ಪೊಲೀಸ್ ರಕ್ಷಣೆಯಲ್ಲಿ ಪುರಸಭೆಗೆ ಆಗಮಿಸಿದ ಸದಸ್ಯ..!
ಅಚ್ಚರಿ ಮೂಡಿಸಿದ ಸದಸ್ಯ ದಯಾನಂದ ಅಕ್ಕಿ| ಕೆಲಹೊತ್ತು ಗದ್ದಲ-ಗಲಾಟೆಗೆ ಸಾಕ್ಷಿಯಾದ ಸಾಮಾನ್ಯ ಸಭೆ
Team Udayavani, Feb 10, 2023, 10:33 AM IST
ಶಿಗ್ಗಾವಿ: ಪುರಸಭೆ ಅಧ್ಯಕ್ಷರು ಹಾಗೂ ಅವರ ಸಹವರ್ತಿಗಳಿಂದ ನನಗೆ ಜೀವ ಭಯವಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷರ ವಿರುದ್ಧ ದೂರು ದಾಖಲಿಸಿದ್ದೇನೆ. ಸಾಮಾನ್ಯ ಸಭೆಯ ಮೂಲಕ ನನ್ನ ವಾರ್ಡ್ ಅಭಿವೃದ್ಧಿ ಕುರಿತು ಸಭೆಗೆ ಹಾಜರಾಗಲು ಪೊಲೀಸ್ ರಕ್ಷಣೆ ನೀಡಬೇಕೆಂದು ಹಠ ಹಿಡಿದ ಸದಸ್ಯ ದಯಾನಂದ ಅಕ್ಕಿ ಅವರು, ಪೊಲೀಸ್ ಸಿಬ್ಬಂದಿಯೊಂದಿಗೆ ಸಭೆಗೆ ಆಗಮಿಸಿ ಅಚ್ಚರಿ ಮೂಡಿಸಿದರು.
ಈ ವೇಳೆ ಗದ್ದಲ, ಗಲಾಟೆಗೆ ಪುರಸಭೆ ಸಾಮಾನ್ಯ ಸಭೆ ಸಾಕ್ಷಿಯಾಯಿತು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಾರ್ಡ್‌ನ ಜನಸಾಮಾನ್ಯರ ಅಳಲಿನ ಬಗ್ಗೆ ಚರ್ಚಿಸಬೇಕಾದ ಸಾಮಾನ್ಯ ಸಭೆ ಸದಸ್ಯ ದಯಾನಂದ ಅಕ್ಕಿ ಹಾಗೂ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಅವರ ಮಧ್ಯೆದ ಒಣ ಪ್ರತಿಷ್ಠೆಯಿಂದ ಮಾತಿಗೆ ಮಾತು ಬೆಳೆದು ಕೆಲಹೊತ್ತು ಸಭೆ ರಣಾಂಗಣವಾಗಿ ಮಾರ್ಪಟ್ಟಿತು.
ಅಧ್ಯಕ್ಷರ ಬೆನ್ನಿಗೆ ಹಲವರು ನಿಂತರೆ, ಸದಸ್ಯ ದಯಾನಂದ ಅವರ ನಿಲುವಿಗೆ ಬೆಂಬಲವಾಗಿ ಕೆಲವರು ವಾದ ವಿವಾದ ಮಾಡಿದರು. ಸರ್ಕಾರ ನಾಮನಿರ್ದೇಶನ ಮಾಡಿದ ನೂತನ ಸದಸ್ಯರು ಸಾಮಾನ್ಯ ಸಭೆಯಲ್ಲಿ ಹಾಜರಾಗಿ ಪುರಸಭೆ ಆಡಳಿತದ ಕಿತ್ತಾಟ ಕಣ್ತುಂಬಿಕೊಳ್ಳುವಂತಾಯಿತು. ಪುರಸಭೆಯ ನೂತನ ನಾಮನಿರ್ದೇಶನ ಸದಸ್ಯ ಜಯಣ್ಣ ಹೆಸರೂರು ಸಭೆಯಲ್ಲಿ ಸದಸ್ಯರಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರೂ ಪ್ರಯೋಜನವಾಗದೇ, ಬಂದಿದ್ದಕ್ಕೆ ಬಹಳ ಕಿಮ್ಮತ್ತು ಕೊಟ್ರಿ ಅಂತಾ ಹೇಳಿ ಸಭೆಯಿಂದಲೇ ಎದ್ದು ಹೋದರು.
