A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ವಾಜಪೇಯಿ ಜನ್ಮಶತಮಾನೋತ್ಸವ: ಕವಿ ಹೃದಯದ ರಾಜಕಾರಣಿ, ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂದ ಆಡಳಿತಗಾರ

Team Udayavani, Dec 25, 2024, 7:40 AM IST

AB-Vajapaee

ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರು ತಮ್ಮ ಮೌಲ್ಯಾಧಾರಿತ ರಾಜಕಾರಣ, ಮುತ್ಸದ್ದಿತನ, ದೂರದೃಷ್ಟಿಯಿಂದ ವಿಶಿಷ್ಟವಾಗಿ ನಿಲ್ಲುತ್ತಾರೆ. ದೇಶವೇ ಮೊದಲು ಎಂದು ನಂಬಿದ ತತ್ತ್ವಾದರ್ಶಕ್ಕೆ ಬದ್ಧರಾಗಿ ರಾಜಕಾರಣ ನಡೆಸುತ್ತಾ ಬಂದ ಅಟಲ್‌ ಅವರ 100ನೇ ಜನ್ಮದಿನವಿಂದು. ಅವರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಅಟಲ್‌ ಅವರ ವಿವಿಧ ಮುಖಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

1. ಸಾಹಿತ್ಯದ ಕಂಪು ಬೀರಿದ ಕವಿ
ಕವಿತೆಗಳು ಸದಾ ನಮ್ಮ ಕರ್ತೃತ್ವ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಹೆಚ್ಚಿಸಬೇಕು ಎಂಬುದು ವಾಜ­ಪೇಯಿ ಅವರ ನಿಲುವು. ದೇಶದ ಸಂಸ್ಕೃತಿ, ಚರಿತ್ರೆ, ಧಾರ್ಮಿಕತೆ, ರಾಷ್ಟ್ರೀಯತೆ ಮುಂತಾದ ಸಂಗತಿಗಳು ಅವರ ಕವನಗಳಲ್ಲಿ ಕಾಣಬಹುದು. ರಾಜಕಾರಣ ಹಾಗೂ ಸಾಹಿತ್ಯ ಪ್ರತ್ಯೇಕವಲ್ಲ, ಪರಸ್ಪರ ಪೂರಕ ಎಂಬುದು ಅವರ ಅಚಲ ನಿಲುವು. ಕವಿತೆಗಳಿಲ್ಲದೇ ಅವರ ಭಾಷಣ­ಗಳೇ ಇರುತ್ತಿ­ರಲಿಲ್ಲ.

1964ರಲ್ಲಿ ನೆಹರೂ ತೀರಿಕೊಂಡಾಗ, ವಾಜಪೇಯಿ ಕವನದ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದ್ದರು. “ಭಾರತ ಮಾತೆ ದುಃಖಿತಳಾಗಿದ್ದಾಳೆ, ಅವಳ ಪ್ರೀತಿಯ ರಾಜಕುಮಾರ ಚಿರನಿದ್ರೆಗೆ ಜಾರಿದ್ದಾನೆ’ ಎಂಬ ಕವಿತೆ, ನೆರೆದಿದ್ದ ಜನರನ್ನು ಮಂತ್ರಮುಗ್ಧಗೊಳಿಸಿತ್ತು. 1996, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ, “ಹಾರ್‌ ನಹೀ ಮಾನೂಂಗಾ, ರಾರ್‌ ನಹೀ ಠಾನೂಂಗಾ, ಕಾಲ್‌ ಕೆ ಕಪಾಲ್‌ ಪರ್‌ ಲಿಖ್‌ತಾ ಮಿಟಾತಾ ಹೂಂ, ಗೀತ ನಯಾ ಗಾತಾ ಹೂಂ’ ಎಂಬ ಕವಿತೆ ಹೇಳಿ, ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದರು. “ಜೀತಾ ಜಾಗತಾ ರಾಷ್ಟ್ರಪುರುಷ’, “ಝುಕಾ ನಹೀಂ ಸಕ್ತೆ’, “ಏ ವಂದನ್‌ ಕೀ ಧರತಿ’ ಮುಂತಾದ ಅವರ ಕವಿತೆಗಳು ಬಹಳ ಪ್ರಸಿದ್ಧಿಗೊಂಡಿವೆ.

