಯಾಗಲಿದೆ. ವೈದ್ಯಕೀಯ ವೃತ್ತಿ ನಿರತರಿಗೆ ಉತ್ತಮ ಯಶಸ್ಸು ಕಂಡು ಬರುತ್ತದೆ. ಈ ಮಧ್ಯೆ ದಶಮ ಸ್ಥಾನದ ಪ್ರತಿಕೂಲನಾದ ಶನಿ ಆಕಸ್ಮಿಕ ರೀತಿಯ ಧನಹಾನಿಯನ್ನು ತಂದೊಡ್ಡುವನು. ಹಾಗೂ ಸಾಕಷ್ಟು ಕಷ್ಟ ನಷ್ಟಗಳು ಕಂಡು ಬರುತ್ತವೆ. ಉದ್ಯೋಗ, ಗೃಹಕೃತ್ಯಗಳಲ್ಲಿ ತೊಂದರೆ, ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು. ಕೃಷಿ, ತೋಟಗಾರಿಕೆ, ಹಾಲು, ತುಪ್ಪ , ಎಣ್ಣೆ , ಬೆಣ್ಣೆ , ತೈಲ ಪದಾರ್ಥಗಳು ಹೆಚ್ಚಿನ ಆದಾಯವನ್ನು ತಂದು ಕೊಡಲಿವೆ. ವ್ಯಾಪಾರ, ವ್ಯವಹಾರಗಳ ಧನ ವಿನಿಯೋಗದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ, ಕಾಣಿಸಬಹುದು. ವರ್ಷಾಂತ್ಯದ ವರೆಗೂ ಅನೇಕ ವಿಧದ ಖರ್ಚುವೆಚ್ಚಗಳು ಕೌಟುಂಬಿಕ ಕಲಹ, ವೃತ್ತಿಯಲ್ಲಿ ಹಿಂಭಡ್ತಿ, ಕಾರ್ಯವೈಫಲ್ಯ, ಬಂಧು ವಿರೋಧ, ಇತ್ಯಾದಿಗಳು ಎದುರಾಗಬಹುದು. ಜಾಗ್ರತೆ ವಹಿಸಿರಿ. ಪಠ್ಯೇತರ ಚಟುವಟಿಕೆಯಲ್ಲಿ ಯಶಸ್ಸು ಕಂಡು ಬರಲಿದೆ. ವ್ಯವಹಾರದಲ್ಲಿ ಧನವಿನಿಯೋಗದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ.
ಶುಭ ದಿನಾಂಕ: 1, 10, 17 ಶುಭ ಸಂಖ್ಯೆ: 1, 2, 3, 9
ಶುಭವಾರ: ಕುಜ, ಗುರು, ಭಾನುವಾರ
ಶುಭರತ್ನ: ಹವಳ, ಮಾಣಿಕ್ಯ, ಕನಕ, ಪುಷ್ಯರಾಗ
ಶುಭ ವರ್ಣ: ರಕ್ತವರ್ಣ, ಹಳದಿ, ಕೇಸರಿ, ಶುಭ ದಿಕ್ಕು: ದಕ್ಷಿಣ
ವೃಷಭ: ಈ ವರ್ಷದ ಪ್ರಾರಂಭದ ಮೂರು ತಿಂಗಳು, ಅಂತ್ಯದ ಐದು ತಿಂಗಳು ಗುರುಬಲದ ದೈವಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ನಿಶ್ಚಿತ ರೂಪದಲ್ಲಿ ನಡೆಯಲಿವೆ. ವಿವಾಹಾದಿ ಶುಭಮಂಗಲ ಕಾರ್ಯಗಳು ನಿರ್ವಿಘ್ನದಿಂದ ನಡೆಯಲಿವೆ. ಉದ್ಯೋಗ, ವ್ಯವಹಾರಗಳಲ್ಲಿ ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದ್ದು ಕೆಲವು ಅನುಕೂಲ ಉಂಟಾಗಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಹೊಂದಲಿದ್ದಾರೆ. ಮನೆಯ ವಿಸ್ತರಣೆಯ ಕಾರ್ಯಗಳಿಗೆ, ಭೂ ಖರೀದಿಗೆ ಅನುಕೂಲವಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನಡೆದು ಶಾಂತಿ ನೆಮ್ಮದಿಯನ್ನು ತಂದು ಕೊಟ್ಟಿàತು. ಮಹಿಳಾ ವರ್ಗದವರಿಗೆ ಬಟ್ಟೆ , ಚಿನ್ನ ಬೆಳ್ಳಿ ಖರೀದಿಗಳು ಇತ್ಯಾದಿ ಅಲಂಕಾರಿಕ ವಸ್ತುಗಳ ಖರೀದಿ ಇದೆ. ಉದ್ಯೋಗಿಗಳಿಗೆ ಮುಂಭಡ್ತಿ ಯೋಗವಿದ್ದರೂ ವಿರೋಧಿಗಳ ಅಸೂಯೆ ದೃಷ್ಟಿಯಿಂದ “”ಕೈಗೆ ಬಂದ ತುತ್ತು ಬಾಯಿಗಿಲ್ಲ” ಎಂಬಂತಾದೀತು. ಹೊಸ ಗೃಹ ಬಳಕೆಯ ವಸ್ತು ಮನೆಗೆ ಬರಲಿದೆ. ವಾಹನ ಸಂಚಾರ, ಬೆಂಕಿ, ನೀರು ಇತ್ಯಾದಿಗಳ ಬಗ್ಗೆ ಜಾಗ್ರತೆ ಇರಲಿ. ಗೌಪ್ಯ ವಿಚಾರಗಳು ಬಹಿರಂಗವಾಗಿ ರಾದ್ಧಾಂತವಾದೀತು. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಇರಲಿ. ಕೌಟುಂಬಿಕ ಒಳಜಗಳ ಮನಸ್ಸಿಗೆ ನೋವು ಉಂಟು ಮಾಡಲಿದೆ. ಮಕ್ಕಳ ಬಗ್ಗೆ ಅಲ್ಲಸಲ್ಲದ ಅಪವಾದ ಭೀತಿ ಕಂಡು ಬರಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಾಗಮನವಿದ್ದರೂ ಅನೇಕ ಬಗೆಯಲ್ಲಿ ಖರ್ಚು ವೆಚ್ಚಗಳಿದ್ದು ಹಣವು ನೀರಿನಂತೆ ಕೋಡಿ ಹರಿದೀತು. ಗೃಹಾಭಾವದ ಸಮೃದ್ಧಿಯಿಂದ ಇದ್ದುದರಲ್ಲೇ ತೃಪ್ತಿ ಪಡುವಂತಾದೀತು. ಯಾವುದೇ ಕಾರ್ಯಗಳನ್ನು ಆರಂಭಿಸಿದರೂ ಪ್ರಾರಂಭದಲ್ಲಿ ವಿಘ್ನಗಳಿರುತ್ತದೆ. ಸಂಚಾರಗಳು ಕಾರ್ಯಸಿದ್ಧಿಯನ್ನು ತಂದು ಕೊಟ್ಟರೂ ಜಾಗ್ರತೆ ವಹಿಸುವುದು ಅಗತ್ಯವಿದೆ. ಆಗಾಗ ಸ್ತ್ರೀ ನಿಮಿತ್ತ ಕಲಹವಿರುತ್ತದೆ. ಅಧಿಕಾರಿ ವರ್ಗದವರಿಂದ ಪ್ರಯೋಜನ. ಚಿತ್ರಕಲೆ, ಸಾಹಿತ್ಯೋದ್ಯಮ ತುಸು ಚೇತರಿಕೆ ಕಂಡು ಬರುತ್ತದೆ. ತರಕಾರೀ ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿರದು. ಮೀನುಗಾರರಿಗೆ ಮಿಶ್ರಫಲ ತಂದು ಕೊಡಲಿದೆ.
