2023 Recap: ರಷ್ಯಾ ಯುದ್ಧ ಸೇರಿ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಹತ್ತು ಘಟನೆಗಳು


Team Udayavani, Dec 29, 2023, 10:02 AM IST

WORLD

ಇನ್ನೇನು 2023 ಕೊನೆಗೊಳ್ಳುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ವಿವಿಧ ಮಹತ್ವದ ಘಟನೆಗಳನ್ನು ನೆನಪಿನಲ್ಲಿಡುವಂತೆ ಮಾಡಿದೆ. 2023 ರಲ್ಲಿ ಜಾಗತಿಕವಾಗಿ ಕೆಲವು ಮರೆಯಲಾಗದ ಘಟನೆಗಳು ನಡೆದಿವೆ. ಕೆಲವು ಯುದ್ಧಗಳು ನಿಯಂತ್ರಣಕ್ಕೆ ಬಂದಿದ್ದರೆ, ಹೊಸವುಗಳು ಸ್ಫೋಟಗೊಂಡಿವೆ. ಕೆಲವು ದೇಶಗಳು ಆರ್ಥಿಕತೆಯಲ್ಲಿ, ತಂತ್ರಜ್ಞಾನದಲ್ಲಿ ಬಲಶಾಲಿಯಾಗಿ ಬದಲಾಗಿವೆ. ಕೆಲವೊಂದಷ್ಟು ರಾಷ್ಟಗಳು ಒಪ್ಪೊತ್ತಿನ ಊಟಕ್ಕೂ ತಡಕಾಡುವಂತೆ ನೆಲಕಚ್ಚಿವೆ. ಭೀಕರ ಸುನಾಮಿ, ಕಾಡ್ಗಿಚ್ಚು, ಭೂಕಂಪನ, ಪ್ರವಾಹ ಹೀಗೆ ಹತ್ತು ಹಲವು ಪ್ರಾಕೃತಿಕ ವಿಕೋಪಗಳನ್ನು ಜಗತ್ತು ಕಂಡಿದೆ. ಯುದ್ಧಗಳು ಮತ್ತು ಪ್ರಾಕೃತಿಕ ವಿಕೋಪಗಳು ಲಕ್ಷೋಪಲಕ್ಷ ಸಂಖ್ಯೆಯ ಜನರನ್ನು ಬಲಿಪಡೆದುಕೊಂಡಿವೆ. ದೇಶ-ದೇಶಗಳ ನಡುವಿನ ಹೋರಾಟಗಳು, ಬೆಳವಣಿಗೆಯ ಪೈಪೋಟಿ, ತಂತ್ರಜ್ಞಾನದ ಪ್ರಗತಿ ಹೀಗೆ ಹತ್ತು-ಹಲವು ಮಹತ್ತರ ಘಟನೆಗಳಿಗೆ 2023ರ ಈ ವರ್ಷ ಸಾಕ್ಷಿಯಾಗಿದೆ.

ಈ ಎಲ್ಲಾ ಘಟನೆಗಳ ಮೇಲೆ ಮತ್ತೊಂದು ಬಾರಿ ಬೆಳಕು ಚೆಲ್ಲುವ ಸಮಯ ಬಂದಿದೆ. 2023 ರಲ್ಲಿ ಜಗತ್ತಿನಲ್ಲಿ ನಡೆದ ಕೆಲವು ಮರೆಯಲಾಗದ ಘಟನೆಗಳು ಇಲ್ಲಿವೆ. ಈ ಕಥೆಗಳಲ್ಲಿ ಹೆಚ್ಚಿನವು ಈ ವರ್ಷವೇ ಕೊನೆಗೊಂಡಿವೆಯಾದರೂ ಕೆಲವೊಂದಷ್ಟು 2024ರಲ್ಲು ಕಿಚ್ಚು ಹಚ್ಚಿಸಲಿದೆ.

