21ನೇ ಶತಮಾನದ ನವ ಭಾರತಕ್ಕೆ ಸುಧಾರಣೆಗಳ ಪರ್ವ


Team Udayavani, Jul 1, 2021, 7:45 AM IST

21ನೇ ಶತಮಾನದ ನವ ಭಾರತಕ್ಕೆ ಸುಧಾರಣೆಗಳ ಪರ್ವ

ನಾಲ್ಕು ವರ್ಷಗಳ ಹಿಂದೆ ಇದೇ ದಿನ ಅಂದರೆ ಜುಲೈ ಒಂದರಂದು ದೇಶದಲ್ಲಿ ಕ್ರಾಂತಿಕಾರಿ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಗೆ ಬಂದಿತ್ತು. ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಳವಡಿಕೆಯಾಗಿದ್ದು, ಜಗತ್ತಿನಾದ್ಯಂತ ಈ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಗ್ರಾಹಕ ಮತ್ತು ತೆರಿಗೆದಾರರ ಸ್ನೇಹಿ ವ್ಯವಸ್ಥೆ ಎಂದೇ ಬಣ್ಣಿಸಲಾಗುತ್ತಿರುವ ಜಿಎಸ್ಟಿ ಜಾರಿಗೆ ಬಂದ ಜುಲೈ ಒಂದನ್ನು ಜಿಎಸ್‌ಟಿ ದಿನ ಎಂದೇ ಬಣ್ಣಿಸಲಾಗುತ್ತಿದೆ.

ಭಾರತಕ್ಕೆ ಬೇಕಾಗಿರುವುದು ಪರಿವರ್ತನೆಯೇ ಹೊರತು ಹೆಚ್ಚುವರಿ ಬದ ಲಾವಣೆಗಳಲ್ಲ. ನರೇಂದ್ರ ಮೋದಿ ಸರಕಾರವು ಆರ್ಥಿಕತೆಯ ನಿಯಂತ್ರಣವನ್ನು ತೆಗೆದು ಹಾಕಲು ಮತ್ತು ವ್ಯವಸ್ಥಿತ ಸುಧಾರಣೆಗಳನ್ನು ತರಲು ಬದ್ಧವಾಗಿದೆ.

ಈ ವರ್ಷ ನಾವು ಭಾರತೀಯ ಆರ್ಥಿಕತೆಯ ಮೇಲಿನ ನಿಯಂತ್ರಣ ತೆಗೆದು ಹಾಕಿದ 30ನೇ ವರ್ಷವೆಂದು ಗುರುತಿಸುತ್ತಿದ್ದೇವೆ. ಕೆಲವರು ವಾದಿಸಿದಂತೆ ಇದು ಪಾವತಿ ಬಿಕ್ಕಟ್ಟಿನ ಸಮತೋಲನದೊಂದಿಗೆ ನಿಧಿ ಮತ್ತು ಬ್ಯಾಂಕ್‌ನ ಕಡ್ಡಾಯದಡಿ ಆರಂಭವಾಯಿತು. ಆದರೆ ಆ ಹೊತ್ತಿಗೆ ಉದ್ಯಮವು ಪರವಾನಿಗೆ, ಲೈಸ®Õ… ಕೋಟಾ ಮತ್ತು ವಿವೇ ಚನ ನಿಯಮಗಳಿಂದ ಕಟ್ಟಿಹಾಕಲ್ಪಟ್ಟಿತ್ತು, ಉದ್ಯಮಕ್ಕೆ ಉಸಿರಾಡುವಂತಹ ಅವಕಾಶವಿರಲಿಲ್ಲ. ಉಸಿರುಕಟ್ಟಿ ದಂತಹ ವಾತಾವರಣದಲ್ಲಿ 1991ರ ಉದಾರೀಕರಣ ದಿಂದಾಗಿ ಆರ್ಥಿಕತೆಯು ತಾಜಾ ಗಾಳಿ ಉಸಿರಾಡುವು ದನ್ನು ಸ್ವಾಗತಿಸಿತು. ನಾವು ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್‌ ಮತ್ತು ಅಂದಿನ ಹಣಕಾಸು ಸಚಿವರು ಡಾ| ಮನಮೋಹನ್‌ ಸಿಂಗ್‌ ಅವರನ್ನು ಅವರು ತಮ್ಮ ರಾಜ ಕೀಯ ಬದ್ಧತೆಯೊಂದಿಗೆ ಸುಧಾರಣೆ ಗಳನ್ನು ಮುಂದು ವರಿಸಿಕೊಂಡು ಹೋಗಿದ್ದನ್ನು ಸ್ಮರಿಸಬೇಕಾಗಿದೆ.