ಶುಭ ದಿನಾಂಕ: 6, 9, 15, 18, 24, 27 ಶುಭ ಸಂಖ್ಯೆ: 5, 6, 8
ಶುಭವಾರ: ಬುಧ, ಶುಕ್ರ, ಶನಿವಾರ
ಶುಭರತ್ನ: ವಜ್ರ, ಇಂದ್ರನೀಲ, ಪಚ್ಚೆಕಲ್ಲು
ಶುಭ ವರ್ಣ: ಬಿಳಿ, ಹಸುರು, ನೀಲಿ, ಕಪ್ಪು
ಶುಭ ದಿಕ್ಕು: ಆಗ್ನೇಯ
ಮಿಥುನ: ವರ್ಷಾರಂಭದಲ್ಲಿ ಸಪ್ತಮದ ಗುರುವಿನಿಂದಾಗಿ ದೈವಾನುಗ್ರಹವು ಉತ್ತಮವಿದ್ದು ಉತ್ಸಾಹದಾಯಕ ಆರಾಮದ ಜೀವನ ತಂದುಕೊಟ್ಟಿàತು. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟವಾದೀತು. ಆದರೂ ರಾಶಿಸ್ಥಿತ ರಾಹು ಕಾರ್ಯಸಾಧನೆಯಲ್ಲಿ ಪದೇ ಪದೇ ಶತ್ರುಗಳ ಪೀಡೆಯನ್ನು ತಂದುಕೊಡಲಿದ್ದಾನೆ. ಗೃಹ ನಿರ್ಮಾಣದಂತಹ ಕೆಲಸ ಕಾರ್ಯಗಳಿಗೆ ಪ್ರಾರಂಭಿಸಬಹುದು. ಎಂದೋ ಆಗಬೇಕಾಗಿದ್ದ ಕೆಲಸ ಕಾರ್ಯಗಳು ಸಲೀಸಾಗಿ ನಡೆಯಲಿವೆ. ನಿರುದ್ಯೋಗಿಗಳು ಉದ್ಯೋಗಲಾಭವನ್ನು ಹೊಂದಲಿದ್ದಾರೆ. ಪ್ರೇಮಿಗಳು ಕಂಕಣಭಾಗ್ಯವನ್ನು ಪಡೆಯಲಿದ್ದಾರೆ. ಆಗಾಗ ಕುಟುಂಬದ ಸದಸ್ಯರಿಗೆ ದೇಹಾರೋಗ್ಯ ಕೆಡಲಿದೆ. ರಾಗಿ, ಜೋಳ, ಸಾಸಿವೆ, ಕಾಳು ಮೆಣಸು, ಇತ್ಯಾದಿಗಳ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಹಿರಿಯರಿಗೆ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗ್ರತೆ ವಹಿಸುವಂತಾದೀತು. ಕೆಟ್ಟ ಜನರ ಸಂಸರ್ಗದಿಂದ ಅಪಮಾನ, ಅವಮಾನ ಭೀತಿ ಕಂಡು ಬರುತ್ತದೆ. ಮಕ್ಕಳಿಂದ ಅಧೀನ ನೌಕರರಿಂದ ಸಮಸ್ಯೆಗಳು ಕಂಡು ಬರಲಿವೆ. ಕುಜನ ಅನಿಷ್ಟ ಸ್ಥಿತಿಯಿಂದ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯವಿರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಅನಿರೀಕ್ಷಿತ ರೂಪದಲ್ಲಿ ಸ್ಥಾನ ಪ್ರಾಪ್ತಿ ಯೋಗ ತಂದು ಕೊಡಲಿದೆ. ನೂತನ ಕೆಲಸ ಕಾರ್ಯಗಳು ವಿಘ್ನ ಭೀತಿಯಿಂದಲೇ ಮುನ್ನಡೆಯಲಿವೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಯಶಸ್ಸಿನಿಂದಾಗಿ ತೃಪ್ತಿ ಪಡಲಿದ್ದಾರೆ. ಸಾಗರೋದ್ಯಮಿಗಳು ಹೆಚ್ಚಿನ ಲಾಭ ಗಳಿಸಲಾರರು. ಕುಶಲ ಸಾಮಗ್ರಿಗಳ ತಯಾರಿಕೆ, ಯಂತ್ರ ಸ್ಥಾವರಗಳಲ್ಲಿ ಕೆಲಸ, ಕಾಂಟ್ರಾಕ್ಟ್ದಾರರು ಹೆಚ್ಚಿನ ಆದಾಯ ಗಳಿಸಲಿದ್ದಾರೆ. ಸಹೋದರ ಸಮಾನರಿಂದ ಅನಾವಶ್ಯಕವಾಗಿ ಭಿನ್ನಾಭಿಪ್ರಾಯವಾಗಿ ಕಲಹವಾದೀತು. ಮುಂದೆ ವರ್ಷಾಂತ್ಯದವರೆಗೆ ಮಿಶ್ರಫಲಗಳೇ ಹೆಚ್ಚಾಗಿ ಅನುಭವಕ್ಕೆ ಬರಲಿವೆ. ದೇವತಾರ್ಚನೆಗಳು ಆದಷ್ಟು ಮನಸ್ಸಿಗೆ ನೆಮ್ಮದಿ, ಶಾಂತಿ, ಸಮಾಧಾನವನ್ನು ತಂದು ಕೊಡಲಿವೆ. ದುವ್ಯìಸನಗಳಿಂದ ದೂರವಿದ್ದಷ್ಟು ಉತ್ತಮ.
ಶುಭ ದಿನಾಂಕ: 5, 14, 23 ಶುಭ ಸಂಖ್ಯೆ: 1, 5, 6, 8
ಶುಭವಾರ: ಬುಧ, ಶುಕ್ರ, ಶನಿವಾರ
ಶುಭರತ್ನ: ಪಚ್ಚೆ , ಇಂದ್ರನೀಲ, ವಜ್ರ
ಶುಭ ವರ್ಣ: ಹಸುರು, ನೀಲಿ, ಬಿಳಿ
ಶುಭ ದಿಕ್ಕು: ಉತ್ತರ
ಕರ್ಕಾಟಕ: ವರ್ಷಾರಂಭದಿಂದ ಸಪ್ತಮದ ಶನಿ, ಹನ್ನೆರಡರ ರಾಹು ಪ್ರತಿಕೂಲ ಸ್ಥಿತಿಯಲ್ಲಿದ್ದು ಅನವರತ ಕ್ಲೇಶವನ್ನುಂಟು ಮಾಡಿಯಾನು. ಆರ್ಥಿಕವಾಗಿ ನಾನಾ ರೀತಿಯ ಖರ್ಚುವೆಚ್ಚಗಳು ಅಧಿಕ ರೂಪದಲ್ಲಿ ತೋರಿಬಂದಾವು. ಎಚ್ಚರಿಕೆಯಿಂದ ಹೆಚೆj ಇಟ್ಟಲ್ಲಿ ತಾಂತ್ರಿಕ ವೃತ್ತಿ ಲಾಭ ತರಲಿದೆ. ವಾಣಿಜ್ಯ ಬೆಳೆಗಳಲ್ಲಿ ಕೊಂಚ ಚೇತರಿಕೆ ಕಂಡೀತು. ಉಕ್ಕು, ಪ್ಲಾಸ್ಟಿಕ್, ಅಲಂಕಾರ ಸಾಮಗ್ರಿ ವರ್ತಕರಿಗೆ ಲಾಭಾಂಶ ಕಡಿಮೆಯಾದರೂ ವ್ಯವಹಾರ ನಡೆಯಲಿದೆ. ಆಹಾರ ಪದಾರ್ಥ, ವಿಲಾಸೀ ಸಾಮಗ್ರಿಗಳ ವ್ಯವಹಾರ ತುಸು ಸಮಾಧಾನ ಕೊಡಲಿದೆ. ಮಾರ್ಚ್ 29ರಿಂದ ಜೂನ್‌ವರೆಗೆ ಉತ್ತಮ ಗುರುಬಲವಿದ್ದು ಸಪ್ತಮದ ಗುರುಬಲದಿಂದ ಹಂತ ಹಂತವಾಗಿ ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಇಷ್ಟ ಸಿದ್ಧಿ ಉಂಟು ಮಾಡಲಿದೆ. ಗುರುವು ಮಕರ ರಾಶಿಯಲ್ಲಿರುವಾಗ ಉತ್ಸಾಹದಾಯಕ ಆರಾಮ ಜೀವನ, ಕೌಟುಂಬಿಕ, ಸಾಂಸಾರಿಕ ಕಾರ್ಯಗಳು ಸಕಾಲವೆನಿಸಲಿವೆ. ಭೂ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ, ವಾಹನಾದಿ ಸುಖ ಉಂಟಾಗುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಪ್ರಚೋದನೆಗಳು ನಿಮ್ಮನ್ನು ಹುರಿದುಂಬಿಸಲಿವೆ. ಈ ಮಧ್ಯೆ ಶನಿ ಹಾಗೂ ರಾಹುವಿನ ಪ್ರತಿಕೂಲತೆ ಅಶುಭ ಫಲಗಳಿಗೆ ಸ್ವಲ್ಪ ಮಟ್ಟಿನ ತಡೆ ಉಂಟಾಗಲಿದೆ. ಧರ್ಮಪತ್ನಿಯ ಸೂಕ್ತ ಸಲಹೆಗಳು ನಿಮಗೆ ಅನುಕೂಲವಾದಾವು. ಸದುಪಯೋಗಿಸಿಕೊಳ್ಳಿ ಯಾವುದಕ್ಕೂ ಹೆಚ್ಚಿನ ಲಾಲಸೆ ಬೇಡವೆಂಬ ಮಾತು ನೆನಪಿರಲಿ. ಹಿರಿಯರ ಆರೋಗ್ಯದ ಸುಧಾರಣೆಗಾಗಿ ಖರ್ಚುವೆಚ್ಚ ಹೆಚ್ಚಲಿದೆ. ಮಕ್ಕಳ ವಿದ್ಯೆಗಾಗಿ, ಬಂಧುಮಿತ್ರರ ಸಹಾಯಕ್ಕಾಗಿ ಹಲವು ಖರ್ಚುಗಳ ಪಟ್ಟಿಯು ಬೆಳೆದೀತು. ಜಲ ವೃತ್ತಿಯವರಿಗೆ ಧನಲಾಭ ಕೊಂಚ ಸಮಾಧಾನ ತರಲಿದೆ. ಸಂಗೀತ, ನಾಟಕ ಇತ್ಯಾದಿ ಕಲಾ ವೈಭವಗಳು ಯಶಸ್ಸನ್ನು ತರಲಿವೆ. ಎಣಿಕೆಯಂತೆ ಕಾರ್ಯಸಾಧನೆ ಆಗದೆ ಮಾನಸಿಕವಾಗಿ ಕೊರಗಬೇಕಾದೀತು. ಕೃಷಿ ಪಶು ಸಂಗೋಪನೆ ಕ್ಷೇತ್ರದಲ್ಲಿ ಆದಾಯ ವೃದ್ಧಿಸಲಿದೆ. ವೈಯಕ್ತಿಕವಾಗಿ ದೇಹಾರೋಗ್ಯ ಏರುಪೇರಾದೀತು. ಉದ್ಯೋಗಸ್ಥ ಉದ್ಯೋಗ ಭಾಗ್ಯ, ಯೋಗ್ಯ ವಯಸ್ಕರಿಗೆ ಕಂಕಣಬಲ ಇತ್ಯಾದಿ ಸಂಭ್ರಮಗಳು ನಲಿದಾಡಲಿವೆ.
ಶುಭ ದಿನಾಂಕ: 2, 7, 11, 16, 20, 25, 29 ಶುಭ ಸಂಖ್ಯೆ: 2, 3, 9
ಶುಭವಾರ: ಸೋಮ, ಮಂಗಳ, ಗುರುವಾರ
ಶುಭರತ್ನ: ಮುತ್ತು, ಹವಳ, ಕನಕಪುಷ್ಯರಾಗ
ಶುಭ ವರ್ಣ: ಬಿಳಿ, ಕೆಂಪು, ಹಳದಿ, ಶುಭ ದಿಕ್ಕು: ವಾಯುವ್ಯ
ಸಿಂಹ: ಈ ವರ್ಷಾರಂಭದಲ್ಲಿ ಪಂಚಮ ಸ್ಥಾನದ ಗುರುವಿನಿಂದ ದೈವಾನುಕೂಲ ಉತ್ತಮವಾಗಿದೆ. ಕರ್ಮಸ್ಥಾನದ ರಾಹುವು ಅನಿರೀಕ್ಷಿತ ರೀತಿಯಲ್ಲಿ ಉತ್ತಮ ಫಲವನ್ನು ನೀಡಲಿದ್ದಾನೆ. ಈ ಮಧ್ಯೆ ಆರೋಗ್ಯವು ಕೊಂಚ ಕೈಕೊಟ್ಟರೂ ಹಂತ ಹಂತವಾಗಿ ಸುಧಾರಣೆ ಕಂಡು ಬರುವುದು. ಉದರವ್ಯಾಧಿ ಪಿತ್ತ ಪ್ರಕೋಪ, ಅಸ್ಥಿಮಜ್ಜೆಯ ಸಮಸ್ಯೆಗಳು ದೇಹಬಾಧೆಗೆ ಕಾರಣವಾದೀತು. ಉದ್ಯೋಗಸ್ಥರಿಗೆ ವೃತ್ತಿಯಲ್ಲಿ ಸ್ಥಾನಮಾನವು ಬದಲಾಗಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯಗಳು ನಡೆಯುವವು. ನಿರುದ್ಯೋಗಿಗಳು ನೂತನ ವೃತ್ತಿಯನ್ನು ಹೊಂದಲಿದ್ದಾರೆ. ಮಕ್ಕಳ ಕಾರಣ ಶುಭ ವಾರ್ತೆ ಬರುವುದು. ಕೆಲವು ಸಮಯದಿಂದ ಬಾಕಿಯಾಗಿರುವ ಕೆಲಸವನ್ನು ಮುಗಿಸಬಹುದಾಗಿದೆ. ಹೊಸ ಬಂಧು ಮಿತ್ರರ ಸಮಾಗಮದಿಂದ ಕಾರ್ಯಸಾಧನೆಗೆ ಕಾರಣವಾಗಲಿದೆ. ಹಿರಿಯ ತಲೆವರ್ಗದವರಿಗೆ ಶ್ರೀ ದೇವತಾದರ್ಶನ ಯಾತ್ರೆ. ಪ್ರವಾಸಾದಿಗಳಿಂದ ಮನಸ್ಸಿಗೆ ಶಾಂತಿ, ಸಮಾಧಾನ ದೊರಕಲಿದೆ. ಆಗಾಗ ಆರ್ಥಿಕವಾಗಿ ಅಡಚಣೆಗಳು ತೋರಿಬಂದರೂ ವಿವಿಧ ಮೂಲಗಳಿಂದ ಧನಾಗಮನವಿರುತ್ತದೆ. ಆದಾಯದ ವೃದ್ಧಿಯಲ್ಲಿ ವಿವಿಧ ಮಾರ್ಗಗಳು ಗೋಚರಕ್ಕೆ ಬರಲಿವೆ. ಗೃಹೋಪಕರಣಗಳು ಮನೆಯಲ್ಲಿ ಅಲಂಕರಿಸಲಿವೆ. ಚಿತ್ರ ಜಗತ್ತಿನಲ್ಲಿ ನಾಟ್ಯ, ಸಂಗೀತ ಕ್ಷೇತ್ರದಲ್ಲಿ ಮಾನ ಸನ್ಮಾನಗಳನ್ನು ಪಡೆಯಲಿದ್ದೀರಿ. ಪುಸ್ತಕ ವ್ಯಾಪಾರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಧಿಕ ಲಾಭವಿದೆ. ಬೇಸಾಯ, ಕೃಷಿಕ, ಮೀನುಗಾರರಿಗೆ ಆದಾಯ ನೆಮ್ಮದಿ, ಸಂತಸ ತರಲಿದೆ. ತಾಮ್ರ, ಹಿತ್ತಾಳೆ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿ ಉತ್ತಮ ವ್ಯಾಪಾರವು ಕುದುರಲಿದೆ. ಹಳೇ ಬಾಕಿ ಕೈಗೆ ದೊರೆತು ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಕ್ರೀಡಾಸಕ್ತರಿಗೆ ಆಟೋಟಗಳಲ್ಲಿ ಕೀರ್ತಿ ತರಲಿದೆ. ಮುಖ್ಯವಾಗಿ ಸ್ತ್ರೀಯರಿಗೆ ಬಿಡುವಿಲ್ಲದ ಕಾರ್ಯಕ್ರಮ, ದೇವತಾರಾಧನೆಯ ಕೆಲಸ ಕಾರ್ಯಗಳು ಇತ್ಯಾದಿಗಳ ಪುಣ್ಯ ಸಂಪಾದನೆಯ ಜೊತೆಗೆ ಬಾಳು ಹಸನಾಗಲಿದೆ. ವಿದ್ಯಾರ್ಥಿ ವರ್ಗಕ್ಕೆ ತಮ್ಮ ಪ್ರಯತ್ನಬಲದ ಫಲಿತಾಂಶ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ರಾಹು ಅನುಕೂಲನಾಗಿ ಅನಿರೀಕ್ಷಿತ ಧನಲಾಭ, ಆಧ್ಯಾತ್ಮಿಕ ಬೆಳವಣಿಗೆ, ಸತ್ಕಾರ್ಯ, ಸತøವೃತ್ತಿಗೆ ಅನುಗ್ರಹ ತಂದಾನು.