ನಂತರ ಮನೆಗೆ ಹೋದವರನ್ನು ಜೀಪ್ ಕೊಟ್ಟು ಕಳಿಸಿ ಮತ್ತೆ ಸಭೆಗೆ ಕರೆಯಿಸಿ ಸಮಾಧಾನಪಡಿಸಲಾಯಿತು. ಸಾಮಾನ್ಯಸಭೆ ಚರ್ಚೆ ಬದಲಿಗೆ ಗದ್ದಲದಿಂದ ಸಾಕಾಗಿ ಅಧ್ಯಕ್ಷರ ಅಪ್ಪಣೆಯಂತೆ ಮುಖ್ಯಾಧಿಕಾರಿ ಜಗದೀಶ ಸಭೆಯನ್ನೇ ಮುಂದೂಡಿ ಘೋಷಣೆ ಮಾಡಿದರು. ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ ಹಾಗೂ ಶ್ರೀಕಾಂತ ಬುಳ್ಳಕ್ಕನವರ ಎದ್ದು ನಿಂತು ಈಗಾಗಲೇ ಸಾಮಾನ್ಯ ಸಭೆ ನಡೆದು ಆರು ತಿಂಗಳಾಗಿದೆ.
ಸಾಮಾನ್ಯ ಸಭೆ ಮುಂದುಡುವುದು ಬೇಡ. ಪ್ರಸಕ್ತ ತಿಂಗಳಲ್ಲಿಯೇ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಬಹುದು. ಮತ್ತೆ ವಾರ್ಡ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಗುವುದಿಲ್ಲ. ಏನೆ ಚರ್ಚೆಯಿದ್ದರೂ ಇವತ್ತೇ ಮಾಡಿ ಮುಗಿಸಿ ಎಂದು ಒತ್ತಡ ಹೇರಿದರು. ಎರಡನೇ ಬಾರಿಗೆ ಮತ್ತೆ ಸಭೆ ಸೇರಿದ ಸದಸ್ಯರು ಅಜೆಂಡಾದಂತೆ ಖರ್ಚು ವೈಚ್ಚಗಳ ಮಾಹಿತಿ ಅಲ್ಲದೇ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳು ಹಿಂದಿನ ಸಭೆಯ ನಡಾವಳಿ ದೃಢಿಕರಿಸುವುದು, ಹೊಸ ಕಾಮಗಾರಿಗಳಿಗೆ ಸಭೆಯ ಮಂಜೂರಾತಿ ಟೆಂಡರ್‌ಗಳ ದರ ಮಾಹಿತಿ ವಿಚಾರ ಚರ್ಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶೇಖವ್ವ ವಡ್ಡರ, ಜಾಫರ್ ಖಾನ ಪಠಾಣ, ಸುಲೇಮಾನ್ ತರ್ಲಘಟ್ಟ, ಅನುರಾಧ ಮಾಳ್ವಧೆ, ಸಂಗೀತಾ ವಾಲ್ಮೀಕಿ, ಸಿದ್ಧಾರ್ಥಗೌಡ ಪಾಟೀಲ, ರಮೇಶ ವನಹಳ್ಳಿ, ರೇಖಾ ಕಂಕನವಾಡ, ಜೋತಿ ನಡೂರ, ವಸಂತಾ ಬಾಗೂರ, ಪುರಸಭೆಯ ಕಂದಾಯ ಅಭಿಯಂತರರು ಹಾಗೂ ಲೆಕ್ಕ ಶಾಖೆ ಅಧಿ ಕಾರಿಗಳಿದ್ದರು. ಶೈಲಾ ಪಾಟೀಲ ಸಭೆ ವಿಷಯಗಳನ್ನು ಓದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.