ಭಾರತವನ್ನು “ಬಂಡೆಯಿಂದ ಬೀಳದಂತೆ ರಕ್ಷಿಸಿದ’ ನಾಯಕತ್ವಕ್ಕಾಗಿ ಅವರನ್ನು ನಾವು ಶ್ಲಾಘಿಸಿದರೆ, ಭಾರತಕ್ಕಾಗಿ ಇಡೀ ದಶಕವನ್ನು ಕಳೆದುಕೊಂಡಿದ್ದಕ್ಕಾಗಿ ನಾವು ಅವರನ್ನು ಖಂಡಿಸಬೇಕಾಗಿದೆ. ಹಿಂದಿನ ಹಣಕಾಸು ಸಚಿವರು ಅನಂತರ ಪ್ರಧಾನಮಂತ್ರಿಯಾಗಿ ನಾಯಕತ್ವ ವಹಿಸಿಕೊಂಡರು. ಆದರೆ ಅವರು ವೇಗವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲರಾದರು. ಇದು ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯ ಸಂಪೂರ್ಣ ಅನುಪಸ್ಥಿತಿ. ಕಳೆದೊಂದು ದಶಕಕ್ಕಿಂತ ಮುಂಚೆ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ತಮ್ಮ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರು ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯೋಜನೆಗೆ ಬದ್ಧತೆ ತೋರಿದರು. ಆದರೆ ಅದು 2004 ರಿಂದ 2014ರ ವರೆಗೆ ಕಾರ್ಯಗತವಾಗುವಲ್ಲಿ ವಿಫಲವಾಯಿತು. ಜಿಎಸ್‌ಟಿ ಮತ್ತು ದಿವಾಳಿತನ ಹಾಗೂ ದಿವಾಳಿ ಸಂಹಿತೆ (ಐಬಿಸಿ) ಎರಡನ್ನೂ ನರೇಂದ್ರ ಮೋದಿ ಅವರ ಸರಕಾರ ಮೊದಲ ಅವಧಿಯಲ್ಲಿಯೇ ಅಂಗೀಕರಿಸಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಕೂಟ (ಎನ್‌ಡಿಎ) ನಮ್ಮ ಆರ್ಥಿಕತೆಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕುವ ಬದ್ಧತೆ ಮತ್ತು ನಂಬಿಕೆಯನ್ನು ತೋರಿದೆ. “ಇದು ಕನಿಷ್ಠ ಸರಕಾರ ಗರಿಷ್ಠ ಆಡಳಿತ’ದಿಂದ ಆರಂಭವಾಯಿತು. ಸರಳ ಮಾರ್ಗದರ್ಶಿ ಸಿದ್ಧಾಂತ “ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌’, ಅಂದರೆ ಯಾವುದೇ ತಾರ ತಮ್ಯವಿಲ್ಲ ಅಥವಾ ಯಾವುದೇ ಆಧಾರದ ಮೇಲೆ ಓಲೈಕೆ ಇಲ್ಲ ಮತ್ತು ಯಾರಿಗೂ ಖಜಾನೆಯ ಶುಲ್ಕ ಮೊದಲಿಲ್ಲ, ಎಲ್ಲರೂ ಸಮಾನರು ಎಂಬುದಾಗಿದೆ.

