ದನ ಕಳ್ಳರ ಬಂಧನಕ್ಕೆ ಕ್ರಮ: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
Team Udayavani, Feb 5, 2022, 7:55 AM IST
ಮಂಗಳೂರು: ದನ ಕಳವಿನ ಮೂರ್ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಕೆಲವು ತಂಡಗಳು ಇದರಲ್ಲಿ ಭಾಗಿಯಾದ ಮಾಹಿತಿ ಲಭಿಸಿದೆ. ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ವಾಮಂಜೂರು, ಕಾವೂರು ಪರಿಸರದಲ್ಲಿ ಗೋವುಗಳನ್ನು ಸಾಕುವ ಹಲವು ಕುಟುಂಬಗಳಿದ್ದು, ಈ ಭಾಗದಲ್ಲಿಯೇ ಹೆಚ್ಚು ದನ ಕಳವು ನಡೆಯುತ್ತಿದೆ. ಇದರ ಹಿಂದೆ ಒಂದು ಜಾಲವೇ ಇದೆ. ದೂರುಗಳು ಬಂದಾಗ ಕೇಸು ದಾಖಲಿಸುವಂತೆ ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದರು.
ಉಳ್ಳಾಲ ಪೊಲೀಸರು ವಶಪಡಿಸಿಕೊಂಡ ಗೋಮಾಂಸ ಎಲ್ಲಿಂದ ಬಂತು, ಮಾಂಸಕ್ಕೆ ಗೋವುಗಳು ಎಲ್ಲಿಂದ ಸಿಕ್ಕಿದವು ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಸಂತ್ರಸ್ತರಿಂದ ಮನವಿ
ಕಾವೂರು, ವಾಮಂಜೂರು ಪರಿಸರದಲ್ಲಿ ನಡೆದ ದನ ಕಳವಿನಿಂದ ಸಂತ್ರಸ್ತರಾದ ಅನೇಕ ಮಂದಿ ಗುರುವಾರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕಾವೂರಿನ ಬೊಲ್ಪುಗುಡ್ಡೆ, ಬೋಂದೆಲ್, ಪಚ್ಚನಾಡಿ ಪರಿಸರದ ಕೆ. ಪ್ರಣಮ್ ಶೆಟ್ಟಿ, ಡೊಮಿನಿಕ್ ಸಲ್ಡಾನ್ಹಾ, ಅರುಣ್ ಸಲ್ಡಾನ್ಹಾ, ಪ್ರಕಾಶ್ ಪಿಂಟೊ, ಭವಾನಿ ಶಂಕರ್, ಶ್ರೀನಿವಾಸ್ ನಾಯ್ಕ, ಲಾರೆನ್ಸ್ ಮತ್ತಿತರರು ಮನವಿ ಅರ್ಪಿಸಿದರು. ವಿ.ಹಿಂ.ಪ.ದ ಶರಣ್ ಪಂಪ್‌ವೆಲ್ ಜತೆಗಿದ್ದರು.
ಜಿಪಿಎಸ್ ಟ್ರಾನ್ಸ್‌ಫರ್ ಸಿಸ್ಟಂ
ರಾತ್ರಿ ವೇಳೆ ಓಡಾಡುವ ಶಂಕಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ಮೇಲೆ ಪೊಲೀಸರು ನಿಗಾ ವಹಿಸಿ ತಪಾಸಣೆ ನಡೆಸಬೇಕು, ದನ ಕಳವಿನ ಮಾಹಿತಿ ನೀಡಿದಾಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಬೇಕು, ದನ ಕಳವು ಪ್ರಕರಣಗಳಲ್ಲಿ ಸರಕಾರದಿಂದ ಪರಿಹಾರ ಒದಗಿಸಿಕೊಡಲು ಸರಕಾರಕ್ಕೆ ಶಿಫಾರಸು ಮಾಡುವುದು, ದೂರು ನೀಡಿದ ಕೂಡಲೇ ಎಫ್‌ಐಆರ್ ದಾಖಲಿಸುವುದು, ಗೋವುಗಳಿಗೆ ಜಿಪಿಎಸ್ ಟ್ರಾನ್ಸ್‌ಫರ್ ಸಿಸ್ಟಂ ಅಳವಡಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕು ಮತ್ತಿತರ ಬೇಡಿಕೆಗಳನ್ನು ನಿಯೋಗ ಮುಂದಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.