ಚಿತ್ರರಂಗದಲ್ಲಿ ಕಾಂತಾರದ್ದೇ ಸದ್ದು


Team Udayavani, Dec 23, 2022, 6:10 AM IST

ಚಿತ್ರರಂಗದಲ್ಲಿ ಕಾಂತಾರದ್ದೇ ಸದ್ದು

ಚಿತ್ರರಂಗದಲ್ಲಿ ಕಾಂತಾರದ್ದೇ ಸದ್ದು

ಹೊಂಬಾಳೆ ಫಿಲಂಸ್‌ ನಿರ್ಮಿಸಿದ, ರಿಷಭ್‌ ಶೆಟ್ಟಿ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿದ ಕಾಂತಾರ ಸಿನೆಮಾ ನಾಡಿನೆಲ್ಲೆಡೆ ಸೆ. 30ರಂದು ತೆರೆ ಕಂಡಿತು. ಮೊದಲ ದಿನದಿಂದಲೇ ಸಿನಿಪ್ರೇಮಿಗಳ ಮನಗೆದ್ದಿದ್ದ ಕಾಂತಾರ ಸಿನೆಮಾವು ವೀಕ್ಷಣೆ, ಗಳಿಕೆಯಲ್ಲೂ ದಾಖಲೆ ಸೃಷ್ಟಿಸಿದೆ. 25 ದಿನ ಗ ಳಲ್ಲಿ ರಾಜ್ಯದ 77 ಲಕ್ಷ ಮಂದಿ ಈ ಸಿನೆಮಾವನ್ನು ವೀಕ್ಷಿ ಸುವ ಮೂಲಕ ಹೊಸ ಹೆಗ್ಗಳಿಕೆಗೆ ಪಾತ್ರವಾಯಿತು. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ, ತುಳು ಭಾಷೆಗಳಲ್ಲಿ ಪರದೆಯ ಮೇಲೆ ವಿಜೃಂಭಿಸುತ್ತಿರುವ ಕಾಂತಾರದ ಇಂಗ್ಲಿಷ್‌ ಅವತರಣಿಕೆ ಮುಂದಿನ ಜನವರಿಯಲ್ಲಿ ಬಿಡುಗಡೆಯಾಗಲಿದೆ. ನ.24ರಂದು ಒಟಿಟಿಯಲ್ಲಿ ಈ ಸಿನೆಮಾ ಬಿಡುಗಡೆಯಾಗಿದೆ. 16ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂತಾರ ಸಿನೆಮಾ ಈಗಾಗಲೇ 400 ಕೋ.ರೂ. ಗಳಿಗೂ ಅಧಿಕ ಆದಾಯವನ್ನು ಕಲೆಹಾಕಿದೆ. ಪ್ರಸಕ್ತ ವರ್ಷ ಕನ್ನಡದ ಜೇಮ್ಸ್‌,.ಕೆಜಿಎಫ್-2, ಚಾರ್ಲಿ, ವಿಕ್ರಾಂತ್‌ ರೋಣ, ಕಾಂತಾರ ಸಿನೆಮಾಗಳು ನೂರು ಕೋಟಿ ಕ್ಲಬ್‌ಗ ಸೇರ್ಪಡೆಯಾಗಿರುವುದು ವಿಶೇಷ.
**
ಅಮೆರಿಕ ಸಂಸತ್‌ ಚುನಾವಣೆ: ಬೆಳಗಾವಿಯ ಶ್ರೀ ಸಹಿತ ನಾಲ್ವರು ಎನ್ನಾರೈಗಳ ಆಯ್ಕೆ
ಅಮೆರಿಕದ ಸಂಸತ್‌ ಆಗಿರುವ ಕಾಂಗ್ರೆಸ್‌ಗೆ ನಡೆದ ಮಧ್ಯಾಂತರ ಚುನಾವಣೆ ಯಲ್ಲಿ ಭಾರತೀಯ ಮೂಲದ ನಾಲ್ವರು ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಆಡಳಿತ ಪಕ್ಷವಾದ ಡೆಮಾಕ್ರಾಟ್‌ನ ಅಭ್ಯರ್ಥಿಗಳಾಗಿರುವ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯ ಪಾಲ್‌ ಹೌಸ್‌ ಆಫ್ ರೆಪ್ರ ಸೆಂಟೇಟಿವ್ಸ್‌ಗೆ ಆಯ್ಕೆ ಯಾಗಿದ್ದರು.
ಗಮನ ಸೆಳೆಯುವ ಸಾಧನೆ ಎಂದರೆ ಕರ್ನಾಟಕದ ಬೆಳಗಾವಿ ಮೂಲದ ಉದ್ಯಮಿ ಶ್ರೀ ಥಾಣೆದಾರ್‌ ಅವರು ಮಿಚಿಗನ್‌ ಕ್ಷೇತ್ರದಿಂದ ಆಯ್ಕೆ ಯಾಗಿ ದ್ದರು. ಅವರು ರಿಪಬ್ಲಿಕನ್‌ ಪಕ್ಷದ ಮಾರ್ಟೆಲ್‌ ಬಿವಿಂಗ್ಸ್‌ ಅವರನ್ನು ಸೋಲಿಸಿದ್ದರು.
**
ಖರ್ಗೆಗೆ ಎಐಸಿಸಿ ಪಟ್ಟ; ಕಾಂಗ್ರೆಸ್‌ನ ಮೇರು ಹುದ್ದೆಗೇರಿದ ಕನ್ನಡಿಗ
ಕರ್ನಾಟಕ ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅ. 26ರಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 24ವರ್ಷಗಳ ಬಳಿಕ ಗಾಂಧಿ ಕುಟುಂಬೇತರ ನಾಯಕರೋರ್ವರು ಎಐಸಿಸಿ ಅಧ್ಯಕ್ಷರಾಗಿರುವುದು ವಿಶೇಷ. ಅಷ್ಟು ಮಾತ್ರವಲ್ಲದೆ ಜಗಜೀವನ್‌ರಾಮ್‌ ಅವರ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಗಾದಿಗೇರಿದ ಮೊದಲ ದಲಿತ ನಾಯಕರಾಗಿದ್ದಾರೆ.

