ಸೇತುವಾಗಲಿ ಸಂಸ್ಕೃತ, ಪ್ರಾಕೃತ
Team Udayavani, Feb 6, 2020, 7:07 AM IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದರು.
ಇಂಗ್ಲಿಷ್, ಹಿಂದಿ ಹೇರಿಕೆಗೆ ಸಮ್ಮೇಳನಾಧ್ಯಕ್ಷ ಎಚ್ಚೆಸ್ವಿ ಪ್ರತ್ಯಸ್ತ್ರ
ಪರಿಸರದ ಭಾಷೆ ಕನ್ನಡ, ವ್ಯವಹಾರಕ್ಕಷ್ಟೆ ಇರಲಿ ಇಂಗ್ಲಿಷ್
ಶ್ರೀವಿಜಯ ಮಹಾವೇದಿಕೆ (ಕಲಬುರಗಿ): ದೇಶದುದ್ದಗಲ ಮೆರೆಯುತ್ತಿರುವ ಹಿಂದಿ, “ವಿಶ್ವಮೇಧ’ ಹೊರಟಿರುವ ಇಂಗ್ಲಿಷ್ ಕುದುರೆಗಳನ್ನು ಕಟ್ಟಿಹಾಕುವ ಸಿಂಹನಾದ ಇಲ್ಲಿ ಬುಧವಾರ ಆರಂಭಗೊಂಡ 85ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಹೊಮ್ಮಿತು. ಹಿಂದಿ ಹೇರಿಕೆಯ ಧೋರಣೆಗೆ ಪ್ರತ್ಯಸ್ತ್ರವಾಗಿ ದೇಶಕ್ಕೆ ಸಂಸ್ಕೃತ ಇಲ್ಲವೇ ಪ್ರಾಕೃತ ಜನಸಂಪರ್ಕ ಸೇತುವಾಗಲಿ ಎನ್ನುವ ನಿಲುವನ್ನು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಎತ್ತಿಹಿಡಿದರು.
ದೇಶದ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ. ಭಾರತದ ಒಗ್ಗೂಡುವಿಕೆ ಮತ್ತು ಪ್ರಾಂತ್ಯಗಳ ನಡುವೆ ವ್ಯವಹಾರಕ್ಕೆ ನಿರ್ದಿಷ್ಟ ಪ್ರದೇಶದ ಭಾಷೆಯಾಗಿರುವ ಹಿಂದಿ ಬೇಕಿಲ್ಲ. ಯಾವುದೇ ಭಾಗಕ್ಕೆ ಸೀಮಿತ ವಾಗದ, ಭಾರತದ ಜೀವಾಳ ವಾಗಿದ್ದ ಸಂಸ್ಕೃತ ಅಥವಾ ಪ್ರಾಕೃತಕ್ಕೆ ಸೇತು ಭಾಷೆಯ ಮಾನ್ಯತೆ ಸಿಗಲಿ. ಅವುಗಳ ಪುನರುತ್ಥಾನವನ್ನು ಬಹುವಾರ್ಷಿಕ ಯೋಜನೆಯಾಗಿ ಸಂಕಲ್ಪಿಸಬೇಕು. ಯಹೂದಿಗಳು ಯಿದ್ದಿಶ್ ಭಾಷೆಯನ್ನು ಮೇಲೆತ್ತಿದಂತೆ, ಆ ಕೆಲಸ ಆಗಲಿ ಎಂದು ಎಚ್ಚೆಸ್ವಿ ಆಶಿಸಿದರು. ಇಂಗ್ಲಿಷ್ ಬಗ್ಗೆ ಕವಿ ಪುತಿನ ಮಾತಿಗೆ ತಮ್ಮದೇ ನಿಲುವು ಜೋಡಿಸಿದ ಎಚ್ಚೆಸ್ವಿ, ಇಂಗ್ಲಿಷ್‌ನಲ್ಲೇ ಎಲ್ಲ ಪಠ್ಯ ಕಲಿಯುವ ಹೊರೆ ಬಗ್ಗೆ ಆಕ್ಷೇಪಿಸಿದರು. ಕನ್ನಡ ಪರಿಸರ ಭಾಷೆಯಾಗಿರಲಿ, ವ್ಯವಹಾರಕ್ಕೆ ಬೇಕಾದ ಇಂಗ್ಲಿಷನ್ನು ಭಾಷಾ ಶಿಬಿರಗಳಲ್ಲಿ ಕಲಿಯಬಹುದು. ಅಮೆರಿಕನ್ ಇಂಗ್ಲಿಷ್ ಇದ್ದಂತೆ, ಅದು ಭಾರತೀಯ ನಾಲಗೆಗೆ ಒಗ್ಗುವ “ಇಂಡಿಯನಿಂಗ್ಲಿಷ್’ ಆಗಬೇಕು ಎಂದರು.
