Desi Swara:ಅಮೆರಿಕದ ರಾಜಧಾನಿಯಲ್ಲೊಂದು ಸುತ್ತು : ಚೆರ್ರಿ ಬ್ಲಾಸೂಮ್ ಫೆಸ್ಟಿವಲ್ ಸೊಗಡು
ವಾಷಿಂಗ್ಟನ್ ಸ್ಮಾರಕ ಮತ್ತು ಮಧ್ಯದಲ್ಲಿ ನೀರಿನ ಕೊಳವಿದೆ
Team Udayavani, Mar 30, 2024, 12:14 PM IST
ಅಮೆರಿಕದ ದೇಶದ ರಾಜಧಾನಿ ವಾಷಿಂಗ್ಟನ್ ಡಿಸಿ. ಇದನ್ನು ಡಿಸಿ ಎಂದು ಆಡುಮಾತಿನಲ್ಲಿ ಹೇಳುತ್ತಾರೆ. ಡಿಸಿ ಎಂದರೆ ಡಿಸ್ಟ್ರಿಕ್ ಆಫ್ ಕೊಲಂಬಿಯಾ. 1790ರಲ್ಲಿ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್ಟನ್ ಅಮೆರಿಕ ದೇಶದ ರಾಜಧಾನಿಗೆಂದು ವರ್ಜಿನಿಯಾ ಮತ್ತು ಮೆರಿಲ್ಯಾಂಡ್ ರಾಜ್ಯಗಳ ಮಧ್ಯದಲ್ಲಿನ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ಎಲ್ಲ ಪಕ್ಷದವರು ನಿಷ್ಪಕ್ಷಪಾತವಾದ ನಿರ್ಣಯವನ್ನು ತೆಗೆದುಕೊಳ್ಳಬಹುದು ಎಂದು ಇದನ್ನೊಂದು ಜಿಲ್ಲೆಯನ್ನಾಗಿ ಘೋಷಿಸಿದರು. ಅವರ ನೆನಪಿಗಾಗಿಯೇ ಇದಕ್ಕೆ ವಾಷಿಂಗ್ಟನ್ ಎಂದು ಹೆಸರು ಬಂದಿದೆ.
ಪ್ರಸಿದ್ಧ ವೈಟ್‌ಹೌಸ್ ಇರುವ ನಗರ. ಅಮೆರಿಕದ ಅಧ್ಯಕ್ಷರ ವಾಸ ಈ ವೈಟ್‌ಹೌಸ್‌ನಲ್ಲಿಯೇ ಇರುತ್ತದೆ. ಇದರ ಜತೆಗೆ ಜನಪ್ರಿಯ ಸ್ಮಾರಕಗಳು, ಕೀರ್ತಿಸ್ತಂಭಗಳು ಇಲ್ಲಿದ್ದು ಪ್ರವಾಸಕ್ಕೆ ಯೋಗ್ಯವಾದ ಸ್ಥಳವಾಗಿದೆ. ಪ್ರತೀ ವರ್ಷ ಮಾರ್ಚ್‌ನಲ್ಲಿ ಇಲ್ಲಿ ಚೆರ್ರಿ ಬ್ಲಾಸೂಮ್ ಫೆಸ್ಟಿವಲ್ ನಡೆಯುತ್ತದೆ. ವಸಂತಕಾಲ ಇನ್ನೇನು ಶುರುವಾಗುತ್ತದೆ ಎನ್ನುವಾಗ ಈ ಚೆರ್ರಿ ಮರಗಳಲ್ಲಿ ಪುಟ್ಟ ಹೂಗಳು ಗುತ್ಛಗಳಲ್ಲಿ ಅರಳಿ ಇಡೀ ಮರದ ತುಂಬ ಹಬ್ಬಿದಾಗ ಅವುಗಳನ್ನು ನೋಡುವುದು ಹಬ್ಬವೇ! ಮರದ ರೆಂಬೆ-ಕೊಂಬೆಗಳು ಕಾಣದಂತೆ ಇಡೀ ಮರವನ್ನು ಅಪ್ಪಿಕೊಂಡು ಬಿಡುವ ಈ ಹೂವುಗಳು ಬಿಳಿ ಮತ್ತು ಗುಲಾಬಿ ಬಣ್ಣದಲ್ಲಿರುತ್ತವೆ. ಸಾಲು ಮರಗಳು ಹೀಗೆ ಹೂ ಬಿಟ್ಟು ನಿಂತರೆ ನಯನಮನೋಹರವಾಗುವ ಆ ಚೆಲುವನ್ನು ಎಷ್ಟು ಆಸ್ವಾದಿಸಿದರೂ ಸಾಕೆನ್ನಿಸುವುದಿಲ್ಲ.
ಫೋಟೋಮ್ಯಾಕ್ ನದಿಯ ದಂಡೆಯ ಮೇಲೆ ಇಂತಹ ನೂರಾರು ಗಿಡಗಳಿದ್ದು ಅವುಗಳು ಹೂ ಬಿಟ್ಟಾಗ ನೋಡಲು ಜನ ನೂರಾರು ಮೈಲುಗಟ್ಟಲೇ ಪ್ರವಾಸ ಮಾಡಿ ಹೋಗುತ್ತಾರೆ. ಈ ಚೆರಿì ಹೂಗಳ ಆಯಸ್ಸು ಬಹಳ ಕಡಿಮೆಯಿರುತ್ತದೆ. ಹೆಚ್ಚೆಂದರೆ ಮೂರ್ನಾಲ್ಕು ದಿನ. ಅರಳಿದಷ್ಟೇ ಬೇಗ ಮುದುಡಿ ಉದುರಿಬಿಡುವ ಹೂಗಳನ್ನು ಸರಿಯಾದ ಸಮಯದಲ್ಲಿ ನೋಡುವುದು ಸೌಭಾಗ್ಯವೇ. ಅದಕ್ಕೆ ಈ ಗಿಡಗಳು ಹೂ ಬಿಡುವ ದಿನಾಂಕವನ್ನು ಹವಾಮಾನದ ಮತ್ತು ಹಿಂದಿನ ವರ್ಷಗಳ ದಾಖಲೆಯ ಆಧಾರದ ಮೇಲೆ ಗುರುತಿಸಿ ಆ ದಿನವನ್ನು ಚೆರ್ರಿ ಬ್ಲಾಸೂಮ್ ಫೆಸ್ಟಿವಲ್ ಎಂದು ಕರೆಯುತ್ತಾರೆ.
ವೆಬ್‌ಸೈಟ್‌ನಲ್ಲಿ ಈ ದಿನಾಂಕ ಯಾವಾಗ ಘೋಷಣೆಯಾಗುತ್ತದೋ ಎಂದು ಜನ ಕಾದು ಕೂತಿರುತ್ತಾರೆ. ಅದು ಗೊತ್ತಾದ ಕೂಡಲೇ ತಮ್ಮ ಪ್ರಯಾಣವನ್ನು ಆಯೋಜಿಸಿಕೊಂಡು ಹೂವರಳುವ ಸಂಭ್ರಮವನ್ನು ಆಸ್ವಾದಿಸುತ್ತಾರೆ. ವಾಷಿಂಗ್ಟನ್ ಸ್ಮಾರಕ ಇನ್ನೊಂದು ಜನಪ್ರಿಯ ತಾಣ. ಇದರ ವಿಷಯ ಬಂದಾಗಲೆಲ್ಲ ನನಗೆ ಕೆ.ಸತ್ಯನಾರಾಯಣ ಅವರ ವಾಷಿಂಗ್ಟನ್ ಮೆಮೊರಿಯಲ್ ಮುಂದೆ ಎನ್ನುವ ಕಥೆ ನೆನಪಾಗುತ್ತದೆ.
