Fraud: ವಿಮೆ ಹಣದ ಹೆಸರಲ್ಲಿ 74,500 ರೂ. ವಂಚನೆ
Team Udayavani, Jul 12, 2023, 5:52 AM IST
ಮಂಗಳೂರು: ವಿಮೆ ಯೋಜನೆಯ ಮೆಚ್ಯುರಿಟಿ ಹಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ 74,500 ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರ ಪತಿ ವಿಮಾ ಕಂಪೆನಿಯೊಂದರಲ್ಲಿ ಪಾಲಿಸಿ ಮಾಡಿಸಿಕೊಂಡಿದ್ದು, 2017ರಲ್ಲಿ ಅದರ ಅವಧಿ ಮುಗಿದಿತ್ತು. ವಿದೇಶದಲ್ಲಿದ್ದ ಕಾರಣ ಅವರು ಈ ಕುರಿತು ಹೆಚ್ಚು ಗಮನ ಹರಿಸಿರಲಿಲ್ಲ. ಅಲ್ಲಿಂದ ಮರಳಿದ ಹಿನ್ನೆಲೆಯಲ್ಲಿ ಜು. 5ರಂದು ವಿಮಾ ಕಂಪೆನಿಯ ಈ ಮೇಲ್ ಐಡ್ ಸರ್ಚ್ ಮಾಡಿ ಅದಕ್ಕೆ ವಿಮೆಗೆ ಸಂಬಂಧಿಸಿದ ಪೂರ್ಣ ವಿವರಗಳನ್ನು ಮೇಲ್ ಮಾಡಿದ್ದರು.
ಜು. 9ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ವಿಮಾ ಕಂಪೆನಿ ಕಡೆಯಿಂದ ಮಾತನಾಡುತ್ತಿದ್ದು, ವಿಮೆಯ ಮೊತ್ತವನ್ನು ಪಡೆಯಬೇಕಿದ್ದರೆ ಮುಂಗಡವಾಗಿ 75 ಸಾವಿರ ರೂ. ಪಾವತಿಸಬೇಕು ಎಂದನು. ಇದನ್ನು ನಂಬಿದ ಅವರು ಆತ ತಿಳಿಸಿದ ಖಾತೆಗೆ 74,500 ರೂ. ಹಣ ವರ್ಗಾವಣೆ ಮಾಡಿದರು. ಬಳಿಕ ಆತನಿಂದ ಯಾವುದೇ ಮಾಹಿತಿ ಇಲ್ಲ. ಈ ರೀತಿ ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.