Desi Swara: ಪ್ರಕೃತಿಯ ಮಡಿಲಲ್ಲಿ ಇರುಳಿನ ಬೆಚ್ಚನೆಯ ಭಾವ

ವಾರಾಂತ್ಯದ ಮಧುರ ಕ್ಷಣ

Team Udayavani, Aug 5, 2023, 4:45 PM IST

Desi Swara: ಪ್ರಕೃತಿಯ ಮಡಿಲಲ್ಲಿ ಇರುಳಿನ ಬೆಚ್ಚನೆಯ ಭಾವ

ರಜಾದಿನಗಳು ಬಂತೆಂದರೆ ಆ ದಿನವನ್ನು ಕಳೆಯಲು ಪ್ರವಾಸ ಹೆಚ್ಚಿನ ಜನರ ಮೊದಲ ಆಯ್ಕೆ. ಮನೆಮಂದಿಯೆಲ್ಲ ಒಟ್ಟಿಗೆ ಸೇರಿ ವಿವಿಧ ಪ್ರಸಿದ್ಧ, ಪ್ರಾಕೃತಿಕ ಸ್ಥಳಗಳಿಗೆ ಭೇಟಿ ನೀಡಿ ಮಜಾ ಮಾಡುತ್ತೇವೆ. ಹೀಗೆ ಇತ್ತೀಚೆಗೆ ಕ್ಲೀವ್‌ಲ್ಯಾಂಡ್‌ನ‌ ಮಕ್ಕಳಿಗೆ ಶಾಲೆಗೆ ರಜಾ ಇದ್ದ ಕಾರಣ ಪುಟ್ಟದೊಂದು ಪ್ರವಾಸವನ್ನು ಕೈಗೊಂಡಿದ್ದೆವು. ಕ್ಲೀವ್‌ಲ್ಯಾಂಡ್‌ನ‌ಲ್ಲಿ ಹಲವು ಸುಂದರ ಪ್ರವಾಸಿ ತಾಣಗಳಿವೆ.

ಅದರಲ್ಲಿ ಸ್ಟ್ರೀಟ್ಸ್ಟೋರೋದಲ್ಲಿರುವ “ಕೆಓಎ ಕ್ಯಾಂಪ್‌ ಗ್ರೌಂಡ್‌’ ಕೂಡ ಒಂದು. ಈ ಜಾಗವು ಹಲವು ಅನುಕೂಲಗಳನ್ನೊಳಗೊಂಡ ಆಕರ್ಷಕ ವಿಶಾಲವಾದ ಸ್ಥಳ. ಇಲ್ಲಿ ಈಜುಕೊಳ, ಆಟದ ಮೈದಾನ, ಗೇಮ್‌ರೂಮ್‌, ಸಮ್ಮೇಳನದ ಕೊಠಡಿಗಳ ವ್ಯವಸ್ಥೆ, ಫಿಶಿಂಗ್‌ ಮಾಡಲು ಪ್ರತ್ಯೇಕ ಸರೋವರ, ಇವೆಲ್ಲದರ ಮಧ್ಯೆ ಓಡಾಡಲು ವ್ಯಾಗನ್‌ ವ್ಯವಸ್ಥೆ ಹಾಗೂ ಸುಸಜ್ಜಿತ ಕೊಠಡಿಗಳೂ ಇಲ್ಲಿವೆ.

ಪ್ರಕೃತಿ ಪ್ರಿಯರಿಗೆ, ಪ್ರಕೃತಿಯ ಮಧ್ಯೆ ಸಮಯ ಕಳೆಯಬೇಕು ಎಂದು ಬಯಸುವವರಿಗೆ ಇದು ಸೂಕ್ತವಾದ ಜಾಗ. ಇಲ್ಲಿಗೆ ಬರುವಾಗ ನಮಗೆ ಅಗತ್ಯವಿರುವ ವಸ್ತುಗಳನ್ನು ಸ್ವತಃ ತೆಗೆದುಕೊಂಡು ಬಂದರೆ ಒಳ್ಳೆಯದು. ಇಲ್ಲಿರುವ ವಿಶಾಲ ಮೈದಾನದಲ್ಲಿ ತಮ್ಮ ಡೇರೆಗಳು, ಹಾಸಿಗೆ ಹೊದಿಗೆ, ಆಹಾರ ತಯಾರಿಸಲು ಒಲೆ, ಎಲ್ಲ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಬೀಡುಬಿಡಲು ಅನು ‌ೂಲವಿದೆ. ಯಾವುದನ್ನು ಆಯ್ಕೆ ಮಾಡಿದರು ಮುಂಗಡ ಹಣಕೊಟ್ಟು ಸ್ಥಳ ಕಾಯ್ದಿರಿಸಿ ಕೊಳ್ಳಬೇಕಾಗುತ್ತದೆ.

