AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

ರಚನೆಯ ಹಿಂದಿದೆ ದುಬಾರಿ ಬೇಡಿಕೆಯ ಕಥೆ...

Team Udayavani, Jun 15, 2024, 2:10 PM IST

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

ಒಮ್ಮೆ ಬೆಂಗಳೂರಿಂದ ನಮ್ಮ ಸ್ನೇಹಿತರಾಗಿರುವ ಹಾಗೂ ಒಂದೇ ರೀತಿಯ ಅಭಿರುಚಿ ಇರುವ ಬಾಲಾಜಿ ಅವರು ಒಂದು ಅಪರೂಪದ ಆ್ಯಂಟಿಕ್‌ ವಸ್ತು ಬಗ್ಗೆ ಹೇಳಿದ್ದರು. ಬಹಳ ದಿನಗಳಿಂದ ಅವರು ಅದನ್ನು ಹುಡುಕುತ್ತಿದ್ದರು, ಅವರಿಗೆ ಅದು ಬೇಕಾಗಿರುತ್ತೆ. ಹೀಗೆ ಸಿಕ್ಕಾಗ ಅದರ ಬಗ್ಗೆ ನನಗೂ ತಿಳಿಸಿ ಸಿಕ್ಕಿದ್ರೆ ತಿಳಿಸಿ ಎಂದರು. ಇದಾಗಿ ಎರಡು ವರ್ಷಗಳ ಬಳಿಕ ನಾನು ಜರ್ಮನಿಯಲ್ಲಿದ್ದಾಗ ಆ ವಸ್ತು ನನಗೆ ದೊರಕಿತು. ಅದು SALVADOR DALI ಎನ್ನುವ ಕಲಾವಿದ  AIR INDIA – ಫಸ್ಟ್‌ ಕ್ಲಾಸ್‌ ಪ್ರಯಾಣಿಕರಿಗಾಗಿ ಮಾಡಿದ್ದ cigarette ash tray.

1966ರಲ್ಲಿ ನ್ಯೂಯಾರ್ಕ್‌ನ ಒಂದು ಹೊಟೇಲ್‌ನಲ್ಲಿ ಏರ್‌ ಇಂಡಿಯಾ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಡಾಲಿ ಇದ್ದಾಗ ಮಾತುಕತೆ ಕೊನೆಗೆ ಒಂದು ಆರ್ಟ್‌ವರ್ಕ್‌ ಮಾಡಿ ಕೊಟ್ಟರೆ ಚೆನ್ನಾಗಿರುತ್ತೆ ಎಂದು ಮಾತುಕತೆ ಆಗುತ್ತೆ. ಆ ಮಾತುಕತೆಯಿಂದ ರೂಪ ತಾಳಿದ್ದೇ ಈ ಆ್ಯಶ್‌ ಟ್ರೇ.

ಇದು ಇರುವುದೇ ಲಿಮಿಟೆಡ್‌ ವರ್ಷನ್‌ ಅಂದರೆ unglazed porcelien ash tray 1,600ರಷ್ಟು ಮಾತ್ರ ಸೀಮಿತವಾಗಿರೋದು. ಇದರ ಬಗ್ಗೆ ಇಂಡಿಯಾದಿಂದ ಹೋಗಿದ್ದ ಚೀಫ್‌ ಕಮಿಷನರ್‌ ಇನ್ಕಮ್‌ಟ್ಯಾಕ್ಸ್‌ ಆಫೀಸರ್‌ ಪ್ರಕಾಶ್‌ ದುಬೆಯ್‌, ಡಾಲಿ ಅವರ ಬರ್ತ್‌ ಪ್ಲೇಸ್‌ಗೆ ಹೋಗಿದ್ದಾಗ ಅಲ್ಲಿ ಯಾವುದೋ ರೆಸ್ಟೋರೆಂಟ್‌ನಲ್ಲಿ ಏರ್‌ಇಂಡಿಯಾ ಮಹಾರಾಜಾ ಡಿಸ್‌ಪ್ಯಾಲಿ ಅವರ ಲೇಖನ ನೋಡಿ, ಇದರ ಬಗ್ಗೆ ಕುತೂಹಲ ಹೆಚ್ಚಾಗಿ ಇದರ ಮೂಲ ಹುಡಕುತ್ತ ಹೋದಾಗ ಅವರ ಮಿತ್ರ ಛೋಟಾ ಚುಡಾಸನ ಅವರಿಂದ ಇನ್ನು ಸಾಕಷ್ಟು ವಿಷಯಗಳು ಗೊತ್ತಾಗುತ್ತೆ. ಮಿತ್ರರಾದ ಛೋಟಾ ಅವರ ಹತ್ತಿರವೂ ಇದು ಇರುತ್ತೆ.

