ದ್ವೇಷ, ಉದಾಸೀನತೆಯನ್ನು ತ್ಯಜಿಸಿ ಪರಸ್ಪರರನ್ನು ಪ್ರೀತಿಸಿ
Team Udayavani, Dec 24, 2021, 7:55 AM IST
ಯೇಸು ಕ್ರಿಸ್ತರ ಜನನದ ಹಬ್ಬವೇ ಕ್ರಿಸ್ಮಸ್. ಅಂದರೆ ಕನ್ಯಾ ಮರಿಯಮ್ಮನವರ ಮೂಲಕ ದೇವ ಪುತ್ರ ಯೇಸುಕ್ರಿಸ್ತರ ಜನನವಾಯಿತು ಎಂಬುದು ಇದರಲ್ಲಿರುವ ಏಕಮಾತ್ರ ಹೊಸ ವಿಷಯ. ಇದೊಂದು ಮಗದೊಮ್ಮೆ ಪುನರಾ ವರ್ತನೆಗೊಳ್ಳದ ಅನನ್ಯ ಘಟನೆ.
ಆ ಪವಿತ್ರ ರಾತ್ರಿಯಂದು ಕುರು ಬರಿಗೆ ದೇವದೂತನು “ಇಗೋ, ಜನರೆಲ್ಲರಿಗೂ ಪರಮಾನಂದ ವನ್ನು ತರುವ ಶುಭ ಸಂದೇಶವನ್ನು ನಿಮಗೆ ತಿಳಿಸುತ್ತೇನೆ’ ಎಂದು ಹೇಳಿ ದನು. ನಿಜವಾಗಿಯೂ ಮಾನವ ರೂಪದಲ್ಲಿರುವ ದೇವರನ್ನು ಅನೇ ಕರು ಅನುಭವ ಹೊಂದಿದರು ಹಾಗೂ ಸಂತೋಷ ಪಟ್ಟರು.
“ಜೀಸಸ್’ ಅಥವಾ “ಯೇಸು’ ಎಂದರೆ “ದೇವರು ರಕ್ಷಕರು’ ಎಂದರ್ಥ. ಯೇಸು ನಮ್ಮನ್ನು ಪಾಪ ಮತ್ತು ಮರಣದಿಂದ ರಕ್ಷಿಸುತ್ತಾರೆ. ಅವರು ನಮ್ಮನ್ನು ದ್ವೇಷ ಮತ್ತು ಹಿಂಸಾತ್ಮಕ ಮನೋಭಾವದಿಂದ ರಕ್ಷಿಸು ತ್ತಾರೆ. ಅವರು ಸಾರ್ವತ್ರಿಕ ಪ್ರೀತಿ ಮತ್ತು ಸಹೋ ದರತೆಯನ್ನು ಬೆಳೆಸುತ್ತಾರೆ. ಅವರ ಆಗಮನದ ಬಳಿಕ ನಾವು ಜೀವಿಸುತ್ತಿರುವುದು ನಮ್ಮ ಪುಣ್ಯ.
ಮಾನವ ಜನಾಂಗವೇ ನಮ್ಮ ಕುಟುಂಬವಾಗಿರಲು ನಾವು ಎಷ್ಟು ಜನರಿಗೆ “ನೀನು ಜೀವಿಸು ವುದು ನನಗೆ ಬೇಕಾಗಿದೆ” ಎಂದು ಹೇಳಲು ಶಕ್ತರಾಗುವಿರಿ? ಇಂದಿನ ಬಹು ದೊಡ್ಡ ಅಪಾಯ ವೆಂದರೆ ಉದಾಸೀನತೆಯ, ನಿರ್ಲಿಪ್ತತೆಯ, ಇಂಡಿಫರೆನ್ಸ್ ಸಂಸ್ಕೃತಿ ಬೆಳೆಯುತ್ತ ಇರುವುದು. ಇದು ದ್ವೇಷಕ್ಕಿಂತಲೂ ಕೆಟ್ಟದ್ದು. ನಾವು ಯಾವುದೇ ವ್ಯಕ್ತಿಯನ್ನು ಪ್ರೀತಿಸುವುದಾದರೆ ಆ ವ್ಯಕ್ತಿಗೆ ನಮ್ಮ ಹೃದಯದಲ್ಲಿ ಸ್ಥಾನವಿರುತ್ತದೆ ಆದರೆ ನಾವು ಉದಾಸೀನತೆಯನ್ನು ಬೆಳೆಸಿದಲ್ಲಿ ಆ ವ್ಯಕ್ತಿ ನಮ್ಮ ಪಾಲಿಗೆ ಅಸ್ತಿತ್ವದಲ್ಲಿಯೇ ಇಲ್ಲದಂತೆ. ಆ ವ್ಯಕ್ತಿ ಬದುಕಿದ್ದರೂ ಸತ್ತರೂ ನಾವು ಗಮನಿಸುವುದೇ ಇಲ್ಲ. ಇದು ನಮಗಾಗಿರುವ ದೊಡ್ಡ ಅಪಾಯ. ಹೀಗೆ ಅನೇಕರು ವಿಭಜನೆ, ಹಿಂಸೆ ಮತ್ತು ಸಾವನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಇದನ್ನೂ ಓದಿ:ದೇಶದಲ್ಲೀಗ “ಡಯಾವೋಲ್’ ವೈರಸ್ ಕಾಟ! ನಿಮ್ಮ ಹಣ ಕಿತ್ತುಕೊಳ್ಳಲು ಬ್ಲ್ಯಾಕ್‌ಮೇಲ್ ತಂತ್ರ
ಯೇಸು ಕ್ರಿಸ್ತರು ತಮ್ಮ ಜೀವನದ ಆದರ್ಶದ ಮೂಲಕ ಇತರರ ವಿಚಾರದಲ್ಲಿ ಕಾಳಜಿ ವಹಿಸಲು ಮತ್ತು ಹಂಚಿ ಬಾಳಲು, ವಿರೋಧಿಗಳನ್ನು ಕ್ಷಮಿಸಲು ಎಂದಿಗೂ ಯಾರನ್ನು ದ್ವೇಷಿಸದಿರಲು ಕಲಿಸುತ್ತಾರೆ. ದ್ವೇಷ ಮತ್ತು ಉದಾಸೀನತೆ ಇತರರನ್ನು ಹೊತ್ತಿ ಉರಿಸುವ ಮೊದಲು ನಮ್ಮನ್ನು ಬೂದಿ ಮಾಡುತ್ತದೆ. ಅದು ನಮ್ಮ ಮನಸ್ಸಾಕ್ಷಿಯನ್ನು ನಾಶಗೊಳಿಸುತ್ತದೆ. ಅದು ನಮ್ಮಲ್ಲಿರುವ ಒಳಿತನ್ನು ನಾಶ ಮಾಡುತ್ತದೆ. ನಾವು ನಡೆದಾಡುವ ಸತ್ತ ವ್ಯಕ್ತಿಗಳಾಗುತ್ತೇವೆ.
ಸ್ವತ್ಛ ಭಾರತ ನಿರ್ಮಾಣಕ್ಕಾಗಿ “ಗೋ ಗ್ರೀನ್’ ವಿಚಾರವಾಗಿ ಈ ದಿನಗಳಲ್ಲಿ ನಾವು ಆಗಿಂದಾಗ ಮಾತ
ನಾಡುತ್ತೇವೆ. ದ್ವೇಷ ಮತ್ತು ಉದಾಸೀನತೆ ಇಲ್ಲದ, ಸ್ವತ್ಛ ಮನಸ್ಸು ಮತ್ತು ಶುದ್ಧ ಹೃದಯವನ್ನು ನಾವು ನಮ್ಮಲ್ಲಿ ಬೆಳೆಸಲು ಸಾಧ್ಯವೇ? ಈ ಕ್ರಿಸ್ಮಸ್ ನಮಗೆಲ್ಲರಿಗೂ ಶುದ್ಧ ಹೃದಯವನ್ನು ಬೆಳೆಸಲು ಒಂದು ಪಂಥಾ ಹ್ವಾನವಾಗಲಿ. ಈ ಮೂಲಕ ನಾವು ನಮ್ಮ ನೆರೆಕರೆ ಯವರಲ್ಲಿ, ಪ್ರಕೃತಿಯಲ್ಲಿ ದೇವರನ್ನು ಕಾಣಲು ಸಾಧ್ಯವಾಗಲಿ. ನಮ್ಮ ಉಪಸ್ಥಿತಿಯಲ್ಲಿ ಇತರರು ಪರಮಾ ನಂದವನ್ನು ಅನುಭವಿಸಲು ಸಾಧ್ಯವಾಗಲಿ.
ಎಲ್ಲರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು.
ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಬಿಷಪರು, ಮಂಗಳೂರು ಧರ್ಮಪ್ರಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.