ಜುಲೈ ತಿಂಗಳ ಕೊನೆಯ ವಾರಾಂತ್ಯದಲ್ಲಿ ಕನ್ನಡನಾಡಿನಿಂದ ಬಂದು ಇಲ್ಲಿ ಬೀಡುಬಿಟ್ಟಿರುವ ಹತ್ತು ಕುಟುಂಬದ ಸದಸ್ಯರೆಲ್ಲರೂ ಸೇರಿ ಪ್ರವಾಸ ಕೈಗೊಂಡಿದ್ದೇವು. ಸುಮಾರು ಇಪ್ಪತ್ತು ಮಕ್ಕಳು ನಮ್ಮ ಜತೆಗಿದ್ದರು. ನಮಗೆ ಅಗತ್ಯವಿರುವ ಸಾಮಾಗ್ರಿಗಳನ್ನು ತೆಗೆದುಕೊಂಡು ಸ್ಥಳವನ್ನು ಶನಿವಾರದ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ತಲುಪಿದ್ದೆವು. ಮೇಲೆ ಶುಭ್ರ ನೀಲಾಕಾಶ, ಕೆಳಗೆ ಹಚ್ಚ ಹಸುರು ಹುಲ್ಲುಹಾಸು, ಹಸುರು ತುಂಬಿದ ಸಾಲು ಮರಗಳ ತಂಪಾದ ಗಾಳಿ ಎಲ್ಲರನ್ನು ಸ್ವಾಗತಿಸುತ್ತಿತ್ತು.ಮಕ್ಕಳಿಗೆ ಖುಷಿಯೋ ಖುಷಿ. ದೊಡ್ಡವರಿಗೆ ಒಂದು ರೀತಿಯ ಉಲ್ಲಾಸ ಭಾವ ತುಂಬಿತ್ತು.

ಎಲ್ಲರೂ ಸೇರಿ ವಿವಿಧ ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ನಿಯೋಜಿಸಿಕೊಂಡೆವು. ಅಲ್ಲಿಯೇ ಎಲ್ಲರೂ ಸೇರಿ ಆಹಾರವನ್ನು ತಯಾರಿಸಿ ಲಘು ಉಪಹಾರವನ್ನು ಮಾಡಿದೆವು. ಶಾಲೆಯ ಪಾಠ, ಹೋಮ್‌ವರ್ಕ್‌ಗಳಿಂದ ಬಿಡುವ ಪಡೆದಿದ್ದ ಮಕ್ಕಳೆಲ್ಲರು ಸೇರಿ ಅಲ್ಲಿನ ವಿಸ್ತಾರವಾದ ಜಾಗದಲ್ಲಿ ಖುಷಿಯಿಂದ ಆಟವಾಡಿದರು. ಸ್ವಿಮ್ಮಿಂಗ್‌ ಆಸಕ್ತಿಯಿರುವವರಿಗೆ ಇಲ್ಲಿರುವ ಈಜುಕೊಳದಲ್ಲಿ ಸ್ವಿಮ್ಮಿಂಗ್‌ ಮಾಡಿ ಸಮಯ ಕಳೆಯಬಹುದು. ನಮ್ಮೊಂದಿಗೆ ಬಂದಿದ್ದ ಹಲವರು ಈಜುಕೊಳದಲ್ಲಿ ಕೇಕೆ ಹಾಕುತ್ತ ಈಜಾಡಿ ಸಂಭ್ರಮಿಸಿದರು. ಬಹಳ ವಿಶೇಷವಾಗಿ ನಾವೆಲ್ಲ ಬಾಲ್ಯದಲ್ಲಿ ಆಡವಾಡುತ್ತಿದ್ದ ಲಗೋರಿ ಆಟವನ್ನು ಆಡಿದ್ದು ಮತ್ತೆ ನಮ್ಮ ಚಿಕ್ಕ ವಯಸ್ಸಿನ ಕ್ಷಣಗಳನ್ನು ನೆನೆಪಿಸಿತ್ತು. ಅಲ್ಲಿ ನೆರೆದಿದ್ದ ಹಿರಿಯಲೆಲ್ಲರು ಮಕ್ಕಳೊಂದಿಗೆ ಲಗೋರಿ ಆಟವನ್ನು ಆಡಿ ತಮ್ಮ ನೆನೆಪುಗಳನ್ನು ಹಂಚಿಕೊಂಡರು.