2. ಪತ್ರಕರ್ತರಾಗಿಯೂ ಮೇಲ್ಪಂಕ್ತಿ
ಸಕ್ರಿಯ ರಾಜಕಾರಣಕ್ಕೆ ಬರುವ ಮೊದಲು, 4 ವರ್ಷ­ಗಳ ಕಾಲ ವಾಜಪೇಯಿ ಪತ್ರಕರ್ತರಾಗಿದ್ದರು. 1947­ರಲ್ಲಿ ಲಕ್ನೋದಲ್ಲಿ ಆರಂಭವಾದ “ರಾಷ್ಟ್ರಧರ್ಮ’ ಮಾಸ ಪತ್ರಿಕೆ­ಯಲ್ಲಿ ಅವರ ಪತ್ರಿಕಾ ವೃತ್ತಿ ಆರಂಭಗೊಂಡಿತ್ತು. ಪತ್ರಿಕೆಯ ಸಂಪಾದಕರಾಗಿ ಪ್ರತಿನಿತ್ಯ ಅಧ್ಯಯನ, ಸಂಶೋ­ಧನೆ, ಲೇಖನ ಬರೆಯುವುದು ಅವರ ಕಾಯಕವಾ­ಗಿತ್ತು. ಕೆಲ­ವೊಂದು ಸಂದರ್ಭಗಳಲ್ಲಿ ಸ್ವತಃ ಅವರೇ ಅಕ್ಷರಗಳ ಕಂಪೋ­ಸಿಂಗ್‌, ಪ್ರೂಫ್ ನೋಡುವುದು, ಮುದ್ರಣ ಯಂತ್ರದ ಕೆಲಸಗ­­ ಳನ್ನೂ ಮಾಡಿ­ದ್ದುಂಟು. “ರಾಷ್ಟ್ರಧರ್ಮ’ ಜತೆಗೆ “ಪಾಂಚಜನ್ಯ’ ವಾರ ಪತ್ರಿಕೆ, “ಸ್ವದೇಶ’ ದಿನಪತ್ರಿಕೆಯ ಹೊಣೆಗಾರಿಕೆ ಹೊತ್ತಿದ್ದ ವಾಜಪೇಯಿ, ಪತ್ರಿಕೆಗಳ ಮೂಲಕ ಜನರಲ್ಲಿ ರಾಷ್ಟ್ರಭಾವದ ಜಾಗೃತಿ ಮೂಡಿಸಿದ್ದರು.

