ಒಂದು ಸೆಕೆಂಡ್‌ಗೆ 50,000 ಸಿನೆಮಾ ಡೌನ್ ಲೋಡ್…!
Team Udayavani, Jul 20, 2021, 7:15 AM IST
ಹೊಸದಿಲ್ಲಿ: ಒಂದು ಸೆಕೆಂಡ್‌ಗೆ 50,000 ಸಿನೆಮಾ ಡೌನ್ ಲೋಡ್…! ಹೌದು, ಜಪಾನ್‌ನ ರಾಷ್ಟ್ರೀಯ ಮಾಹಿತಿ, ಸಂಪರ್ಕ ತಂತ್ರಜ್ಞಾನ ಸಂಸ್ಥೆ ವಿಶ್ವದಾಖಲೆಯನ್ನೇ ಸೃಷ್ಟಿ ಮಾಡಿದ್ದು, ಒಂದು ಸೆಕೆಂಡ್‌ಗೆ 319 ಟೆರ್ರಾಬೈಟ್ ವೇಗವನ್ನು ದಾಖಲು ಮಾಡಿದೆ. ಇದು ಈಗಿರುವ ಇಂಟರ್ನೆಟ್ ವೇಗದ ದಾಖಲೆಯ ದುಪ್ಪಟ್ಟಾಗಿದೆ. ಇದುವರೆಗೆ ಲಂಡನ್‌ನ ಯೂನಿವರ್ಸಿಟಿ ಕಾಲೇಜು 178 ಟೆರ್ರಾಬೈಟ್ ವೇಗದ ವಿಶ್ವದಾಖಲೆ ಬರೆದಿತ್ತು.
ಏನಿದು ಇಂಟರ್ನೆಟ್ ವೇಗ?: ಇಂದಿನ ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಈ ಇಂಟರ್ನೆಟ್ ವೇಗವೇ ಆಧಾರ. ನಮ್ಮ ಕೆಲಸಗಳು ಬೇಗನೆ ಆಗಬೇಕು ಎಂದಾದಲ್ಲಿ ಇಂಟರ್ನೆಟ್ ವೇಗ ಹೆಚ್ಚಾಗಿಯೇ ಇರಬೇಕು. ಇಂಟರ್ನೆಟ್ ಆರಂಭದ ಕಾಲದಲ್ಲಿ ಕೆಬಿಪಿಎಸ್ ನಲ್ಲಿ (ಪ್ರತೀ ಸೆಕೆಂಡಿಗೆ ಕಿಲೋಬೈಟ್)ಸಿಗುತ್ತಿತ್ತು. ಈಗ ಭಾರತದಲ್ಲಿ ಎಂಬಿಪಿಎಸ್ ನಲ್ಲಿ ವೇಗ ಸಿಗುತ್ತಿದೆ.
ಸಾಮಾನ್ಯವಾಗಿ ನಾವು ಡೌನ್ ಲೋಡ್ ಲೆಕ್ಕಾಚಾರದಲ್ಲಿ ಇಂಟರ್ನೆಟ್ ವೇಗವನ್ನು ಅಳೆಯುತ್ತೇವೆ. ಅಂದರೆ, ಒಂದು ಸಿನೆಮಾ ಡೌನ್ ಲೋಡ್ ಆಗಲು ಎಷ್ಟು ಸಮಯ ಬೇಕು ಎನ್ನುವ ಲೆಕ್ಕಾಚಾರದಲ್ಲಿ. ಈಗ 50 ಎಂಪಿಬಿಎಸ್ ಲೆಕ್ಕದಲ್ಲಿ ಒಂದು ಜಿಬಿ ಸಾಮರ್ಥ್ಯವಿರುವ ಒಂದು ಸಿನಿಮಾ ಡೌನ್ ಲೋಡ್ ಆಗಲು 3 ರಿಂದ 5 ನಿಮಿಷ ಸಾಕು. ಕೆಲವೊಮ್ಮೆ ಒಂದೇ ನಿಮಿಷಕ್ಕೂ ಡೌನ್ ಲೋಡ್ ಆಗಬಹುದು.
ಏನಿದು ಟಬಿಪಿಎಸ್?
ಜಪಾನ್ ನಲ್ಲಿ ಈಗ ಅಭಿವೃದ್ಧಿಪಡಿಸಿರುವ ಇಂಟರ್ನೆಟ್ ವೇಗವನ್ನು ಲೆಕ್ಕಕ್ಕೆ ಇರಿಸಿಕೊಳ್ಳುವುದಾದರೆ, ಒಂದು ಸೆಕೆಂಡ್‌ಗೆ ಸುಮಾರು 50 ಸಾವಿರ ಸಿನೆಮಾಗಳನ್ನು ಡೌನ್ ಲೋಡ್ ಮಾಡಬಹುದು. ಹಾಗೆಯೇ ನೆಟ್ ಫ್ಲಿಕ್ಸ್ ನಲ್ಲಿರುವ ಎಲ್ಲ ಸಿನೆಮಾಗಳನ್ನೂ ಒಂದೇ ಸೆಕೆಂಡ್ ನಲ್ಲಿ ನಿಮ್ಮ ಮೊಬೈಲ್‌ಗೆ ಡೌನ್ ಲೋಡ್ ಮಾಡಿಕೊಳ್ಳಬಹುದು! ಅಂದರೆ, 50 ಸಾವಿರ ಸಿನೆಮಾಗಳು ಒಂದೇ ಫೋಲ್ಡರ್ ನಲ್ಲಿದ್ದು, ಅದರ ಮೇಲೆ ಒಂದು ಕ್ಲಿಕ್ ಮಾಡಿದರೆ ಸಾಕು, ಅಷ್ಟೂ ಒಂದೇ ಬಾರಿಗೆ ನಿಮ್ಮ ಕಂಪ್ಯೂಟರ್‌ಗೆ ಬಂದು ಬೀಳುತ್ತವೆ.
ಲೆಕ್ಕಾಚಾರ
ಟೆರ್ರಾ ಬೈಟ್(ಟಿಬಿಪಿಎಸ್) ಅಂದರೆ 1000 ಗಿಗಾಬೈಟ್
1 ಗಿಗಾಬೈಟ್ ಎಂದರೆ 1025 ಮೆಗಾಬೈಟ್(ಎಂಬಿಪಿಎಸ್)
ಭಾರತದಲ್ಲಿನ ವೇಗ
ಬ್ರಾಂಡ್ ಬ್ಯಾಂಡ್ ಆಗಿದ್ದರೆ, 38.19 ಎಂಬಿಪಿಎಸ್
ಮೊಬೈಲ್ ಆಗಿದ್ದರೆ 12.16 ಎಂಬಿಪಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.