Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ; 14 ಕ್ವಿಂಟಲ್ ಸಾಮರ್ಥ್ಯದ ಕಂಟೇನರ್
2 ಎಕರೆ ತೊಗರೆ ಕಟಾವಿಗೆ ಹೆಚ್ಚು ಕಡಿಮೆ 20 ಕೃಷಿ ಕೂಲಿಕಾರರು ಬೇಕು
Team Udayavani, Dec 1, 2024, 1:45 PM IST
ಉದಯವಾಣಿ ಸಮಾಚಾರ
ಕುಷ್ಟಗಿ: ಕೂಲಿಕಾರರನ್ನು ನೆಚ್ಚಿಕೊಂಡು ತೊಗರಿ ಕಟಾವು ನಿರ್ವಹಿಸುವುದು ಕಷ್ಟ ಕಾಲದ ಪರಿಸ್ಥಿತಿಯಲ್ಲಿ ತೊಗರಿ ಯಂತ್ರಗಳು
ರೈತರ ಆಪತ್ಕಾಲದ ಉಳಿತಾಯದ ಬಂಧು ಆಗುತ್ತಿವೆ.
ತಾಲೂಕಿನಲ್ಲಿ ತೊಗರೆ ಕ್ಷೇತ್ರ ಗುರಿ ಮೀರಿದ ಬಿತ್ತನೆಯಾಗಿದ್ದು, ಇದೀಗ ಕಟಾವು ಕಾರ್ಯ ಚುರುಕುಗೊಂಡಿದೆ. ಇದೇ ಪರಿಸ್ಥಿತಿಯಲ್ಲಿ ಉತ್ತಮ ಬಿಸಿಲ ವಾತವರಣ ತೊಗರೆ ಒಕ್ಕಣೆಗೆ ಪೂರಕವಾಗಿದೆ. ತೊಗರೆ ಬೆಳೆಗೆ ಕೀಟ ಭಾಧೆ ನಿಯಂತ್ರಿಸಲು ಮೂರ್‍ನಾಲ್ಕು ಬಾರಿ ಕೀಟ ಭಾದೆ ನಿಯಂತ್ರಿಸಲು ಹಣ ಖರ್ಚು ಮಾಡಿ ಸೋತು ಸುಣ್ಣವಾಗಿರುವ ರೈತರಿಗೆ ಏಕಕಾಲಕ್ಕೆ ಕಟಾವು
ಕೂಲಿಕಾರರಿಂದ ನಿರ್ವಹಿಸುವುದು ಅಸಾಧ್ಯವಾಗಿದೆ. ಇಂತಹ ಸಂದಿಗª ಸ್ಥಿತಿಯಲ್ಲಿ ದೈತ್ಯ ಕಟಾವು ಯಂತ್ರಗಳು ಕಟಾವು
ಮಾಡಿಸುವ ಭರವಸೆ ಮೂಡಿಸಿವೆ.
ನೀರಾವರಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಟಾವು ಯಂತ್ರಗಳು ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಒಣ ಬೇಸಾಯ ಕ್ಷೇತ್ರಕ್ಕೂ ಲಗ್ಗೆ ಇಟ್ಟಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಗಾಗಲೇ ತೊಗರಿ ಕಟಾವಿಗೆ ಬಂದಿದ್ದು, ಕೆಲವೆಡೆ ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಕೂಲಿಕಾರರ ಕೊರತೆಯ ನಡುವೆಯೂ ಕೂಲಿ ವೆಚ್ಚ ನೀಗಿಸಿಕೊಂಡು ಕಟಾವು ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿದೆ.
ಖರ್ಚು ದುಪ್ಪಟ್ಟು: 2 ಎಕರೆ ತೊಗರೆ ಕಟಾವಿಗೆ ಹೆಚ್ಚು ಕಡಿಮೆ 20 ಕೃಷಿ ಕೂಲಿಕಾರರು ಬೇಕು, ಹೊತ್ತು ಗುಡ್ಡೆ ಹಾಕಬೇಕು ಅಲ್ಲದೇ ನಾಲ್ಕೈದು ದಿನ ಒಣಗಲು ಬಿಡಬೇಕು ನಂತರ ಯಂತ್ರದಿಂದ ರಾಶಿ ಮಾಡಿಸುವುದರಿಂದ ಖರ್ಚು ದುಪ್ಪಟ್ಟು ಆಗಲಿದೆ.