ಸುಮಾರು 22 ವರ್ಷಗಳ ಅನಂತರ ನಡೆದ ಕಾಂಗ್ರೆಸ್‌ ಆಂತರಿಕ ಚುನಾವಣೆಯಲ್ಲಿ ಖರ್ಗೆ ಅವರು, ಕೇರಳದ ತಿರುವನಂತಪುರ ಸಂಸದ ಶಶಿ ತರೂರ್‌ ಅವರ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದ್ದರು. ಅ.17ರಂದು ದೇಶಾದ್ಯಂತ ಮತದಾನ  ನಡೆದಿತ್ತು. ಅ.19ರಂದು ಮತ ಎಣಿಕೆ ನಡೆದು ಚುನಾವಣಾಧಿಕಾರಿ ಮಧುಸೂದನ್‌ ಮಿಸ್ತ್ರಿ ಅವರು ಖರ್ಗೆ ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಿದ್ದರು. ಗಾಂಧಿ ಕುಟುಂಬದ ನಿಷ್ಠಾವಂತರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿದ್ದಂತೆಯೇ ಪಕ್ಷದ 14 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ 47ಮಂದಿಯ ಸಂಚಾಲನ ಸಮಿತಿಯನ್ನು ರಚಿಸಿದ್ದರು.

ಲೋಕಸಭೆ ಮತ್ತು ರಾಜ್ಯ ಸಭೆಯ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದುದು ಕರ್ನಾಟಕ ಕಾಂಗ್ರೆಸ್‌ ಪಾಳಯದಲ್ಲಿನ ಹೊಸ ಹುಮ್ಮಸ್ಸನ್ನು ಮೂಡಿಸಿತ್ತು. ಮುಂದಿನ ವರ್ಷ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಖರ್ಗೆ ಅವರ ಪಾಲಿಗೆ ಇದು ಅತ್ಯಂತ ಸವಾಲಿನ ಹುದ್ದೆಯಾಗಿದೆ. ಖರ್ಗೆ ಪಕ್ಷದ ಅಧ್ಯಕ್ಷರಾದ ಬಳಿಕ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗುಜರಾತ್‌ನಲ್ಲಿ ಹೀನಾಯ ಪ್ರದರ್ಶನ ತೋರಿದರೆ ಹಿಮಾಚಲ ಪ್ರದೇಶದಲ್ಲಿ ಆಡಳಿತಾ ರೂಢ ಬಿಜೆಪಿಯನ್ನು ಮಣಿಸಿ ಅಧಿಕಾರಕ್ಕೇರಿದೆ. 2023ರಲ್ಲಿ 10 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಪುನಶ್ಚೇತನಕ್ಕೆ ಶ್ರೀಕಾರ ಹಾಡಿಯಾರೇ? ಎಂಬುದೇ ಸದ್ಯದ ಕುತೂಹಲ.