ಕನಿಷ್ಠ ಸರಕಾರ ಗರಿಷ್ಠ ಆಡಳಿತವು, ರಚನಾತ್ಮಕ ಸುಧಾರಣೆಗಳು ಮತ್ತು ಉತ್ತಮ ವಾತಾವರಣ ನಿರ್ಮಾಣ ಮಾಡುವ ಕಾರ್ಯ ಎರಡನ್ನೂ ಒಳಗೊಂಡಿವೆ. ಪುರಾತನ ಕಾನೂನುಗಳನ್ನು ತೆಗೆದು ಹಾಕ ಲಾಗುತ್ತಿರುವುದರಿಂದ ಬಂಡವಾಳ ಹಿಂದೆಗೆತ, ನಿಯಂತ್ರಣ ತೆಗೆದು ಹಾಕುವುದು, ನೋಟು ಅಮಾನ್ಯ ಇವೆಲ್ಲವೂ ಸಮಾನವಾಗಿ ನಡೆಯುತ್ತಿದ್ದು, ನಿಯಮಗಳ ಸಂಖ್ಯೆಯನ್ನು ತಗ್ಗಿಸಲಾಗಿದೆ. ತಂತ್ರಜ್ಞಾನ ಅಳವಡಿಕೆಯಿಂದಾಗಿ ಪಾರದರ್ಶಕತೆ ತರಲಾಗಿದೆ.

ಇದು ಪಿಎಂ ಜನ್‌ ಧನ್‌ ಯೋಜನೆ, ಆಧಾರ್‌ನಲ್ಲಿ ಮಾಡಿದ ಗರಿಷ್ಠ ಸಾಧನೆ ಮತ್ತು ಮೊಬೈಲ್‌ ಬಳಕೆಯ ವ್ಯಾಪ್ತಿ ಹೆಚ್ಚಾಗಿದ್ದು ಜೆಎಎಂ, ಹಣಕಾಸು ಸೇರ್ಪಡೆ ಯೋಜನೆ, ನೇರ ನಗದು ವರ್ಗಾವಣೆ (ಡಿಬಿಟಿ) ಕೋವಿಡ್‌-19 ಸಾಂಕ್ರಾಮಿಕದ ಸಮಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತು ಎಂಬುದನ್ನು ತೋರುತ್ತದೆ. ಇದು ನಿಜಕ್ಕೂ, ಇಡೀ ವಿಶ್ವ ಬಡವರನ್ನು ತಲುಪಲು ಹೆಣಗಾಡುತ್ತಿದ್ದ ಸಂದರ್ಭದಲ್ಲಿ ನಾವು ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿ ಕೇವಲ ಬಟನ್‌ ಕ್ಲಿಕ್‌ ಮಾಡುವ ಮೂಲಕ ಅವರ ಖಾತೆಗೆ ಹಣ ಜಮೆ ಮಾಡಿ ಮನ್ನಣೆ ಗಳಿಸುತ್ತಿದ್ದೆವು. ಅತ್ಯಂತ ಅಗತ್ಯ ಮತ್ತು ನೆರವು ಅವಶ್ಯವಿದ್ದವರಿಗೆ ಪರಿಹಾರವನ್ನು ಒದಗಿಸಿತು.