ಈ ಸ್ಮಾರಕವನ್ನು ಅಮೆರಿಕ ದೇಶದ ಪಿತಾಮಹ ಎಂದೇ ಕರೆಸಿಕೊಳ್ಳುವ ಜಾರ್ಜ್ ವಾಷಿಂಗ್ಟನ್ ಅವರ ಸ್ಮರಣಾರ್ಥವಾಗಿ ಕಟ್ಟಿದ್ದು. 555 ಅಡಿಗಳ ಉದ್ದನೆಯ ಕಲ್ಲಿನ ಈ ಆಕೃತಿ ಒಂದು ಕಾಲದ ಪ್ರಪಂಚದಲ್ಲಿಯೇ ಅತೀ ಎತ್ತರದ ನಿರ್ಮಾಣವಾಗಿತ್ತು. ವಿಶೇಷವೆಂದರೆ ಚಪ್ಪಟೆ ಕಲ್ಲಿನ ಹಾಗೆ ಕಾಣುವ ಈ ಸ್ಮಾರಕದೊಳಗೆ ಒಂದು ಲಿಫ್ಟ್ ಇದ್ದು ಇದರ ಮೂಲಕ ತುತ್ತ ತುದಿಯಲ್ಲಿರುವ ಅಟ್ಟಕ್ಕೆ ತಲುಪಿ ಅಲ್ಲಿಂದ ಇಡೀ ನಗರವನ್ನು ವೀಕ್ಷಿಸಬಹುದು. ಹಾಗೆ ಹೋಗುವಾಗ ಲಿಫ್ಟ್ನ ಇಕ್ಕೆಲಗಳಲ್ಲಿ ಕಲ್ಲಿನ ಗೋಡೆ ಕಾಣಿಸಿ ಹೊಸ ಬಗೆ ಅನುಭವವನ್ನು ನೀಡುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಎತ್ತರದ ಕಲ್ಲಿನ ಕಂಬ ಎರಡು ಬಣ್ಣಗಳಲ್ಲಿರುವುದು ಕಾಣಿಸುತ್ತದೆ. ಯಾಕೆಂದರೆ ಇದನ್ನು ಒಂದೇ ಪಟ್ಟಿಗೆ ಕಟ್ಟಿದ್ದಲ್ಲ. ಹಾಗೆ ಕಟ್ಟಲು ಸಾಧ್ಯವಾಗದಂತಹ ರಚನೆಯಿದು.
1848ರಲ್ಲಿಯೇ ನಿರ್ಮಾಣ ಆರಂಭವಾದರೂ ಯಾವುದೋ ಕಾರಣಕ್ಕೆ ಅದು ನಿಂತು ಹೋಗಿತ್ತು. 1879ರಲ್ಲಿ ಮತ್ತೆ ಆರಂಭಿಸಿದರು. ಆಗ ಬೇರೆ ಬಣ್ಣದ ಮಾರ್ಬಲ್ ಕಲ್ಲನ್ನು ಬಳಸಿದ್ದರಿಂದ ಈ ಸ್ಮಾರಕದಲ್ಲಿ ಎರಡು ಬಣ್ಣಗಳು ಕಾಣಿಸುತ್ತವೆ. ಕೊನೆಗೆ ಇದು ಮುಗಿದದ್ದು 1884ರಲ್ಲಿ! ಹಿಂದೆ ಲಿಂಕನ್ ಮೆಮೊರಿಯಲ್ , ಮುಂದೆ ವಾಷಿಂಗ್ಟನ್ ಸ್ಮಾರಕ ಮತ್ತು ಮಧ್ಯದಲ್ಲಿ ನೀರಿನ ಕೊಳವಿದೆ. ಓಡಾಡಲು ಪಾರ್ಕ್ ಇದ್ದು ಅರ್ಧ ದಿನವನ್ನು ನಿರಾಯಾಸವಾಗಿ ಇಲ್ಲಿ ಕಳೆಯಬಹುದು.
ಅಮೆರಿಕದ ಅಂಗಳ (ಫ್ರಂಟ್ ಯಾರ್ಡ್) ಎಂದು ಕರೆಸಿಕೊಳ್ಳುವ ಈ ಜಾಗದಲ್ಲಿಯೇ ಟೈಡಲ್ ಬೇಸಿನ್ (ಚೆರಿì ಹೂಗಿಡಗಳಿರುವ ಜಾಗ), ಮಾರ್ಟಿನ್ ಲೂಥರ್ ಜೂನಿಯರ್ ಸ್ಮಾರಕ, ಎರಡನೇ ಮಹಾಯುದ್ಧದ ಸ್ಮಾರಕ, ಲಿಂಕನ್ ಸ್ಮಾರಕ ಹೀಗೆ ಹಲವಾರು ಪ್ರೇಕ್ಷಣಿಯ ತಾಣಗಳಿವೆ.