3. ಅಸ್ಖಲಿತ ವಾಗ್ಮಿ ವಾಜಪೇಯಿ
ಸದನವೇ ಆಗಲಿ, ಸದನದ ಹೊರಗೆ ಆಗಲಿ ವಾಜಪೇಯಿ ಮಾತು ಸ್ಫಟಿಕದ ಸಲಾಕೆಯಂತಿರುತ್ತಿತ್ತು. ತಮ್ಮ ಭಾಷಣದಿಂದಲೇ ಜನರನ್ನು ಆಕರ್ಷಿಸುತ್ತಿದ್ದರು. ಶಾಲಾ ದಿನಗಳಿಂದಲೇ ಅವರೊಬ್ಬ ಅಸ್ಖಲಿತ ವಾಗ್ಮಿ. ಈ ಕೌಶಲದ ಹಿಂದೆ ಅವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಾರ್ಗ­ದರ್ಶನವಿತ್ತು. ಅವರ ಭಾಷಣದಲ್ಲಿ ಕವಿತೆ, ಹಾಸ್ಯ ಚಟಾಕಿಗಳು ಹದವಾಗಿರುತ್ತಿದ್ದವು. 1957ರಲ್ಲಿ ಸಂಸತ್ತಿಗೆ ಮೊದಲ ಬಾರಿ ಪ್ರವೇಶಿಸಿದ ವಾಜಪೇಯಿ, ಉತ್ಕೃಷ್ಟ ಭಾಷಣ ಮಾಡಿದ್ದರು. ಅದನ್ನು ಕೇಳಿದ ಆಗಿನ ಪ್ರಧಾನಿ ನೆಹರೂ, ವಾಜಪೇಯಿ ಮುಂದೊಂದು ದಿನ ಪ್ರಧಾನಿಯಾಗಬಹುದು ಎಂದಿದ್ದರಂತೆ. 1977ರಲ್ಲಿ ವಿದೇಶಾಂಗ ಸಚಿವರಾಗಿ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾಡಿದ ಭಾಷಣ, 1996ರಲ್ಲಿ 14 ದಿನಗಳ ಪ್ರಧಾನಮಂತ್ರಿಯಾಗಿ ರಾಜೀನಾಮೆ ನೀಡುವ ಸಂದರ್ಭದಲ್ಲಿ ಮಾಡಿದ ಭಾಷಣಗಳನ್ನು ಇಂದಿಗೂ ಅನೇಕರು ಸ್ಮರಿಸುತ್ತಾರೆ.

4. ಅಚಲ ರಾಜಕೀಯ ಸಿದ್ಧಾಂತಿ
ರಾಜಕೀಯದಲ್ಲಿ ಮತ ಭೇದವಿರಬಹುದು. ಆದರೆ ಮನ ಭೇದವಿರಬಾರದು ಎಂದು ಅಟಲ್‌ ಆಗಾಗ ಹೇಳುತ್ತಿದ್ದರು. ಆರೆಸ್ಸೆಸ್‌ ಹಿನ್ನೆಲೆಯಿಂದ ಜನ ಸಂಘದ ಮೂಲಕ ರಾಜಕೀಯಕ್ಕೆ ಬಂದ ವಾಜಪೇಯಿ, ರಾಷ್ಟ್ರೀಯತೆ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಟಿಡಿಪಿ, ಜೆಡಿಯು, ಶಿವಸೇನೆ ಮುಂತಾದ 24 ಭಿನ್ನ ವಿಚಾರಗಳ ಪಕ್ಷಗಳನ್ನು ಒಗ್ಗೂಡಿಸಿ, ಎನ್‌ಡಿಎ ಒಕ್ಕೂಟದ ನಾಯಕರಾದಾಗಲೂ ವಾಜಪೇಯಿ, ಸಿದ್ಧಾಂತದ ವಿಚಾರದಲ್ಲಿ ಎಂದೂ ರಾಜೀ ಆಗಲಿಲ್ಲ. ಎಲ್ಲರೊಂದಿಗೆ ಸಮತೋಲನ ಕಾಯ್ದುಕೊಳ್ಳುತ್ತ, ವಾಸ್ತವ ವ್ಯವಹಾರಿಕತೆಗೆ ಒತ್ತು ನೀಡುತ್ತಿದ್ದರು. ಇದರಿಂದಲೇ ಅವರು ಯಶಸ್ವಿ ನಾಯಕರೆನಿಸಿಕೊಂ­ಡಿದ್ದರು. ವಿವಿಧತೆಯಲ್ಲಿ ಏಕತೆ ಎಂಬ ತಣ್ತೀ ಅನುಸರಿಸಿದ ವಾಜಪೇಯಿ, ಯಾರೊಂದಿಗೂ ಅಂತರ ಕಾಯ್ದುಕೊಳ್ಳದೆ, ಎಲ್ಲರನ್ನೂ ಕೂಡಿಕೊಂಡು ದೇಶವನ್ನು ಮುನ್ನಡೆಸಿದ್ದರು.

