11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ
Team Udayavani, Jan 16, 2022, 8:25 PM IST
ಕುಷ್ಟಗಿ: ಕುಷ್ಟಗಿಯ ಹನ್ನೊಂದು ವರ್ಷದ ಅವಳಿ ಸಹೋದರರು ಭಾರ ಎತ್ತುವ ಸಾಹಸ ಪ್ರದರ್ಶನದಲ್ಲಿ 50 ಕೆ.ಜಿ. ಚೀಲ ಎತ್ತುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ.
ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದ ನಿವಾಸಿ ಮರಸಣ್ಣಭೀ. ತಾಳದ ಅವರ ಅವಳಿ ಮಕ್ಕಳಾದ ಅಜಯ್- ವಿಜಯ್ ಇಲ್ಲಿನ ಅಜಯ್ ಅಕ್ಷರ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾರೆ.
ಭಾನುವಾರ ನಡೆದ ರಾಯಚೂರ ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ 50 ಕೆ.ಜಿ. ಧಾನ್ಯ ದ ಚೀಲ ಎತ್ತುವ ಮೂಲಕ ಅಲ್ಲಿದ್ದವರನ್ನು ನಿಬ್ಬೇರಗಾಗಿಸಿದ್ದಾರೆ.
ಹನ್ನೊಂದು ವರ್ಷದ ಅವಳಿ ಸಹೋದರರು ತಮ್ಮ ಸಾಮಾರ್ಥ್ಯ ಮೀರಿ 50 ಕೆಜಿ ಭಾರ ಎತ್ತಿದ್ದಾರೆ. ಯುವಕರನ್ನು ನಾಚಿಸುವಂತೆ 50 ಕೆ.ಜಿ. ಭಾರವನ್ನು ಎತ್ತುವಾಗ ತಿಣಕಾಡುವ ಇಂದಿನ ದಿನಮಾನಗಳಲ್ಲಿ 50 ಕೆ.ಜಿ. ಭಾರವನ್ನು ಈ ಅವಳಿ ಸಹೋದರರು, ಸಲೀಸಾಗಿ ಎತ್ತಿ ಭಾರ ಎತ್ತುವ ಕ್ರೀಡೆಯಲ್ಲಿ ಭವಿಷ್ಯದ ಕ್ರೀಡಾಪಟುಗಳ ಭರವಸೆ ಮೂಡಿಸಿದ್ದಾರೆ.
ಅಜಯ್- ವಿಜಯ್ ಅವಳಿ ಸಹೋದರರು, ಫಿಟ್ನೆಸ್ ಗೆ ಆದ್ಯತೆ ನೀಡಿದ್ದು, ದಿನವೂ ಕಸರತ್ತಿನ ವ್ಯಾಯಾಮದಲ್ಲಿನಿರತರಾಗಿದ್ದು ಸದಾ ಲವಲವಿಕೆಯಂದಿದ್ದಾರೆ. ಈ ಅವಳಿ ಸಹೋದರರ ಭಾರ ಎತ್ತಿದ ಭೀಮಣ್ಣನ ಮೊಮ್ಮಕ್ಕಳ ಸಹಾಸ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 20% ಸಮೀಪಕ್ಕೆ : ಇಂದು 13 ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.