ರಷ್ಯಾದಲ್ಲಿ ಆಹಾರ ಹಾಹಾಕಾರ; ಆಹಾರ ವಸ್ತುಗಳ ಮಿತ ಬಳಕೆಗೆ ಪುತಿನ್‌ ಸರಕಾರದಿಂದ ಆದೇಶ


Team Udayavani, Mar 7, 2022, 8:10 AM IST

ರಷ್ಯಾದಲ್ಲಿ ಆಹಾರ ಹಾಹಾಕಾರ; ಆಹಾರ ವಸ್ತುಗಳ ಮಿತ ಬಳಕೆಗೆ ಪುತಿನ್‌ ಸರಕಾರದಿಂದ ಆದೇಶ

ಮಾಸ್ಕೋ/ಕೀವ್‌: “ಮಿತಿಯಿಂದ ಆಹಾರ ವಸ್ತುಗಳನ್ನು ಮಾರಾಟ ಮಾಡಿ’ ಇಂಥ ಒಂದು ಸೂಚನೆಯನ್ನು ರಷ್ಯಾದ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ನೀಡಲಾಗಿದೆ. ಹಾಗಿದ್ದರೆ ಉಕ್ರೇನ್‌ಗೆ ದಾಳಿ ನಡೆಸಿದ ರಾಷ್ಟ್ರದಲ್ಲಿ ಈಗ ಆಹಾರ ಮತ್ತು ಅಗತ್ಯ ವಸ್ತುಗಳಿಗೆ ಹಾಹಾಕಾರ ಎದ್ದಿದೆಯೇ ಎಂಬ ಗುಸು ಗುಸು ಶುರುವಾಗಿದೆ. ರಾಜಧಾನಿ ಮಾಸ್ಕೋ ಮತ್ತು ಇತರ ನಗರಗಳಲ್ಲಿನ ಮಳಿಗೆಗಳಿಗೆ ಇಂಥ ಸೂಚನೆ ಹೋಗಿದೆ.

ಫೆ.24ರಿಂದ ದಾಳಿ ಶುರುವಾದ ಬಳಿಕ ರಷ್ಯಾದಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚು ಆಹಾರ- ಬೇಳೆ ಕಾಳುಗಳನ್ನು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಕಾಳಸಂತೆ ಕೋರರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಪುತಿನ್‌ ಸರಕಾರ ಅಂಗಡಿಗಳಲ್ಲಿ ಜನರಿಗೆ ಬೇಕಾಗುವಷ್ಟೇ ಆಹಾರ ವಸ್ತುಗಳ ಮಾರಾಟ ಮಾಡುವಂತೆ ನಿರ್ಬಂಧ ಹೇರಿದೆೆ ಎಂಬ ಸಮಜಾಯಿಷಿ ಬೆಂಬಲಿಗ ರದ್ದು ಮತ್ತು ಸರಕಾರದ್ದು. ಬ್ರೆಡ್‌, ಅಕ್ಕಿ, ಮೊಟ್ಟೆ, ಮಾಂಸ ಮತ್ತು ಇತರ ಕೆಲವು ವಸ್ತು ಗಳ ಬೆಲೆಯನ್ನು ಸರಕಾರವೇ ನಿಯಂತ್ರಣ ಮಾಡುತ್ತದೆ. ಹೀಗಾಗಿ ಅವುಗಳನ್ನು ನೀಡುವುದರ ಮೇಲೆ ಮಿತಿ ಹೇರಿಕೆ ಮಾಡಿದ್ದು ಹಲವು ಜಿಜ್ಞಾಸೆಗಳಿಗೆ ಕಾರಣವಾಗಿದೆ.

ಏಕೆಂದರೆ ಅಮೆರಿಕ, ಯು.ಕೆ. ಐರೋಪ್ಯ ಒಕ್ಕೂಟ ಸೇರಿದಂತೆ ಜಗತ್ತಿನ ಹೆಚ್ಚಾ ಕಮ್ಮಿ ಹಲವು ರಾಷ್ಟ್ರಗಳು ಪುತಿನ್‌ ಆಡಳಿತದ ಮೇಲೆ ಒಂದಲ್ಲ ಒಂದು ರೀತಿಯ ನಿರ್ಬಂಧ ಹೇರಿವೆ. ಜತೆಗೆ ಪಾಶ್ಚಾತ್ಯ ರಾಷ್ಟ್ರಗಳ ವಿತ್ತೀಯ, ತಾಂತ್ರಿಕ, ಉದ್ಯಮಾಡಳಿತ, ಮನರಂಜನೆ, ವಿತ್ತೀಯ ಸಲಹಾ ಸಂಸ್ಥೆಗಳು ರಷ್ಯಾದಲ್ಲಿನ ತಮ್ಮ ಸೇವೆಗಳನ್ನು ರದ್ದುಪಡಿಸಲು ತೀರ್ಮಾನಿಸಿವೆ.