**

ನಗರ ಪ್ರದೇಶಗಳಲ್ಲಿ “ನಮ್ಮ ಕ್ಲಿನಿಕ್‌” ಆರಂಭ
ರಾಜ್ಯದ ನಗರ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ದಿಲ್ಲಿ ಮಾದರಿ ಯಲ್ಲಿ ಮುಂದಿನ ವರ್ಷದ ಜನವರಿ ಅಂತ್ಯದೊಳಗೆ 438 “ನಮ್ಮ ಕ್ಲಿನಿಕ್‌’ಗಳನ್ನು ತೆರೆಯಲು ಸಚಿವ ಸಂಪುಟ ತನ್ನ ಒಪ್ಪಿಗೆ ಸೂಚಿಸಿತ್ತು. ನಗರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ “ನಮ್ಮ ಕ್ಲಿನಿಕ್‌’ ಆರಂಭಿಸಲು ತೀರ್ಮಾನಿಸಿತ್ತು. ಆರಂಭದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರು, ನರ್ಸ್‌ಗಳು, ಕಚೇರಿ ಸಿಬಂದಿಯನ್ನು ಈ ಕ್ಲಿನಿಕ್‌ಗಳಿಗೆ ನೇಮಕ ಮಾಡಿ ಕೊಳ್ಳಲಾಗುತ್ತದೆ. ಅದರಂತೆ ಡಿ. 14ರಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ವರ್ಚುವಲ್‌ ಆಗಿ ರಾಜ್ಯವ್ಯಾಪಿ 114 “ನಮ್ಮ ಕ್ಲಿನಿಕ್‌’ ಕೇಂದ್ರಗಳಿಗೆ ಅಧಿಕೃತ ವಾಗಿ ಚಾಲನೆ ನೀಡಿದರು. ಜನರಲ್ಲಿ ಹಠಾತ್ತಾಗಿ ಕಾಣಿಸಿಕೊಳ್ಳುವ ಸಾಮಾನ್ಯ ರೋಗಗಳನ್ನು ತಡೆಗಟ್ಟಲು ನಮ್ಮ ಕ್ಲಿನಿಕ್‌ಗಳ ಮೂಲಕ ಪ್ರಯತ್ನಿಸುವುದು ಇದರ ಧ್ಯೇಯೋದ್ದೇಶವಾಗಿದೆ. ನಮ್ಮ ಕ್ಲಿನಿಕ್‌ ಕೇಂದ್ರಗಳಲ್ಲಿ ವೈದ್ಯರು, ತಂತ್ರಜ್ಞರು, ನರ್ಸಿಂಗ್‌ ಸಿಬಂದಿ ಇದ್ದು 12 ಪರೀಕ್ಷಾ ಸೇವೆಗಳು ಉಚಿತವಾಗಿ ಲಭಿಸಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಧುನಿಕ ಪರೀಕ್ಷಾ ಮತ್ತು ಚಿಕಿತ್ಸಾ ಉಪಕರಣಗಳನ್ನು ಒದಗಿಸುವ ಜತೆ ಯಲ್ಲಿ ಮತ್ತಷ್ಟು ಸೇವೆ ಗಳನ್ನು ಈ ಕ್ಲಿನಿಕ್‌ಗಳಿಗೆ ಸೇರ್ಪಡೆ ಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿನ್ನೋಟ@2022: ಈ ವರ್ಷ ಅನಾವರಣಗೊಂಡ ಟಾಪ್‌ 5 ಪ್ರತಿಮೆಗಳು

ಹಿನ್ನೋಟ@2022: ಈ ವರ್ಷ ಅನಾವರಣಗೊಂಡ ಟಾಪ್‌ 5 ಪ್ರತಿಮೆಗಳು

thumb-1

Rewind 2022: ಚಂದನವನದ ಚಿನ್ನದ ಬೆಳೆ, ಸ್ಯಾಂಡಲ್ ವುಡ್ ನಲ್ಲಿ ಒಂದು ಸುತ್ತು

2022ರ ನೆನಪುಗಳ ಮೆರವಣಿಗೆ; ದೇಶದ ದಿಕ್ಕು ಬದಲಿಸಿದ ಸುಪ್ರೀಂ ಕೋರ್ಟ್‌ನ ಐದು ತೀರ್ಪುಗಳು

2022ರ ನೆನಪುಗಳ ಮೆರವಣಿಗೆ; ದೇಶದ ದಿಕ್ಕು ಬದಲಿಸಿದ ಸುಪ್ರೀಂ ಕೋರ್ಟ್‌ನ ಐದು ತೀರ್ಪುಗಳು

2022ರ ಹೊರಳು ನೋಟ; ಹೇಮಾವತಿ ವೀರೇಂದ್ರ ಹೆಗ್ಗಡೆಯವರಿಗೆ‌ ಪೌರ ಸಮ್ಮಾನ

2022ರ ಹೊರಳು ನೋಟ; ಡಾ| ಹೇಮಾವತಿ ವೀರೇಂದ್ರ ಹೆಗ್ಗಡೆಯವರಿಗೆ‌ ಪೌರ ಸಮ್ಮಾನ

2022ರ ನೆನಪುಗಳ ಮೆರವಣಿಗೆ; ನವ ಭಾರತಕ್ಕೆ ದಶ ಯೋಜನೆಗಳು

2022ರ ನೆನಪುಗಳ ಮೆರವಣಿಗೆ; ನವ ಭಾರತಕ್ಕೆ ದಶ ಯೋಜನೆಗಳು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.