ಕೋವಿಡ್ ಗೆದ್ದ ಯಡಮೊಗೆಯ ಕುಟುಂಬ! ಎಲ್ಲ 9 ಮಂದಿಯೂ ಸೋಂಕು ಎದುರಿಸಿ ಜಯಿಸಿದರು
Team Udayavani, May 12, 2021, 7:10 AM IST
ಕುಂದಾಪುರ: ಆತ್ಮಸ್ಥೈರ್ಯ, ಸೂಕ್ತ ಉಪಚಾರ, ವೈದ್ಯರ ಸಲಹೆಯೊಂದಿಗೆ ಮನೆ ಯಲ್ಲಿ ಇದ್ದೇ ಕೊರೊನಾವನ್ನು ಗೆಲ್ಲಬಹುದು ಎನ್ನುವು ದನ್ನು ಕುಂದಾಪುರದ ತೀರಾ ಗ್ರಾಮೀಣ ಪ್ರದೇಶ ವಾದ ಯಡಮೊಗೆ ಗ್ರಾಮದ 9 ಮಂದಿಯ ಕುಟುಂಬವೊಂದು ನಿರೂಪಿಸಿದೆ.
ಕೊರೊನಾಕ್ಕೆ ತುತ್ತಾಗು ತ್ತಿರುವವರ ಸಂಖ್ಯೆ ಹೆಚ್ಚು ತ್ತಿರುವ ನಡುವೆ ಸೋಂಕನ್ನು ದಿಟ್ಟತನದಿಂದ ಜಯಿಸಿ ಬಂದವರ ಸಂಖ್ಯೆಯೂ ಅಷ್ಟೇ ದೊಡ್ಡದಾಗಿ ಬೆಳೆಯು ತ್ತಿರುವುದು ಆಶಾ ದಾಯಕ. ಇದಕ್ಕೆ ಯಡಮೊಗೆ ಗ್ರಾಮದ ಕಲ್ಕುರಡಿಯ 67 ವರ್ಷದ ಶ್ರೀಧರ ಯಡಿಯಾಳ ಮತ್ತು 62 ವರ್ಷದ ಇಂದುಮತಿ ದಂಪತಿ ಮತ್ತವರ ಕುಟುಂಬ ಸಾಕ್ಷಿ.
ಈ ಮನೆಯ 9 ಮಂದಿಯೂ ಕೊರೊನಾದಿಂದ ಸಂಪೂರ್ಣ ಮುಕ್ತರಾಗಿದ್ದಾರೆ. 10 ವರ್ಷದೊಳಗಿನ ಇಬ್ಬರು ಪುಟಾಣಿಗಳೂ ಸೋಂಕಿಗೆ ಈಡಾಗಿದ್ದರು.
ಮನೆಯಲ್ಲೇ ಚಿಕಿತ್ಸೆ
ಒಬ್ಬರಿಗೆ ಎ. 29ರಂದು ಪಾಸಿಟಿವ್ ಬಂದಿತ್ತು. ಬಳಿಕ ಎಲ್ಲರಿಗೂ ಪಾಸಿಟಿವ್ ದೃಢಪಟ್ಟಿತು. ಇದನ್ನು ಸವಾಲಾಗಿ ತೆಗೆದುಕೊಂಡ ಕುಟುಂಬ, ವೈದ್ಯರ ಸಲಹೆಯಂತೆ ಔಷಧ ತೆಗೆದು ಕೊಂಡರು. ಪಲ್ಸ್ ಆಕ್ಸಿಮೀಟರ್ ತರಿಸಿ ತಪಾಸಣೆ ನಡೆಸುತ್ತಿದ್ದರು. ಇಂದುಮತಿಯವರೇ ಎಲ್ಲರಿಗೂ ಪೌಷ್ಠಿಕವಾದ ಬಿಸಿಬಿಸಿ ಆಹಾರ, ಕಷಾಯ ಮತ್ತಿತರ ಮನೆ ಮದ್ದು, ತಯಾರಿಸಿ ಕೊಡುತ್ತಿದ್ದರು.
ಯಾವುದೇ ಕಾಯಲೆ ಬಂದರೂ ಧೈರ್ಯದಿಂದ ಎದು ರಿಸಬೇಕು. ನಾವು ಎಲ್ಲರೂ ಒಗ್ಗಟ್ಟಿನಿಂದ ಎದುರಿ ಸುವ ಪಣ ತೊಟ್ಟೆವು. ಈಗ ಗೆದ್ದಿದ್ದೇವೆ. ಸೋಂಕು ಗೊತ್ತಾದಾಗ ಆತಂಕ ಪಡುವುದ ಕ್ಕಿಂತ ಏನು ಮಾಡಬೇಕು ಎಂದು ಯೋಚಿ ಸುವುದು ಉತ್ತಮ. ಮನೆಯಲ್ಲೇ ಇದ್ದು ಚಿಕಿತ್ಸೆ, ಆಹಾರ ಅನುಸರಿಸಿದೆವು. ಖುಷಿಯಾಗಿ ಇರುತ್ತಿದ್ದೆವು. – ಶ್ರೀಧರ ಯಡಿಯಾಳ ಯಡಮೊಗೆ, ಕುಟುಂಬದ ಯಜಮಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.