ಔದ್ಯೋಗಿಕ ಕ್ಷೇತ್ರಗಳಲ್ಲಿ ಕನ್ನಡ
ಎಚ್ಚೆಸ್ವಿ ಮಾತುಗಳಲ್ಲಿ ವಲಸಿಗರಿಗೂ ಪಾಠವಿತ್ತು. ಕರ್ನಾಟಕಕ್ಕೆ ಬಂದು ವ್ಯವಹರಿಸುತ್ತಿರುವ ಅನ್ಯಭಾಷಿಕರು ಪಂಪ, ಕುಮಾರವ್ಯಾಸ, ಬಸವೇಶ್ವರರನ್ನು ಓದುವಷ್ಟು ಭಾಷಾ ಪ್ರಾವೀಣ್ಯ ಪಡೆಯುವುದು ಇಂದಿನ ಅನಿವಾರ್ಯತೆ. ನಮ್ಮ ರೈತರು, ಕಾರ್ಮಿಕರು ಬ್ಯಾಂಕು- ಮಾಲುಗಳಲ್ಲಿ ವಲಸಿಗರ ಭಾಷೆಗೆ ಹಾರುವ ಬದಲು, ಅವರೊಂದಿಗೆ ಪರಿಸರದ ಭಾಷೆ ಕನ್ನಡದಲ್ಲಿಯೇ ಸಂವಾದಿಸಬೇಕು. ಔದ್ಯೋಗಿಕ ಕ್ಷೇತ್ರಗಳಲ್ಲಿ ಕನ್ನಡ ಕಲಿಕಾ ಕ್ರಾಂತಿ ಆಗಬೇಕು ಎಂದು ಬಯಸಿದರು.
ತುಳು- ಕೊಂಕಣಿ ಅನುವಾದ ಯೋಜನೆ
ಕರುನಾಡಿನ ತುಳು, ಕೊಂಕಣಿ ಮೊದಲಾದ ಉಪಭಾಷೆಗಳಲ್ಲಿ ನಿರ್ಮಿತವಾದ ಸಾಹಿತ್ಯವು ಕನ್ನಡ ಭಾಷೆಗೆ ತರ್ಜುಮೆಗೊಂಡು, ಕರ್ನಾಟಕ ಸಾಹಿತ್ಯ ಕಲಾಭಿವ್ಯಕ್ತಿಯ ಸಮಗ್ರ ಚಿತ್ರಣ ದೊರಕುವಂತಾಗಲು ಅನುವಾದ ಯೋಜನೆಯನ್ನು ಕೈಗೊಳ್ಳಬೇಕು. ಕನ್ನಡ ಸಾಹಿತ್ಯ ಆಗ ಕರ್ನಾಟಕ ಸಾಹಿತ್ಯವಾಗುತ್ತದೆ. ಹೃದಯ ಹಿಗ್ಗುವಿಕೆ ದೇಹಶಾಸ್ತ್ರದಲ್ಲಿ ದೋಷ. ಆದರೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಅದು ಉಪಾಧೇಯ ಎಂದು ವ್ಯಾಖ್ಯಾನಿಸಿದರು.
ಶಿಕ್ಷಣ ಸಂಸ್ಥೆಗಳ ಮುಖವಾಡ
ಶಿಕ್ಷಣ ಸಂಸ್ಥೆಗಳು, ಹಣವನ್ನು ದ್ವಿಗುಣವಾಗಿಸಲು ವಕ್ರೋಪಾಯದಲ್ಲಿ ತೊಡಗಿವೆ. ಮಗು ತನ್ನ ಪರಿಸರ ಭಾಷೆಯಲ್ಲಿ ಮಾತ್ರವೇ ಲೋಕಾಕೃತಿಯನ್ನು ಗ್ರಹಿಸುತ್ತದೆ. ಆದರೆ ಈ ಸಂಸ್ಥೆಗಳು ಮುಖವಾಡದ ಮಾತುಗಳನ್ನಾಡಿ ಇಂಗ್ಲಿಷ್ ಮಾಧ್ಯಮದ ಗಾತ್ರವನ್ನು ಹಿಗ್ಗಿಸುತ್ತಿವೆ. ರೈತರು ಇಂಗ್ಲಿಷಿನ ಹಂಗಿಲ್ಲದೆ ಅನ್ನ ಬೆಳೆಯುವುದಿಲ್ಲವೇ? ಕನ್ನಡಿಗರಿಗೆ ಸಿಂಹಪಾಲು ಔದ್ಯೋಗಿಕ ಮೀಸಲಾತಿಯನ್ನು ಅಳವಡಿಸಿದರೆ, ಕನ್ನಡವೇ ಅನ್ನಭಾಷೆಯಾಗುತ್ತದೆ ಎಂದು ಸಲಹೆ ನೀಡಿದರು. ಸರಕಾರ ಹಠಕ್ಕೆ ಬಿದ್ದು ಸ್ಥಾಪಿಸಿದ ಇಂಗ್ಲಿಷ್ ಶಾಲೆಗಳ ಕಥೆ ಏನಾಯಿತು? ಮಕ್ಕಳು ಶಾಲೆ ಬಿಡುವ ಪ್ರಮಾಣ ಹೆಚ್ಚಾಗುತ್ತಿದೆ. ಮಕ್ಕಳು ನಿಸ್ತೇಜರು, ನಿರ್ವೀರ್ಯರು ಆಗುತ್ತಿದ್ದಾರೆ ಎಂದು ವಿಷಾದಿಸಿದರು.