ಜಗತ್ತಿಗೂ ಬೆದರಿಕೆಯೇ: ಉಕ್ರೇನ್‌ ಮೇಲೆ ದಾಳಿ ನಡೆಯುತ್ತಿರುವುದರಿಂದ ಅಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದವರೂ ಜಮೀನು ತೊರೆದು ಪರಾರಿಯಾಗುತ್ತಿ ದ್ದಾರೆ. ಆ ದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಗೋಧಿ ಬೆಳೆಯಲಾಗುತ್ತಿದೆ. ಕೆಲವೆಡೆ ಗೋಧಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಉಂಟಾಗಿರುವಂತೆಯೇ ಶೇ.55ರಷ್ಟು ಬೆಲೆಯೂ ಏರಿಕೆಯಾಗಿದೆ. ಪರಿಸ್ಥಿತಿ ಜಗತ್ತಿನ ಆಹಾರ ಪೂರೈಕೆ ವ್ಯವಸ್ಥೆಗೆ ಕೂಡ ತಡೆಯಾಗುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಹಸಿದಿದ್ದರೂ ಸ್ವಾಭಿಮಾನ ಬಿಡದ ಖಾರ್ಕಿವ್‌ ಜನ
ರಷ್ಯಾದ ದಾಳಿಯಿಂದ ಖಾರ್ಕಿವ್‌ ನಗರದ ಮೂಲಸೌಕರ್ಯಗಳು ಅಕ್ಷರಶಃ ನಾಶವಾಗಿದ್ದು, ಅಲ್ಲಿನ ಸುಮಾರು 3 ಲಕ್ಷ ಜನರು, ಜೀವನಕ್ಕೆ ಆಧಾರವಾದ ಆಹಾರ, ನೀರಿನ ಅಭಾವ ಎಂದುರಿಸುತ್ತಿದ್ದಾರೆ. ಈ ನಡುವೆ ರಷ್ಯಾದ ಸೈನಿಕರು ಜನರಿಗೆ ಅಲ್ಪಸ್ವಲ್ಪ ಆಹಾರದ ನೆರವು ನೀಡಲು ಮುಂದೆ ಬಂದರೂ ಖಾರ್ಕಿವ್‌ನ ಜನರು ಸ್ವಾಭಿಮಾನದಿಂದಾಗಿ ನೆರವು ನಿರಾಕರಿಸುತ್ತಿದ್ದಾರೆ ಎಂದು ಆ ನಗರದ ಮೇಯರ್‌ ಐಹೊರ್‌ ಕೋಲಿಖೇವ್‌ ತಿಳಿಸಿದ್ದಾರೆ. ಇಡೀ ನಗರ ಇಂದು ರಷ್ಯಾ ಪಡೆಗಳ ಹಿಡಿತದಲ್ಲಿದೆ. ಅಲ್ಲಿನ ಜನರು, ಅವಕಾಶ ಸಿಕ್ಕಾಗ ತಮ್ಮ ಮನೆಗಳಿಂದ ಹೊರಹೋಗಿ, ದಿನಸಿ ಅಂಗಡಿಗಳನ್ನು ತಡಕಾಡುತ್ತಿದ್ದಾರೆ. ಆದರೆ ಅಂಗಡಿಗಳಲ್ಲಿ ದಿನಸಿ ಖಾಲಿಯಾಗಿದೆ. ಇದು ಅಲ್ಲಿನ ಜನರನ್ನು ಕಂಗಾಲಾಗಿಸಿದೆ ಎಂದು ಸಿಎನ್‌ಎನ್‌ ಸುದ್ದಿ ಸಂಸ್ಥೆ ತಿಳಿಸಿದೆ.

ಟಾಪ್ ನ್ಯೂಸ್

ss

BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್   

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್  

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

Jamaica: 29 couples married naked

Jamaica: ನಗ್ನವಾಗಿ ಲಗ್ನವಾದ 29 ಜೋಡಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ss

BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Suilla

Bantwala: ಬೋಳಂಗಡಿ; ಅಡಿಕೆ ಕೀಳುತ್ತಿದ್ದ ಕಾರ್ಮಿಕ ಮರದಿಂದ ಬಿದ್ದು ಸಾವು

4

Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು

ud

Puttur: ಮನೆ ಅಂಗಲದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.