ರಾಗಿಗೆ 3295 ರೂ. ಬೆಂಬಲ ಬೆಲೆ
ರೈತರ ಸಂಕಷ್ಟಕ್ಕೆಸರ್ಕಾರದ ಸ್ಪಂದನೆ
Team Udayavani, Jan 10, 2021, 8:45 PM IST
ವಿಜಯಪುರ: ಕೋವಿಡ್ ಕಾರಣದಿಂದ ಆದ ಲಾಕ್‌ಡೌನ್ ರೈತರಿಂದ ಹಿಡಿದು ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಜೀವನಕ್ಕೆ ಸಂಕಷ್ಟವಾಗಿತ್ತು. ರೈತ ಬೆಳೆದ ಫಸಲು ನೆಲಕಚ್ಚಿತ್ತು. ಲಾಕ್‌ಡೌನ್ ಆಗಿ ಕೂಲಿ ಕಾರ್ಮಿಕರು ಸಿಗದೆ ಕೈಗೆ ಬಂದ ದ್ರಾಕ್ಷಿ, ಗುಲಾಬಿ, ತರಕಾರಿ ಇನ್ನಿತರೆ ಬೆಳೆಗಳು ಮಣ್ಣುಪಾಲಾಗಿದ್ದರು. ಆದರೆ, ಈಗ ರಾಜ್ಯ ಸರ್ಕಾರದಿಂದ ರಾಗಿ ಬೆಳೆಗೆ ಸಿಕ್ಕ ಬೆಂಬಲ ಬೆಲೆಯಿಂದ ರೈತರಿಗೆ ಕೊಂಚ ನೆಮ್ಮದಿಯನ್ನು ತಂದಿದೆ.
ಜಿಲ್ಲಾಡಳಿತ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ಸರ್ಕಾರ 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿಸಲು ನೋಂದಣಿ ಮಾಡಿಸುವ ಬಗ್ಗೆ ರೈತರಿಗೆ ತಿಳಿಸಿದ್ದು, ಈ ವಿಚಾರವಾಗಿ ರೈತರು ಸಂತಸಗೊಂಡಿದ್ದಾರೆ.
ಹೆಸರು ನೋಂದಣಿ ಕಡ್ಡಾಯ: ಈ ಬಾರಿ ಉತ್ತಮ ಮಳೆಯಾಗಿ ರೈತರು ಬೆಳೆದ ರಾಗಿಗೆ ಬೆಂಬಲ ಬೆಲೆ ನೀಡಲು ಸರ್ಕಾರ ಮುಂದಾಗಿದ್ದು, ರೈತರಿಂದ ರಾಗಿಯನ್ನು ಖರೀದಿ ಮಾಡಲು ನೋಂದಣಿ ಕಾರ್ಯಕ್ಕೆ ದಿನಾಂಕ ನಿಗದಿ ಮಾಡಿದೆ. ಅದರಂತೆ ಜನವರಿ 31ರೊಳಗೆ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಖರೀದಿಯ ಕೊನೆಯ ದಿನಾಂಕ ಮಾರ್ಚ್ 15 ಎಂದು ತಿಳಿಸಲಾಗಿದೆ. ಆದ್ದರಿಂದ ತಾಲೂಕಿನ ರೈತರು ತಾವು ಬೆಳೆದ ರಾಗಿಯನ್ನು ಸರ್ಕಾರಕ್ಕೆ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಾವಣೆಯಲ್ಲಿ ಲೋಪದೋಷಗಳಿದ್ದರೂ ಸರಿಪಡಿಸಿಕೊಳ್ಳಲು ಅವಕಾಶವಿದೆ. 50 ಕ್ವಿಂಟಾಲ್‌ವರೆಗೆ ರಾಗಿ ಖರೀದಿ: ರೈತರು ಬೆಳೆದ ರಾಗಿಯನ್ನು 50 ಕ್ವಿಂಟಾಲ್‌ವರೆಗೆ ಸರ್ಕಾರ ಖರೀದಿ ಮಾಡಿದೆ.