ಅಮೆರಿಕ ಅಧ್ಯಕ್ಷರ ಸಂಕೇತವಾಗಿರುವ ವೈಟ್ ಹೌಸ್ ಸುಮಾರು ಇನ್ನೂರು ವರ್ಷಗಳಿಂದ ಜಾರಿಯಲ್ಲಿದೆ. ಎರಡು ಸಲ ಬೆಂಕಿಗೆ ಆಹುತಿಯಾಗಿದ್ದರೂ ಮತ್ತೆ ಮರುನಿರ್ಮಾಣವಾಗಿ ತನ್ನ ಘನತೆಯನ್ನು ಕಾದುಕೊಂಡಿದೆ. ಕೆಲವೊಂದು ಭಾಗವನ್ನು ಸಾರ್ವಜನಿಕರಿಗೆಂದು ಮೀಸಲಿಟ್ಟು ಟೂರ್ ಮೂಲಕ ತೋರಿಸುತ್ತಾರೆ. ಇದು ಸದಾ ಬೇಡಿಕೆಯಲ್ಲಿರುವುದರಿಂದ ಮುಂಚಿತವಾಗಿ ಬುಕ್ ಮಾಡಬೇಕಾಗುತ್ತದೆ. ನಮಗೆ ಆ ಅವಕಾಶ ಸಿಗಲಿಲ್ಲವಾದ್ದರಿಂದ ಹೊರಗಿನಿಂದ ನೋಡಿ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಹೊರಗಡೆ ಮಜಬೂತಾದ ಸೈನಿಕರು ಕೈಗಳಲ್ಲಿ ಬಂದೂಕು ಹಿಡಿದುಕೊಂಡು ನಿಂತಿದ್ದರು. ಆಗ ಇದ್ದ ಅಮೆರಿಕದ ಅಧ್ಯಕ್ಷರೇನಾದರೂ ಬಾಲ್ಕನಿಯಲ್ಲಿ ಕಾಣಿಸಬಹುದೇ ಎಂದು ನಮ್ಮ ತಲೆಯೆತ್ತರದಲ್ಲಿದ್ದ ಕಂಪೌಂಡ್‌ನಲ್ಲಿ ಕಾಲೆತ್ತರಿಸಿ ನೋಡುತ್ತಿದ್ದೇವು. ಒಟ್ಟು ಆರು ಅಂತಸ್ತುಗಳ, 135 ಕೋಣೆಗಳಿರುವ ಭವ್ಯವಾದ ಮನೆಯಿದು
.
ಅಮೆರಿಕ ದೇಶವನ್ನು ನಿರ್ಮಿಸಲು, ಗಟ್ಟಿಯಾದ ಬುನಾದಿ ಹಾಕಿ ವಿಶ್ವದ ದೊಡ್ಡ ದೇಶವನ್ನಾಗಿ ಮಾಡಲು ಬಹಳಷ್ಟು ಜನ ಅಧ್ಯಕ್ಷರು ಕಾರಣವಾಗಿ¨ªಾರೆ. ಅದರಲ್ಲಿ ಒಬ್ಬರು ಅಬ್ರಹಾಂ ಲಿಂಕನ್. ಅಮೆರಿಕ ದೇಶದ ಹದಿನಾರನೇ ಅಧ್ಯಕ್ಷರಾಗಿದ್ದ ಇವರು ಆ ಸಮಯದಲ್ಲಿ ನಡೆದ ಆಂತರಿಕ ಕಲಹವನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲರಾದರಲ್ಲದೇ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರು. ದಾಸ್ಯದ ವಿರುದ್ಧ ಹೋರಾಡಿದ ಧೀಮಂತ ವ್ಯಕ್ತಿ. 1867ರಲ್ಲಿ ಇವರ ಕೊಲೆಯಾಯಿತು. ಅನಂತರ ಇವರ ಸ್ಮರಣಾರ್ಥವಾಗಿ ಹಲವಾರು ಸ್ಮಾರಕಗಳನ್ನು, ರಸ್ತೆಗಳನ್ನು, ಸಂಗ್ರಹಾಲಯಗಳನ್ನು ದೇಶದÇÉೆಲ್ಲ ನಿರ್ಮಿಸಿದರು. ಅದರಲ್ಲಿ ಮುಖ್ಯವಾಗಿರುವುದು ಅಮೆರಿಕದ ಅಂಗಳದಲ್ಲಿರುವ ಈ ಲಿಂಕನ್ ಮೆಮೊರಿಯಲ್ ಅಬ್ರಹಾಂ ಲಿಂಕನ್ ಅವರ ಭವ್ಯ ಮೂರ್ತಿಯಿದ್ದು ಅದರ ಮೇಲೆ In this temple, as in the hearts of the people for whom he saved the Union, the memory of Abraham Lincoln is enshrined forever ಎಂದು ಬರೆದಿದೆ.