ಆನೆಯ ಬೇಡಿಕೆ
ಜಾಟ್‌ಸಿಂಗ್‌- ಏರ್‌ಇಂಡಿಯಾ ಅವರು ಯುರೋಪ್‌ನಲ್ಲಿ ಡಾಲಿ ಅವರಿಗೆ ಇದನ್ನು ಪುನಃ ಕ್ರಿಯೆಟ್‌ ಮಾಡಲು ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಡಾಲಿ ಅವರು ದುಬಾರಿ ಫೀಸ್‌ ಅನ್ನು ಕೇಳುತ್ತಾರೆ. ಕಲಾಕೃತಿಯ ಮರುರಚನೆಗೆ ಅವರು ಕೇಳಿದ್ದು ನಿಜವಾದ ಆನೆ ಬೇಕೆಂದು!. ಮೊದಲಿಗೆ ತಮಾಷೆಗೆ ಹೇಳಿರಬೇಕು ಎಂದುಕೊಂಡರೆ ಕೊನೆಗೆ ಸೀರಿಯಸ್‌ ಆಗಿ ಕೇಳಿರುತ್ತಾರೆ.

ಆಕೃತಿ ಹೇಗಿದೆ ?
ಈ ಆ್ಯಶ್‌ ಟ್ರೇ ಶೆಲ್‌ ಅಂದರೆ ಒಂಥರಾ ಶಂಖದ ಆಕಾರದಲ್ಲಿದೆ. ಇದರ ಸುತ್ತಲೂ ಹಾವಿನ ರೀತಿಯಾಗಿ ಹೆಣೆದಿರುವ ವಿನ್ಯಾಸವಿದೆ. ಅಲ್ಲದೇ ಬದಿಗಳಲ್ಲಿ ಆನೆಯ ತಲೆಗಳು ಹಾಗೂ ಹಂಸದ ಆಕೃತಿಯಿಂದ ಕೂಡಿದೆ. ಮಾಸ್ಟರ್‌ ವಿವರಿಸುತ್ತಾರೆ: “ಆನೆಯ ತಲೆಯ ಪ್ರತಿಬಿಂಬವು ಹಂಸದಂತೆ ಕಾಣುತ್ತದೆ ಮತ್ತು ಹಂಸದ ಪ್ರತಿಬಿಂಬವು ಆನೆಯಂತೆ ಕಾಣುತ್ತದೆ. ನಾನು ಮಾಡಿದ್ದು ಇದನ್ನೇ. ಹಂಸವು ತಲೆಕೆಳಗಾಗಿ ಆನೆಯ ತಲೆಯಾಗುತ್ತದೆ ಮತ್ತು ಆನೆ ತಲೆಕೆಳಗಾದ ಹಂಸ.’ ಅಂತಹ ವಿಶ್ವ ಮಟ್ಟದ ಕಲಾವಿದರೊಬ್ಬರು ವಿಮಾನಯಾನ ಸಂಸ್ಥೆಗಾಗಿ ಇದನ್ನು ವಿನ್ಯಾಸಗೊಳಿಸಿದ್ದು ಇದೇ ಮೊದಲು ಮತ್ತು ಏರ್‌ ಇಂಡಿಯಾದಲ್ಲಿ ನಾವು ಈ ಅತ್ಯಂತ ಅಸಾಮಾನ್ಯ ಆ್ಯಶ್‌ ಟ್ರೇಯನ್ನು ನಿಮಗೆ ಪ್ರಸ್ತುತಪಡಿಸಲು ಸಾಧ್ಯವಾಗಿದ್ದಕ್ಕಾಗಿ ಸಂತೋಷಪಡುತ್ತೇವೆ.