ಐಟಿ ವಂಚಕರಿಗೆ ಚಾಟಿ
ಐಟಿಗಳ ಹದ್ದಿನ ಕಣ್ಣನ್ನು ತಪ್ಪಿಸಿ ನಗನಿಕ್ಷೇಪಗಳು ಕತ್ತಲ ರಕ್ಷಾ ಕೋಣೆಗಳಲ್ಲಿ ವೃದ್ಧಿಸುತ್ತಲೇ ಇವೆ. ಸಂಪತ್ತು ನಾಚಿಕೆಯ ಸಂಗತಿಯಾಗದೆ ನಾಡಿನ ಉದ್ಧಾರವಿಲ್ಲ. ಬಡವ- ಬಲ್ಲಿದರ ನಡುವೆ ಕಂದರ ನಿತ್ಯ ವಿಸ್ತರಿಸುತ್ತಿದೆ. ಪರಿಸರ ಲೂಟಿ ಮಾಡಿ, ಖನಿಜ ಸಂಪತ್ತನ್ನು ಕಬಳಿಸುವವರಿಗೆ ಭವಿಷ್ಯದ ಚಿಂತೆಯೇ ಕಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮೇಳನ ಸ್ವಾರಸ್ಯಗಳು
ಮೊಬೈಲ್‌ನೊಳಗೆ “ಐಕ್ಯ’ರಾದರು!
ಸಮ್ಮೇಳನ ವೇದಿಕೆಯ ಸನಿಹದಲ್ಲಿಯೇ ಐಕ್ಯಮಂಟಪ ನಿರ್ಮಿಸಲಾಗಿತ್ತು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನ ಇದನ್ನು ವಿಶ್ರಾಂತಿ ತಾಣವನ್ನಾಗಿ, ಸೆಲ್ಫಿ ಪಾಯಿಂಟ್ ಆಗಿ ಮಾರ್ಪಡಿಸಿಕೊಂಡರು. ಮತ್ತೆ ಅನೇಕರು ಇಲ್ಲಿ ಮೊಬೈಲ್‌ನಲ್ಲಿ ಚಾಟ್ ಮಾಡುವುದರಲ್ಲಿ ನಿರತರಾಗಿದ್ದ ದೃಶ್ಯ ಕಂಡುಬಂದಿತ್ತು. ಮೊಬೈಲ್ ಒಳಗೆ ಐಕ್ಯರಾಗುವ ಈಗಿನ ಯುವಜನತೆಯ ಮುಂದೆ ಐಕ್ಯಮಂಟಪ ಬೇರೆಯದ್ದೇ ಧ್ವನಿ ಹೊಮ್ಮಿಸುತ್ತಿತ್ತು.
ಕುರಿ, ಶೈನ್… ಹೌದು ಸ್ವಾಮಿ!
ಪಂಪ, ರನ್ನ, ಕುವೆಂಪು, ಬೇಂದ್ರೆಯ ಹೆಸರು ಮೊಳಗಿದ ಜಾಗದಲ್ಲಿ ಕುರಿ ಪ್ರತಾಪ್, ಶೈನ್ ಶೆಟ್ಟಿಯ ಹೆಸರುಗಳೂ ಮೊಳಗಿದ ದೃಶ್ಯ ಕಂಡುಬಂತು. ಬಿಗ್‌ಬಾಸ್ ಮುಗಿದು ಮೂರ್‍ನಾಲ್ಕು ದಿನಗಳೇ ಆದರೂ ಆ ಕುರಿತು ಚರ್ಚೆಗಳು ನಿಂತಿರಲಿಲ್ಲ. ಕುರಿ ಪ್ರತಾಪ್ ಗೆಲ್ಲಬೇಕಿತ್ತು. ಎಲ್ಲ ಸೇರಿ ಮೋಸ ಮಾಡಿದರು ಎನ್ನುವ ಮಾತುಗಳು ಕೆಲವು ಯುವಕರ ಚರ್ಚೆಗೆ ಕಾರಣವಾಗಿತ್ತು.