ರಷ್ಯಾ-ಯುಕ್ರೇನ್‌ ಯುದ್ಧ: 2022 ರಲ್ಲಿನ ರಕ್ತಸಿಕ್ತ ಇತಿಹಾಸ 2023 ರಲ್ಲೂ ಮುಂದುವರೆಯಿತು. 2022 ರ ಫೆಬ್ರವರಿಯಲ್ಲೇ ಪುಟ್ಟ ರಾಷ್ಟ್ರ ಯುಕ್ರೇನ್‌ ಮೇಲೆ ಯುದ್ಧ ಸಾರಿದ್ದ ರಷ್ಯಾ ಸತತವಾಗಿ ತನ್ನ ನೆರೆ ರಾಷ್ಟ್ರದ ಮೇಲೆ ದಾಳಿಮಾಡಿದ ಹೊರತಾಗಿಯೂ ಸುಮ್ಮನಾಗಲಿಲ್ಲ. 2023 ರಲ್ಲೂ ಯುಕ್ರೇನ್‌ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸುತ್ತಲೇ ಬಂದಿರುವ ರಷ್ಯಾ ಇನ್ನೂ ಯುದ್ಧಕ್ಕೆ ತಾರ್ಕಿಕ ಅಂತ್ಯ ಹಾಡುವಂತೆ ಕಾಣಿಸುತ್ತಿಲ್ಲ. ಈ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಕಾಳಗ 2024 ಕ್ಕೂ ಮುಂದುವರಿಯುವಂತಿದೆ.

ಟರ್ಕಿ ಮತ್ತು ಸಿರಿಯಾ ಭೂಕಂಪ: ಫೆಬ್ರವರಿಯಲ್ಲಿ, ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ 2023 ರ ಅತ್ಯಂತ ಪ್ರಬಲ ಮತ್ತು ಭೀಕರ ಭೂಕಂಪ ಎಂಬುದಾಗಿ ಹೇಳಲ್ಪಟ್ಟಿದೆ. ಮುಂಜಾನೆ 4:15 ಕ್ಕೆ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದಾದ ನಂತರ 1:24 ಕ್ಕೆ ಸಂಭವಿಸಿದ 7.5 ರ ತೀವ್ರತೆಯ ಮತ್ತೊಂದು ಭೂಕಂಪನವು ದೈತ್ಯ ಕಟ್ಟಡಗಳ ಕುಸಿತಕ್ಕೆ ಕಾರಣವಾಯಿತು. ಈ ವಿನಾಶಕಾರಿ ಭೂಕಂಪಕ್ಕೆ ಟರ್ಕಿಯಲ್ಲಿ 59,000 ಮತ್ತು ಸಿರಿಯಾದಲ್ಲಿ 8,000 ಜನರನ್ನು ಬಲಿತೆಗೆದುಕೊಂಡಿತು. ಇದು 1939 ರ ಬಳಿಕ ಟರ್ಕಿ ಕಂಡ ಅತ್ಯಂತ ಭೀಕರ ಭೂಕಂಪ ಎಂದು ಹೇಳಲಾಗಿದೆ.

X ಗೆ ಬದಲಾದ ಟ್ವಿಟರ್‌: ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ 2022ರಲ್ಲಿ ಟ್ವಿಟರ್ ಅನ್ನು ಖರೀದಿಸಿದ್ದರು. ಈ ವರ್ಷ ಅದರ ಹೆಸರನ್ನು “X” ಎಂದು ಬದಲಾಯಿಸಿದರು. ಅವರು 2022 ರ ಏಪ್ರಿಲ್‌ನಲ್ಲಿ ಟ್ವಿಟರ್‌ನ ಪ್ರತಿ ಷೇರಿಗೆ ನಿರ್ದಿಷ್ಟ ಬೆಲೆ ನೀಡಿ ಖರೀದಿಸುವುದಾಗಿ ಹೇಳಿದ್ದರು. ಆದರೆ ಜುಲೈ ವೇಳೆಗೆ ಅವರು ಈ ನಿರ್ಧಾರದಿಂದ ಹಿಂದೆ ಸರಿಯಲು ಬಯಸಿದ್ದರು. ಕೆಲವು ಏರಿಳಿತಗಳ ನಂತರ, ಅವರು ಅಕ್ಟೋಬರ್ 27, 2022 ರಂದು ಟ್ವಿಟರ್‌ಗೆ ಅಧಿಕೃತ ಮಾಲೀಕರಾದರು. ಜುಲೈ 2023 ರಲ್ಲಿ, ಮಸ್ಕ್ ಟ್ವಿಟರ್‌ನ್ನು “X” ಎಂದು ಕರೆಯಲು ಪ್ರಾರಂಭಿಸಿದ್ದಲ್ಲದೆ ಅದರ ಲೋಗೋವನ್ನೂ ಬದಲಾಯಿಸಿದರು.

