ಟೋಕಿಯೊ ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯಾದಿಂದ 472 ಕ್ರೀಡಾಳುಗಳು
Team Udayavani, Jul 6, 2021, 12:25 AM IST
ಮೆಲ್ಬರ್ನ್ : ಟೋಕಿಯೊ ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯದ 472 ಕ್ರೀಡಾಳುಗಳ ಬೃಹತ್ ದಂಡು ಪಾಲ್ಗೊಳ್ಳಲಿದೆ. 2004ರ ಅಥೇನ್ಸ್ ಒಲಿಂಪಿಕ್ಸ್ ಬಳಿಕ ಆಸ್ಟ್ರೇಲಿಯ ರವಾನಿಸುತ್ತಿರುವ ದೊಡ್ಡ ತಂಡ ಇದಾಗಿದೆ. ಅಂದು 482 ಕ್ರೀಡಾಪಟುಗಳು ತೆರಳಿದ್ದರು.
ವಿಶೇಷವೆಂದರೆ, ಆಸೀಸ್ ತಂಡದಲ್ಲಿ ವನಿತಾ ಕ್ರೀಡಾಳುಗಳೇ ಜಾಸ್ತಿ ಇರುವುದು.ಇವರ ಸಂಖ್ಯೆ 254. ಪುರುಷ ಕ್ರೀಡಾಪಟುಗಳ ಸಂಖ್ಯೆ 218. ವಿಶ್ವದ ನಂ. 1 ಟೆನಿಸ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಈ ತಂಡದ ಪ್ರಮುಖ ಸದಸ್ಯೆ.
ಆಸ್ಟ್ರೇಲಿಯ ಒಟ್ಟು 33 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿ ನೂತನವಾಗಿ ಸೇರ್ಪಡೆಗೊಳಿಸಲಾದ ಕರಾಟೆ, ಸ್ಕೇಟ್ ಬೋರ್ಡಿಂಗ್, ನ್ಪೋರ್ಟ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಸ್ಪರ್ಧೆಗಳಲ್ಲೂ ಸ್ಪರ್ಧಿಸಲಿದೆ. ಅತ್ಯಧಿಕ 63 ಕ್ರೀಡಾಪಟುಗಳು ಆ್ಯತ್ಲೆಟಿಕ್ಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.
ಇದನ್ನೂ ಓದಿ :ಐಸಿಸಿ ಸೀಮಿತ ಓವರ್‌ಗಳ ಕ್ರಿಕೆಟ್ ಆತಿಥ್ಯಕ್ಕೆ ಭಾರತ ಸೇರಿ 17 ದೇಶಗಳ ಆಸಕ್ತಿ
66 ವರ್ಷದ ಕುದುರೆ ಸವಾರೆ!
66 ವರ್ಷದ ಕುದುರೆ ಸವಾರೆ ಮೇರಿ ಹನ್ನಾ ಈ ತಂಡದ ಅತೀ ಹಿರಿಯ ಕ್ರೀಡಾಪಟು. ಅವರಿಗೆ ಇದು 6ನೇ ಒಲಿಂಪಿಕ್ಸ್ ಆಗಿದೆ. ಮತ್ತೋರ್ವ ಕುದುರೆ ಸವಾರ ಆ್ಯಂಡ್ರೂé ಹೋಯ್ ಕೂಡ ಈ ತಂಡದಲ್ಲಿದ್ದು, ಅವರಿಗೆ ಇದು 8ನೇ ಒಲಿಂಪಿಕ್ಸ್ ಪಂದ್ಯಾವಳಿ ಆಗಿರುವುದು ವಿಶೇಷ. ಒಲಿಂಪಿಕ್ಸ್‌ನಲ್ಲಿ 3 ಚಿನ್ನ, ಒಂದು ಬೆಳ್ಳಿ ಪದಕ ಗೆದ್ದಿರುವುದು ಹೋಯ್ ಹೆಗ್ಗಳಿಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.