ಗಗನಸಖಿ-ಜಟಾಯು-ಸಂಪಾತಿ…
ವಿಮಾನದಲ್ಲಿ ಅವಘಡ ಸಂಭವಿಸಿದರೆ ನಿಮ್ಮನ್ನು ನೀವು ಮೊದಲು ಸಂರಕ್ಷಿಸಿಕೊಳ್ಳಿ ಎನ್ನುವ ಸೂಚನ ಪತ್ರ ನೋಡಿರ ಬಹುದು. ಬದುಕು ತನಗಾಗಿ ಅಲ್ಲ, ಇತರರಿಗಾಗಿ ಎನ್ನುವ ಭಾರತೀಯ ತತ್ತ Ìದ ವಿರುದ್ಧ ನಿಯಮವಿದು. ಈ ಹೊತ್ತಿನಲ್ಲಿ ಸಂಪಾತಿ- ಜಟಾಯು ನೆನಪಾಗುತ್ತಿದ್ದಾರೆ. ರಾಮಾಯಣದಲ್ಲಿ ಜಟಾಯು ತನ್ನಣ್ಣ ಸಂಪಾತಿಯನ್ನು ಮೀರಿಸಬೇಕೆಂಬ ಜಿದ್ದಿನಲ್ಲಿ ಸೂರ್ಯನ ಸಮೀಪಕ್ಕೆ ಹಾರುತ್ತಾನೆ. ಅವನನ್ನು ರಕ್ಷಿಸುವುದ ಕ್ಕಾಗಿ ಸಂಪಾತಿ ರೆಕ್ಕೆ ಹರಡುತ್ತಾನೆ. ತಮ್ಮ ಕ್ಷೇಮ ವಾಗಿ ಉಳಿದ, ಅಣ್ಣ ರೆಕ್ಕೆ ಸೀದು ಭೂಮಿಗೆ ಬಿದ್ದ. ಆಧುನಿಕ ಲೋಹದ ಹಕ್ಕಿಯ ಸೂಚನೆ ಸಂಪಾತಿಯ ನಿಲುವಿಗೆ ತದ್ವಿರುದ್ಧ ಎನ್ನುತ್ತ ಎಚ್ಚೆಸ್ವಿಯವರು ಇಂದಿನ ಬದಲಾದ ಮನಃಸ್ಥಿತಿಯನ್ನು ಚಿತ್ರಿಸಿದರು.
ಭ್ರಮೆ ಬಿತ್ತುವ ಸಿನೆಮಾ ಪಾತ್ರಗಳು
ಕಲಾತ್ಮಕ ಚಿತ್ರಗಳ ಬಿಡುಗಡೆಗಾಗಿ ಪ್ರತಿ ಜಿಲ್ಲೆಯಲ್ಲೂ ಕಿರು ಚಿತ್ರಮಂದಿರ ನಿರ್ಮಾಣ ಸರಕಾರದ ಜವಾಬ್ದಾರಿ ಆಗಬೇಕು. ಬೆಂಗಳೂರಿನ ಪುಟ್ಟಣ್ಣ ಕಣಗಾಲ್ ಚಿತ್ರ ಮಂದಿರ ಇದಕ್ಕಾಗಿ ಮತ್ತೆ ಆರಂಭ ವಾಗಬೇಕು. ಭ್ರಮೆ, ಕ್ರೌರ್ಯ ಬಿತ್ತುವ ಪಾತ್ರಗಳು; ಕಣ್ಣುಕುಕ್ಕುವ ವೈಭವ, ಕುಣಿತದ ಹಾಡು ಕನ್ನಡದ ಆತ್ಮವನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಎಚ್ಚೆಸ್ವಿ ವಿಷಾದಿಸಿದರು.
ಕ್ರಿಕೆಟ್ ಅಂಗಣದಲ್ಲಿ ನಮ್ಮ ಅನಿಲ್ ಕುಂಬ್ಳೆ , ರಾಹುಲ್ ದ್ರಾವಿಡ್ ಕನ್ನಡದಲ್ಲಿ ಕೆಲವು ತುಂಡು ಮಾತುಗಳನ್ನು ಆಡಿದಾಗ ರೋಮಾಂಚನವಾಗುತ್ತದೆ. ಜೀವನದ ಎಲ್ಲ ರಂಗದ ನಾಯಕರೂ ಕನ್ನಡದಲ್ಲಿಯೇ ಜೀವಿಸಬೇಕು.
– ಎಚ್.ಎಸ್. ವೆಂಕಟೇಶಮೂರ್ತಿ, ಸಮ್ಮೇಳನಾಧ್ಯಕ್ಷ
– ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.