ಈ ಪರಿಸ್ಥಿತಿಯಲ್ಲಿ ಕೂಲಿಕಾರರಿಗಾಗಿ ದಿನಗಟ್ಟಲೆ ಕಾಯುವುದು, ಒಂದು ವೇಳೆ ಅಕಾಲಿಕ ಮಳೆಯಾದರೆ ತೊಗರೆ ಕಾಳು ಕಪ್ಪು.
ಇಲ್ಲವೇ ಗಿಡದಲ್ಲಿ ಮೊಳಕೆಯೊಡೆದು ನಷ್ಟ ಅನುಭವಿಸುವುದನ್ನು ತಪ್ಪಿಸಲು ತೊಗರೆ ಕಟಾವು ಯಂತ್ರದಿಂದ ಖರ್ಚು ಹಾಗೂ
ಸಮಯದ ಉಳಿತಾಯ ರೈತರಿಗೆ ಸಾಂದರ್ಭಿಕ ಸೈ ಎನಿಸಿಕೊಂಡಿದೆ.
14 ಕ್ವಿಂಟಲ್ ಸಾಮರ್ಥ್ಯದ ಕಂಟೇನರ್
ಕುಷ್ಟಗಿ ಸೀಮಾದ ದೋಟಿಹಾಳ ರಸ್ತೆಯಲ್ಲಿ ತೊಗರೆ ಕ್ಷೇತ್ರ ಈ ಯಂತ್ರಗಳ ಮೂಲಕ ಒಕ್ಕಣೆ ನಡೆಸಲಾಗುತ್ತಿದೆ. ತೊಗರೆ ಸಂಪೂರ್ಣ ಒಣಗಿದ್ದರೆ ಉತ್ತಮ ಕಾಳುಗಳು ಸಿಡಿಯುವುದಿಲ್ಲ 14 ಕ್ವಿಂಟಲ್ ಸಾಮರ್ಥ್ಯ ಡಬ್ಬಿಯಲ್ಲಿ (ಕಂಟೇನರ್) ಸಂಗ್ರಹವಾಗುತ್ತದೆ. ಪ್ರತಿ ಎಕರೆಗೆ 1,200ರೂನಿಂದ 1,400 ರೂ.ವರೆಗೆ ಕಟಾವಿಗೆ ದರ ನಿಗದಿ ಮಾಡಿದೆ. ಪ್ರತಿ ದಿನಕ್ಕೆ 25ರಿಂದ 30
ಎಕರೆ ಕಟಾವು ಮಾಡಲಾಗುತ್ತಿದೆ ಎಂದು ತೊಗರೆ ಕಟಾವು ಯಂತ್ರದ ಮಾಲೀಕ ಸುದೀಪ ಚಲವಾದಿ ಮಾಹಿತಿ ನೀಡಿದರು.
ಈ ಯಂತ್ರದಿಂದ ಕಟಾವು ಮಾಡಿಸುವೆ ಇದರಿಂದ ಖರ್ಚು ಉಳಿತಾಯವಾಗಲಿದೆ. ತೊಗರೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 9,500 ರೂ. ಇದ್ದು, ಈ ಧಾರಣಿ ಮುಂದಿನ ದಿನಗಳಲ್ಲಿ ಸಿಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ.
ಶರಣಪ್ಪ ಚೂರಿ, ಕುಷ್ಟಗಿ ರೈತ
ಈಗಿನ ಕಟಾವು ಯಂತ್ರದಿಂದ ಹೊಟ್ಟು ಹಾಳಾಗುವುದಿಲ್ಲ. ಕಾಳು ನೆಲಕ್ಕೆ ಸಿಡಿದು ಹಾಳಾಗುವುದಿಲ್ಲ. ಈ ಯಂತ್ರ ಒಂದು ತಿರುವಿಗೆ ಮೂರು ಕಡೆ ಗುಡ್ಡೆ ಹಾಕುತ್ತಿದೆ. ಒಂದೆಡೆ ಕೂಡಿ ಹಾಕಿ ಮಾರಾಟ ಮಾಡಬಹುದು ಇಲ್ಲವೇ ಜಮೀನಿನಲ್ಲಿ ಹರಗಿದರೆ ಜಮೀನಿಗೆ ಉತ್ತಮ ಸಾವಯವ ಗೊಬ್ಬರ ಸಿಗಲಿದೆ. ಇದು ಜಾನುವಾರುಗಳಿಗೆ ಮೇವಾಗಿ ಬಳಸಿಕೊಳ್ಳಬಹುದು.
ನಿಂಗಪ್ಪ ಜೀಗೇರಿ,ಕಡೇಕೊಪ್ಪ ರೈತ
*ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.