ಹಂಸ ಮತ್ತು ಆನೆಯನ್ನು ಹೊಂದಿರುವ ಈ ಆ್ಯಶ್‌ ಟ್ರೇ, ಆನೆಯ ನೆರಳು ಮತ್ತು ಆಕಾರಗಳನ್ನು ಹಂಸವು ಹೇಗೆ ಸುಲಭವಾಗಿ ತೆಗೆದುಕೊಳ್ಳಬಹುದು ಎಂಬುದನ್ನು ವಿವರಿಸುತ್ತದೆ. ಜತೆಗೆ ಪ್ರತಿಯಾಗಿ ತಲೆಕೆಳಗಾದ ಹಂಸವು ಆನೆಯಾಗುತ್ತದೆ ಮತ್ತು ತಲೆಕೆಳಗಾದಾಗ ಆನೆಯ ತಲೆ ಹಂಸವಾಗುತ್ತದೆ.

ಬೆಂಗಳೂರಿನ ಆನೆ
ಈ ಆ್ಯಶ್‌ಟ್ರೇಯನ್ನು ಮರುರಚಿಸಲು ಇಟ್ಟ ಆನೆಯ ಬೇಡಿಕೆಯನ್ನು ಪೂರೈಸಲು ಏರ್‌ ಇಂಡಿಯಾವು ಬೆಂಗಳೂರಿನಿಂದ 2 ವರ್ಷದ ಆನೆ ಮರಿಯನ್ನು ಮಾವುತನೊಂದಿಗೆ ಜಿನೇವಾಕ್ಕೆ ಕರೆಸಿಕೊಳ್ಳುತ್ತದೆ. ಆನೆ ಮರಿಯನ್ನು ಕ್ಯಾಡಕ್ವೆಸ್‌ಗೆ ಕಳುಹಿಸಲಾಯಿತು. ಅಲ್ಲಿ ಮಾವುತ ಆನೆಯನ್ನು ಡಾಲಿಯ ಮನೆಗೆ ಕರೆದೊಯ್ಯುತ್ತಾನೆ. ಆನೆಯ ಆಗಮನದ ಸಂಭ್ರಮಕ್ಕೆ ಕ್ಯಾಡಕ್ವೆಸ್‌ನ ಮೇಯರ್‌ ಮೂರು ದಿನಗಳ ರಜೆಯನ್ನು ಘೋಷಿಸಿ, ಭಾರತೀಯ ಖಾದ್ಯಗಳನ್ನು ಒಳಗೊಂಡಂತೆ ಪಾರ್ಟಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕೆಂದೆ ಭಾರತದಿಂದ ಪುರೋಹಿತರನ್ನು ಕರೆಸಿಕೊಳ್ಳಲಾಗುತ್ತದೆ. ಡಾಲಿಯು ಈ ಆನೆಯ ಬಗ್ಗೆ ಹಲವಾರು ಯೋಜನೆಗಳನ್ನು ಹೊಂದಿದ್ದನಂತೆ ಆದರೆ ಅವು ಫ‌ಲಿಸದೇ ಆನೆಯನ್ನು ಮೃಗಾಲಯಕ್ಕೆ ಕಳುಹಿಸಲಾಯಿತು ಎನ್ನಲಾಗುತ್ತದೆ.

ಇನ್ನು ಆ್ಯಶ್‌ ಟ್ರೇ ಪ್ರಪಂಚದ ವಿವಿಧ ಭಾಗಗಳಲ್ಲಿ ಹರಡಿದ್ದು, ಉನ್ನತ ವ್ಯಕ್ತಿಗಳಿಗೆ ಅದನ್ನು ಉಡುಗೊರೆಯಾಗಿಯೂ ನೀಡಲಾಗಿದೆ. ಮೂರು ವರ್ಷದಿಂದ ಹುಡುತ್ತಿದ್ದ ವಸ್ತು ನನಗೆ ಸಿಕ್ಕ ಖುಷಿ ಇತ್ತು ಜತೆಗೆ ಇದು ಸ್ಪೇನ್‌ನ ರಾಜನ ಬಳಿಯೂ ಇದೆ ಎಂದು ಕೇಳಿ ನನ್ನ ಖುಷಿ ದುಪ್ಪಟ್ಟಾಯಿತು. ಬಾಲಾಜಿಗೆ ಇನ್ನೊಂದು ಸಿಕ್ಕಿದಾಗ ಕೊಡುತ್ತೀನಿ ಅಂದಿದ್ದೆ. ಈಗ ಇದು ನನ್ನ ಕಲೆಕ್ಷನ್‌ನಲ್ಲಿ ಇರುವ ಅತ್ಯಂತ ಅದ್ಭುತ ವಸ್ತು.

* ಶಶಿ, ಯುಕೆ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.