ಹಮಾಸ್ ಇಸ್ರೇಲ್ ಮೇಲೆ ದಾಳಿ: ಅದು ಅಕ್ಟೋಬರ್ 7 ರ ಮುಂಜಾನೆ. ಇಸ್ರೇಲ್‌ನ ಪಕ್ಕದ ಪುಟ್ಟ ರಾಷ್ಟ್ರ ಪ್ಯಾಲೇಸ್ಟಿನಿಯನ್‌ನ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿತು. ಇದು ಜಗತ್ತಿನಲ್ಲಿ ತಲ್ಲಣವನ್ನು ಸೃಷ್ಟಿಸಿತು. 2022 ರ ರಷ್ಯಾ-ಯುಕ್ರೇನ್‌ ನಡುವಿನ ಯುದ್ಧದ ಭೀಕರತೆ ಮಾಸುವ ಮುನ್ನವೇ ಜಗತ್ತಿನ ಪ್ರಮುಖ ರಾಷ್ಟ್ರದ ಮೇಲೆ ಉಗ್ರಗಾಮಿ ಗುಂಪು ನಡೆಸಿದ ಈ ದಾಳಿ ಯುದ್ಧ ರೂಪಕ್ಕೆ ತಿರುಗಿ ಜಗತ್ತಿಗೆ ಮತ್ತೊಂದು ಆಘಾತವನ್ನಿಕ್ಕಿತು. ತನ್ನ ಮೇಲಿನ ದಾಳಿಯಿಂದಾಗಿ ಒಮ್ಮೆಗೆ ಬೆಚ್ಚಿಬಿದ್ದ ಪ್ರಪಂಚದ ಪ್ರಬಲ ಸೇನೆಯನ್ನು ಹೊಂದಿರುವ ದೇಶಗಳಲ್ಲೊಂದಾದ ಇಸ್ರೇಲ್‌ ಬಳಿಕ ಹಮಾಸ್‌ ಉಗ್ರರನ್ನು ಸಂಪೂರ್ಣ ನಾಶಗೊಳಿಸುವ ಪಣತೊಟ್ಟಿತು. ಹಮಾಸ್‌ ಉಗ್ರರ ಅಡಗುದಾಣ ಗಾಜಾ ಪಟ್ಟಿಯ ಮೇಲೆ ಸತತ ಕ್ಷಿಪಣಿ, ರಾಕೆಟ್‌ ದಾಳಿಗಳನ್ನು ನಡೆಸಿದ ಇಸ್ರೇಲ್‌ಗೆ ಇನ್ನೂ ಗಾಜಾ ಪಟ್ಟಿಯ ಮೇಲೆ ಸಂಪೂರ್ಣವಾಗಿ ತನ್ನ ಹಿಡಿತ ಸಾಧಿಸುವಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಈ ಯುದ್ದೋನ್ಮಾದ 2024 ಕ್ಕೂ ಮುಂದಡಿ ಇಡಲಿದೆ.

ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದ ಭಾರತ: 2023 ರಲ್ಲಿ, ಭಾರತವು ಚೀನಾವನ್ನು ಮೀರಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಯಿತು. UNFPA ವಿಶ್ವ ಜನಸಂಖ್ಯೆಯ ಸ್ಥಿತಿಯ ವರದಿಯ ಪ್ರಕಾರ ಭಾರತ ಈಗ ಅಂದಾಜು 1.43 ಶತಕೋಟಿ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮುಂಬರುವ ವರ್ಷಗಳಲ್ಲೂ ಭಾರತವೇ ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಉಳಿಯುವ ಸಾಧ್ಯತೆಯಿದೆ.