5. ಲೇಖಕರಾಗಿಯೂ ಹಿರಿಮೆ
ಹಸಿವು, ಭಯ, ನಿರಕ್ಷರತೆಗಳಿಂದ ಭಾರತ ಮುಕ್ತವಾಗ­ಬೇಕು, ಮೂಲಸೌಕ­ರ್ಯಗಳಲ್ಲಿ ಕೊರತೆಯಿರಬಾರದು, ಇದು ನನ್ನ ಭಾರತದ ಧ್ಯೇಯ ಎಂದು ಅಟಲ್‌ ಹೇಳಿದ್ದರು. ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ, ಶಿಕ್ಷಣದ ಉನ್ನತಿಗಾಗಿ 2001ರ ಸರ್ವ ಶಿಕ್ಷಣ ಅಭಿಯಾನ, ವಯೋವೃದ್ಧರಿಗೆ ಅನ್ನಪೂರ್ಣ ಆಹಾರ ಯೋಜನೆ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸೌಲಭ್ಯ ಮುಂತಾದ ಯೋಜನೆಗಳು ವಾಜಪೇಯಿ ಅವರ ಧ್ಯೇಯಗಳ ಸಾಕಾರ ರೂಪವಾಗಿವೆ. “ವಿಚಾರ ಬಿಂದು’, “ಶಕ್ತಿ ಸೇ ಶಾಂತಿ’, “ಸಂಕಲ್ಪ ಕಾಲ’, “ನಯೀ ಚುನೌತಿ, ನಯಾ ಅವಸರ್‌’, “ಟುವರ್ಡ್ಸ್‌ ಎ ಡೆವಲಪಡ್‌ ಎಕಾನಾಮಿ’, “ನ್ಯೂ ಡೈಮೆನÒನ್ಸ್‌ ಆಫ್ ಇಂಡಿಯಾಸ್‌ ಫಾರಿನ್‌ ಪಾಲಿಸಿ’ ಮುಂತಾದ ಅವರು ಬರೆದ ಪುಸ್ತಕಗಳಲ್ಲಿ ದೇಶದ ಅಭಿವೃದ್ಧಿ, ಆರ್ಥಿಕತೆ, ವಿದೇಶಾಂಗ ನೀತಿ, ವ್ಯವಹಾರ, ಯುದ್ಧ-ಶಾಂತಿಯ ಹೀಗೆ ವಿವಿಧ ಚಿಂತನೆಗಳು ಬರೆಯಲ್ಪಟ್ಟಿವೆ.