ಕೇವಲ ಜಾಮ್‌ ಮಾತ್ರವಲ್ಲ, ಹಲವು ಕ್ರಮಗಳನ್ನು ಅತ್ಯಂತ ಜಾಗರೂಕತೆಯಿಂದ ಮಾಡಲಾಯಿತು ಮತ್ತು ಯಾವುದೇ ತಾರತಮ್ಯವಿಲ್ಲದೆ ಕಾರ್ಯಗತಗೊಳಿಸಲಾಯಿತು. ಬಡವರಿಗೆ ಯಾವುದಕ್ಕೂ ಭಿಕ್ಷೆ ಬೇಡದಂತಹ ಅಗತ್ಯ ವಾತಾವರಣವನ್ನು ಸೃಷ್ಟಿಸಲಾಯಿತು. ಎಲ್ಲ ಅರ್ಹ ಮತ್ತು ಕುಟುಂಬದವರಿಗೆ ಸ್ವಯಂ ಪ್ರೇರಿತವಾಗಿ ವಿದ್ಯುತ್‌(ಉಜಾಲ), ಶೌಚಾಲಯ(ಸ್ವತ್ಛತಾ) ಮತ್ತು ಶುದ್ಧ ಅಡುಗೆ ವಿಧಾನ (ಉಜ್ವಲಾ) ಮೂಲಕ ನೀಡಲಾಯಿತು. ಸಾರ್ವಜನಿಕರು ಮತ್ತು ಕುಟುಂಬಗಳಿಗೆ ನಗದು ರಹಿತ ಆರೋಗ್ಯ ಸೇವೆ(ಆಯುಷ್ಮಾನ್‌) ಮತ್ತು ಜೀವ ಹಾಗೂ ಅಪಘಾತ ರಕ್ಷಣೆ (ಜೀವನ್‌ ಜ್ಯೋತಿ ಸುರಕ್ಷಾ ಬಿಮಾ) ಒದಗಿಸಲಾಗಿದೆ. ಸಣ್ಣ ವ್ಯಾಪಾರಿಯೂ ಕೂಡ ಯಾವುದೇ ಭದ್ರತೆ ಯಿಲ್ಲದೆ 50,000ದಿಂದ 10 ಲಕ್ಷ ರೂ.ಗಳವರೆಗೆ ಮುದ್ರಾ ಸಾಲ ಪಡೆಯಬಹುದಾಗಿದೆ. ಸಾಂಕ್ರಾಮಿಕದ ಸಮಯ ದಲ್ಲಿ ಆರಂಭಿಸಲಾದ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ಹೊಟೇಲ್‌ ಹೊಂದಿರು ವವರಿಗೆ ಯಾವುದೇ ಖಾತ್ರಿಯಿಲ್ಲದೆ 10,000 ರೂ.ಗಳವರೆಗೆ ಸಾಲ ನೀಡಲಾಗುತ್ತಿದೆ.

ಬ್ಯಾಂಕ್‌ಗಳ ಮೂಲಕ 2.5 ಮಿಲಿಯನ್‌ಗೂ ಅಧಿಕ ವ್ಯಾಪಾರಿಗಳು ಸಾಲ ಪಡೆದಿ ದ್ದಾರೆ. ಡ್ರೋನ್‌ ಬಳಸಿ, ಖಚಿತ ಭೂದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅವರ ಆಸ್ತಿಯ ಗಾತ್ರ ಎಷ್ಟೇ ಇದ್ದರೂ ಹಕ್ಕಿನ ದಾಖಲೆ ನೀಡುತ್ತಿರುವುದರಿಂದ ಬಡವರ ಸಶಕ್ತೀಕರಣ ವಾಗುತ್ತಿದೆ.

ಈ ಎಲ್ಲ ಪ್ರತಿಯೊಂದು ಯೋಜನೆಗಳ ವಿಶಿಷ್ಟ ಅಂಶ ಇರುವುದು ಅವುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ. ಯಾರೊಬ್ಬರಿಗೂ ಪ್ರಯೋ ಜನ ವನ್ನು ನಿರಾಕರಿಸದೇ ಪ್ರತಿಯೊಬ್ಬ ಅರ್ಹ ಪ್ರಜೆಯೂ ಅದನ್ನು ಪಡೆಯುತ್ತಿದ್ದಾರೆ. ಅದು ಅಭಿವೃದ್ಧಿಯಲ್ಲಿ ಎಲ್ಲರನ್ನೂ ಸೇರ್ಪಡೆ ಮಾಡಿ ಕೊಳ್ಳುವ ಮನೋಭಾವವಾಗಿದೆ. 5 ವರ್ಷಗಳೊಳಗೆ ಕೊನೆಯ ಮೈಲು ಹಂತದವರೆಗೆ ತಲುಪಿರುವುದರ ಕುರಿತು ಆಡಳಿತದ ಬಗೆಗಿನ ಹಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ.