ಫ್ರೆಡ್ಡಿ ಚಂಡಮಾರುತ: 2023 ರ ಫೆಬ್ರವರಿ 5 ರಲ್ಲಿ ಪ್ರಾರಂಭವಾದ ಈ ಚಂಡಮಾರುತ ಸುಮಾರು ಮಾರ್ಚ್‌ 14 ರ ವರೆಗೆ ಮುಂದುವರೆದಿತ್ತು. ಇದು ಇತಿಹಾಸದಲ್ಲಿ ದೀರ್ಘಕಾಲ ದಾಖಲಾದ ಉಷ್ಣವಲಯದ ಚಂಡಮಾರುತವಾಗಿದೆ.  ಅಲ್ಲದೆ ಇದು 2019 ರ ಇಡೈ ಚಂಡಮಾರುತ, 1973 ರ ಫ್ಲೋರೆಸ್‌ ಚಂಡಮಾರುತದ ಬಳಿಕ ದಕ್ಷಿಣ ಗೋಳಾರ್ಧದಲ್ಲಿ ಸಂಭವಿಸಿದ ಅತ್ಯಂತ ಭೀಕರ ಚಂಡಮಾರುತ ಎಂಬುದಾಗಿ ದಾಖಲಿಸಲ್ಪಟ್ಟಿದೆ, ಮಲಾವಿ, ಮೊಜಾಂಬಿಕ್ ಮತ್ತು ನೈಋತ್ಯ ಆಫ್ರಿಕಾದ ಕೆಲವು ಭಾಗಗಳಲ್ಲಿ ತನ್ನ ಪ್ರಭಾವ ಬೀರಿದ್ದ ಫ್ರೆಡ್ಡಿ ಚಂಡಮಾರುತ 1,400 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ.

ಟೈಟಾನ್ ಸಬ್‌ಮರ್ಸಿಬಲ್ ಘಟನೆ: ಜೂನ್ 18, 2023 ರಂದು, ಸಾಗರ ಸಂಶೋಧನಾ ಕಂಪನಿ ಓಷ್ಯನ್‌ಗೇಟ್‌ ನಿರ್ಮಾಣದ ಟೈಟಾನ್ ಎಂಬ ಹೆಸರಿನ, ಐದು ಜನರನ್ನು ಹೊತ್ತಿದ್ದ ಸಬ್‌ಮರ್ಸಿಬಲ್ ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕರಾವಳಿಯ ಬಳಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಕಣ್ಮರೆಯಾಯಿತು. ಸಾಗರದೊಳಗೆ 12,000 ಅಡಿಗೂ ಹೆಚ್ಚು ಆಳಕ್ಕಿಳಿದ ಬಳಿಕ ಅಂದರೆ ಪ್ರಯಾಣ ಕೈಗೊಂಡ 1 ಗಂಟೆ 45 ನಿಮಿಷಗಳ ನಂತರ ʻಟೈಟಾನ್‌ʼ ತನ್ನ ಸಂವಹನ ಕಳೆದುಕೊಂಡಿತು. ಸಬ್ಮರ್ಸಿಬಲ್‌ನಲ್ಲಿ ಪ್ರಸಿದ್ಧ ಪ್ರವಾಸಿಗರಾದ ಹಮೀಶ್‌ ಹಾರ್ಡಿಂಗ್‌, ಪಾಕಿಸ್ತಾನ ಮೂಲದ ಉದ್ಯಮಿ ಶಹಜಾದಾ ದಾವೂದ್‌ ಮತ್ತು ಅವೆರ ಮಗ ಸುಲೇಮಾನ್‌ ದಾವೂದ್‌, ಟೈಟಾನಿಕ್‌ ತಜ್ಙ ಪಾಲ್‌- ಹೆನ್ರಿ ನಾರ್ಜಿಯೋಲೆಟ್‌ ಮತ್ತು ಸಬ್ಮರ್ಸಿಬಲ್‌ ಪೈಲಟ್‌, ಓಷಿಯನ್‌ಗೇಟ್‌ ಸಂಸ್ಥಾಪಕ ಸ್ಟಾಕ್‌ಟನ್‌ ರಷ್‌ ಪ್ರಯಾಣಿಸಿದ್ದರು. 1912 ರಲ್ಲಿ ಮುಳುಗಡೆಯಾದ ವಿಶ್ವಪ್ರಸಿದ್ಧ ಹಡಗು ʻಟೈಟಾನಿಕ್‌ʼನ ಅವಶೇಷಗಳನ್ನು ನೋಡುವ ಹಂಬಲದಿಂದ ಸಮುದ್ರದಾಳಕ್ಕೆ ಇಳಿದಿದ್ದ ಇವರೆಲ್ಲರೂ ʻಟೈಟಾನ್‌ʼ ಸ್ಪೋಟಗೊಂಡಿದ್ದರಿಂದಾಗಿ ಸಾವನ್ನಪ್ಪಿದ್ದರು. ವಿಶ್ವದ ಪರಿಣಿತ ರಕ್ಷಣಾ ತಂಡಗಳಿಂದ ಟೈಟಾನ್‌ನ ಶೋಧ, ರಕ್ಷಣಾ ಕಾರ್ಯಗಳು ನಡೆದವಾದರೂ ಜೂನ್‌ 22 ರಂದು ಟೈಟಾನ್‌ ಸಾಗರದಾಳದಲ್ಲಿ ಸ್ಪೋಟಗೊಂಡಿದೆ ಎಂಬುದನ್ನು ದೃಢಪಡಿಸಲಾಯಿತು. ಸ್ಪೋಟದ ಬಗ್ಗೆ ಹಲವಾರು ವಿಮರ್ಷೆಗಳು ನಡೆದಿದ್ದು ಈ ಬಗ್ಗೆ ಇನ್ನೂ ನಿಖರವಾದ ಕಾರಣ ಹೊರಬರದೇ ಇರುವುದು ಅಚ್ಚರಿಯೇ.

