40 Years Of Service: ಭೂಸೇನಾ ನೂತನ ಮುಖ್ಯಸ್ಥರಾಗಿ ಲೆ.ಜ. ಉಪೇಂದ್ರ ದ್ವಿವೇದಿ ನೇಮಕ
ದ್ವಿವೇದಿ ಅವರು ಹಲವಾರು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
Team Udayavani, Jun 12, 2024, 10:39 AM IST
ನವದೆಹಲಿ: ಜಗತ್ತಿನ ಅತೀ ದೊಡ್ಡ ಮಿಲಿಟರಿ ಪಡೆಗಳಲ್ಲಿ ಒಂದಾದ ಭಾರತದ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕಗೊಂಡಿದ್ದಾರೆ. ಸದ್ಯ ಭೂಸೇನೆ ಉಪ ಮುಖ್ಯಸ್ಥರಾಗಿರುವ ಅವರು ಜೂ.30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ:Bantwala: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
ಜನರಲ್ ಮನೋಜ್ ಸಿ.ಪಾಂಡೆ ಅವರು ಜೂನ್ 30ರಂದು ಸೇವೆಯಿಂದ ನಿವೃತ್ತರಾಗಲಿದ್ದು, ಅಂದು ಲೆ.ಜ. ಉಪೇಂದ್ರ ದ್ವಿವೇದಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿ ವಿವರಿಸಿದೆ.
ಲೆ.ಜ.ಉಪೇಂದ್ರ ದ್ವಿವೇದಿ ಹಿನ್ನೆಲೆ:
1964ರ ಜುಲೈ 1ರಂದು ಉಪೇಂದ್ರ ದ್ವಿವೇದಿ ಜನಿಸಿದ್ದು, ಸೈನಿಕ್ ಶಾಲೆ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜು ಮತ್ತು ಅಮೆರಿಕದ ಆರ್ಮಿ ವಾರ್ ಕಾಲೇಜ್ ನಲ್ಲಿ ಶಿಕ್ಷಣ ಪಡೆದಿದ್ದರು. ಡಿಫೆನ್ಸ್ & ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಎಂ.ಫಿಲ್ ಪಡೆದಿದ್ದು, ಜೊತೆಗೆ ಎರಡು ಮಾಸ್ಟರ್ ಪದವಿ ಗಳಿಸಿದ್ದಾರೆ.
1984ರ ಡಿಸೆಂಬರ್ 15ರಂದು ದ್ವಿವೇದಿ ಅವರು ಭಾರತೀಯ ಸೇನೆಯ ಜಮ್ಮು-ಕಾಶ್ಮೀರ ರೈಫಲ್ಸ್ ಪದಾತಿಗಳಕ್ಕೆ ನೇಮಕಗೊಂಡಿದ್ದರು. ಸುದೀರ್ಘ 40ವರ್ಷಗಳ ಸೇವೆಯಲ್ಲಿ ದ್ವಿವೇದಿ ಅವರು ಹಲವಾರು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಜಮ್ಮು-ಕಾಶ್ಮೀರ್ ರೈಫಲ್ಸ್ ನ ಕಮಾಂಡ್ ಆಫ್ ರೆಜಿಮೆಂಟ್ಸ್, ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಇನ್ಸ್ ಪೆಕ್ಟರ್ ಜನರಲ್ ಸೇರಿದಂತೆ ವಿವಿಧ ಹುದ್ದೆಗಳನ್ನು ದ್ವಿವೇದಿ ಅಲಂಕರಿಸಿದ್ದರು.
ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು 2022-2024ರ ಅವಧಿವರೆಗೆ ಡೈರೆಕ್ಟರ್ ಜನರಲ್ ಇನ್ ಫ್ಯಾಂಟ್ರಿ & ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸಿದ್ದರು.
ಉಪೇಂದ್ರ ದ್ವಿವೇದಿ ಅವರ ಸೇವೆಯನ್ನು ಪರಿಗಣಿಸಿ ಪರಂ ವಿಶಿಷ್ಠ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.