ಅಭಿವೃದ್ಧಿಗೆ ಮಾರುಕಟ್ಟೆ ಸುಧಾರಣೆಗಳು ಅತ್ಯಂತ ನಿರ್ಣಾಯಕ ಅಂಶಗಳಾಗಿವೆ. ವ್ಯಾಪಕ ಸಮಾಲೋಚನೆಗಳ ಅನಂತರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸ ಲಾಗಿದೆ. 44 ಕಾರ್ಮಿಕ ಕಾನೂನುಗಳನ್ನು ಸರಳೀ ಕರಣಗೊಳಿಸಿ ನಾಲ್ಕು ಸಂಹಿತೆಗಳ ನ್ನಾಗಿ ಮಾರ್ಪಾಡು ಮಾಡ ಲಾಗಿದೆ. ಸಾಂಕ್ರಾಮಿಕ ದೊಡ್ಡ ಸವಾಲನ್ನು ಒಡ್ಡಿದ್ದು, ಆದರೆ ಭಾರತವು ಪ್ರಗತಿ  ಪಥದಲ್ಲಿ ಸಾಗುವ ತನ್ನ ದೃಢತೆಯನ್ನು ತಡೆಯಲು ಹಾಗೂ ದುರ್ಬಲಗೊಳಿಸಲು ಸಾಧ್ಯವಾಗಲಿಲ್ಲ. ಇದು ಪರಿವರ್ತನೆಯನ್ನು ಬಯಸಿದೆಯೇ ಹೊರತು ಬದಲಾವಣೆಗಳನ್ನಲ್ಲ. ಕಳೆದು ಹೋದ ದಶಕಕ್ಕೂ ನಾವು ಸರಿದೂಗಿಸಬೇಕಿದೆ. ಸಾಂಕ್ರಾಮಿಕದ ವೇಳೆ ಬಡವರು ಮತ್ತು ಅಗತ್ಯವಿರುವವರಿಗೆ ನಾವು ನೆರವು ಮತ್ತು ಪರಿಹಾರವನ್ನು ವಿಸ್ತರಣೆ ಮಾಡಿದ್ದೇವೆ. ಸುಧಾರಣೆಗೆ ನಮ್ಮ ಮುಂದಿರುವ ಸಮಯದ ಅವಕಾಶವನ್ನು ನಾವು ಕಳೆದುಕೊಂಡಿಲ್ಲ.

ಆರೋಗ್ಯ ವಲಯ ಮತ್ತು ಅದರ ನಿರ್ಬಂಧಗಳನ್ನು ತೀವ್ರ ಗೊಳಿಸಲಾಗಿದೆ. ಇಂಧನ ವಲಯದಲ್ಲಿ ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ ಸುಸ್ಥಿರ ಪರಿಸರ ಗುರಿಗಳ ಸಾಧನೆಗೆ ಖಾಸಗಿ ವಲಯದ ದಕ್ಷತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಡಿಜಿಟಲ್‌ ತಂತ್ರಜ್ಞಾನದ ಮೂಲಕ ಒಂದು ರಾಷ್ಟ್ರ, ಒಂದು ಪಡಿತರ ಚೀಟಿಯನ್ನು ಸಾಧಿಸಲಾಗಿದ್ದು, ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದವರು ಇದನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಸಾಂಕ್ರಾಮಿಕದ ಸಮಯದಲ್ಲೂ ರಾಜ್ಯಗಳ ಸಹಕಾರ ದೊಂದಿಗೆ ವ್ಯವಸ್ಥಿತ ಸುಧಾ ರಣೆಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಪ್ರೋತ್ಸಾಹಕರ ಕ್ರಮವಾಗಿ ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಪ್ರತಿಯೊಂದು ಮೈಲುಗಲ್ಲುಗಳನ್ನು ಸಾಧಿಸಲು ನೆರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲಿಂಕ್ಡ್ ಇನ್‌ನಲ್ಲಿ ಪೋಸ್ಟ್ ಮಾಡಿದ “ರಿಫಾರ್ಮಿಂಗ್‌ ಬೈ ಕನ್ವಿಕ್ಷನ್‌ ಆ್ಯಂಡ್‌ ಇನ್ಸೆಟಿವ್ಸ್‌’ ಶೀರ್ಷಿಕೆಯಡಿ ಪ್ರಕಟವಾದ ಲೇಖನದಲ್ಲಿ ಈ ಕೆಲವು ಸುಧಾರಣೆಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳೆಂದರೆ ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಏಳು ಕಾಯ್ದೆಗಳಡಿ ಸ್ವಯಂಚಾಲಿತ ಆನ್‌ಲೈನ್‌ ಮತ್ತು ತಾರತಮ್ಯವಿಲ್ಲದ ಲೈಸನ್ಸ್‌ ವಿತರಣೆ, ಆಸ್ತಿ ತೆರಿಗೆಯ ದರಗಳ ಅಧಿಸೂಚನೆ, ನೋಂದಣಿ ಶುಲ್ಕದ ಮಾರ್ಗಸೂಚಿಗೆ ಅನುಗುಣವಾಗಿ ನೀರು ಮತ್ತು ಒಳಚರಂಡಿ ಶುಲ್ಕ ಮತ್ತು ಉಚಿತ ವಿದ್ಯುತ್‌ ಪೂರೈಕೆ ಬದಲಾಗಿ ಡಿಬಿಟಿ ನೆರವು.