ಭಾರತದ G-20 ಆಯೋಜನೆ: 2023 ಭಾರತದ ವಿದೇಶಾಂಗ ವ್ಯವಹಾರಗಳ ಪಾಲಿಗೆ ಅತ್ಯಂತ ಮಹತ್ವದ ವರ್ಷವಾಗಿದೆ. ಜಗತ್ತಿನಲ್ಲಿ ತಾನೂ ಒಂದು ಪ್ರಭಾವಿ ರಾಷ್ಟ್ರ ಎಂಬ ಉದ್ದೇಶದಿಂದ ಮುನ್ನುಗ್ಗುತ್ತಿರುವ  ಭಾರತವು ತನ್ನ ಚೊಚ್ಚಲ G20 ನಾಯಕರ ಶೃಂಗಸಭೆಯನ್ನು ಸೆಪ್ಟೆಂಬರ್ 9-10 ರಂದು ಆಯೋಜಿಸಿತು. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಹೀಗೆ ಭಾರತದ ನಾನಾ ಕಡೆಗಳಲ್ಲಿ ಶೃಂಸಭೆಗಳು ಆಯೋಜನೆಗೊಂಡವು. ಇದು ಜಗತ್ತಿಗೆ ಭಾರತದ ಶಕ್ತಿಯನ್ನು ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾರತದಲ್ಲಿನ ಶೃಂಗಸಭೆಯಲ್ಲಿ ವಿಶ್ವದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಯುಎಸ್ ಅಧ್ಯಕ್ಷ ಬಿಡೆನ್, ಕೆನಡಾದ ಟ್ರುಡೊ ಮತ್ತು ಬ್ರಿಟಿಷ್ ಪಿಎಂ ರಿಷಿ ಸುನಕ್ ಸೇರಿದಂತೆ ವಿವಿಧ ಸರ್ಕಾರಗಳ 43 ಮುಖ್ಯಸ್ಥರೂ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.ವಿಶೇಷವೇನೆಂದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಅವರು ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದರು.

 

