ಸ್ಪಾ, ಸೆಲೂನ್ಗೆ ಹೋಗಲು ಆಧಾರ್ ಕಡ್ಡಾಯ
Team Udayavani, Jun 3, 2020, 5:30 AM IST
ಚೆನ್ನೈ: ತಮಿಳುನಾಡಿನಾದ್ಯಂತ ಇರುವ ಸಲೂನ್ಗಳು, ಬ್ಯೂಟಿ ಪಾರ್ಲರ್ಗಳು, ಸ್ಪಾಗಳಿಗೆ ಹೋಗುವ ವರು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ನೀಡಬೇಕು. ಹೀಗೆಂದು ತಮಿಳುನಾಡು ಸರಕಾರ ಬಿಡುಗಡೆ ಮಾಡಲಾಗಿರುವ ನಿರ್ದಿಷ್ಟ ಕಾರ್ಯ ಸೂಚಿ (ಎಸ್ಒಪಿ)ಯಲ್ಲಿ ಉಲ್ಲೇಖೀಸಲಾ ಗಿದೆ. ಇದರ ಜತೆಗೆ ಮಳಿಗೆಗೆ ಭೇಟಿ ನೀಡಿದ ಗ್ರಾಹಕರ ಹೆಸರು, ವಿಳಾಸವನ್ನು ಬರೆದು ಇರಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಲಾಕ್ಡೌನ್ ನಿಯಮಗಳನ್ನು ಸರಳಗೊಳಿ ಸಿದ ಬಳಿಕ ಆಂಶಿಕವಾಗಿ ವಾಣಿಜ್ಯ ಮಳಿಗೆ ಗಳು ತೆರೆದಿರುವ ಹಿನ್ನೆಲೆಯಲ್ಲಿ ಮತ್ತು ಬಸ್ ಸಂಚಾರ ಶುರುವಾಗಿರುವ ಹಿನ್ನೆಲೆಯಲ್ಲಿ ಸಮಗ್ರವಾಗಿ ಎಸ್ಒಪಿ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ದೇಶದಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ತಮಿಳುನಾಡು ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ, ಸ್ಪಾ, ಸಲೂನ್, ಬ್ಯೂಟಿ ಪಾರ್ಲರ್ಗಳಿಗೆ ಭೇಟಿ ನೀಡಿದವರ ವಿವರ ದಾಖಲಿಸಿಕೊಳ್ಳಬೇಕೆಂದು ತಾಕೀತು ಮಾಡಲಾಗಿದೆ.
ಇಂಥ ಕ್ರಮದ ಮೂಲಕ ಕೋವಿಡ್-19 ಸೋಂಕಿತರನ್ನು ಪತ್ತೆ ಮಾಡಲು ನೆರವಾಗಲಿದೆ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಆಯುಕ್ತ ಜೆ.ರಾಧಾ ಕೃಷ್ಣನ್ ಎಲ್ಲಾ ಚೆನ್ನೈ ಮಹಾನಗರ ಪಾಲಿಕೆ ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಒಟ್ಟು ಏಳು ಪುಟಗಳ ನಿರ್ದಿಷ್ಟ ಕಾರ್ಯಸೂಚಿ
(ಎಸ್ಒಪಿ)ಯಲ್ಲಿ ಸಲೂನ್, ಬ್ಯೂಟಿ ಪಾರ್ಲರ್, ಸ್ಪಾಗಳಲ್ಲಿ ಕೆಲಸ ಮಾಡುವವರು ಗ್ಲೌಸ್, ಮಾಸ್ಕ್ ಧರಿಸಬೇಕು. ಗ್ರಾಹಕರನ್ನು ಮುಟ್ಟುವ ಮೊದಲು ಕೈಗಳನ್ನು ಕಡ್ಡಾಯ ವಾಗಿ ತೊಳೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇದರ ಜತೆಗೆ ನ್ಯಾಪ್ಕಿನ್, ಬ್ಲೇಡ್ಗಳನ್ನು ಮರು ಬಳಕೆ ಮಾಡು ವಂತೆಯೇ ಇಲ್ಲ. ಶೀತ- ನೆಗಡಿ, ಜ್ವರದಿಂದ ಬಳತ್ತಿರುವ ಕೆಲಸಗಾರರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡು ವಂತೆಯೇ ಇಲ್ಲ ವೆಂದು, ಅಂಥವರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ- ಸಲಹೆ ಪಡೆದುಕೊಳ್ಳ ಬೇಕು ಎಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.