ಈ ಅನಿರೀಕ್ಷಿತ ಪರಿಸ್ಥಿತಿ ಎದುರಿಸುತ್ತಿರುವ ಸಂಕಷ್ಟಗಳಿಂದ ಆರ್ಥಿಕತೆಯನ್ನು ಮೇಲೆತ್ತಲು ಸಾಂಕ್ರಾಮಿಕದ ಮಧ್ಯೆ ಸಿದ್ಧಪಡಿಸಿದ ಬಜೆಟ್‌ 2021 ಮೂಲ ಸೌಕರ್ಯ ವೆಚ್ಚಗಳಿಗೆ ಹೆಚ್ಚಿನ ಒತ್ತು ನೀಡಿತು. ಇದು ಸಾರ್ವಜನಿಕ ವಲಯದ ಉದ್ಯಮಗಳಿಗೆ ನೀತಿ ಸೂಚನೆಯನ್ನು ನೀಡುತ್ತದೆ ಮತ್ತು ಹಣಕಾಸು ವಲಯದ ಸುಧಾರಣೆಗಳಿಗೆ ನೀಲನಕ್ಷೆ ಒದಗಿಸುತ್ತದೆ. ಬ್ಯಾಂಕ್‌ಗಳನ್ನು ವೃತ್ತಿಪರಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಬಾಂಡ್‌ ಮಾರುಕಟ್ಟೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿ ತೆರಿಗೆ ಆಡಳಿತವನ್ನು ಮುಖಾಮುಖೀ ರಹಿತಗೊಳಿಲಾಗಿದ್ದು, ಕಿರುಕುಳಕ್ಕೆ ಕಾರಣವಾದ ಅಂಶಗಳನ್ನು ತೆಗೆದು ಹಾಕಲಾಗಿದೆ. ಸ್ವತ್ತು ನಗದೀಕರಣ ಯೋಜನೆ ಜಾರಿಗೆ ಸಿದ್ಧವಾಗಿದೆ. ಉತ್ತಮ ನಿಯಂತ್ರಣ ಮತ್ತು ಹೆಚ್ಚಿನ ಪಾರದರ್ಶಕತೆಯಿಂದಾಗಿ ದೇಶೀಯ ಸಗಟು ಹೂಡಿಕೆದಾರರ ವಿಶ್ವಾಸ ವೃದ್ಧಿಯಾಗಿದೆ. ಅವರನ್ನು ಮಾರುಕಟ್ಟೆಗಳತ್ತ ಸೆಳೆಯಲಾಗುತ್ತಿದೆ. 1991ರ ಸುಧಾರಣೆಗಳು 20ನೇ ಶತಮಾನದ ಕತೆ. ಇಂದು ಕೈಗೊಂಡಿರುವ ಸುಧಾರಣೆಗಳು 21ನೇ ಶತಮಾನದ ನವಭಾರತಕ್ಕೆ ಅತ್ಯಗತ್ಯ.

– ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವರು

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.