6. ವಾಜಪೇಯಿ ದೇಶಭಕ್ತಿಯ ಪ್ರತೀಕ
“ಸರಕಾರಗಳು ಬರುತ್ತವೆ, ಹೋಗುತ್ತವೆ. ಪಕ್ಷಗಳು ರಚನೆ­ಗೊಳ್ಳುತ್ತವೆ, ಕೆಡುತ್ತವೆ ಆದರೆ ಈ ದೇಶ ಉಳಿಯಬೇಕು. ಈ ದೇಶದ ಲೋಕತಂತ್ರ ಅಮರವಾಗಿರ­ಬೇಕು’ ಎನ್ನುವುದು ವಾಜಪೇಯಿ ಅವರ ಗಟ್ಟಿ ನಿಲುವು. ದೇಶಕ್ಕೆ ಸಮಸ್ಯೆ ಎದುರಾದಾಗ, ಪಕ್ಷಭೇದವನ್ನೆಲ್ಲ ಮರೆತು ದೇಶದ ಪರವಾಗಿ, ಆಡಳಿತ ಸರಕಾರದ ಪರವಾಗಿ ಬೆಂಬಲ ಸೂಚಿಸಿದ್ದರು. ಪಾಕಿಸ್ಥಾನದೊಂದಿಗೆ ಸ್ನೇಹ ಹಸ್ತ ಚಾಚಿದ್ದರೂ, 1999 ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಪಾಕ್‌ಗೆ ತಕ್ಕ ಉತ್ತರ ನೀಡುವಲ್ಲಿ ಅವರು ಸಫ‌ಲರಾಗಿದ್ದರು. ಕಾಶ್ಮೀರ ವಿಚಾರದಲ್ಲೂ ಎಂದಿಗೂ ಪಾಕಿಸ್ಥಾನದೊಂದಿಗೆ ರಾಜೀ ಮಾಡಿಕೊಳ್ಳದೇ ಕಾಶ್ಮೀರ ಭಾರತದ ಅವಿಭಾಜ್ಯ ಎಂದು ಪ್ರತಿಪಾದಿಸಿದ್ದರು. ಅವರ ಆಳ್ವಿಕೆಯಲ್ಲಿ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆದು, ಭಾರತ ಪರಮಾಣು ಸಾರ್ವಭೌಮತ್ವ ಮೆರೆಯಿತು. ಹೀಗೆ ಅವರ ನಡೆ ನುಡಿಗಳಲ್ಲಿ ದೇಶಭಕ್ತಿಯ ಪ್ರಕಟೀಕರಣ ಕಾಣಬಹುದು.

7.ಸ್ನೇಹಜೀವಿ ವಾಜಪೇಯಿ
ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಇನ್ನೊಂದು ಹೆಸರು “ಅಜಾತಶತ್ರು’. ವಿಪಕ್ಷದಲ್ಲಿದ್ದವರಿಗೂ ವಾಜಪೇಯಿ ಎಂದರೆ ಒಂದು ಗೌರವ, ಸ್ನೇಹದ ಭಾವ. ಎಲ್ಲರೊಂ­ದಿಗೆ ಬಹು ಆಪ್ತವಾಗಿ ಬೆರೆಯುತ್ತಿ­ದ್ದರು. ಸಭೆ, ಸಮಾವೇಶಕ್ಕೆಂದು ಅನೇಕ ಊರುಗಳಿಗೆ ಭೇಟಿ ನೀಡಿ­ದಾಗ, ಅಲ್ಲಿನ ಕಾರ್ಯಕರ್ತರು, ಸ್ನೇಹಿತರ ಮನೆಗೆ ಭೇಟಿ ನೀಡು­ತ್ತಿದ್ದರು. ಪ್ರಧಾನಿಯಾದ ಅನಂತರವೂ ಅನೇಕ ಬಾರಿ ಅವರ ಊಟ, ವಸತಿಗಳು ಸ್ನೇಹಿತರ ಮನೆಯಲ್ಲೇ ಇರುತ್ತಿತ್ತು. ಇಷ್ಟು ಸರಳವಾಗಿದ್ದರು. ಅವರೇ ಒಂದು ಕಡೆ ಬರೆಯುವಂತೆ “ಹೇ ಪ್ರಭು ಇತರರನ್ನು ಆಲಂಗಿಸಲಾರದಷ್ಟು ಎತ್ತರಕ್ಕೆ ನನ್ನನ್ನು ಬೆಳೆಸಬೇಡ’ ಎಷ್ಟೇ ಎತ್ತರಕ್ಕೆ ಏರಿದರೂ, ಎಲ್ಲರ ಜತೆ ಒಂದಾಗಿ ಬರೆದಂತೆ ಬದುಕು ನಡೆಸಿದ್ದರು. ವಾಜಪೇಯಿ ಅಜಾತಶತ್ರು ಎಂಬುದಕ್ಕೆ ಈ ಕವಿತೆಯೇ ಸಾಕ್ಷಿ.