ಶುಭ ದಿನಾಂಕ: 1, 4, 10, 13, 19, 22, 28, 31, ಶುಭ ಸಂಖ್ಯೆ: 1, 3, 5, 9
ಶುಭವಾರ: ರವಿ, ಕುಜ, ಗುರುವಾರ
ಶುಭರತ್ನ: ಮಾಣಿಕ್ಯ, ಕನಕಪುಷ್ಯರಾಗ, ಹವಳ
ಶುಭ ವರ್ಣ: ಸಪ್ತವರ್ಣ , ಶುಭ ದಿಕ್ಕು: ಪೂರ್ವ
ಕನ್ಯಾ: ವರ್ಷವಿಡೀ ಕಾಡುವ ಪಂಚಮ ಶನಿ, ನಾನಾ ರೀತಿಯಲ್ಲಿ ಧನವ್ಯಯಕ್ಕೆ ಹಾಗೂ ಪ್ರತಿಕೂಲನಾದ ಕೇತು ಚಿಂತೆಯಿಂದ ಬೆಚ್ಚಿ ಬೀಳಿಸುವಂತಾದೀತು. ಆರೋಗ್ಯದ ಬಗ್ಗೆ ತಲೆಕೆಡಿಸುವಂತಾದೀತು. ನಾನಾ ರೀತಿಯ ಅಪವಾದ, ಅವಮಾನ ಪ್ರಸಂಗ ಕಾಡಲಿದೆ. ಒಟ್ಟಿನಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲವಾದೀತು. ಕಾರ್ಯನಿಮಿತ್ತ ಸಂಚಾರಗಳು ನಿಷ#ಲವಾದಾವು. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲವಾದೀತು. ಆದರೂ, ಗುರು, ಶನಿಯ ಪರಸ್ಪರ ವಿಪರೀತ ವೇದನೆಗಳಿದ್ದು ಅಶುಭ ಫಲಕ್ಕೆ ಸಾಕಷ್ಟು ತಡೆ ಉಂಟಾಗುತ್ತದೆ. ಕಾರ್ಯಸಮ್ಮತವಲ್ಲದ ಕಾರ್ಯಗಳಲ್ಲಿ ಆಸಕ್ತಿ ಕಂಡು ಬಂದೀತು. ಪಂಚಮ ಸ್ಥಿತಿಯಲ್ಲಿ ಇರುವ ಗುರುವು ದೈವಬಲವನ್ನು ಒದಗಿಸುವನು. ಈ ಸಮಯ ಉತ್ತಮ ಫಲವು ವಿದ್ಯಾರ್ಥಿಗಳಿಗೆ ತೋರಿಬರಲಿದೆ. ಉದ್ಯೋಗಸ್ಥರು ಮುಂಭಡ್ತಿಯನ್ನು ಹೊಂದಿಯಾರು. ವ್ಯಾಪಾರ, ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವಿರಿ. ಸಾಂಸಾರಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯು ಮನಸ್ಸಿಗೆ ಸಂತೋಷ ತರಲಿದೆ. ಹೊಸ ಮನೆಯ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಿರಿ. ವೃತ್ತಿರಂಗದಲ್ಲಿ ಆತ್ಮಸ್ಥೈರ್ಯ ವೃದ್ಧಿ, ಉತ್ತಮ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಆರ್ಥಿಕವಾಗಿ ಹೂಡಿಕೆಯಲ್ಲಿ ಹೆಚ್ಚಿನ ಧನ ವಿನಿಯೋಗ ಕಷ್ಟ ನಷ್ಟಗಳಿಗೆ ಕಾರಣವಾದೀತು. ಈ ಮಧ್ಯೆ ಬಂಧುಗಳಲ್ಲಿ ಅನಿರೀಕ್ಷಿತ ಅಶುಭ ವಾರ್ತೆ ಕೇಳಿಸಲಿದೆ. ಮಾತೃ ಕ್ಲೇಶ, ಚಿಕಿತ್ಸಾ ವೆಚ್ಚ ಹೆಚ್ಚಲಿದೆ. ಕಾರ್ಮಿಕ ವರ್ಗದವರ ಅಸಹಕಾರದಿಂದ ಆರ್ಥಿಕವಾಗಿ ಭಾರೀ ದಂಡ ತೆರಬೇಕಾದ ಪ್ರಸಂಗ ಎದುರಾದೀತು. ನ್ಯಾಯಾಲಯದ ದರ್ಶನವು ಆಗಾಗ ಕಂಡು ಬರುವುದು. ಶತ್ರುಪೀಡೆಯಿಂದ ಮೀನುಗಾರರಿಗೆ ನಿರೀಕ್ಷಿತ ಲಾಭವಿರದು. ಮುಖ್ಯವಾಗಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಅಧಿಕವಾಗಲಿದೆ. ಬಂಧುಗಳ, ಮಿತ್ರರ, ದ್ವೇಷಾದಿಗಳು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಲಿವೆ. ಸಾಂಸಾರಿಕ ಸುಖ ಮರೀಚಿಕೆಯಾದೀತು. ಆಹಾರ, ನೀರಿನಲ್ಲಿ ವ್ಯತ್ಯಾಸವಾಗುವುದರಿಂದ ಆರೋಗ್ಯಭಾಗ್ಯವು ಏರುಪೇರಾಗಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಯಾನವು ತಪ್ಪಿ ಹೋಗಲಿದೆ. ಪರರಿಗೆ ಸಹಾಯ ಪ್ರಾಣ ಸಂಕಟಕ್ಕೆ ಕಾರಣವಾದೀತು. ಎಲ್ಲಕ್ಕೂ ತಾಳ್ಮೆ ಸಮಾಧಾನ ಅಗತ್ಯವಿದೆ.
