2022: ಮಾಹೆ ಘೋಷಣೆ: ನಾವೀನ್ಯತೆ, ಉದ್ಯಮಶೀಲತೆಯ ವರ್ಷ
Team Udayavani, Feb 5, 2022, 5:50 AM IST
ಮಣಿಪಾಲ: ವಿದ್ಯಾರ್ಥಿಗಳು, ಬೋಧಕರಲ್ಲಿ ನಾವೀನ್ಯ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಮಣಿಪಾಲ ಮಾಹೆ ವಿ.ವಿ. “2022′ ಅನ್ನು ನಾವೀನ್ಯ ಮತ್ತು ಉದ್ಯಮಶೀಲತೆಯ ವರ್ಷವಾಗಿ ಘೋಷಿಸಿದೆ.
ಕೇಂದ್ರ ಮಾನವ ಸಂಪ ನ್ಮೂಲ ಸಚಿವಾಲಯದ ಮಾರ್ಗದರ್ಶಿ ಸೂಚಿಯನ್ವಯ ಮಾಹೆ ವಿ.ವಿ. “ನ್ಯಾಶನಲ್ ಇನ್ನೋವೇಶನ್ ಆ್ಯಂಡ್ ಸ್ಟಾರ್ಟ್‌ಅಪ್ ಪಾಲಿಸಿ-2019 ಫಾರ್ ಸ್ಟೂಡೆಂಟ್ಸ್ ಆ್ಯಂಡ್ ಫ್ಯಾಕಲ್ಟಿ: ಎ ಗೈಡಿಂಗ್ ಫ್ರೆಮ್ ವರ್ಕ್ ಫಾರ್ ಹೈಯರ್ ಎಜುಕೇಶನ್ ಇನ್‌ಸ್ಟಿಟ್ಯೂಶನ್’ ಅನ್ನು ಅಳವಡಿಸಿದೆ. ಶಿಕ್ಷಣ ಸಚಿವಾಲಯ, ಯುಜಿಸಿ, ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ)ನಂತಹ ಅತ್ಯು ನ್ನತ ನಿಯಂತ್ರಕ ಸಂಸ್ಥೆಗಳು ಈ ನೀತಿಯನ್ನು ರೂಪಿಸಿವೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ವಿದ್ಯಾರ್ಥಿಗಳು ಮತ್ತು ನವೋದ್ಯಮಿಗಳಿಗೆ ಮಾರ್ಗದರ್ಶನದ ಜತೆಗೆ ಉನ್ನತ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ, ಸಂಶೋಧನೆ, ಅನ್ವೇಷಣೆಯನ್ನು ಇನ್ನಷ್ಟು ಉತ್ಕೃಷ್ಟ ಗೊಳಿಸುವುದು ಇದರ ಉದ್ದೇಶ.
ಈ ನಿಟ್ಟಿನಲ್ಲಿ ಮಾಹೆ ವಿ.ವಿ. ತನ್ನ ಪೂರ್ವ ವಿದ್ಯಾರ್ಥಿಗಳ ಪರಂಪರೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ. ಪ್ರಸ್ತುತ ಯಶಸ್ವಿ ಉದ್ಯಮಿಗಳಾಗಿರುವ ಅವರನ್ನು ಕ್ಯಾಂಪಸ್‌ಗೆ ಆಹ್ವಾನಿಸಿ ಉದ್ಯಮಶೀಲತೆಯ ಸಂಸ್ಕೃತಿ ಯನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಹೆಜ್ಜೆ ಇರಿಸಲಿದೆ.
ಕ್ರಿಯಾಶೀಲ ಪ್ರಯತ್ನ:
ರಂಜನ್ ಪೈ
ಮಾಹೆ ವಿ.ವಿ. ಸಂಶೋಧನೆ ಮತ್ತು ಹೊಸ ಮಾದರಿಯ ಶಿಕ್ಷಣದ ಕುರಿತು ಗಮನಹರಿಸುವ ಜತೆಗೆ ಸಮಾಜದ ಒಳಿತಿನ ಕುರಿತು ಗಮನಾರ್ಹ ಕ್ರಿಯಾಶೀಲ ಪ್ರಯತ್ನ ಮಾಡುತ್ತ ಬಂದಿದೆ. ಯುವ ಮನಸ್ಸು ಮತ್ತು ಪ್ರತಿಭೆಗಳನ್ನು ಉದ್ಯಮಶೀಲತೆಯತ್ತ ಉತ್ತೇಜಿಸುವ ನಿಟ್ಟಿನಲ್ಲಿ ಇದು ಪರಿ ಣಾಮಕಾರಿ ಹೆಜ್ಜೆ. ನ್ಯಾಶನಲ್ ಇನ್ನೋವೇಶನ್ ಆ್ಯಂಡ್ ಸ್ಟಾರ್ಟ್ ಅಪ್ ಪಾಲಿಸಿ-2019ರ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಮಾಹೆಯ ಎಲ್ಲ ಸಂಸ್ಥೆಗಳಲ್ಲಿ ಉದ್ಯಮಶೀಲತೆಯ ಪರಿಸರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಇದು ವಿದ್ಯಾರ್ಥಿಗಳು- ಬೋಧಕರಲ್ಲಿ ಕ್ರಿಯಾಶೀಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಲ್ಲಿ ಸಹಾಯಕವಾಗಲಿದೆ ಎಂದು ಮಾಹೆ ಟ್ರಸ್ಟ್ , ಎಂಇಎಂಜಿ ಅಧ್ಯಕ್ಷ ಡಾ| ರಂಜನ್ ಪೈ ಹೇಳಿದ್ದಾರೆ.
