ಶೇ. 80 ಜಪಾನೀಯರಿಂದಲೇ ಒಲಿಂಪಿಕ್ಸ್ ಗೆ ವಿರೋಧ!
Team Udayavani, May 18, 2021, 6:50 AM IST
ಟೋಕಿಯೊ: ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ನಡೆದೀತೇ ಇಲ್ಲವೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸಂಘಟಕರೇನೋ ಇದನ್ನು ನಡೆಸಿಯೇ ಸಿದ್ಧ ಎಂಬ ಉಮೇದಿನಲ್ಲಿದ್ದಾರೆ. ಆದರೆ ಕಳೆದ ಶುಕ್ರವಾರ ಜಪಾನ್ನಲ್ಲಿ ಕೊರೊನಾ ತುರ್ತುಸ್ಥಿತಿ ವಿಸ್ತರಿಸಿದ ಬಳಿಕ ಅಲ್ಲಿನ ಜನರಿಂದ ಈ ಕ್ರೀಡಾಕೂಟಕ್ಕೆ ಇನ್ನೂ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗತೊಡಗಿದೆ.
ಸೋಮವಾರ ಇಲ್ಲಿನ “ಅಸಾಹಿ ಶಿಂಬುನ್’ ದೈನಿಕ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇ. 43ರಷ್ಟು ಜಪಾನಿಯರು ಒಲಿಂಪಿಕ್ಸ್ ರದ್ದುಗೊಳಿಸಿ ಎಂದು ಆಗ್ರಹಿಸಿದ್ದಾರೆ. ಶೇ. 40 ಮಂದಿ ಇದನ್ನು ಮತ್ತೆ ಮುಂದೂಡುವುದೇ ಕ್ಷೇಮ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಕಸ್ಮಾತ್ ಒಲಿಂಪಿಕ್ಸ್ ನಡೆದರೆ ವೀಕ್ಷಕರಿಗೆ ಅವಕಾಶ ಕಲ್ಪಿಸಬಾರದು ಎಂಬುದು ಶೇ. 59ರಷ್ಟು ಜಪಾನಿಯರ ಅನಿಸಿಕೆ.
ಹೆಚ್ಚಿದ “ವಿರೋಧಿ’ಗಳು
ಒಂದು ತಿಂಗಳ ಹಿಂದೆ ಇದೇ ಪತ್ರಿಕೆ ನಡಿಸಿದ ಸಮೀಕ್ಷೆಯಲ್ಲಿ ಶೇ. 35 ಮಂದಿ ಮಾತ್ರ ಒಲಿಂಪಿಕ್ಸ್ ರದ್ದುಗೊಳಿಸಿ ಎಂದು ಆಗ್ರಹಿಸಿದ್ದರು. ಈಗ ಇಂಥವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಗಮನಿಸಿಬಹುದು. ಜಪಾನ್ ಈಗ 4ನೇ ಕೊರೊನಾ ಅಲೆಯ ವಿರುದ್ಧ ಹೋರಾಡುತ್ತಿದೆ.
ಸ್ಪಷ್ಟ ನಿರ್ಧಾರ: ಫೆಡರರ್ ಆಗ್ರಹ
ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಕ್ರೀಡಾಪಟುಗಳಿಗೆ ಸ್ಪಷ್ಟ ನಿರ್ಧಾರವೊಂದನ್ನು ತಿಳಿಸಬೇಕಾದುದು ಅತ್ಯಗತ್ಯ ಎಂಬುದಾಗಿ ಟೆನಿಸಿಗ ರೋಜರ್ ಫೆಡರರ್ ಗ್ರಹಿಸಿದ್ದಾರೆ. ಕ್ರೀಡಾಳುಗಳಲ್ಲಿ ಯಾವುದೇ ಗೊಂದಲ, ದ್ವಂದ್ವ ಇರಬಾರದು. ಇದರಿಂದ ಅವರ ಸಿದ್ಧತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದಾಗಿ ಫೆಡರರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.