ಶುಭ ದಿನಾಂಕ: 5, 14, 23 ಶುಭ ಸಂಖ್ಯೆ: 3, 5, 6, 8
ಶುಭವಾರ: ಬುಧ, ಶುಕ್ರ, ಶನಿವಾರ
ಶುಭರತ್ನ: ಪಚ್ಚೆ, ವಜ, ಇಂದ್ರನೀಲ
ಶುಭ ವರ್ಣ: ಬಿಳಿ, ನೀಲಿ, ಹಸುರು, ಶುಭ ದಿಕ್ಕು: ಉತ್ತರಾ
ತುಲಾ: ಈ ವರ್ಷಾರಂಭದಿಂದ ದೈವಬಲವಿಲ್ಲದೆ ಗುರು, ಶನಿಗಳು ಚತುರ್ಥ ಸ್ಥಾನದಲ್ಲಿದ್ದು ನಾನಾ ರೀತಿಯ ಕಷ್ಟ ನಷ್ಟಗಳಿಗೆ ಹೊಣೆಯಾಗಲಿದ್ದೀರಿ. ಆರೋಗ್ಯ ಭಾಗ್ಯಕ್ಕೆ ಆಗಾಗ ಆಪತ್ತು ಆತಂಕಕ್ಕೆ ಕಾರಣವಾಗಬಹುದು. ಆರ್ಥಿಕವಾಗಿ ಸಂಪತ್ತು , ಸತ್ಕಾರ್ಯಗಳಿಗೆ ವಿನಿಯೋಗವಾಗದೆ ವ್ಯರ್ಥವಾದೀತು. ಮನಸ್ಸಿಗೆ ನೆಮ್ಮದಿಯಾಗಿ ಇರದೆ ಕಿರಿಕಿರಿ ಆದೀತು. ಆಗಾಗ ದೇಹಾರೋಗ್ಯದಲ್ಲಿ ಏರುಪೇರು ಹೊಟ್ಟೆ ಕಿಬ್ಬೊಟ್ಟೆಯ ಸಮಸ್ಯೆ ತೋರಿಬಂದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರವಿರದೆ ಉಪಟಳದ ಸಾಧ್ಯತೆ ಇದೆ. ದುಡಿಮೆಗೆ ತಕ್ಕ ಪ್ರತಿಲ ದೊರಕದೆ ವೃಥಾ ಪರಿಶ್ರಮ ಕಂಡು ಬರಲಿದೆ. ಮಾತಿನಲ್ಲಿ ಎಚ್ಚರವಿರಲಿ. ವಿದೇಶಿ ವಾಸಿಗಳಿಗೆ ಪ್ರಯಾಣದಲ್ಲಿ ಕುತ್ತು, ವೃತ್ತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು. ಪಾಲುದಾರಿಕೆಯಲ್ಲಿ ವಂಚನೆ ಹಾಗೂ ಸಂಘಸಂಸ್ಥೆಗಳಲ್ಲಿ ಗುಂಪುಗಾರಿಕೆಯಿಂದ ಹೋಳಾಗುವ ಭಯ ಕಂಡು ಬರುತ್ತದೆ. ಆಹಾರ ನೀರಿನ ವ್ಯತ್ಯಾಸದಿಂದ ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ಈ ಮಧ್ಯೆ ಹಿರಿಯರಿಗೆ ಶ್ರೀ ದೇವರ ದರ್ಶನ ಹಾಗೂ ತೀರ್ಥಯಾತ್ರಾ ಭಾಗ್ಯವಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಹೊಂದಾಣಿಕೆಯಿಂದ ಕಂಕಣಬಲವನ್ನು ತಂದುಕೊಟ್ಟಾವು. ಬಾಡಿಗೆದಾರರಿಗೆ ಮನೆ ಬದಲಿ ಸಂಭವವಿದೆ. ಯಂತ್ರ ವಾಹನಾದಿಗಳಿಗೆ ದಾರಾಳ ಖರ್ಚು ತಂದೀತು. ದುಡಿಮೆಗೆ ತಕ್ಕ ಪ್ರತಿಫಲ ದೊರಕದೆ ವೃಥಾ ಪರಿಶ್ರಮವಿದೆ. ಮಹಿಳಾ ಉದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಭಾಗ್ಯ ದೊರಕಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನಿರಂತರ ಕಾರ್ಯಭಾರದಿಂದ ದೇಹಾರೋಗ್ಯದಲ್ಲಿ ಸಮಸ್ಯೆ ತರಲಿದೆ. ಸ್ವಜನ ವಿರಹದಿಂದ ಮನಸ್ಸಿಗೆ ಬೇಸರವಾಗಲಿದೆ. ಲಾಟರಿ, ವಿಮೆ, ಕಮಿಶನ್ ವ್ಯವಹಾರದಲ್ಲಿ ತಕ್ಕಮಟ್ಟಿಗೆ ಲಾಭ ತಂದೀತು. ಕಾರ್ಯಕ್ಷೇತ್ರದಲ್ಲಿ ಆರೋಪ, ಪ್ರತ್ಯಾರೋಪಗಳಿಂದ ಮಾನಸಿಕ ಹಿಂಸೆ ಕಂಡು ಬರಲಿದೆ. ರಾಜಕೀಯ ವರ್ಗದಲ್ಲಿ ಭ್ರಷ್ಟಾಚಾರದ ಆರೋಪ ತಂದೀತು. ಜಾಗ್ರತೆ ಇರಲಿ. ವರ್ಷಾಂತ್ಯದಲ್ಲಿ ರಾಹು-ಕೇತುಗಳ ಪ್ರತಿಕೂಲತೆಗಳಿಂದ ಅಪವಾದ ಭಯ ಸಂಘದೋಷವು ಇರುತ್ತದೆ. ಶಿಸ್ತು ಸಂಯಮದಿಂದ ಇದ್ದಲ್ಲಿ ಕಷ್ಟ ನಷ್ಟಗಳು ಕಡಿಮೆ ಮಟ್ಟದಲ್ಲಿ ಅನುಭವಕ್ಕೆ ಬರುವುದು. ಗೃಹಕೃತ್ಯದಲ್ಲಿ ತೊಂದರೆ, ಕಾರ್ಯವೈಫಲ್ಯ ಇರುವುದು.
ಶುಭ ದಿನಾಂಕ: 6, 9, 15, 18, 24, 27 ಶುಭ ಸಂಖ್ಯೆ: 5, 6, 8
ಶುಭವಾರ: ಗುರು, ಶುಕ್ರ, ಶನಿವಾರ
ಶುಭರತ್ನ: ವಜ್ರ, ಇಂದ್ರನೀಲ, ಪಚ್ಚೆಕಲ್ಲು, ಶುಭ ವರ್ಣ: ಬಿಳಿ, ನೀಲಿ, ಹಸುರು, ಕಪ್ಪು. ಶುಭ ದಿಕ್ಕು: ಆಗ್ನೇಯ
ವೃಶ್ಚಿಕ: ಹೊಸ ವರ್ಷಾರಂಭದಿಂದ ಶನಿಯ ಲಾಭಸ್ಥಾನದಿಂದ ಆರ್ಥಿಕವಾಗಿ ಪರಿಪೂರ್ಣ ಫಲವನ್ನು ಪಡೆಯಬಹುದು. ಅನಂತರ ಜುಲೈ ತಿಂಗಳಿಂದ ನವಂಬರ್ ತಿಂಗಳವರೆಗೆ ದ್ವಿತೀಯ ಸ್ಥಾನದ ಗುರುವಿನಿಂದ ದೈವಾನುಗ್ರಹ ಉತ್ತಮವಾಗಿರುತ್ತದೆ. ಬಂದ ಯಾವುದೇ ಕಷ್ಟನಷ್ಟಗಳನ್ನು ಎದುರಿಸಿಕೊಂಡು ಮುಂದುವರಿಯಬಹುದು. ಶಾರೀರಿಕವಾಗಿ ಉತ್ತಮ ಆರೋಗ್ಯವನ್ನು ಪಡೆಯಲಿದ್ದೀರಿ. ಕೌಟುಂಬಿಕ ಸಮಸ್ಯೆಗಳು ಹಂತಹಂತವಾಗಿ ಬಗೆಹರಿಯಲಿವೆ. ರಾಜಕೀಯ ಕ್ಷೇತ್ರದಲ್ಲಿ ಹೋರಾಟ ಮಾಡಿದರೂ ಯಶಸ್ಸು ನಿಮ್ಮದಾದೀತು. ವಿಳಂಬಿತ ಕಾರ್ಯ ನಿರ್ವಹಣೆಯಿಂದ ತೃಪ್ತಿ, ಮನಸ್ಸು ಸಣ್ಣಗಾಗದು. ಹಣಕಾಸು ವ್ಯವಹಾರದಲ್ಲಿ ಅಪವಾದ ಭಯ ಬಾರದಂತೆ ಅತೀ ಹೆಚ್ಚಿನ ಜಾಗ್ರತೆ ವಹಿಸಿರಿ. ಸಣ್ಣ ತಪ್ಪಿಗಾಗಿ ದೊಡ್ಡ ಬೆಲೆ ತೆರಬೇಕಾದೀತು. ಅಷ್ಟಮದ ರಾಹು ಮಧ್ಯೆ ಮಧ್ಯೆ ಸಮಸ್ಯೆಯನ್ನು ತಂದಾನು. ಹಿರಿಯರಿಗೆ ಕಾಲು, ಬೆನ್ನು , ಕಫ ದೋಷ, ನರ ದೌರ್ಬಲ್ಯದಿಂದ ಆರೋಗ್ಯ ಹಾನಿಯಾಗಲಿದೆ. ಗುರುಬಲದಿಂದ ನೂತನ ಕೆಲಸ ಕಾರ್ಯಗಳಿಗೆ ಅನುಕೂಲವಾಗುವುದು. ಹಿರಿಯ ಅಧಿಕಾರಿಗಳಿಗೆ ಉತ್ತಮ ಮುಂಭಡ್ತಿಯ ಸಾಧ್ಯತೆ ಇದೆ. ರೈತಾಪಿ ಜನರು ಕೃಷಿ ಜಾನುವಾರುಗಳಿಂದಾಗಿ ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಮತೊÕ éàದ್ಯಮ ವೃತ್ತಿಯವರು ಒಳ್ಳೆಯ ಲಾಭವನ್ನು ಪಡೆದು ಆದಾಯದ ಮೂಲವನ್ನು ವರ್ಧಿಸಲಿದ್ದಾರೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು, ಮಹಿಳಾ ವರ್ಗದವರಿಗೆ ಚಿನ್ನಾಭರಣ ಖರೀದಿಯ ಸಂತಸವಿದೆ. ವಾಹನ ಖರೀದಿಯೂ ತಂದೀತು. ವಿದ್ಯಾಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶವು ಸಿಗಲಿದೆ. ಭೂ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ಇದು ಸಕಾಲ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ವಿವಿಧ ಮೂಲಗಳಿಂದ ಧನದಾಯವಿದ್ದು ಕಾರ್ಯಾನುಕೂಲಕ್ಕೆ ಅನುಕೂಲವಾಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯಕ್ಕೆ ಕೊರತೆ ಇಲ್ಲವಾದರೂ ಹೊಂದಾಣಿಕೆ ಅತೀ ಅವಶ್ಯ.
