ಹಿಂದೂ ವ್ಯಕ್ತಿಯಿಂದ 30 ದಿನಗಳ ರಂಜಾನ್ ಉಪವಾಸ, ಸಾಮೂಹಿಕ ಪ್ರಾರ್ಥನೆ!
Team Udayavani, Apr 23, 2023, 6:51 PM IST
ಕುಷ್ಟಗಿ: ಮುಸ್ಲಿಮರು ಪವಿತ್ರ ರಂಜಾನ ಮಾಸವನ್ನು ಆಚರಿಸಿದಂತೆ ಹಿಂದೂ ವ್ಯಕ್ತಿ ಮುಸ್ಲಿಮರಂತೆ ಉಪವಾಸ (ರೋಜಾ) ಆಚರಿಸಿರುವುದು ಬೆಳಕಿಗೆ ಬಂದಿದೆ.
ಕುಷ್ಟಗಿಯ ಪ್ರಸನ್ನಕುಮಾರ ಹಿರೇಮಠ ಅವರು ರಂಜಾನ್ ಮಾಸ ಆರಂಭವಾದಾಗಿನಿಂದ ರಂಜಾನ ಮಾಸದ ಕೊನೆಯ 30 ದಿನಗಳವರೆಗೆ ಉಪವಾಸ ತಪ್ಪದೇ ಆಚರಿಸಿದ್ದಾರೆ. 1994ರಿಂದ ಪ್ರತಿ ವರ್ಷ 11 ದಿನ ಹಾಗೂ 21 ದಿನ ರೋಜಾ ಮಾಡುತ್ತಿದ್ದ ಪ್ರಸನ್ನಕುಮಾರಈ ಬಾರಿ ಬರೋಬ್ಬರಿ 30 ದಿನಗಳವರೆಗೆ ಆಚರಿಸಿದ್ದಾರೆ. ಅಲ್ಲದೇ ರಂಜಾನ್ ಹಬ್ಬದಂದು ಈದ್ಗಾದಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾನೆ.
ರಂಜಾನ ಮಾಸದಲ್ಲಿ ಪ್ರತಿ ನಿತ್ಯ ಸಂಜೆ ಜಾಮೀಯ ಮಸೀಧಿಗೆ ಹೋಗಿ ಮುಸ್ಲಿಂ ಸಮುದಾಯವರೊಂದಿಗೆ ಸಾಮೂಹಿಕ ಪ್ರಾರ್ಥನೆ ಬಳಿಕ, ಹಣ್ಣು, ಪಾನಕ ಲಘು ಉಪವಾಸ ಸೇವಿಸಿ ಉಪವಾಸ ಕೊನೆಗೊಳಿಸುತ್ತಿದ್ದ.
ಹಿಂದೂ, ಮುಸ್ಲಿಂ ಧರ್ಮಗಳ ಸಂಘರ್ಷದ ದಿನಮಾನದಲ್ಲಿ ಹಿಂದೂ ವ್ಯಕ್ತಿ ಸದ್ಯ ಬಿಜೆಪಿ ಕಾರ್ಯಕರ್ತನಾಗಿರುವ ಪ್ರಸನ್ನಕುಮಾರ ಹಿರೇಮಠ ಅವರು, ಜೀವಿತಾವಧಿಯವರೆಗೂ ಮುಸ್ಲಿಮರ ಪವಿತ್ರ ರಂಜಾನ ಮಾಸದಲ್ಲಿ ರೋಜಾ ಮಾಡುವುದು ಸಂಕಲ್ಪಿಸಿಕೊಂಡಿದ್ದಾರೆ.
———–
ರಂಜಾನ್ ಮಾಸದಲ್ಲಿ ಪ್ರತಿ ದಿನ ರೋಜಾದಿಂದ ನನ್ನ ಆರೋಗ್ಯ ಸ್ಥಿರವಾಗಿದೆ. ನನ್ನ ಸಂಕಲ್ಪದಿಂದ ತಾಯಿಯ ಆರೋಗ್ಯ ಸುಧಾರಿಸಿದೆ. ನನ್ನ ದೈನಂದಿನ ವ್ಯವಹಾರ ಸುಧಾರಣೆ ನನ್ನಲ್ಲಿ ಸಂತೃಪ್ತ ಭಾವನೆ ಬಂದಿದೆ. ನನ್ನ ತಾಯಿ, ಪತ್ನಿ ಸಹಕರಿಸಿ, ಪ್ರೋತ್ಸಾಹಿಸಿದರಲ್ಲದೇ, ಮನೆಯಲ್ಲಿ ಖುಷಿಯ ವಾತವರಣ ಇದೆ. ಇದಕ್ಕಿಂತ ಮಿಗಿಲಾಗಿ ಹಿಂದು-ಮುಸ್ಲಿಂ ಸೌಹಾರ್ಧಯುತಕ್ಕೆ ನನ್ನ ಕೈಲಾದ ಮಟ್ಟಿಗೆ ಅಳಿಲು ಸೇವೆ ಸಲ್ಲಿಸುತ್ತಿರುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.