ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
ಹಳೆಯ ಸಿನೆಮಾ ಪೋಸ್ಟರ್ ಗಳನ್ನು ಸಂಗ್ರಹ ಮಾಡುವುದು ಇಲ್ಲಿ ತುಂಬಾ ಜನರ ಹವ್ಯಾಸ.
Team Udayavani, Dec 21, 2024, 5:32 PM IST
ಅಕ್ಟೋಬರ್‌ನ ಒಂದು ದಿನ ಮನೆಯಲ್ಲಿ ಕುಳಿತು ರೇಡಿಯೋ ಕೇಳುತ್ತಾ ಇದ್ದಾಗ ಒಂದು ಸುದ್ದಿ ಶರವೇಗದಲ್ಲಿ ನನ್ನ ಕಿವಿ ತಲುಪಿತು. ಕೂಡಲೇ ನನ್ನಲ್ಲಿ ಉತ್ಸಾಹವನ್ನು ತುಂಬಿತು. ಮೊಟ್ಟ ಮೊದಲ ಬಾರಿಗೆ ನಾನು ವಾಸವಿರುವ ಊರಿನ ಹತ್ತಿರದಲ್ಲಿ ಹಾಲಿವುಡ್ ಸಿನೆಮಾಗಳ ಪೋಸ್ಟರ್ ಹಾಗೂ ಮೆಮೊ ರೇಬಿಲಿಯಾ ಪ್ರದರ್ಶನ ಇದೆ ಎಂದು ರೇಡಿಯೋದಲ್ಲಿ ಘೋಷಿಸಿದ್ದರು.
ಹಳೆಯ ಸಿನೆಮಾ ಪೋಸ್ಟರ್ ಗಳನ್ನು ಸಂಗ್ರಹ ಮಾಡುವುದು ಇಲ್ಲಿ ತುಂಬಾ ಜನರ ಹವ್ಯಾಸ. ನಾನು ಒಮ್ಮೆ ನೋಡೋಣ ಎಂದು ಸಮಯ ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಹೋದೆ. ನಿಜವಾಗಲೂ ಈ ದಿನ ನನ್ನ ಜೀವನದ ಅತ್ಯುನ್ನತ ಕ್ಷಣಗಳಲ್ಲಿ ಒಂದು. ಪೋಸ್ಟರ್ ಜತೆಗೆ ಆಟೋಗ್ರಾಫ್ ಇವೆಂಟ್ ಕೂಡ ಅಲ್ಲಿ ಇತ್ತು. ಒಂದು ವೇಳೆ ನಾನು ರೇಡಿಯೋದಲ್ಲಿ ಇದನ್ನು ಕೇಳದೇ ಇದ್ದಿದ್ದರೆ ಅಲ್ಲಿ ಹೋಗುವ ಅವಕಾಶ ವನ್ನು ತಪ್ಪಿಸಿಕೊಳ್ಳುತ್ತಿದೆ.
ಪ್ರತೀ ಸಲ ಈ ಪೋಸ್ಟರ್ ಸಂಗ್ರಹ ಕಾರ್ಯಕ್ರಮವು ಲಂಡನ್ ಅಥವಾ ಮಿಡ್ ಲ್ಯಾಂಡ್ಸ್ ನಲ್ಲಿ ನಡೆಯುತ್ತದೆ. ಈ ಬಾರಿ ನನ್ನ ಊರಿನ ಹತ್ತಿರವಿದೆ ಎಂಬ ಕಾರಣಕ್ಕೆ ಭೇಟಿ ನೀಡಿದ್ದೆ. ಅಲ್ಲಿಗೆ ಹೋದವನಿಗೆ ಅಲ್ಲಿನ ಲೋಕವೇ ಬೇರೆ ಇತ್ತು. ಅಲ್ಲಿ ಹಾಲಿವುಡ್‌ನ ಹಿಟ್ ಸಿನೆಮಾಗಳ ನಿರ್ದೇಶಕರು, ಸಂಗೀತಗಾರರು ಇದ್ದರು, ಕ್ಲಾಸಿಕ್ ಸಿನೆ ಮಾಗಳ ಪೋಸ್ಟರ್ ಗಳು ರಾರಾಜಿಸುತ್ತಿದ್ದವು.
ನಾನು ಕನಸಿನಲ್ಲೂ ಎಣಿಸಿರಲಿಲ್ಲ ಜೇಮ್ಸ್ ಬಾಂಡ್ ಸಿನೆಮಾದ ಆರ್ಕೆಸ್ಟ್ರಾ , ನಿದೇರ್ಶಕ ರನ್ನು ಭೇಟಿ ಮಾಡ್ತೀನಿ ಎಂದು. ಮೊಟ್ಟ ಮೊದಲುJenny Hanley Actress & On Her Majesty’s Secret Service 1969 The Irish ಗರ್ಲ್ ಅವರನ್ನು ಮೀಟ್ ಮಾಡಿ ಆಟೋಗ್ರಾಫ್ ತಗೊಂಡೆ ಹಾಗೂ ಅವ್ರ ಮಗ ನನ್ನ ಫೋಟೋ ಕ್ಲಿಕ್ಕಿಸಿದ್ದರು. ಅವರು ಕೂಡ ಈಗ ರೇಡಿಯೋ ಜಾಕಿಯೇ ಆಗಿದ್ದಾರೆ. ತುಂಬಾ ಸ್ನೇಹಿಯಾಗಿ ಎಲ್ಲರೊಂದಿಗೂ ಮಾತನಾಡುತ್ತಿದ್ದರು.