ಶುಭ ದಿನಾಂಕ: 1, 10, 17 ಶುಭ ಸಂಖ್ಯೆ: 1, 2, 3, 9
ಶುಭವಾರ: ಕುಜ, ಗುರು, ರವಿವಾರ
ಶುಭರತ್ನ: ಹವಳ, ಮಾಣಿಕ್ಯ, ಕನಕ, ಪುಷ್ಯರಾಗ
ಶುಭ ವರ್ಣ: ರಕ್ತವರ್ಣ, ಹಳದಿ, ಕೇಸರಿ
ಶುಭ ದಿಕ್ಕು: ದಕ್ಷಿಣ
ಧನು: ನೂತನ ವರ್ಷಾರಂಭದಿಂದಲೇ ಗುರುವು ಜನ್ಮರಾಶಿಯಲ್ಲಿದ್ದರೂ ಸಪ್ತಮದ ರಾಹು ರಾಶಿಸ್ಥಿತ ಕೇತು ಅಶುಭನಾಗಿ ಪ್ರತಿಕೂಲ ಫಲಗಳನ್ನು ಕೊಟ್ಟಾನು. ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯಗಳಿಂದ ಕಲಹಕ್ಕೆ ಕಾರಣವಾದೀತು. ಸಾಮಾಜಿಕ ರಂಗದಲ್ಲಿ ಸಣ್ಣ ವಿಷಯವೊಂದು ರಾದ್ಧಾಂತಕ್ಕೆ ಕಾರಣವಾಗಿ ಅಪವಾದ, ಅವಮಾನ ಪ್ರಸಂಗವನ್ನು ಅನುಭವಿಸುವಂತಾದೀತು. ಆರ್ಥಿಕವಾಗಿ ಶೂನ್ಯ ಸಂಪಾದನೆ ಆತಂಕಕ್ಕೆ ಕಾರಣವಾಗಲಿದೆ. ಪದೇ ಪದೇ ಸಂಚಾರಗಳು, ವಾಯುಪ್ರಕೋಪ ಆರೋಗ್ಯಕ್ಕೆ ಸಮಸ್ಯೆ ತರಬಹುದು. ಕಾರ್ಯರಂಗದಲ್ಲಿ ಸ್ಫೂರ್ತಿ ಕಳೆದುಕೊಂಡು ನಿರುತ್ಸಾಹ ತರಲಿದೆ. ಆದಾಯ ಮೀರಿ ಖರ್ಚುವೆಚ್ಚಗಳು ಬರುವುದರಿಂದ ಉಳಿತಾಯಕ್ಕೆ ಹೆಚ್ಚಿನ ಮನಸ್ಸು ಮಾಡಬೇಕಾದೀತು. ಭೂ ಖರೀದಿ ವ್ಯವಹಾರದಲ್ಲಿ ಬದಲಾವಣೆ ಹಾಗೇ ಚಿಕಿತ್ಸಾ ವೆಚ್ಚಗಳು ಒಂದಲ್ಲಾ, ಒಂದು ರೀತಿಯಲ್ಲಿ ಕಂಡು ಬರಲಿವೆ. ಪಾಲು ಬಂಡವಾಳದಲ್ಲಿ ಇಡುಗಂಟು ವಂಚನೆಗೆ ಕಾರಣವಾಗಲಿದೆ. ಬೇಸಾಯಗಾರರಿಗೆ ಬೇಸಾಯ ವೃತ್ತಿಯಲ್ಲಿ ಬೆಳೆಯಲ್ಲಿ ರೋಗ ರುಜಿನಗಳಿಂದ ನಷ್ಟ ಸಂಭವವಿದೆ. ವಿದ್ಯಾರ್ಥಿಗಳಿಗೆ ವಿದೇಶಾಗಮನಕ್ಕೆ ನೂರಾರು ವಿಘ್ನಗಳಿರುತ್ತವೆ. ಈ ಮಧ್ಯೆ ಏಪ್ರಿಲ್ ತಿಂಗಳಿನಿಂದ ದ್ವಿತೀಯ ಸ್ಥಾನದ ಗುರು ನಿಮ್ಮ ಬಾಳಿಗೆ ಬೆಳಕಾಗಿ ಬಂದಾನು. ಆರೋಗ್ಯದಲ್ಲಿ ಸುಧಾರಣೆ ಗೃಹ ಸೌಕರ್ಯ ವೃದ್ಧಿ, ದಾಂಪತ್ಯದಲ್ಲಿ ಸಾಮರಸ್ಯ, ಕುಟುಂಬ ವರ್ಗದಿಂದ ಸ್ಫೂರ್ತಿ ಒದಗಿ ಬರಲಿದೆ. ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗಲಿದೆ. ವೃತ್ತಿರಂಗದಲ್ಲಿ ಉದ್ಯೋಗಿಗಳಿಗೆ ಭಡ್ತಿ ರಹಿತ ವರ್ಗಾವಣೆಯ ಸಾಧ್ಯತೆ ಇದೆ. ರಾಜಕೀಯದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಜಾಣ್ಮೆ ವಹಿಸಿದಲ್ಲಿ ಹೇರಳ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ ಉತ್ತಮ ಫಲಿತಾಂಶ ತಂದುಕೊಡಲಿದೆ. ತಾಂತ್ರಿಕ ವೃತ್ತಿಯವರಿಗೆ ಭಡ್ತಿ ಸಿಗಲಿದೆ. ಹಿರಿಯರಿಗೆ ಶ್ರೀ ದೇವತಾ ದರ್ಶನ ಭಾಗ್ಯ, ಪ್ರವಾಸಗಳು ಮನಸ್ಸಿಗೆ ಮುದ ನೀಡಲಿವೆ. ಆರ್ಥಿಕವಾಗಿ ನಿಮ್ಮ ಔದಾರ್ಯ ನಿಮಗೆ ಸಮಸ್ಯೆಯಾಗದಂತೆ ಜಾಗ್ರತೆ ಮಾಡಿರಿ. ಬಂಧುಗಳ ಸಹಕಾರ, ಮಿತ್ರಾನುಕೂಲ ನಿಮಗೆ ಜೀವನದ ಹೊಸ ದಾರಿ ತೋರಿಸಲಿದೆ..