ಅಂದರೆ 5 ಎಕರೆ ವಿಸ್ತೀರ್ಣದಲ್ಲಿ ಬೆಳೆದ ಬೆಳೆಯನ್ನು ಪರಿಗಣಿಸುವುದಾಗಿ ತಿಳಿಸಲಾಗಿದೆ. ವಿಜಯಪುರ ಹೋಬಳಿ ಭಾಗದಲ್ಲಿ ಅಂದಾಜು 2484 ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬೆಳೆದಿದ್ದಾರೆ. ಸ್ಥಳೀಯ ರೈತರನ್ನು ವಾಜಪೇಯಿ ಹುಟ್ಟು ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ರೈತ ಸಮಾವೇಶಕ್ಕೂ ಕರೆದುಕೊಂಡು ಹೋಗಿ ಕೃಷಿ ಮತ್ತು ಬೆಳೆಯಲು ಬಗ್ಗೆ ಮಾಹಿತಿ ನೀಡಲಾಗಿತ್ತು. ಈಗಾಗಲೇ ಕೃಷಿ ಅಧಿಕಾರಿಗಳು ರೈತರ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ರಾಗಿ ಬೆಳೆದ ರೈತರ ಸರ್ವೆ ಮಾಡುತ್ತಿದ್ದು, ರಾಗಿ ಖರೀದಿ, ಬೆಂಬಲ ಬೆಲೆ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.
ಇದನ್ನೂ ಓದಿ:ದೆಹಲಿ ಭೇಟಿ ತೃಪ್ತಿ ನೀಡಿದೆ : ಆದಷ್ಟು ಬೇಗ ಶುಭ ಸುದ್ದಿ ಸಿಗಲಿದೆ : ಬಿಎಸ್ ವೈ
ರೈತರಿಗೆ ಅನುಕೂಲ: ಸರ್ಕಾರ ಒಂದು ಕ್ವಿಂಟಾಲ್ ರಾಗಿಗೆ 3295 ರೂ. ಬೆಂಬಲ ಬೆಲೆ ನೀಡುತ್ತಿರುವುದು ನಿಜಕ್ಕೂ ಸಂತಸಕರ ವಿಷಯ. ಕಳೆದ ಸಾಲಿನಲ್ಲಿ ರಾಗಿ ಬೆಳೆ ಉತ್ತಮವಾಗಿದ್ದರೂ ಹರಾಜಿನಲ್ಲಿ ಬಹಳ ಕಡಿಮೆ ಬೆಲೆಗೆ ಮಾರಿ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಸರ್ಕಾರ ರಾಗಿ ಬೆಳೆದ ರೈತರಿಗೆ ಅನುಕೂಲವಾಗುವ ಯೋಜನೆ
ಕೈಗೊಂಡಿದ್ದಾರೆ. ಈ ಬಾರಿ ರಾಗಿಯ ಗುಣಮಟ್ಟವೂ ಚೆನ್ನಾಗಿದೆ. ಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲು ಸರ್ಕಾರ ಹೇಳಿದಂತೆ ರೈತರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕಾರ್ಡ್ ವಿತರಿಸಿ, ರಾಗಿ ಖರೀದಿಸುವ ದಿನಾಂಕ ನಿಗದಿ ಮಾಡುತ್ತಾರೆ. ಫೆಬ್ರವರಿಯಲ್ಲಿ ದೇವನಹಳ್ಳಿಯ ನಿಗದಿತ ಗೋದಾಮಿನಲ್ಲಿ ರಾಗಿಯನ್ನು ಖರೀದಿಸಿ ಶೇಖರಿಸಿ, ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ನಾವು ಬೆಳೆದ ರಾಗಿ ಸುಮಾರು 25 ಕ್ವಿಂಟಾಲ್‌ನಷ್ಟಿದೆ. ಹರಾಜಿನಲ್ಲಿ ಮಾರುತ್ತಿದ್ದ ರಾಗಿ ಬೆಳೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿತ್ತು. ಸರ್ಕಾರ ಕ್ವಿಂಟಾಲ್‌ಗೆ 3295 ರೂ. ಬೆಂಬಲ ಬೆಲೆ ಘೋಷಿಸಿರುವುದು ರೈತರ ಶ್ರಮಕ್ಕೆ ಸಿಕ್ಕ ಫಲವಾಗಿದೆ.
ಅರುಣ್ ಕುಮಾರ್ ಎಂ, ರೈತ, ಗೊಡ್ಲು ಮುದ್ದೇನಹಳ್ಳಿ
ಅಕ್ಷಯ್. ವಿ. ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.