ಬೇಸಗೆಯಲ್ಲಿ ಸೂರ್ಯಾಸ್ತವಾಗುವುದೇ ನಿಧಾನ. ಹೊಟ್ಟೆ ಚುರುಗುಟ್ಟಿದಾಗ ಎಲ್ಲರಿಗೂ ಊಟದ ನೆನಪು. ಚಪಾತಿ, ಪಲ್ಯ, ಎಣ್ಣೆಗಾಯಿ, ಪಲಾವ್‌, ಮೊಸರನ್ನ ಎಲ್ಲ ಹೊಟ್ಟೆ ತುಂಬಾ ತಿಂದು ದೊಡ್ಡ ಕೇಕ್‌ನೊಂದಿಗೆ ಊಟವನ್ನು ಮುಗಿಸಿದರು. ಶಿಬಿರದ ಬೆಂಕಿ ಹಾಕಿಕೊಂಡು ಪಾಪ್‌ಕಾರ್ನ್ ತಿನ್ನುತ್ತಾ ಕನ್ನಡ ಚಿತ್ರಗೀತೆಗಳನ್ನು ಹಾಡಿ, ಅಂತ್ಯಾಕ್ಷರಿ, ಮೂಕಾಭಿನ¿ದಂತಹ ಆಟಗಳನ್ನು ಆಡಿ ಮೋಜು ಮಾಡಿದರು.

ಕರ್ನಾಟಕದ ವಿವಿಧ ಪ್ರಾಂತದ ಸದಸ್ಯರೆಲ್ಲರೂ ತಮ್ಮ ತಮ್ಮ ಊರು, ಬಾಲ್ಯ, ಶಾಲೆಗಳು, ಸಂಬಂಧಿಕರು, ವಿವಿಧ ಬಗೆಯ ಖಾದ್ಯಗಳ ವಿಚಾರಗಳನ್ನೂ ಮೆಲುಕು ಹಾಕುತ್ತ ಹರಟುತ್ತಿದ್ದರು. ಅತ್ತ ಕಡೆ ಮಕ್ಕಳು ಅವರದ್ದೇ ಆಟದಲ್ಲಿ ಮಗ್ನರಾಗಿದ್ದರು. ಹೀಗೆ ತಮ್ಮ ತಮ್ಮದೇ ಗುಂಗಿನಲ್ಲಿದ್ದ ನಮಗೆ ಮಧ್ಯರಾತ್ರಿ ಒಂದು ಗಂಟೆಯಾಗಿದ್ದು ತಿಳಿಯಲೇ ಇಲ್ಲ. ರಾತ್ರಿಯ ನಸುಕಿನಲ್ಲಿ ಡೇರೆ ಹಾಕಿ ಬೆಚ್ಚಗೆ ಮಲಗಿದ್ದು ಸುಂದರ ಅನುಭವ ಎನಿಸಿತ್ತು.

ಮರುದಿನ ಬೆಳಗ್ಗೆ ಎದ್ದು ಎಲ್ಲರೂ ತಮ್ಮತಮ್ಮ ಪ್ರಾತಃ ವಿಧಿಗಳನ್ನು ಮುಗಿಸಿ ಒಳಾಂಗಣ ಆಟದಲ್ಲಿ ತೊಡಗಿಕೊಂಡೆವು.
ಅನುಕೂಲಕರವಾಗಿದ್ದ ವಾತಾ ‌ರಣದಲ್ಲಿ ನಡೆದಾಡುತ್ತ ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ಎಲ್ಲರೂ ಕಣ್ತುಂಬಿಕೊಂಡರು. ಎಲ್ಲರೂ ಸೇರಿ ತಯಾರಿಸಿದ್ದ ಆಹಾರವನ್ನು ಸೇವಿಸಿ ತಮ್ಮ ತಮ್ಮ ಡೇರೆಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಮಧುರ ನೆನಪುಗಳೊಂದಿಗೆ ಮನೆಯ ದಾರಿ ಹಿಡಿದಿದ್ದೇವು.

*ಸಾವಿತ್ರಿ ರಾವ್‌, ಕ್ಲೀವ್‌ಲ್ಯಾಂಡ್‌

ಟಾಪ್ ನ್ಯೂಸ್

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

Delhi: ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

Delhi: ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.