8. ಆರ್‌ಎಸ್‌ಎಸ್‌ ಒಡನಾಟ
ಆರ್‌ಎಸ್‌ಎಸ್‌ನೊಂದಿಗೆ 1939ರಿಂದ ವಾಜ­ಪೇಯಿ ನಂಟು ಆರಂಭ­ಗೊಂಡಿತು. ಗ್ವಾಲಿಯರ್‌ನಲ್ಲಿ ಆಗಷ್ಟೇ ಆರಂಭಗೊಂಡಿದ್ದ ಸಂಘದ ಶಾಖೆಯಲ್ಲಿ ವಾಜಪೇಯಿ ಸಕ್ರಿಯರಾದರು. ಮುಂದೆ ಸಂಘ ಶಿಕ್ಷಣದ ತರಬೇತಿಗೆಂದು ನಾಗಪುರಕ್ಕೆ ಹೋದಾಗ ಡಾ| ಹೆಡಗೇವಾರ್‌, ಗೋಳ್ವಲ್ಕರ್‌ರ ಪರಿ­ಚಯ ಮಾಡಿಕೊಂಡಿದ್ದರು. 1947­ರವರೆಗೂ ಸಕ್ರಿಯ ಕಾರ್ಯ­ಕರ್ತರಾಗಿದ್ದ ವಾಜಪೇಯಿ, ಅನಂತರ ಸಂಘದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡು ಸಂಘದ ಪ್ರಚಾರಕರಾದರು.

9. ಅತ್ಯುತ್ತಮ ಆಡಳಿತಕ್ಕೆ ಮಾದರಿ
ಪಾಕಿಸ್ಥಾನದ ಲಾಹೋರ್‌ಗೆ ಬಸ್‌ ಸಂಪರ್ಕ ಕಲ್ಪಿಸಿ ಬಾಂಧವ್ಯ ಬೆಸೆದಿದ್ದು, ಬಳಿಕ ಅದೇ ಪಾಕಿಸ್ಥಾನಕ್ಕೆ ಕಾರ್ಗಿಲ್‌ ಯುದ್ಧದ ಮೂಲಕ ಪಾಠ ಕಲಿಸಿದ್ದು ವಾಜಪೇಯಿ ಅವರ ಸಾಧನೆಗಳ ಹೆಗ್ಗುರುತು. ವಿವಿಧ ಪ್ರಗತಿಪರ ಯೋಜನೆಗಳ ಮೂಲಕ ವಾಜಪೇಯಿ ದೇಶವನ್ನು ಹೊಸ ದಿಕ್ಕಿನತ್ತ ಮುನ್ನಡೆಸಿದರು. ತಮ್ಮ ಅವಧಿಯಲ್ಲಿ ದೇಶದ ಜಿಡಿಪಿಯನ್ನು ಶೇ.­8ಕ್ಕೆ ಏರಿಸಿದ್ದು, ಹಣದುಬ್ಬರ ದರವನ್ನು ಶೇ.4ಕ್ಕಿಂತ ಕಡಿತ­ಗೊಳಿಸಿದ್ದು ಹಾಗೂ ವಿದೇಶಿ ವಿನಿಮಯ ಮೀಸಲು ಹೆಚ್ಚಿಸಿ ಆರ್ಥಿಕತೆ ಸದೃಢಗೊಳಿದ್ದು ಅವರ ಆಡಳಿತ ವೈಖರಿ ಬಿಂಬಿಸುತ್ತದೆ. ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಪ್ರಧಾನಿಯಾದ ಅವಧಿಯಲ್ಲಿ ಶ್ರೇಷ್ಠ ಆಡಳಿತ ನೀಡಿದ ನೆನಪಿಗಾಗಿ ಅವರ ಜನ್ಮದಿನವನ್ನು (ಡಿ.25) “ಉತ್ತಮ ಆಡಳಿತ ದಿನ’ ಎಂದು ಆಚರಿಸಲಾಗುತ್ತದೆ.

– ನಿತೀಶ ಡಂಬಳ

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.