ವಿದ್ಯಾರ್ಥಿ-ಚಾಲಿತ ಇನ್ನೋ ವೇಶನ್‌ಗಳನ್ನು ಉತ್ತೇಜಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ. 2022ನೇ ವರ್ಷದಲ್ಲಿ ಮಾಹೆಯು ವಿದ್ಯಾರ್ಥಿಗಳು, ಬೋಧಕರಲ್ಲಿ ನಾವೀನ್ಯ, ಕೌಶಲ ಮತ್ತು ಉದ್ಯಮಶೀಲತೆಯನ್ನು ಪ್ರೇರೇಪಿಸುವಲ್ಲಿ ಒತ್ತು ನೀಡುತ್ತಿದೆ. ಮಾಹೆಯು ಉದ್ಯಮಶೀಲರನ್ನು ರೂಪಿಸುವ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಕ್ಯಾಂಪಸ್‌ನಲ್ಲಿರುವ ಉದಯೋನ್ಮುಖ ಉದ್ಯಮಶೀಲ ರನ್ನು ನಿರಂತರವಾಗಿ ಪ್ರೋತ್ಸಾಹಿಸಲಾ ಗು ತ್ತಿದೆ. ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಇನ್ನೋವೇಶನ್ ಸೆಂಟರ್ ತನ್ನ 15ನೇ ವರ್ಷದ ಸಂಭ್ರಮದಲ್ಲಿದ್ದರೆ, ಮಣಿಪಾಲ್ ಯೂನಿವರ್ಸಲ್ ಟೆಕ್ನಾ ಲಜಿ ಬಿಸಿನೆಸ್ ಇನ್‌ಕ್ಯೂಬೇಟರ್ (ಎಂಯುಟಿಬಿಐ) 12 ವರ್ಷಗಳನ್ನು ಪೂರೈಸುತ್ತಿದೆ. ಮಣಿಪಾಲ ಗವರ್ನ್ಮೆಂಟ್ ಆಫ್ ಕರ್ನಾಟಕ ಬಯೋ ಇನ್‌ಕ್ಯೂಬೇಟರ್‌ಗೆ 4 ವರ್ಷಗಳಾಗುತ್ತಿವೆ. ಮಾಹೆಯಲ್ಲಿ “2022′ ಅನ್ನು ದ ಇಯರ್ ಆಫ್ ಇನ್ನೋವೇಶನ್ ಎಂಟರ್‌ಪ್ರೈನರ್ ಶಿಪ್ ಇಯರ್ ಆಗಿ ಘೋಷಿಸಲು ಹೆಮ್ಮೆಯಾಗುತ್ತಿದೆ. ಪೂರ್ವ ವಿದ್ಯಾರ್ಥಿಗಳು ಯಶಸ್ವಿ ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಗೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕಾರಣರಾಗಿರುವುದು ಪ್ರಸಂಶನೀಯ. ಪೂರ್ವ ವಿದ್ಯಾರ್ಥಿ ಗಳ ಪರಂಪರೆಯನ್ನು ಬಳಸಿಕೊಳ್ಳಲಿ ದ್ದೇವೆ. ಅಲ್ಲದೆ, ಲೀಡರ್‌ಶಿಪ್ ಸೆಮಿ ನಾರ್ ಸರಣಿ ಆಯೋಜಿಸಿ ವಿದ್ಯಾರ್ಥಿ ಗಳು, ಬೋಧಕರನ್ನು ಪ್ರೋತ್ಸಾಹಿ ಸಲಿದ್ದೇವೆ. ಶೀಘ್ರವೇ ಮಾಹೆಯಲ್ಲಿ ಟೆಕ್ನಾಲಜಿ ರಿಸರ್ಚ್ ಪಾರ್ಕ್ ರೂಪು ಗೊಳ್ಳುವ ನಿರೀಕ್ಷೆಯಿದೆ ಎಂದು ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.