ವಿಯೆಟ್ನಾಂ ಯುದ್ಧದಲ್ಲಿ ಮಡಿದ ಅಮೆರಿಕದ ಸೈನಿಕರ ಗೌರವಾರ್ಥವಾಗಿ ವಿಯೆಟ್ನಾಂ ಸ್ಮಾರಕವನ್ನು ಇದೇ ಆಂಗಣದಲ್ಲಿ ನಿರ್ಮಿಸಿ¨ªಾರೆ. ಪುಟ್ಟ ದೇಶ ವಿಯೆಟ್ನಾಂ ಮೇಲೆ ದಾಳಿ ಮಾಡಿದ್ದು ಅಮೆರಿಕ ದೇಶವೇ ಎಂಬುದು ವಿಪರ್ಯಾಸ. ದೇಶದ ಸರ್ವೋಚ್ಛ ನ್ಯಾಯಾಲಯವೂ ಡಿಸಿಯಲ್ಲಿಯೇ ಇದೆ. ಕಲಾಪ ನಡೆಯುವ ಜಾಗ, ಮತ್ತು ಇನ್ನು ಕೆಲವು ಜಾಗಗಳನ್ನು ಸಾರ್ವಜನಿಕರು ನೋಡಬಹುದು.
ಸದಾ ಜನರಿಂದ ಗಿಜಿಗುಟ್ಟುವ ಡಿಸಿ ಅಮೆರಿಕದಲ್ಲಿರುವ ಹ್ಯಾಪನಿಂಗ್ ನಗರಗಳಲ್ಲಿ ಒಂದು. ಯಾವ ಸಮಯದಲ್ಲಿ ಹೋದರೂ ಇಲ್ಲಿ ದಟ್ಟಣೆ ಇದ್ದೇ ಇರುತ್ತದೆ. ಸದ್ಯಕ್ಕೆ ಯಾವ ರಾಜ್ಯಕ್ಕೂ ಒಳಪಡದ ಈ ನಗರವನ್ನು ರಾಜ್ಯವನ್ನಾಗಿ ಮಾಡಿ ಎಂದು ಇಲ್ಲಿನ ಜನರು ಆಗ್ರಹಿಸುತ್ತಿದ್ದಾರೆ. ಇದು ಒಂದು ರಾಜ್ಯವಾದರೆ ಸರಕಾರದಲ್ಲಿ ಹಕ್ಕೊತ್ತಾಯ ಮಾಡಬಹುದು ಎಂದು ಅವರ ಬೇಡಿಕೆ. ಒಂದು ವೇಳೆ ಇದನ್ನು ರಾಜ್ಯವನ್ನಾಗಿ ಘೋಷಿಸಿದರೆ ಇದರಲ್ಲಿರುವ ವಾಷಿಂಗ್ಟನ್ ಎನ್ನುವ ಹೆಸರನ್ನು ತೆಗೆದು ನ್ಯೂ ಕೊಲಂಬಿಯ ಎಂದು ಮರುನಾಮಕರಣ ಮಾಡಬೇಕಾಗುತ್ತದೆ ಎಂದು ಮೂಲಗಳು ಹೇಳುತ್ತವೆ. ರಾಜಕೀಯವೇನೇ ಇರಲಿ….ನೋಡಬೇಕಾದಂತ ಅನೇಕ ಸ್ಥಳಗಳಿರುವುದರಿಂದ ಇಲ್ಲಿ ಬೇಸಗೆಯಲ್ಲಿ ಮಕ್ಕಳ ಜತೆಗೆ ಇರಲೆಂದು ಬರುವ ಪಾಲಕರನ್ನು (ಭಾರತೀಯ!) ಇಲ್ಲಿಗೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬರುವುದು ರೂಢಿಯಾಗಿ ಬಿಟ್ಟಿದೆ.
*ಸಂಜೋತಾ ಪುರೋಹಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.