ಶುಭ ದಿನಾಂಕ: 3, 9, 18, 21, 27, 30 ಶುಭ ಸಂಖ್ಯೆ: 1, 3, 8, 9
ಶುಭವಾರ: ಗುರು, ಭಾನು, ಕುಜವಾರ
ಶುಭರತ್ನ: ಕನಕ ಪುಷ್ಯರಾಗ, ಮಾಣಿಕ್ಯ, ಹವಳ
ಶುಭ ವರ್ಣ: ಹಳದಿ, ರಕ್ತವರ್ಣ, ಕೇಸರಿ, ಶುಭ ದಿಕ್ಕು: ಈಶಾನ್ಯ
ಮಕರ : ಈ ವರ್ಷದ ಪ್ರಾರಂಭದಿಂದಲೇ ದೈವಬಲವಿಲ್ಲ. ಶನೈಶ್ಚರನು ವರ್ಷವಿಡೀ ವ್ಯಯಸ್ಥಾನದಲ್ಲಿ ಇರುವುದರಿಂದ ಸಂಚಾರದ ಮೇಲೆ ಸಂಚಾರವಿರುತ್ತದೆ. ಯಾವುದೇ ಕಾರ್ಯಗಳನ್ನು ಮಾಡುವುದಾದರೂ ಚಿಂತಿಸಿ, ಯೋಚಿಸಿ ಮಾಡುವುದು ಅಗತ್ಯ. ಅನಗತ್ಯ ಖರ್ಚುವೆಚ್ಚಗಳು ಅಧಿಕ ರೂಪದಲ್ಲಿ ಕಂಡುಬರಲಿವೆ. ನಿರಂತರ ಸಂಚಾರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕಾರ್ಯರಂಗದಲ್ಲಿ ಹಣದ ವಿಚಾರದಲ್ಲಿ ಮನಸ್ತಾಪ, ಭಿನ್ನಾಭಿಪ್ರಾಯಗಳು ಅಪವಾದವನ್ನು ತಂದಾವು. ಕೃಷಿ, ತೋಟಗಾರಿಕೆ, ಬೆಳೆಗೆ ಹಾನಿ ಸಂಭವ ತಂದೀತು. ಆದರೂ ಲಾಭಸ್ಥಾನದ ರಾಹುವು ಅಚ್ಚರಿಯ ರೀತಿಯಲ್ಲಿ ಮರ್ಯಾದೆಯನ್ನು ಉಳಿಸಲಿದ್ದಾನೆ. ಸರಕಾರಿ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ನಡೆದಾವು. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಅನುಕೂಲವಾದರೂ ಹಿತಶತ್ರುಗಳಿಂದ ನೆಂಟಸ್ಥಿಕೆ ಅರ್ಧಕ್ಕೇ ತಡೆಯಾದೀತು. ಒಮ್ಮೊಮ್ಮೆ ನಿಮ್ಮ ಆತ್ಮೀಯರು ಕೂಡ ನಿಮ್ಮ ವಿರುದ್ಧ ವರ್ತಿಸುವಂತೆ ಭಾಸವಾಗಲಿದೆ. ಈ ಮಧ್ಯೆ ಗುರು, ಶನಿಗಳಿಂದಾಗಿ ಅಶುಭ ಫಲಗಳ ತೀವ್ರತೆ ಕಡಿಮೆಯಾಗಿ ಕೆಲವೊಂದು ಶುಭಫಲಗಳು ಗೋಚರಕ್ಕೆ ಬರಲಿವೆ. ನ್ಯಾಯಾಲಯದ ಕೆಲಸಗಳು ಆಗಾಗ ಹಿನ್ನಡೆಯನ್ನು ತಂದರೂ ಅಂತಿಮವಾಗಿ ಯಶಸ್ಸು ನಿಮ್ಮ ಪಾಲಿಗೆ ದೊರಕಲಿದೆ. ಕ್ರೀಡಾಳುಗಳು ತಮ್ಮ ಪ್ರಯತ್ನಬಲದ ಯಶಸ್ಸನ್ನು ಪಡೆಯಲಿದ್ದಾರೆ. ಮನೆಯಲ್ಲಿ ಶುಭಮಂಗಲ ಕಾರ್ಯದಿಂದ, ದೇವತಾ ಕಾರ್ಯದಿಂದ ಶಾಂತಿ, ಸಮಾಧಾನವನ್ನು ಪಡೆಯಲಿದ್ದೀರಿ. ನೂತನ ಕೆಲಸ ಕಾರ್ಯಗಳಿಗೆ ದುಡುಕದೆ ಮುಂದುವರಿಯಿರಿ. ಆಲಸ್ಯವು ಕೂಡ ನಿಮಗೆ ಅನುಭವಕ್ಕೆ ಬರಲಿದೆ. ಶಿಸ್ತು, ಸಂಯಮದಿಂದ ಮುಂದು ವರಿದಲ್ಲಿ ನಿಮ್ಮ ಎಷ್ಟೋ ಸಮಸ್ಯೆಗಳು ಉಪಶಮನವಾಗಲಿವೆ. ನಿರುದ್ಯೋಗಿಗಳು ತಮ್ಮ ಪ್ರಯತ್ನ ಬಲದಿಂದಲೇ ಮುಂದುವರಿದು ಉದ್ಯೋಗಭಾಗ್ಯವನ್ನು ಪಡೆಯಲಿದ್ದಾರೆ. ರಾಜಕೀಯ ರಂಗದಲ್ಲಿ ಹೆಜ್ಜೆ ಹೆಜ್ಜೆಗೂ ಪರಿಶ್ರಮದ ಅಗತ್ಯವಿದೆ. ಯಾವುದೇ ವಿಚಾರವನ್ನು ದುಡುಕದೆ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ. ಲಾಟರಿ, ಶೇರು, ಮಾರ್ಕೆಟ್‌ಗಳ ಬಗ್ಗೆ ಹೆಚ್ಚಿನ ವಿಶ್ವಾಸ ಮಾಡದಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಸೆ ತೋರಿಸಿ ವಂಚನೆ ಕಂಡು ಬಂದೀತು. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ.
ಶುಭ ದಿನಾಂಕ: 1, 10, 19, 28 ಶುಭ ಸಂಖ್ಯೆ: 4, 5, 6, 8
ಶುಭವಾರ: ಬುಧ, ಶುಕ್ರ, ಶನಿವಾರ
ಶುಭರತ್ನ: ವಜ್ರ, ಇಂದ್ರನೀಲ, ಪಚ್ಚೆಕಲ್ಲು
ಶುಭ ವರ್ಣ: ಆಕಾಶನೀಲಿ, ಹಸುರು, ಹಳದಿ, ಶುಭ ದಿಕ್ಕು: ಪಶ್ಚಿಮ
ಕುಂಭ: ವರ್ಷಾರಂಭದಿಂದ ಉತ್ತಮ ಲಾಭಸ್ಥಾನದ ಗ್ರಹಗಳಿಂದ ಶುಭಾಶುಭ ಫಲಗಳನ್ನು ಪಡೆಯುವ ನೀವು ಧನ್ಯರು. ಸಂಚಾರಗಳು ಸಂತಸ ತಂದರೂ ದೇಹಾರೋಗ್ಯದಲ್ಲಿ ಸಮಸ್ಯೆಯನ್ನು ತಂದು ಕೊಡಲಿವೆ. ಲಾಭಸ್ಥಾನದ ಶನಿ, ಗುರು, ಕೇತುವು ವಿವಿಧ ರೀತಿಯಲ್ಲಿ ದೈವಾನುಗ್ರಹ ತೋರಿಬಂದು ಅನುಕೂಲ ಉಂಟಾಗಲಿದೆ. ಗ್ರಹಿಸಿದ ಕೆಲಸ ಕಾರ್ಯಗಳು ಸಿದ್ಧಿಸಲಿವೆ. ಆರ್ಥಿಕವಾಗಿ ಕೂಡ ಅಭಿವೃದ್ಧಿ ಉಂಟಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತ, ಸ್ಥಾನಮಾನ, ಗೌರವ ಪ್ರಾಪ್ತಿಯಾದೀತು. ಸಾಂಸಾರಿಕವಾಗಿ ದಾಂಪತ್ಯ ಸುಖವನ್ನು ಅನುಭವಿಸಲಿದ್ದೀರಿ. ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಉತ್ತಮ ಕಂಕಣಬಲವನ್ನು ಒದಗಿಸಲಿವೆ. ಭೂ ಖರೀದಿಗೆ, ಗೃಹ ನಿರ್ಮಾಣ ಕಾರ್ಯಗಳಿಗಿದು ಸಕಾಲ. ಇದರ ಸದುಪಯೋಗವನ್ನು ಮಾಡಿಕೊಳ್ಳುವುದು ಅಗತ್ಯವಿರುತ್ತದೆ. ಕೌಟುಂಬಿಕವಾಗಿ ಶುಭಮಂಗಲ ಕಾರ್ಯಗಳು ನಡೆದಾವು. ತಾಂತ್ರಿಕ ವೃತ್ತಿ , ಕೈಗಾರಿಕೆಗಳಿಂದ ಆದಾಯ ಉತ್ತಮವಿದ್ದರೂ ಖರ್ಚುವೆಚ್ಚಗಳನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ದುಡುಕು ವರ್ತನೆಯಿಂದ ಸತಿ, ಸುತರ ವಿರೋಧವನ್ನು ಕಟ್ಟಿಕೊಳ್ಳುವಂತಾದೀತು. ಗೋಚರದಲ್ಲಿ ರಾಹು ಕೇತುಗಳು ಮಿಶ್ರಫಲದಾಯಕರಾಗಿರುತ್ತಾರೆ. ಆದ ಕಾರಣ ಆದಷ್ಟು ಜಾಗ್ರತೆ ವಹಿಸಬೇಕು. ಉದ್ಯೋಗದಲ್ಲಿ ಬದಲಾವಣೆ, ಧಾರ್ಮಿಕ ಕೆಲಸ ಕಾರ್ಯಕ್ಕೆ ಧನವ್ಯಯ, ಸ್ತ್ರೀ ಸಂಬಂಧ ಸಮಸ್ಯೆಗಳು ಕಂಡು ಬಂದಾವು. ಕೋರ್ಟು ವ್ಯವಹಾರಗಳು ಮುನ್ನಡೆಯನ್ನು ತಂದರೂ ಧನ ವ್ಯಯ ಅಧಿಕವಾಗುವುದು. ದೇವತಾ ಕಾರ್ಯಗಳಿಗೆ ವಿಘ್ನ ಭಯ ಬರಲಿದೆ. ಹಿರಿಯರ ಸೂಕ್ತ ಸಲಹೆಗಳು ನಿಮಗೆ ಅನುಕೂಲವಾಗಲಿದೆ. ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸಕ್ಕಾಗಿ ವಿದೇಶ ಯಾನದ ಅವಕಾಶ ದೊರಕಲಿದೆ. ಹೊಸ ವ್ಯವಹಾರದಲ್ಲಿ ಹೂಡಿಕೆಗಳು ವಂಚನೆಗೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಜಾಗ್ರತೆ ವಹಿಸಿರಿ. ಮಡದಿಯ ಹಿತವಚನಕ್ಕೆ ಉದಾಸೀನ, ಅಸಡ್ಡೆ ಮಾಡದಿರಿ. ಸಾಂಸಾರಿಕವಾಗಿ ದಾಯಾದಿಗಳ ದುಷ್ಟ ವರ್ತನೆ ಅನುಭವಕ್ಕೆ ಬರಲಿದೆ.
