Fraud Case ಯುವಕನಿಗೆ ಲಕ್ಷಾಂತರ ರೂ.ವಂಚನೆ
Team Udayavani, Jul 18, 2024, 11:35 PM IST
ಸುಳ್ಯ: ಬೆಳ್ಳಾರೆಯ ಯುವಕನೊಬ್ಬನಿಗೆ ಇನ್ಸ್ಟಾಗ್ರಾಮ್ ಮೂಲಕ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆ ನಿವಾಸಿ ದಿಲ್ಸಾದ್ ಎಸ್. (24) ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕಳೆದ ಮಂಗಳವಾರ ಸಂಜೆ ಮೊಬೈಲ್ನಲ್ಲಿ ಇನ್ಸ್ಟಾಗ್ರಾಮ್ನಲ್ಲಿ “ವರ್ಕ್ ಆಫ್ ದಿ ಹೋಮ್ ವಿದ್ಔಟ್ ಇನ್ವೆಸ್ಟ್ಮೆಂಟ್ ‘ ಎಂಬ ಲಿಂಕ್ ಇರುವ ವೀಡಿಯೋ ಬಂದಿದೆ.ಅದನ್ನು ಓಪನ್ ಮಾಡಿ, ಅದರಲ್ಲಿನ ಸೂಚನೆಗಳನ್ನು ಪಾಲಿಸಿದಾಗ, ಅನಿತಾ ಸಿಂಗ್ ಹೆಸರಿನ ಟೆಲಿಗ್ರಾಮ್ ಐಡಿ ಕಳುಹಿಸಿ ಸೇರ್ಪಡೆಗೊಳಿಸಿದ್ದಾರೆ.
ಬಳಿಕ ಅಪರಿಚಿತ ಆರೋಪಿಗಳು ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರ ಕಾರಣಗಳನ್ನು ಒಡ್ಡಿ ಗೂಗಲ್ ಪೇ ಮೂಲಕ ಹಂತಹಂತವಾಗಿ ಒಟ್ಟು ರೂ. 2,74,000 ವರ್ಗಾಯಿಸಿಕೊಂಡು ತನಗೆ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.