ಅದಾದ ಅನಂತರ ನಿರ್ದೇಶಕ John Glen ಅವರನ್ನು ಭೇಟಿಯಾದೆ. ಅವರೊಂದಿಗೂ ಫೋಟೋ ತೆಗೆಸಿಕೊಂಡಿದ್ದು ಅದ್ಭುತ ಅನುಭ ವ. ಒಕ್ಟೋಪುಸ್ ಸಿನೆಮಾ ಬಗ್ಗೆ ಹಾಗೂ ಅವರ ಅನುಭವದ ಬಗ್ಗೆ ಅವರೊಂದಿಗೆ ಮಾತನಾಡಿದೆ. ಅವರು ಮನಬಿಚ್ಚಿ ತಮ್ಮ ಅನುಭವಗ ಳನ್ನು ಹಂಚಿಕೊಂಡರು.
ಮೊದಲನೆಯದಾಗಿ For Your Eyes Only (1981) , Octopussy (1983), A View to a Kill (1985, The Living Daylights (1987), Licence to Kill (1989) ಸಿನೆಮಾಗಳ ಪೋಸ್ಟರ್ ಗಳನ್ನು ಹಾಗೂ ನಿರ್ದೇಶಕರನ್ನು ಭೇಟಿ ಆದೆ. ಅ Madeline smith & Live and Let Die ಅವರನ್ನು ಮೀಟ್ ಮಾಡಿದೆವು. ಇವರು Miss cariso ಆಗಿ ಕಾಣಿಸಿಕೊಂಡಿದ್ದರು. ನೆರೆದಿದ್ದೆಲ್ಲ ರೊಂದಿಗೆ ತುಂಬಾ ಚೆನ್ನಾಗಿ ಬೆರೆತು ಮಾತನಾಡುತ್ತಿದ್ದರು. ಇವರ ಆಟೋಗ್ರಾಫ್ ಪಡೆಯಲು ನಾವು ಹಣ ಪಾವತಿಸಬೇಕು. ಈ ಹಣವು ಚಾರಿಟಿಗೆ ಹೋಗಲಿದೆ. ಮಾತನಾಡುತ್ತಾ ಭಾರತದ ಸಿನೆಮಾ, ಸೌತ್ ಸಿನೆಮಾಗಳ ಬಗ್ಗೆ ಎಲ್ಲ ಮಾತ ನಾಡಿದರು.
ಬಳಿಕ Derren Nesbitt & ( Client Eastwood ‘s Where Eagles Dare). ಇವ್ರು Clint eastwood ಜತೆ ಭೇಟಿಯಾದೆವು. ಡ್ರಾಕುಲಾ ಕಾಮಿಕ್ಸ್ ಗಳನ್ನು ಬರೆದ ಕಥೆಗಾರ, ಸಂಗೀತಗಾರ ಹಾಗೂ ನಟನೂ ಆದ Ü john Westwood ಅವರೊಂದಿಗೆ ಸಂವಾದಿಸಿದೆವು. ಸಿನೆಮಾ ಪೋಸ್ಟರ್, ಗ್ರಾಫಿಕ್ಸ್ ತಂತಜ್ಞರೆಲ್ಲರೂ ಈ ಇವೆಂಟ್ ನಲ್ಲಿ ಇದ್ದರು.
ಸಿನೆಮಾ ಆಸಕ್ತರು ಹೆಚ್ಚಿನ ಪೋಸ್ಟರ್ ಗಳನ್ನು ಸಂಗ್ರಹಿಸುತ್ತಿದ್ದರು. ಕೆಲವು ಸಿನೆಮಾ ಪೋಸ್ಟರ್ ಗಳು 3 ಲಕ್ಷ, 5 ಲಕ್ಷಕ್ಕೆ ಮಾರಾಟವಾಗುತ್ತಿತ್ತು. ವರ್ಷಕ್ಕೆ ನಾಲ್ಕು ಬಾರಿ ಈ ರೀತಿಯ ಕಾರ್ಯಕ್ರ ಮಗಳು ನಡೆಯುತ್ತವೆ. ಸಿನೆಮಾ ಚಿತ್ರೀಕರಣದ ಹಿಂದಿನ ಕಥೆಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ನನಗಂತೂ ಇದು ಅತ್ಯದ್ಭುತವಾದ ಅನುಭವವಾಗಿತ್ತು.
*ಶಶಿ, ಯುಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.