ಪಾಕಿಸ್ತಾನದಲ್ಲಿ ರಾಜಕೀಯ ಕೋಲಾಹಲ: 2022-2023 ರಲ್ಲಿ ಪಾಕಿಸ್ತಾನದಲ್ಲಿ ನಾಟಕೀಯ ಘಟನೆಗಳು ಸಂಭವಿಸಿವೆ. 2022 ರ ಏಪ್ರಿಲ್‌ನಲ್ಲಿ ನಡೆದ ಅವಿಶ್ವಾಸ ನಿರ್ಣಯದಲ್ಲಿ ಪಾಕಿಸ್ತಾನದ ಪಿಎಂ ಹುದ್ದೆಯಿಂದ ಇಮ್ರಾನ್‌ಖಾನ್‌ ಅವರನ್ನು ತೆಗೆದುಹಾಕಲಾಗಿತ್ತು. 2023 ರಲ್ಲೂ ಇಮ್ರಾನ್‌ ಅವರಿಗೆ ಸಂಕಷ್ಟ ತಪ್ಪಲಿಲ್ಲ. 2023 ರ ಮೇ 9 ರಂದು ಇಮ್ರಾನ್‌ ಖಾನ್‌ರನ್ನು ತೋಷಖಾನಾ ಪ್ರಕರಣದಲ್ಲಿ ಬಂಧಿಸಲಾಯಿತು. ಇಮ್ರಾನ್‌ ಮೇಲೆ ಪ್ರಧಾನಿಯಾಗಿದ್ದಾಗ ದುಬಾರಿ ಉಡುಗೊರೆಗಳ ಪಡೆದ ಆರೋಪವೂ ಇತ್ತು. ಇಮ್ರಾನ್‌ ಖಾನ್ ಅವರ ಬಂಧನದ ನಂತರ ಅವರ ಬೆಂಬಲಿಗರು ರಾವಲ್ಪಿಂಡಿಯಲ್ಲಿನ ಸೇನಾ ಪ್ರಧಾನ ಕಛೇರಿ ಮತ್ತು ಲಾಹೋರ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್ ನಿವಾಸವನ್ನು ಮುತ್ತಿಗೆ ಹಾಕಿದ್ದರು. ಇಮ್ರಾನ್‌ ಖಾನ್‌ ಬೆಂಬಲಿಗರು ಮತ್ತು ಸರ್ಕಾರದ ನಡುವಿನ ಘರ್ಷಣೆಗಳನ್ನು ಪಾಕಿಸ್ತಾನ ಕಂಡಿತು.ಈ ಮಧ್ಯೆ ಭ್ರಷ್ಟಾಚಾರ ಆರೋಪದಿಂದಾಗಿ ಲಂಡನ್‌ಗೆ ಪರಾರಿಯಾಗಿದ್ದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ನಾಲ್ಕು ವರ್ಷದ ಬಳಿಕ ಪಾಕಿಸ್ತಾನಕ್ಕೆ ಮರಳಿದ್ದಾರೆ. 2024ರ ಆರಂಭದಲ್ಲಿ ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವಂತೆಯೇ ನವಾಜ್‌ ಷರೀಫ್‌ ಅವರ ವಾಪಸಾತಿಯು ಪಾಕ್‌ ರಾಜಕೀಯದಲ್ಲಿ ಕಿಚ್ಚನ್ನು ಹಚ್ಚುವಂತೆ ಕಂಡುಬರುತ್ತದೆ.

ಲಿಬಿಯಾ ಪ್ರವಾಹ : ಸೆಪ್ಟೆಂಬರ್ 10 ಮತ್ತು 11, 2023 ರಂದು ಪೂರ್ವ ಲಿಬಿಯಾವನ್ನು ಅಪ್ಪಳಿಸಿದ ಭೀಕರ  ಪ್ರವಾಹ 5,000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತು. ಈ ಘಟನೆಯಲ್ಲಿ ಸುಮಾರು 10,000 ಕ್ಕೂ ಹೆಚ್ಚು ಜನರು ನಾಪತ್ತೆಯಾದರು. ಡೇನಿಯಲ್ ಚಂಡಮಾರುತದ ಪರಿಣಾಮ ಪ್ರವಾಹ ಉಂಟಾಗಿತ್ತು. ಲಿಬಿಯಾದಲ್ಲಿ ಉಂಟಾಗಿದ್ದ ಭಾರೀ ಮಳೆ ಪ್ರವಾಹ ಪರಿಸ್ಥಿತಿಯನ್ನು ತಂದೊಡ್ಡಿತು. ಮಾಮೂಲಿಗಿಂತ 25 ಪ್ರತಿಶತ ಹೆಚ್ಚು ಮಳೆಯಾದದ್ದು ಲಿಬಿಯಾಗೆ ಕಂಟಕವಾಗಿ ಪರಿಣಮಿಸಿತು. ಈ ಭೀಕರ ಮಳೆಯ ಪರಿಣಾಮವಾಗಿ ಭಾರೀ ಪ್ರಮಾಣದ ನೀರು ಮತ್ತು ಮಣ್ಣು ಹರಿದು  ಡರ್ನಾ ಮತ್ತು ಅಬು ಮನ್ಸೂರ್‌ ಎಂಬ ಎರಡು ದೊಡ್ಡ ಅಣೆಕಟ್ಟುಗಳು ನಾಶವಾಯಿತು. ಈ ಭೀಕರ ಪ್ರವಾಹ ಲಿಬಿಯಾವನ್ನು ನಾಶಗೊಳಿಸಿತಲ್ಲದೇ  ಪಕ್ಕದ ಗ್ರೀಸ್ , ಬಲ್ಗೇರಿಯಾ ಮತ್ತು ಪಶ್ಚಿಮ ಟರ್ಕಿಯಲ್ಲಿನ ಹಳ್ಳಿಗಳನ್ನೂ ಮುಳುಗಿಸಿತು .

~ ಪ್ರಣವ್‌ ಶಂಕರ್‌

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.