ಒಂದೇ ದಿನ 3,900 ಹೊಸ ಪ್ರಕರಣ
ರಾಜ್ಯ ದತ್ತಾಂಶ ವಿಳಂಬವೇ ಏರಿಕೆಗೆ ಕಾರಣ: ಕೇಂದ್ರ ಆರೋಗ್ಯ ಸಚಿವಾಲಯ ಆರೋಪ
Team Udayavani, May 6, 2020, 6:20 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ/ ಬೆಂಗಳೂರು: ದೇಶದಲ್ಲಿ ಮಂಗಳವಾರ ಕೋವಿಡ್-19 ಪೀಡಿತರ ಸಂಖ್ಯೆ ದಿಢೀರ್ ಹೆಚ್ಚಳ ವಾಗಿದೆ. 24 ತಾಸುಗಳಲ್ಲಿ 3,900 ಮಂದಿಗೆ ಸೋಂಕು ದೃಢಪಟ್ಟಿದ್ದು, 195 ಮಂದಿ ಸಾವಿಗೀಡಾಗಿದ್ದಾರೆ.
ಈ ಆತಂಕಕಾರಿ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರ ಹಾಕಿದೆ. ಒಂದೇ ದಿನ ಇಷ್ಟೊಂದು ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು.ಕೆಲವು ರಾಜ್ಯಗಳು ಸಮಯಕ್ಕೆ ಸರಿಯಾಗಿ ಕೋವಿಡ್-19 ಪ್ರಕರಣಗಳ ಮಾಹಿತಿ ನೀಡುತ್ತಿಲ್ಲ. ನಿಗದಿತ ಸಮಯಕ್ಕೆ ಅಂಕಿಅಂಶಗಳನ್ನು ನೀಡಿದರಷ್ಟೇ ನಿರ್ವಹಣೆ ಸುಲಭವಾಗುತ್ತದೆ. ಈಗ ಕೆಲವು ರಾಜ್ಯಗಳು ಏಕಾಏಕಿ ಮಾಹಿತಿ ಕೊಟ್ಟ ಕಾರಣ ಒಂದೇ ದಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಸೋಂಕುಪೀಡಿತರು ಗುಣಮುಖ ರಾಗುವ ಪ್ರಮಾಣ ಶೇ.27.41ಕ್ಕೆ ಏರಿಕೆಯಾಗಿದೆ ಎಂದೂ ತಿಳಿಸಿದ್ದಾರೆ.
ಐದು ದಿನ; ಮೂರು ಬಲಿ
ಕರ್ನಾಟಕದಲ್ಲಿ ಕೋವಿಡ್-19 ಪೀಡಿತರ ಸಾವಿನ ಸರಣಿ ಮುಂದು ವರಿದಿದ್ದು, ಮಂಗಳವಾರ ದಾವಣಗೆರೆ ಮತ್ತು ವಿಜಯಪುರಗಳಲ್ಲಿ ತಲಾ ಒಬ್ಬ ಸೋಂಕುಪೀಡಿತ ಮಹಿಳೆ ಸಾವಿಗೀಡಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 29ಕ್ಕೆ ಏರಿದೆ. ಕಳೆದ ಐದು ದಿನಗಳಲ್ಲಿ ದಾವಣ ಗೆರೆಯಲ್ಲೇ ಮೂವರು ಸಾವನ್ನಪ್ಪಿದಂತಾಗಿದೆ. ಈ ಮಧ್ಯೆ ರಾಜ್ಯದ ವಿವಿಧೆಡೆ 22 ಮಂದಿಗೆ ಸೋಂಕು ತಗಲಿದ್ದು, ಒಟ್ಟಾರೆ ಸೋಂಕು ತಗಲಿದವರ ಸಂಖ್ಯೆ 673ಕ್ಕೆ ತಲುಪಿದೆ. ದಾವಣಗೆರೆ ಯಲ್ಲೇ ಮಂಗಳವಾರ ಮತ್ತೆ 12 ಮಂದಿಗೆ ಕೋವಿಡ್-19 ದೃಢವಾಗಿದೆ.
ದ.ಕ.: ಮತ್ತೂಬ್ಬರಿಗೆ ಸೋಂಕು
ಮಂಗಳೂರು: ನಗರದ ಬೋಳೂರಿನ ಮತ್ತೂಬ್ಬರಲ್ಲಿ ಕೋವಿಡ್-19 ದೃಢ ಪಟ್ಟಿದೆ. ಇದು ಜಿಲ್ಲೆಯಲ್ಲಿ 25ನೇ ಕೋವಿಡ್-19 ಪ್ರಕರಣ. ಈ ಹಿಂದೆ ಬೊಳೂರಿನ ದಂಪತಿಯಲ್ಲಿ ಕೋವಿಡ್-19 ದೃಢವಾಗಿದ್ದು, ಮಂಗಳವಾರ ಪಾಸಿಟಿವ್ ಬಂದಾತ ಈ ದಂಪತಿಯ ಅಳಿಯ. ಈ ಮನೆಯ ಇನ್ನೂ ಇಬ್ಬರ ಪರೀಕ್ಷಾ ವರದಿಗಾಗಿ ಕಾಯುಲಾಗುತ್ತಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 10 ಕೋವಿಡ್-19 ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಎಂಟು ಮಂದಿಯ ಸ್ಥಿತಿ ತೃಪ್ತಿಕರವಾಗಿದೆ. ಇಬ್ಬರು ರೋಗಿಗಳ ಸ್ಥಿತಿ ಸ್ವಲ್ಪ ಗಂಭೀರವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.