ಶುಭ ದಿನಾಂಕ: 1, 10, 19, 28 ಶುಭ ಸಂಖ್ಯೆ: 4, 5, 6, 8
ಶುಭವಾರ: ಬುಧ, ಶುಕ್ರ, ಶನಿವಾರ
ಶುಭರತ್ನ: ನೀಲಿ, ಪಚ್ಚೆಕಲ್ಲು, ವಜ್ರ
ಶುಭ ವರ್ಣ: ಕಡುನೀಲಿ, ಹಸುರು, ಬಿಳಿ
ಶುಭ ದಿಕ್ಕು: ಪಶ್ಚಿಮ
ಮೀನಾ: ವರ್ಷಾರಂಭದಿಂದಲೇ ಶನಿಯ ಏಕಾದಶದ ಬಲದಿಂದ ನಿಮ್ಮ ಹೆಚ್ಚಿನ ಮನೋಕಾಮನೆಗಳು ನೆರವೇರಿ ಸಂತಸದ ಕಾಲವೆನಿಸಲಿದೆ. ಕೆಲಸ ಕಾರ್ಯಗಳಲ್ಲಿ ಸ್ವಸಾಮರ್ಥ್ಯದಲ್ಲಿ ಭರವಸೆ ಇಟ್ಟು ಮುನ್ನಡೆಯಿರಿ. ಆರ್ಥಿಕವಾಗಿ ವರ್ಷಪೂರ್ತಿ ಶನಿ ಲಾಭದಾಯಕನಾಗಿ ಆರ್ಥಿಕ ಸ್ಥಿತಿಯನ್ನು ಎಲ್ಲಾ ರೀತಿಯಲ್ಲಿ ಸುಧಾರಿಸಲಿದ್ದಾನೆ. ಆದರೆ ಚತುರ್ಥದ ರಾಹು ತುಸು ಪ್ರತಿಕೂಲ ಫಲವನ್ನು ನೀಡಿಯಾನು. ಗ್ರಹಿಸಿದ ಕೆಲವೊಂದು ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆಯಲಿವೆ. ಶ್ರಮ ಪೂರ್ಣ ಕರ್ತವ್ಯ ನಿಷ್ಠೆಯಿಂದ ದುಡಿದಲ್ಲಿ ಸ್ಥಾನಮಾನ, ಉನ್ನತಿ, ಮೇಲ್ಮೆಯನ್ನು ಪಡೆಯಲಿದ್ದೀರಿ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಉಪಶಮನವಾಗಲಿವೆ. ಮನೆ ಖರೀದಿ, ವಾಹನ ಖರೀದಿಗಳಿಗೆ ಇದು ಉತ್ತಮ ಕಾಲ. ವಿವಿಧ ರೂಪದಿಂದ ಆರ್ಥಿಕ ಮೂಲಗಳು ಗೋಚರಕ್ಕೆ ಬಂದಾವು. ಸ್ವಂತ ಉದ್ಯೋಗ, ಗುಡಿಕೈಗಾರಿಕೆ, ವನ್ಯ ವಸ್ತು ಮಾರಾಟದ ದಂಧೆ ಉತ್ತಮ ಫಲ ನೀಡಲಿದೆ. ಶಿಕ್ಷಣದಲ್ಲಿ ಪ್ರಗತಿ, ವಿದ್ಯಾರ್ಜನೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ಲಭಿಸಲಿದೆ. ತಾತ್ಕಾಲಿಕ ಹುದ್ದೆಯವರಿಗೆ ವೇತನಯುಕ್ತ ಭಡ್ತಿ ಸಿಗಲಿದೆ. ಮನೆಯಲ್ಲಿ ಆಗಾಗ ದೇವತಾ ಕಾರ್ಯಗಳು, ಶುಭಮಂಗಲ ಕಾರ್ಯ ಗಳು ನಡೆಯಲಿವೆ. ಯೋಗ್ಯ ವಯಸ್ಕರು ಕಂಕಣಬಲವನ್ನು ಪಡೆಯಲಿದ್ದಾರೆ. ಏಕಾದಶದ ಗುರುವಿನಿಂದ ನಾನಾ ರೀತಿಯಲ್ಲಿ ಅಭಿವೃದ್ಧಿಯು ಕಂಡು ಬರುತ್ತದೆ. ಆರೋಗ್ಯದಲ್ಲಿ ಮಾತ್ರ ಆಗಾಗ ಏರುಪೇರಾದೀತು. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸ. ಗೃಹ ಪ್ರವೇಶದಂತಹ ಕೆಲಸಗಳು ಕೂಡ ನಡೆದಾವು. ಗುರು, ಶನಿಗಳ ಪರಮಾನು ಗ್ರಹ ಸುಖ ಸೌಭಾಗ್ಯವೃದ್ಧಿಗೆ ಕಾರಣವಾಗುತ್ತದೆ. ಆರ್ಥಿಕ ಸಂಗ್ರಹ ನಿಮ್ಮ ಧೀಶಕ್ತಿಯನ್ನು ಪ್ರಚೋದಿಸೀತು. ವ್ಯಾಪಾರ, ವ್ಯವಹಾರಗಳು ಲಾಭ ಹೆಚ್ಚಿಸಲಿವೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಕ್ರಿಯಾಶೀಲತೆ ಪ್ರಶಂಸೆ ತಂದುಕೊಡಲಿದೆ. ಬುಧ, ಶುಕ್ರರು ಅನುಕೂಲರಾಗಿದ್ದು, ಧೈರ್ಯ, ಆತ್ಮಸ್ಥೈರ್ಯ ವೃದ್ಧಿಯಾಗಲಿದೆ.
ಶುಭ ದಿನಾಂಕ: 3, 9, 18, 21, 27, 30 ಶುಭ ಸಂಖ್ಯೆ: 1, 3, 8, 9
ಶುಭವಾರ: ಭಾನು, ಗುರು, ಮಂಗಳವಾರ
ಶುಭರತ್ನ: ಕನಕಪುಷ್ಯರಾಗ, ಮಾಣಿಕ್ಯ, ಹವಳ
ಶುಭ ವರ್ಣ: ಹಳದಿ, ಕೇಸರಿ, ರಕ್ತವರ್ಣ
ಶುಭ ದಿಕ್ಕು: ಈಶಾನ್ಯ
ವೇದಮೂರ್ತಿ ಎನ್.ಎಸ್. ಭಟ್ ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.