ಕಲ್ಯಾಣಕ್ಕೆ ಭರವಸೆ; ಸಮ್ಮೇಳನಕ್ಕೆ ತೆರೆ
ಗಡಿ ಪ್ರದೇಶದ ಕನ್ನಡ ಶಾಲೆ ಮುಚ್ಚದಂತೆ ಕ್ರಮಕ್ಕೆ ಆಗ್ರಹ
Team Udayavani, Feb 8, 2020, 7:05 AM IST
ಕಲಬುರಗಿ: “ಭಾಷಾ ಸಂಘರ್ಷದಿಂದ ನಲುಗಿರುವ ಗಡಿ ಪ್ರದೇಶಗಳ ಶಾಲೆ ಮುಚ್ಚಬೇಡಿ, ಕನ್ನಡ ನಿಮ್ಮ ಜತೆಗಿದೆ’ ಎಂಬ ಭರವಸೆಯೊಂದಿಗೆ 85ನೇ ಅಖೀಲ ಭಾರತ ಕನ್ನಡ ಸಮ್ಮೇಳನ ಸಂಪನ್ನಗೊಂಡಿದೆ.
ಮಹಾಜನ ವರದಿ ಅನುಷ್ಠಾನ, ಮಹಾದಾಯಿ ವಿಚಾರದಲ್ಲಿ ಕಾಲು ಕೆದರಿಕೊಂಡು ಬರುತ್ತಿರುವ ಮಹಾರಾಷ್ಟ್ರದ ನಡೆ ಖಂಡಿಸುವುದೂ ಸೇರಿದಂತೆ ಆರು ನಿರ್ಣಯಗಳನ್ನು ಸಮ್ಮೇಳನ ತೆಗೆದುಕೊಂಡಿತು. ಕಸಾಪ ಅಧ್ಯಕ್ಷ, ನಾಡೋಜ ಡಾ| ಮನು ಬಳಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ 6 ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ನೆರೆಯ ಆಂಧ್ರದ ಕನ್ನಡ ಶಾಲೆಗಳು ಮಾತ್ರವಲ್ಲದೆ, ಇತರ ರಾಜ್ಯಗಳಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ರಕ್ಷಿಸಬೇಕು, ಈ ಮೂಲಕ ಕನ್ನಡ ಉಳಿಸಿ ಬೆಳೆಸಬೇಕು ಎಂದು ಒತ್ತಾಯಿಸಲಾಯಿತು. ಶಾಲೆಗಳಿದ್ದರಷ್ಟೇ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಸಮ್ಮೇಳನದ ನಿರ್ಣಯದಲ್ಲಿ ಅಭಿಪ್ರಾಯಪಡಲಾಯಿತು.
ನಿರ್ಣಯಗಳೇನು?
1. ಮಹಾಜನ ವರದಿ ಅನುಷ್ಠಾನ ಮತ್ತು ವಿವಾದ ಅಂತ್ಯ
2. ಗಡಿವಿವಾದ ಕೆದಕುವ ಮಹಾರಾಷ್ಟ್ರದ ಉದ್ಧಟತನಕ್ಕೆ ಖಂಡನೆ.
3. ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು.
4. 371 ಜೆ ವಿಧಿ ಕಲಂ ಅಡಿಯಲ್ಲಿನ ಲೋಪದೋಷಗಳನ್ನು ಶೀಘ್ರವಾಗಿ ನಿವಾರಿಸುವುದರ ಜತೆಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ, ಪ್ರಾದೇಶಿಕ ಅಸಮತೋಲನ ನಿವಾರಣೆಯ
ಡಾ| ಡಿ.ಎಂ. ನಂಜುಡಪ್ಪ ಅನುಷ್ಠಾನ ವರದಿ ಜಾರಿಯ ತಾರತಮ್ಯ ನಿವಾರಣೆ.
5. ಕಲ್ಯಾಣ ಕರ್ನಾಟಕದ ಐತಿಹಾಸಿಕ ಸ್ಮಾರಕಗಳನ್ನು ಕಾಲಮಿತಿಯೊಳಗೆ ಅಭಿವೃದ್ಧಿ.
ಹಣಮಂತರಾವ್ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.